ಶೀಘ್ರದಲ್ಲೇ ವಾಟ್ಸಪ್‌ ಸೇರಲಿದೆ ಮತ್ತೊಂದು ಅಚ್ಚರಿಯ ಫೀಚರ್!

|

ಫೇಸ್‌ಬುಕ್ ಮಾಲೀಕತ್ವದ ಅತೀ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಪ್ ಸದಾ ಒಂದಿಲ್ಲೊಂದು ಪ್ರೈವೆಸಿ ಅಪ್‌ಡೇಟ್ ನೀಡುತ್ತಲೇ ಸಾಗಿದೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ವಾಟ್ಸಪ್ ಇದೀಗ ತನ್ನ ಬಳಕೆದಾರರಿಗೆ ಮತ್ತೊಂದು ವಿಶೇಷ ಫೀಚರ್ಸ್‌ ಅನ್ನು ಲಭ್ಯ ಮಾಡಲು ಮುಂದಾಗಿದೆ. ಬರಲಿರುವ ಹೊಸ ಫೀಚರ್ ರೋಲ್ ಔಟ್ ಆದ ಬಳಿಕ ಬಳಕೆದಾರರ ಚಾಟ್‌ಗೆ ಮತ್ತಷ್ಟು ರಕ್ಷಣೆ ದೊರೆಯಲಿದೆ.

ಮೆಸೆಜ್ ಆಪ್ ವಾಟ್ಸಪ್

ಹೌದು, ಇನ್‌ಸ್ಟಂಟ್ ಮೆಸೆಜ್ ಆಪ್ ವಾಟ್ಸಪ್ ಬಳಕೆದಾರರ ಚಾಟ್ ಮಾಹಿತಿಗೆ ಪ್ರೈವೆಸಿ ಫೀಚರ್ ನೀಡಲು ಮುಂದಾಗಿದ್ದು, ಚಾಟ್ ಬ್ಯಾಕ್‌ಅಪ್‌ಗೆ ಪಾಸ್‌ವರ್ಡ್‌ ಸೌಲಭ್ಯ ಅಳವಡಿಸುವ ಸೂಚನೆ ನೀಡಿದೆ. ಬಳಕೆದಾರರು ಚಾಟ್ ಬ್ಯಾಕ್‌ಅಪ್‌ಗೆ ಪಾಸ್‌ವರ್ಡ್ ಸೆಟ್‌ ಮಾಡುವ ಅವಕಾಶ ಲಭ್ಯವಾಗಲಿದ್ದು, ಪಾಸ್‌ವರ್ಡ್‌ ಇಲ್ಲದೇ ವಾಟ್ಸಪ್ ಬ್ಯಾಕ್‌ಅಪ್ ಪಡೆಯುವುದು ಅಸಾಧ್ಯವಾಗಲಿದೆ. ಇದರಿಂದ ಮೂರನೇಯವರ ಚಾಟ್ ಮಾಹಿತಿ ಪಡೆಯಲು ಆಗೋದಿಲ್ಲ.

ಪಾಸ್‌ವರ್ಡ್‌ ಪ್ರೊಟೆಕ್ಟ್

ವಾಟ್ಸಪ್ v2.20.66 ಬೀಟಾ ಆವೃತ್ತಿಯಲ್ಲಿ ಮೊದಲು ಪಾಸ್‌ವರ್ಡ್‌ ಪ್ರೊಟೆಕ್ಟ್ ಬ್ಯಾಕ್‌ಅಪ್ಸ್‌ ಫೀಚರ್ ಆಯ್ಕೆ ಕಾಣಿಸಲಿದ್ದು, ಆ ಬಳಿಕ ಸಾಮಾನ್ಯ ಆವೃತ್ತಿಯ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಗಳಿವೆ ಎಂದು WABetaInfo ತಾಣದಲ್ಲಿ ವರದಿ ಮಾಡಿದೆ. ಇತರೆ ಡಿವೈಸ್‌ಗಳಲ್ಲಿ ಬಳಕೆದಾರರು ತೆರೆಯುವ ಮೊದಲ ನಂಬರ್‌ನ (ಒಂದೇ ವಾಟ್ಸಪ್ ಎರಡು ಡಿವೈಸ್‌) ವಾಟ್ಸಪ್ ಖಾತೆಯ ಬ್ಯಾಕ್‌ಅಪ್ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ.

ಬ್ಯಾಕ್‌ಅಪ್ ಫೀಚರ್

ಸದ್ಯ ಇನ್ನು ಈ ಚಾಟ್ ಬ್ಯಾಕ್‌ಅಪ್ ಫೀಚರ್ ಅಲ್ಫಾ ಹಂತದಲ್ಲಿದ್ದು, ಹೊಸ ಬೀಟಾ ಅಪ್‌ಡೇಟ್ v2.20.67 ಆವೃತ್ತಿಯನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಬಳಕೆದಾರರು ಪಡೆಯುವ ವಾಟ್ಸಪ್ ಬ್ಯಾಕ್‌ಅಪ್‌ ಗೂಗಲ್ ಡ್ರೈವ್‌ನಲ್ಲಿ ಸೇವ್ ಆಗುವುದು. ಹಾಗೆಯೇ ಸೇವ್ ಆಗುವ ಚಾಟ್ ಬ್ಯಾಕ್‌ಅಪ್‌ ಎನ್‌ಕ್ರಿಪ್ಟೆಡ್ ಮಾದರಿಯಲ್ಲಿ ಇರುತ್ತದೆ.

ಫಿಂಗರ್‌ಪ್ರಿಂಟ್ ಲಾಕ್

ಇತ್ತೀಚಿಗೆ ವಾಟ್ಸಪ್ ಫಿಂಗರ್‌ಪ್ರಿಂಟ್ ಲಾಕ್ ಫೀಚರ್‌ ಅನ್ನು ಪರಿಚಯಿಸಿ ಗ್ರಾಹಕರಿಗೆ/ಬಳಕೆದಾರರ ಖಾತೆಗೆ ಹೆಚ್ಚಿನ ಭದ್ರತೆ ನೀಡಿದೆ. ಅಷ್ಟೇ ಅಲ್ಲದೇ ಟು ಸ್ಟೆಪ್ ವೇರಿಫಿಕೇಶನ್ ಆಯ್ಕೆಯು ಇದ್ದು, ಬಳಕೆದಾರರು ಈ ಆಯ್ಕೆಯನ್ನು ಬಳಸಿಕೊಳ್ಳಬಹುದು. ಹಾಗೆಯೇ ಪ್ರೋಫೈಲ್‌ ಪಿಚ್ಚರ್, ಗ್ರೂಪ್ ಸೇರುವ ಆಯ್ಕೆ, ಸೇರಿದಂತೆ ಸಾಕಷ್ಟು ಮಹತ್ತರ ಆಯ್ಕೆಗಳು ವಾಟ್ಸಪ್ ಸೇರಿಕೊಂಡಿವೆ. ಇದೇ ರೀತಿ ಈ ವರ್ಷವು ಇನ್ನಷ್ಟು ಹೆಚ್ಚಿನ ಫೀಚರ್ಸ್‌ಗಳು ಈ ವರ್ಷದಲ್ಲಿಯೂ ಸೇರುವ ನಿರೀಕ್ಷೆಗಳು ಇವೆ.

Most Read Articles
Best Mobiles in India

English summary
WhatsApp’s new security feature is reportedly in the alpha stage of development.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X