ಒಂದಕ್ಕಿಂತ ಹೆಚ್ಚು ಡಿವೈಸ್‌ಗಳಲ್ಲಿ ವಾಟ್ಸಾಪ್‌ ಬಳಕೆ ಈಗ ಸಾಧ್ಯ!

|

ವಾಟ್ಸಾಪ್‌ ಬಳಕೆದಾರರು ಬಹುನಿರೀಕ್ಷಿತದಿಂದ ಕಾಯುತ್ತಿದ್ದ ಮಲ್ಟಿ-ಡಿವೈಸ್‌ ಸಪೋರ್ಟ್‌ ಫೀಚರ್‌ ಈಗ ಕಾರ್ಯನಿರ್ವಹಿಸುತ್ತಿದೆ ಎಂದು ವಾಟ್ಸಾಪ್ ತಿಳಿಸಿದೆ. ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್‌ ಆಪ್‌ ವಾಟ್ಸಾಪ್‌ ಈಗ ತನ್ನ ಬೀಟಾ ಬಳಕೆದಾರರಿಗೆ ಮಲ್ಟಿ-ಡಿವೈಸ್‌ ಸಪೋರ್ಟ್‌ ಫೀಚರ್‌ ಅನ್ನು ಹೊರತರಲು ಪ್ರಾರಂಭಿಸಿದೆ. ಫೋನ್‌ ಬ್ಯಾಟರಿ ಖಾಲಿ ಆದಾಗ ಇನ್ನೊಂದು ಡಿವೈಸ್‌ನಲ್ಲಿ ಆಪ್ ಬಳಕೆ ಮಾಡಬಹುದಾಗಿದೆ.

ಘೋಷಿಸಿದ್ದಾರೆ

ಹೌದು, ಫೇಸ್‌ಬುಕ್ ಒಂದು ಪೋಸ್ಟ್‌ನಲ್ಲಿ ಅವರು ಈಗ ಮಲ್ಟಿ ಡಿವೈಸ್ ಸಪೋರ್ಟ್ ವೈಶಿಷ್ಟ್ಯವನ್ನು ತನ್ನ ಜನಪ್ರಿಯ ಸಾಮಾಜಿಕ ಅಪ್ಲಿಕೇಶನ್ ವಾಟ್ಸಾಪ್‌ಗೆ ಹೊರತರುತ್ತಿದ್ದಾರೆ ಎಂದು ಘೋಷಿಸಿದ್ದಾರೆ. ಆದರೆ ಈ ಮಲ್ಟಿ ಡಿವೈಸ್‌ ಸಪೋರ್ಟ್‌ ಆಯ್ಕೆಯು ಬಳಕೆದಾರರ ಫೋನ್ ಹೊರತುಪಡಿಸಿ ಇತರೆ 4 ಡಿವೈಸ್‌ಗಳಲ್ಲಿ ವಾಟ್ಸಾಪ್‌ ಖಾತೆ ಬಳಕೆಮಾಡಬಹುದಾಗಿದೆ ಎಂದು ಹೇಳಿದೆ. ಒಂದೇ ವಾಟ್ಸಾಪ್ ಖಾತೆಯನ್ನು ನೀವು ಇನ್ನೂ ಒಂದಕ್ಕಿಂತ ಹೆಚ್ಚು ಫೋನ್‌ಗಳಲ್ಲಿ ಬಳಸಲಾಗುವುದಿಲ್ಲ ಎಂದರ್ಥ. ನೀವು ಏಕಕಾಲದಲ್ಲಿ ಮ್ಯಾಕೋಸ್ ಮತ್ತು ವಿಂಡೋಸ್‌ಗಾಗಿ ವೆಬ್ ಅಥವಾ ಪಿಸಿ ಅಪ್ಲಿಕೇಶನ್‌ನಲ್ಲಿ ಮಲ್ಟಿ ಡಿವೈಸ್ ಬೆಂಬಲವನ್ನು ಬಳಸಬಹುದು.

ವಾಟ್ಸಾಪ್

ಇನ್ನು ಮಲ್ಟಿ ಡಿವೈಸ್‌ ಖಾತೆ ಸುರಕ್ಷತೆಗಾಗಿ, ವಾಟ್ಸಾಪ್ ಬಯೋಮೆಟ್ರಿಕ್ ದೃಢೀಕರಣವನ್ನು ಹೆಚ್ಚುವರಿ ಭದ್ರತೆಯಾಗಿ ಜಾರಿಗೊಳಿಸುವುದಾಗಿ ಹೇಳಿದೆ. ಬಳಕೆದಾರರು ತಮ್ಮ ವಾಟ್ಸಾಪ್ ಖಾತೆಗೆ ಲಿಂಕ್ ಮಾಡಲಾದ ಎಲ್ಲಾ ಸಾಧನಗಳನ್ನು ಅಪ್ಲಿಕೇಶನ್‌ನಲ್ಲಿ ನೋಡಲು ಸಾಧ್ಯವಾಗುತ್ತದೆ. ವಾಟ್ಸಾಪ್ ಅವರು ಕೊನೆಯದಾಗಿ ಬಳಸಿದಾಗ ನೋಡಲು ಸಹ ಅನುಮತಿಸುತ್ತದೆ. ಬಳಕೆದಾರರು ದೂರದಿಂದಲೇ ಲಾಗ್ ಔಟ್ ಮಾಡಲು ಸಾಧ್ಯವಾಗುತ್ತದೆ.

