ಕೆಲವೇ ದಿನಗಳಲ್ಲಿ ವಾಟ್ಸಾಪ್ ಗ್ರೂಪ್‌ಗೆ ಹೊಸ ಫೀಚರ್ಸ್; ಹಲವು ಪ್ರಯೋಜನ!
ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ಆಪ್‌ಗಳ ಅಗತ್ಯ ಸಹ ಹೆಚ್ಚಾಗುತ್ತಿದೆ. ಈಗಾಗಲೇ ಸಾಕಷ್ಟು ಮೆಸೆಜಿಂಗ್ ಆಪ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಇವುಗಳ ನಡುವೆ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿರುವ ವಾಟ್ಸಾಪ್ ಹೊಸದೊಂದು ಫೀಚರ್ಸ್ ಬಗ್ಗೆ ಘೋಷಣೆ ಮಾಡಿದ್ದು, ಬಳಕೆದಾರರಿಗೆ ಇದು ಸಾಕಷ್ಟು ಅನುಕೂಲ ಮಾಡಿಕೊಡಲಿದೆ.
ಹೌದು, ಕೆಲವು ದಿನಗಳ ಹಿಂದೆ ವಾಟ್ಸಾಪ್ ತನ್ನ ವಾಟ್ಸಾಪ್ ಗ್ರೂಪ್ ವಿಭಾಗದಲ್ಲಿ ಶೆಡ್ಯುಲ್ ಕಾಲ್ ಫೀಚರ್ಸ್ ಬಗ್ಗೆ ಘೋಷಣೆ ಮಾಡಿತ್ತು. ಅದರಂತೆ ಇದೀಗ ವಾಟ್ಸಾಪ್ ಗ್ರೂಪ್ ವಿಭಾಗಕ್ಕೆ ಮತ್ತೊಂದು ಆಕರ್ಷಕ ಫೀಚರ್ಸ್ ಪರಿಚಯಿಸಲು ಮುಂದಾಗಿದೆ. ಇದರಿಂದಾಗಿ ಹಲವು ಗ್ರೂಪ್‌ಗಳ ಕಿರಿಕಿರಿಯಿಂದ ಪಾರಾಗಬಹುದು. ಹಾಗೆಯೇ ನಿಮ್ಮ ಮೊಬೈಲ್‌ನ ಸ್ಟೋರೇಜ್ ಅನ್ನು ಸುಧಾರಿಸಿಕೊಳ್ಳಬಹುದು.

ಗ್ರೂಪ್‌ಗಳಿಗೆ ಅಂತಿಮ ದಿನಾಂಕ ನಿಗದಿ ಆಯ್ಕೆ
ಸಾಮಾನ್ಯವಾಗಿ ಯಾರದೇ ವಾಟ್ಸಾಪ್ ಖಾತೆಗೆ ಭೇಟಿ ನೀಡಿದರೂ ಸಹ ಅನವಶ್ಯಕವಾಗಿ ರಚಿಸಲಾದ ಅಥವಾ ಸಕ್ರಿಯವಾಗಿ ಇರದ ಅದೆಷ್ಟೋ ಗ್ರೂಪ್‌ಗಳಿರುತ್ತವೆ. ಇವುಗಳಲ್ಲಿ ಆಗಾಗ್ಗೆ ಯಾರಾದರೊಬ್ಬರು ಅನಗತ್ಯ ಮೆಸೆಜ್‌ಗಳನ್ನು ಮಾಡಿಕೊಂಡು ಇರುತ್ತಾರೆ. ಆದರೆ, ಈ ಹೊಸ ಫೀಚರ್ಸ್ ನಿಂದ ಇನ್ಮುಂದೆ ಈ ರೀತಿಯ ಗ್ರೂಪ್‌ಗಳಿಗೆ ಅಂತಿಮ ದಿನ ನಿಗದಿ ಮಾಡುವ ಮೂಲಕ ಅವುಗಳನ್ನು ನಿಮ್ಮ ಖಾತೆಯಲ್ಲಿ ಇಲ್ಲವಾಗಿಸಬಹುದು.
ಇದರಿಂದ ಪ್ರಯೋಜನ ಏನು?
ವಾಟ್ಸಾಪ್ ಪರಿಚಯಿಸಲು ಮುಂದಾಗಿರುವ ಈ ಹೊಸ ಫೀಚರ್ಸ್ ಮೂಲಕ ಯಾವುದೇ ವಾಟ್ಸಾಪ್ ಬಳಕೆದಾರರು ಯಾವುದೇ ಗ್ರೂಪ್ ರಚನೆ ಮಾಡಿದರೂ ಸಹ ಅದಕ್ಕೆ ಅಂತಿಮ ದಿನಾಂಕವನ್ನು ನಿಗದಿ ಮಾಡಬಹುದು. ಈ ಮೂಲಕ ನೀವು ನಿಗದಿ ಪಡಿಸಿದ ದಿನಾಂಕದ ಒಳಗೆ ಗ್ರೂಪ್‌ನಿಂದ ಹೊರಬರಬಹುದು. ಅದಾಗ್ಯೂ ಮತ್ತೇ ಆ ಗ್ರೂಪ್‌ನಲ್ಲಿ ಇನ್ನಷ್ಟು ದಿನ ಸಕ್ರಿಯವಾಗಿರಬೇಕು ಎಂದರೆ ದಿನಾಂಕವನ್ನು ಬದಲು ಮಾಡುವ ಅವಕಾಶವನ್ನೂ ಸಹ ನೀಡಲಾಗುತ್ತದೆ.
ಗ್ರೂಪ್‌ನ ಎಲ್ಲಾ ಸದಸ್ಯರಿಗೂ ಇದು ವೈಯುಕ್ತೀಕರಿಸಬಹುದಾದ ಆಯ್ಕೆ ನೀಡಲಾಗಿದ್ದು, ನಿಮ್ಮನ್ನು ಹೊರತುಪಡಿಸಿ ಉಳಿದ ಸದಸ್ಯರು ಆ ಗ್ರೂಪ್‌ನಲ್ಲಿ ಇರಬೇಕೇ?, ಅಥವಾ ಬೇಡವೇ ಎಂಬುದನ್ನು ಅವರೇ ನಿರ್ಧಾರ ಮಾಡಬಹುದು. ಇದರಿಂದಾಗಿ ನಿಮ್ಮ ಮೊಬೈಲ್‌ನಲ್ಲಿ ಅನವಶ್ಯಕ ಸ್ಟೋರೇಜ್ ಹೆಚ್ಚಾಗುವುದಿಲ್ಲ. ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್ ಸಹ ಹೆಚ್ಚಿನ ಒತ್ತಡ ಇಲ್ಲದೆ ಕೆಲಸ ಮಾಡಲು ಅವಕಾಶ ನೀಡಿದಂತೆ ಆಗುತ್ತದೆ.

