ಅಂತೂ ವಾಟ್ಸಾಪ್‌ನಲ್ಲಿ ಬರುತ್ತೆ ಈ ಫೀಚರ್!..ಬಳಕೆದಾರರು ಇದಕ್ಕೆ ಕಾಯ್ತಾ ಇದ್ರು!
ಮೆಟಾ ಮಾಲೀಕತ್ವದ ವಾಟ್ಸಾಪ್ ಹತ್ತು ಹಲವು ಉಪಯುಕ್ತ ಫೀಚರ್ಸ್ ಮೂಲಕ ಬಳಕೆದಾರರ ಸ್ನೇಹಿ ಆಗಿದೆ. ಇದೀಗ ಬಹು ವರ್ಷಗಳಿಂದ ಬಳಕೆದಾರರು ನಿರೀಕ್ಷಿಸುತ್ತಿದ್ದ ಫೀಚರ್ ಅನ್ನು ಸೇರಿಸುವ ತಯಾರಿ ಮಾಡುತ್ತಿದೆ. ವಾಟ್ಸಾಪ್ ಸೇರಲಿರುವ ಈ ನೂತನ ಫೀಚರ್‌ಗೆ ಖಂಡಿತಾ ಬಳಕೆದಾರರು ಬಹುಪರಾಕ್ ಎನ್ನುತ್ತಾರೆ.
ಹೌದು, ವಾಟ್ಸಾಪ್ ಸಂಸ್ಥೆಯು ಆಂಡ್ರಾಯ್ಡ್ ಮತ್ತು ಐಓಎಸ್ (ios) ಬಳಕೆದಾರರಿಗೆ ಈಗಾಗಲೇ ಕೆಲವು ಉಪಯುಕ್ತ ಫೀಚರ್ ಲಾಂಚ್ ಮಾಡಿದೆ. ಹೊಸ ಫೀಚರ್ಸ್‌ಗಳ ಜೊತೆಗೆ ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡುತ್ತಾ ಸಾಗಿರುವ ವಾಟ್ಸಾಪ್ ಇತ್ತೀಚಿಗೆ ಚಾಟ್ ಲಾಕ್ ಆಯ್ಕೆಯನ್ನು ಅನಾವರಣ ಮಾಡಿ, ಬಳಕೆದಾರರಿಗೆ ಖುಷಿ ನೀಡಿದೆ.

ಮತ್ತೆ ಅದೇ ಹಾದಿಯಲ್ಲಿ ಮುಂದೆ ಸಾಗಿರುವ ಮೆಟಾ ಒಡೆತನದ ವಾಟ್ಸಾಪ್ ಈಗ ಬಳಕೆದಾರರ ಬಹು ನಿರೀಕ್ಷಿತ ಫೀಚರ್ ಸೇರ್ಪಡೆಗೆ ಸಜ್ಜಾಗಿದೆ. ಅದುವೇ ಒಂದೇ ಅಪ್ಲಿಕೇಶನ್‌ನಲ್ಲಿ ಎರಡು ಪ್ರತ್ಯೇಕ ವಾಟ್ಸಾಪ್ ಖಾತೆಗಳನ್ನು ತೆರೆಯುವ ಆಯ್ಕೆ (Multiple WhatsApp accounts on same app) ಆಗಿದೆ. ಸದ್ಯ ವಾಟ್ಸಾಪ್ ಈ ಫೀಚರ್ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ಅಪ್‌ಡೇಟ್ ನಲ್ಲಿ ಜಾರಿ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
WABetaInfo ಮಾಹಿತಿ ಪ್ರಕಾರ ಆಂಡ್ರಾಯ್ಡ್ ಗಾಗಿ ವಾಟ್ಸಾಪ್ ಬಿಸಿನೆಸ್ (2.23.13.5) ಇತ್ತೀಚಿನ ಬೀಟಾ ಆವೃತ್ತಿಗೆ ಪ್ರವೇಶವನ್ನು ಪಡೆದುಕೊಂಡಿದೆ. ಒಂದೇ ಅಪ್ಲಿಕೇಶನ್‌ನಲ್ಲಿ ಎರಡು ಪ್ರತ್ಯೇಕ ವಾಟ್ಸಾಪ್ ಖಾತೆಗಳನ್ನು ಸೇರಿಸಲು ಇದು ಅವಕಾಶ ಮಾಡಿಕೊಡುತ್ತದೆ. ಹೀಗಾಗಿ ಒಂದೇ ಫೋನ್‌ನಲ್ಲಿ ಎರಡು ಭಿನ್ನ ವಾಟ್ಸಾಪ್ ಖಾತೆಗಳನ್ನು ಬಳಸಲು ಜನರು ಡ್ಯುಯಲ್ ಮೆಸೆಂಜರ್ ಅಥವಾ ಇತರೆ ಯಾವುದೇ ಥರ್ಡ್ ಪಾರ್ಟಿ ಆಪ್ ಬಳಸಬೇಕಾಗಿಲ್ಲ.
ಮುಖ್ಯ ಡಿವೈಸ್‌ಗೆ ಲಿಂಕ್ ಮಾಡಲಾದ ಕಂಪ್ಯಾನಿಯನ್ ಡಿವೈಸ್‌ಗಳಲ್ಲಿ ಅವರು ಡ್ಯುಯಲ್ ಖಾತೆಗಳನ್ನು ಬಳಸಲು ಸಾಧ್ಯವಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಡ್ಯುಯಲ್-ಸಿಮ್ ಕಾನ್ಫಿಗರೇಶನ್‌ನೊಂದಿಗೆ ಫೋನ್‌ಗಳನ್ನು ಬಳಸುವ ಬಳಕೆದಾರರು ವಾಟ್ಸಾಪ್‌ನ ವಿಭಿನ್ನ ಆಪ್‌ಗಳನ್ನು ಇನ್‌ಸ್ಟಾಲ್ ಮಾಡದೇ ನೂತನ ಫೀಚರ್ ಅನ್ನು ಬಳಸಬಹುದು ಎನ್ನಲಾಗಿದೆ.