ವಾಟ್ಸಾಪ್ ಮಲ್ಟಿ ಡಿವೈಸ್ ಸಪೋರ್ಟ್ ಫೀಚರ್ ಬಳಕೆ ಹೇಗೆ

ವಾಟ್ಸಾಪ್ ಮಲ್ಟಿ ಡಿವೈಸ್ ಸಪೋರ್ಟ್ ಫೀಚರ್ ಬಳಕೆ ಹೇಗೆ

ವಾಟ್ಸಾಪ್ ಪ್ರಸ್ತುತ ಮಲ್ಟಿ ಡಿವೈಸ್ ವೈಶಿಷ್ಟ್ಯವನ್ನು ಬಹಳ ಸೀಮಿತವಾದ ಬೀಟಾ ಬಳಕೆದಾರರಿಗೆ ನೀಡುತ್ತಿದೆ. ಆದಾಗ್ಯೂ, ಸಾರ್ವಜನಿಕ ಆವೃತ್ತಿಯಲ್ಲಿ ಬಳಕೆದಾರರಿಗೆ ಆಪ್ಟ್-ಇನ್ ಬೀಟಾ ಪ್ರವೇಶವನ್ನು ಸೇರಿಸುವ ಯೋಜನೆ ಇದೆ ಎಂದು ವಾಟ್ಸಾಪ್ ಹೇಳಿದೆ. ಮುಂದಿನ ದಿನಗಳಲ್ಲಿ ಈ ವೈಶಿಷ್ಟ್ಯವು ಲಿಂಕ್ಡ್ ಸಾಧನದ ಪರದೆಯ ಮೂಲಕ ಲಭ್ಯವಿರುತ್ತದೆ.

ವಾಟ್ಸಾಪ್ ಮಲ್ಟಿ ಡಿವೈಸ್‌ ಫೀಚರ್ ಬಳಕೆಗೆ ಈ ಕ್ರಮಗಳನ್ನು ಅನುಸರಿಸಿ:

ವಾಟ್ಸಾಪ್ ಮಲ್ಟಿ ಡಿವೈಸ್‌ ಫೀಚರ್ ಬಳಕೆಗೆ ಈ ಕ್ರಮಗಳನ್ನು ಅನುಸರಿಸಿ:

* ವಾಟ್ಸಾಪ್ ತೆರೆಯಿರಿ.
* ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ.
* ಲಿಂಕ್ಡ್ ಡಿವೈಸ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
* ನೀವು ಬೀಟಾ ಬಳಕೆದಾರರಾಗಿದ್ದರೆ, ಮಲ್ಟಿ ಡಿಸಿಡ್ ಬೀಟಾದ ಆಯ್ಕೆಯನ್ನು ನೀವು ನೋಡುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಿ ನಂತರ ಬೀಟಾದಲ್ಲಿ ಸೇರಲು ಟ್ಯಾಪ್ ಮಾಡಿ.
* ಈಗ, ಸಾಧನವನ್ನು ಲಿಂಕ್ ಮಾಡಲು ನೀವು ಟ್ಯಾಪ್ ಮಾಡಬೇಕು ಮತ್ತು ಡಿವೈಸ್‌ ಲಿಂಕ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ನಿಮ್ಮ ಸಾಧನವನ್ನು ಸಹವರ್ತಿ ಡಿವೈಸ್‌ಗೆ ಸಂಪರ್ಕಿಸಲಾಗುತ್ತದೆ.
* ಅಂತೆಯೇ, ಇತರ ಡಿವೈಸ್‌ಗಳನ್ನು ಸೇರಿಸಲು ನೀವು ಹಂತಗಳನ್ನು ಪುನರಾವರ್ತಿಸಬಹುದು. ವಾಟ್ಸಾಪ್ ನಿಮ್ಮನ್ನು ಬಯೋಮೆಟ್ರಿಕ್ ಪ್ರೂಫ್ ಕೇಳುವ ಸಾಧ್ಯತೆಯಿದೆ.

Best Mobiles in India

English summary
Most awaited features of Whatsapp is here. Yes, we are talking about the multi device support to Whatsapp users.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X