Home
ಸುದ್ದಿಜಾಲ

ಇನ್ಮುಂದೆ ವಾಟ್ಸಾಪ್‌ನಲ್ಲಿ ಸ್ಕ್ರೀನ್‌ ಶೇರಿಂಗ್ ಆಯ್ಕೆ ಲಭ್ಯ!..ಇಲ್ಲಿದೆ ಪೂರ್ಣ ಮಾಹಿತಿ!

ಮೆಟಾ ಒಡೆತನದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಾಪ್‌ ತನ್ನ ಬಳಕೆದಾರರಿಗಾಗಿ ಹಲವು ಅತ್ಯುತ್ತಮ ಫೀಚರ್ಸ್‌ ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದೇ ಹಾದಿಯಲ್ಲಿ ಸಾಗಿರುವ ವಾಟ್ಸಾಪ್‌ ಮತ್ತಷ್ಟು ಉಪಯುಕ್ತ ವಿವಿಧ ಹೊಸ ಫೀಚರ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.

ಹೌದು, ವಾಟ್ಸಾಪ್‌ನ ಹೊಸ ಫೀಚರ್ಸ್‌ ಬಗ್ಗೆ ಇದೀಗ ಹೊಸ ವರದಿಯು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಮೆಟಾ-ಮಾಲೀಕತ್ವದ ಈ ಪ್ಲಾಟ್‌ಫಾರ್ಮ್ ಹೊಸ ಆಯ್ಕೆಯನ್ನು ಅಭಿವೃದ್ಧಿಪಡಿಸುತ್ತಿದೆ. ನೂತನ ಆಯ್ಕೆಯು ಈ ಆಪ್‌ನಲ್ಲಿ ವೀಡಿಯೊ ಕರೆ ಮಾಡುವ ಅನುಭವವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

ಇನ್ಮುಂದೆ ವಾಟ್ಸಾಪ್‌ನಲ್ಲಿ ಸ್ಕ್ರೀನ್‌ ಶೇರಿಂಗ್ ಆಯ್ಕೆ ಲಭ್ಯ!..ಇಲ್ಲಿದೆ ಮಾಹಿತಿ!

ಇನ್ನು ವಾಟ್ಸಾಪ್‌ನ ಅಪ್‌ಡೇಟ್‌ಗಳನ್ನು ಟ್ರ್ಯಾಕ್ ಮಾಡುವ WABetaInfo ವೆಬ್‌ಸೈಟ್, ವಾಟ್ಸಾಪ್‌ ಹೊಸ ಫೀಚರ್ಸ್‌ಗಳನ್ನು ಹೊರತರುತ್ತಿದೆ ಎಂದು ಬಹಿರಂಗಪಡಿಸಿದೆ. ಅದು ಬಳಕೆದಾರರಿಗೆ ವೀಡಿಯೊ ಕರೆ ಸಮಯದಲ್ಲಿ ತಮ್ಮ ಸ್ಕ್ರೀನ್‌ ಅನ್ನು ಸುಲಭವಾಗಿ ಶೇರ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ತಿಳಿದುಬಂದಿದೆ.

ಅಂದಹಾಗೆ ವಾಟ್ಸಾಪ್‌ ಪರಿಚಯಿಸಲಿರುವ ಈ ಆಯ್ಕೆಯು ಆಂಡ್ರಾಯ್ಡ್‌ ಆವೃತ್ತಿ ಸಂಖ್ಯೆ 2.23.11.19 ಗಾಗಿ ವಾಟ್ಸಾಪ್‌ ಬೀಟಾದೊಂದಿಗೆ ಬರುತ್ತದೆ. ಹೀಗಾಗಿ ಪ್ರಸ್ತುತ ಆಂಡ್ರಾಯ್ಡ್‌ ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ವಿಡಿಯೋ ಕರೆ ಮಾಡಿದಾಗ ಬಳಕೆದಾರರು ವಾಟ್ಸಾಪ್‌ ಸ್ಕ್ರೀನ್‌ ಅನ್ನು ಶೇರ್ ಮಾಡಬಹುದಾದ ಆಯ್ಕೆ ಕಾಣಿಸಿಕೊಳ್ಳಲಿದೆ.