ಅಂದಹಾಗೆ ಇದೀಗ, ಈ ನೂತನ ಫೀಚರ್ ವಾಟ್ಸಾಪ್ ಅಪ್ಲಿಕೇಶನ್‌ನ ಬಿಸಿನೆಸ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಫೀಚರ್ ಅನ್ನು ವಾಟ್ಸಾಪ್‌ನ ಸಾಮಾನ್ಯ ಆವೃತ್ತಿಗೆ ಸಹ ಬಿಡುಗಡೆ ಮಾಡಲಾಗುವುದು ಎಂದು ತಿಳಿದುಬಂದಿದೆ. ಪ್ರಸ್ತುತ ಈ ಹೊಸ ಆಯ್ಕೆಯು ಪ್ರಾಯೋಗಿಕ ಹಂತದಲ್ಲಿ ಇದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಮುಕ್ತವಾದ ರೂಪದಲ್ಲಿ ಬಿಡುಗಡೆ ಆಗುವ ನಿರೀಕ್ಷೆಗಳಿವೆ.
ವಾಯಿಸ್ ರೆಕಾರ್ಡಿಂಗ್ ಅನ್ನು ವಾಟ್ಸಾಪ್ ಸ್ಟೇಟಸ್ ಹಾಕಲು ಈ ಹಂತ ಅನುಸರಿಸಿ:
ಹಂತ 1 : ಈ ಫೀಚರ್ ಬಳಸಲು ಮೊದಲು ನಿಮ್ಮ ವಾಟ್ಸಾಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಬೇಕು. ನಂತರ ವಾಟ್ಸಾಪ್ ನಲ್ಲಿ ಸ್ಟೇಟಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 2 : ನಂತರ ಆ ಪೇಜ್‌ನಲ್ಲಿ ಪೆನ್ಸಿಲ್ ಐಕಾನ್ ಮೇಲೆ ಕ್ಲಿಕ್ ಮಾಡಿ ಆಂಡ್ರಾಯ್ಡ್ ಬಳಕೆದಾರರು ಅದನ್ನು ಕೆಳಗಿನ ಬಲ ಭಾಗದ ಮೂಲೆಯಲ್ಲಿ ಕಾಣಬಹುದಾಗಿದೆ. ಇನ್ನು iOS ಬಳಕೆದಾರರು ಅದನ್ನು ಎಲ್ಲಾ ಸ್ಟೇಟಸ್ ಅಪ್ಡೇಟ್ ಮೇಲ್ಭಾಗದಲ್ಲಿ ಕಾಣಬಹುದಾಗಿದೆ.
ಹಂತ 3 : ಆ ಬಳಿಕ, ರೆಕಾರ್ಡಿಂಗ್ ಆರಂಭಿಸಲು ಕೆಳಗಿನ ಬಲ ಭಾಗದ ಮೂಲೆಯಲ್ಲಿರುವ ಮೈಕ್ ಐಕಾನ್ ಮೇಲೆ ಟ್ಯಾಪ್ ಮಾಡಿ ಹಿಡಿದುಕೊಳ್ಳಿ.
ಹಂತ 4 : ಬಳಿಕ ಮೈಕ್ ಐಕಾನ್ ಅನ್ನು ಎಡಕ್ಕೆ ಸ್ಲೈಡ್ ಮಾಡುವ ಮೂಲಕ ನಿಮಗೆ ಬೇಡದ ರೆಕಾರ್ಡಿಂಗ್ ಅನ್ನು ಡಿಲೀಟ್ ಮಾಡಬಹುದು.
ಹಂತ 5 : ನಂತರ ನಿಮ್ಮ ರೆಕಾರ್ಡಿಂಗ್ ನಂತರ ಪ್ಲೇ ಬಟನ್ ಅನ್ನು ಒತ್ತುವ ಮೂಲಕ ರೆಕಾರ್ಡಿಂಗ್ ಸೆಂಡ್ ಮಾಡುವ ಮೊದಲು ಪೂರ್ವವೀಕ್ಷಿಸಬಹುದು.
ಹಂತ 6 : ನಿಮಗೆ ರೆಕಾರ್ಡಿಂಗ್ ಇಷ್ಟವಾಗದಿದ್ದರೆ ಅದನ್ನು ಡಿಲೀಟ್ ಸಹ ಮಾಡಬಹುದು. ಬೇಕಿದ್ದರೆ ಮತ್ತೆ ರೆಕಾರ್ಡಿಂಗ್ ಪ್ರಾರಂಭಿಸಬಹುದು
ಹಂತ 7 : ಇಷ್ಟವಾದ ವಾಯ್ಸ್ ನೋಟ್ ಸ್ಟೇಟಸ್ ಪೋಸ್ಟ್ ಮಾಡಲು ಕೆಳಗಿನ ಬಲ ಭಾಗದ ಮೂಲೆಯಲ್ಲಿರುವ ಸೆಂಡ್ ಬಟನ್ ಒತ್ತಿರಿ.


Click it and Unblock the Notifications