ಈ ಫೀಚರ್ಸ್ ಯಾರಿಗೆ ಲಭ್ಯ?
ವಾಟ್ಸಾಪ್ ನ ಈ ಹೊಸ ಫೀಚರ್ಸ್‌ಅಭಿವೃದ್ಧಿ ಹಂತದಲ್ಲಿ ಇದೆ ಎಂದು ತಿಳಿದುಬಂದಿದ್ದು, ಐಓಎಸ್ ಬಳಕೆದಾರರಿಗೆ ಇದು ಲಭ್ಯವಾಗಲಿದೆ. ಹಾಗೆಯೇ ಐಓಎಸ್ ಬೀಟಾಗಾಗಿ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ಇನ್ನೇನು ಕೆಲವು ದಿನಗಳಲ್ಲಿ ಇದನ್ನು ಲಾಂಚ್ ಮಾಡಲಾಗುತ್ತದೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ.
ಇನ್ನು ಕೆಲವು ದಿನಗಳ ಹಿಂದೆ ಐಓಎಸ್ ಬಳಕೆದಾರರಿಗೆ ಚಿತ್ರಗಳನ್ನು ಸ್ಟಿಕ್ಕರ್‌ಗಳಾಗಿ ಪರಿವರ್ತಿಸಿಕೊಳ್ಳುವ ಫೀಚರ್ಸ್ ಬಗ್ಗೆ ಘೋಷಣೆ ಮಾಡಿದ್ದು, ಈ ಮೂಲಕ ಐಓಎಸ್ ಬಳಕೆದಾರು ಯಾವುದೇ ಥರ್ಡ್ ಪಾರ್ಟಿ ಆಪ್ ಬಳಕೆ ಮಾಡದೇ ವಾಟ್ಸಾಪ್ ಮೂಲಕವೇ ಚಿತ್ರಗಳಿಗೆ ಬೇರೆ ರೂಪ ಕೊಡಬಹುದಾಗಿದೆ. ಇದರಿಂದ ಅನವಶ್ಯಕವಾಗಿ ಬೇರೆ ಆಪ್‌ಗಳ ಮೊರೆ ಹೋಗುವುದನ್ನು ವಾಟ್ಸಾಪ್ ತಪ್ಪಿಸಿದೆ.

ಇದರೊಂದಿಗೆ ಅನಾಮಿಕ ಕರೆಗಳನ್ನು ಮ್ಯೂಟ್ ಮಾಡುವ ಫೀಚರ್ಸ್ ಬಗ್ಗೆ ಘೋಷಣೆ ಮಾಡಿದ್ದು, ಈ ಫೀಚರ್ಸ್ ಮೂಲಕ ಬಳಕೆದಾರರು ಯಾವುದೇ ಅನಾಮಿಕ ಹಾಗೂ ಮೋಸದ ಕರೆಗಳು, ನಿಮ್ಮ ಸಂಪರ್ಕ ಪಟ್ಟಿಯಲ್ಲಿ ಇಲ್ಲದ ಕರೆಗಳ ವಿರುದ್ಧ ಕ್ರಮ ಜರುಗಿಸಲು ಅವಕಾಶ ನೀಡುತ್ತದೆ. ಜೊತೆಗೆ ಟ್ಯಾಬ್ಲೆಟ್ ಬಳಕೆದಾರರಿಗೆ ಸ್ಪ್ಲಿಟ್ ವ್ಯೂ ಫೀಚರ್ಸ್ ಅನ್ನು ಸಹ ಪರಿಚಯಿಸಲು ವಾಟ್ಸಾಪ್ ಮುಂದಾಗಿದೆ. ಇದರಿಂದ ಒಂದೇ ಡಿಸ್ಪ್ಲೇ ನಲ್ಲಿ ಎರಡು ಕಾರ್ಯ ಮಾಡಬಹುದಾಗಿದೆ.


Click it and Unblock the Notifications