ಇನ್ಮುಂದೆ ವಾಟ್ಸಾಪ್‌ನಲ್ಲಿ ಸ್ಕ್ರೀನ್‌ ಶೇರಿಂಗ್ ಆಯ್ಕೆ ಲಭ್ಯ!..ಇಲ್ಲಿದೆ ಮಾಹಿತಿ!

ಸ್ಕ್ರೀನ್‌ ಶೇರಿಂಗ್ ಆಯ್ಕೆಯ ಕಾರ್ಯ ಹೇಗೆ?
ವಾಟ್ಸಾಪ್‌ನಲ್ಲಿ ಸ್ಕ್ರೀನ್ ಶೇರಿಂಗ್ ಫೀಚರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಬಗ್ಗೆ WABetaInfo ತಿಳಿಸಿದೆ. ಈ ವೆಬ್‌ಸೈಟ್‌ ಪ್ರಕಾರ, ಬಳಕೆದಾರರು ಕರೆ ನಿಯಂತ್ರಣ ವೀಕ್ಷಣೆಯಲ್ಲಿ ಹೊಸ ಐಕಾನ್ ಅನ್ನು ಕಾಣುತ್ತಾರೆ. ಅದನ್ನು ಬಳಸಿಕೊಂಡು ಅವರ ಸ್ಕ್ರೀನ್‌ ಅನ್ನು ಶೇರ್‌ ಮಾಡಲು ಅವರನ್ನು ಪ್ರೇರೇಪಿಸಲಾಗುತ್ತದೆ. ಬಳಕೆದಾರರು ತಮ್ಮ ಸ್ಕ್ರೀನ್‌ ಅನ್ನು ಶೇರ್ ಮಾಡಲು ನಿರ್ಧರಿಸಿದಾಗ, ನಂತರ ಅವರ ಸ್ಕ್ರೀನ್‌ ಮೇಲೆ ಪ್ರದರ್ಶಿಸಲಾಗುತ್ತದೆ ರೆಕಾರ್ಡ್ ಮಾಡಲಾಗುತ್ತದೆ ಮತ್ತು ಸ್ವೀಕರಿಸುವವರೊಂದಿಗೆ ಹಂಚಿಕೊಳ್ಳಲಾಗುತ್ತದೆ.

ಈ ಆಯ್ಕೆಯ ಮೇಲೆ ಬಳಕೆದಾರರು ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ ಎಂದು ವರದಿಯು ಸೇರಿಸುತ್ತದೆ. ವೀಡಿಯೊ ಕರೆ ಸಮಯದಲ್ಲಿ ಅವರ ಸ್ಕ್ರೀನ್‌ ಕಂಟೆಂಟ್‌ನ ನಿರಂತರ ಪ್ರಸಾರದ ಹೊರತಾಗಿಯೂ, ಅವರು ಯಾವುದೇ ಸಮಯದಲ್ಲಿ ಪ್ರಕ್ರಿಯೆಯನ್ನು ನಿಲ್ಲಿಸಬಹುದು. ಹೆಚ್ಚುವರಿಯಾಗಿ, ನಿಮ್ಮ ಸ್ಕ್ರೀನ್‌ ಕಂಟೆಂಟ್‌ ಅನ್ನು ಹಂಚಿಕೊಳ್ಳಲು ನಿಮ್ಮ ಸಮ್ಮತಿಯನ್ನು ನೀಡಿದರೆ ಮಾತ್ರ ಈ ಆಯ್ಕೆಯನ್ನು ಸಕ್ರಿಯಗೊಳಿಸಲಾಗುತ್ತದೆ.

ಜನಪ್ರಿಯ ವಾಟ್ಸಾಪ್‌ ಮೆಸೆಜ್‌ ಅಪ್ಲಿಕೇಶನ್ ವಾಟ್ಸಾಪ್‌ ಆಂಡ್ರಾಯ್ಡ್‌ ಗಾಗಿ ನೂತನ ಬೀಟಾ ಅಪ್‌ಡೇಟ್ 2.23.11.19 ಅನ್ನು ಇನ್‌ಸ್ಟಾಲ್‌ ಮಾಡಿದ ನಂತರ, ಕೆಲ ಬಳಕೆದಾರರು ಕೆಳಗಿನ ನ್ಯಾವಿಗೇಷನ್ ಬಾರ್‌ನ ಲೇಔಟ್‌ನಲ್ಲಿ ಸ್ವಲ್ಪ ಬದಲಾವಣೆ ಕಾಣಬಹುದು. ಕೆಳಗಿನ ನ್ಯಾವಿಗೇಷನ್ ಬಾರ್‌ನಲ್ಲಿನ ಟ್ಯಾಬ್‌ಗಳನ್ನು ಬದಲಾಯಿಸಲಾಗಿದೆ. ಈಗ ಕ್ರಮವಾಗಿ ಚಾಟ್‌ಗಳು, ಕರೆಗಳು, ಕಮ್ಯೂನಿಟಿಗಳು ಮತ್ತು ಸ್ಟೇಟಸ್‌ ಈ ರೀತಿ ಕಾಣುವುದನ್ನು ಕೆಲವು ಬಳಕೆದಾರರು ನೋಡಬಹುದಾಗಿದೆ.

ಅದೇ ರೀತಿ ಮೆಟಾ ಒಡೆತನದ ವಾಟ್ಸಾಪ್‌ ಆಪ್‌ ತನ್ನ ಆಂಡ್ರಾಯ್ಡ್‌ ಬೀಟಾದಲ್ಲಿ ಹೊಸ ಲಾಕ್‌ ಚಾಟ್‌ ಆಯ್ಕೆ ಪರಿಚಯಿಸಲು ರೆಡಿಯಾಗಿದೆ. ಇದು ಹೆಸರೇ ಹೇಳುವಂತೆ ಗ್ರಾಹಕರು ತಮ್ಮ ಖಾಸಗಿ ಮೆಸೆಜ್‌ಗಳನ್ನು ಲಾಕ್‌ ಮಾಡಲು ಆಯ್ಕೆ ಲಭ್ಯ ಮಾಡಲಾಗಿದೆ. ಈ ಆಯ್ಕೆಯಿಂದ ಜನರು ತಮ್ಮ ಚಾಟ್‌ಗಳನ್ನು ಇತರರಿಗೆ ಕಾಣದಂತೆ ಮರೆ ಮಾಡಲು ಇದು ನೆರವಾಗಲಿದೆ. ಇದರಿಂದ ಜನರಿಗೆ/ ಬಳಕೆದಾರರಿಗೆ ಮತ್ತಷ್ಟು ಖಾಸಗಿತನ ಕಾಪಾಡಲು ಉಪಯುಕ್ತ ಆಗಲಿದೆ ಎಂದು ವಾಬೇಟಾ ಇನ್ಫೋ ವರದಿ ತಿಳಿದು ಬಂದಿದೆ.

ಇನ್ನು ವಾಟ್ಸಾಪ್‌ ಲಾಕ್‌ಚಾಟ್‌ ಆಯ್ಕೆ ಬಳಕೆದಾರರಿಗೆ ತಮ್ಮ ಖಾಸಗಿ ಚಾಟ್‌ಗಳನ್ನು ಮರೆ ಮಾಡಲು ಅನುವು ಮಾಡಿಕೊಡುತ್ತದೆ. ಇದರೊಂದಿಗೆ ವೈಯಕ್ತಿಕ ಚಾಟ್‌, ಕಂಟ್ಯಾಕ್ಟ್‌ ನಂಬರ್‌ ಅಲ್ಲದೇ ಗ್ರೂಪ್‌ನ ಇತರೆ ಯಾವುದೇ ಮಾಹಿತಿ ಸಹ ಬೇರೆಯವರಿಗೆ ಕಾಣದಂತೆ ಹೈಡ್ ಮಾಡಲು ಬಹಳ ನೆರವಾಗಲಿದೆ.

Best Mobiles in India

English summary
WhatsApp may rollout screen sharing feature: know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+