ವಾಟ್ಸಪ್‌ನ ಈ ಹೊಸ ಫೀಚರ್ಸ್‌ ಬಗ್ಗೆ ನೀವು ತಿಳಿಯಬೇಕು!

|

ಜನಪ್ರಿಯ ವಾಟ್ಸಪ್‌ ಮೆಸೆಜಿಂಗ್ ಆಪ್‌ನಲ್ಲಿ ಇತ್ತೀಚಿಗೆ ನೀವು ಈಗಾಗಲೇ ಸಾಕಷ್ಟು ಹೊಸ ಬದಲಾವಣೆಗಳನ್ನು ನೋಡಿದ್ದಿರಿ. ವಾಟ್ಸಪ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಸಾಗಿದ್ದು, ಇದೀಗ ಮತ್ತೆ ನೂತನ ಫೀಚರ್ಸ್‌ಗಳನ್ನು ಸೇರಿಸಲು ಸಜ್ಜಾಗಿದೆ. ಮುಂಬರುವ ಫೀಚರ್ಸ್‌ಗಳು ವಾಟ್ಸಪ್‌ ಅನ್ನು ಮತ್ತಷ್ಟು ಬಳಕೆದಾರರ ಸ್ನೇಹಿ ಆಗಿರಲು ನೆರವಾಗಲಿವೆ.

ವಾಟ್ಸಪ್‌ನ ಈ ಹೊಸ ಫೀಚರ್ಸ್‌ ಬಗ್ಗೆ ನೀವು ತಿಳಿಯಬೇಕು!

ಫೇಸ್‌ಬುಕ್ ಒಡೆತನದ ವಾಟ್ಸಪ್‌ ನೂತನ ಅಪ್‌ಡೇಟ್‌ ವರ್ಷನ್‌ನಲ್ಲಿ ಹೊಸದಾಗಿ ಡಾರ್ಕ್‌ಮೋಡ್‌ ಆಯ್ಕೆ, ಕಾಂಟ್ಯಾಕ್ಟ್‌ ರ್ಯಾಂಕಿಂಗ್ ಆಯ್ಕೆ, ವಾಟ್ಸಪ್‌ ಸ್ಟೇಟಸ್‌ ಫೇಸ್‌ಬುಕ್‌ಗೆ ಶೇರ್‌ ಮಾಡುವ ಆಯ್ಕೆ, ಬೂಮ್‌ರಾಂಗ್(Boomerang) ಮತ್ತು ವಾಯಿಸ್‌ ಮೆಸೆಜ್ ಪ್ರಿ-ವ್ಯೂವ್ ಆಯ್ಕೆಗಳು ಕಾಣಿಸಿಕೊಳ್ಳಲಿವೆ. ಹಾಗಾದರೇ ವಾಟ್ಸಪ್‌ನ ಈ ಹೊಸ ಫೀಚರ್ಸ್‌ಗಳ ಕುರಿತಾಗಿ ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಪ್ರಿ ವ್ಯೂವ್‌ ವಾಯಿಸ್‌ ಮೆಸೆಜ್

ಪ್ರಿ ವ್ಯೂವ್‌ ವಾಯಿಸ್‌ ಮೆಸೆಜ್

ವಾಟ್ಸಪ್‌ ಆಪ್‌ ಅತ್ಯುತ್ತಮ ಮಲ್ಟಿಮೀಡಿಯಾ ಮೆಸೆಜ್ ಪ್ಲಾಟ್‌ಫಾರ್ಮ್‌ ಆಗಿದ್ದು, ವಿಡಿಯೊ, ಫೋಟೊ ಮತ್ತು ವಾಯಿಸ್‌ ಮೆಸೆಜ್ ಸಹ ಮಾಡಬಹುದು. ವಿಡಿಯೊ ಮತ್ತು ಫೋಟೊಗಳನ್ನು ಸೆಂಡ್ ಮಾಡುವಾಗ ಪ್ರಿ ವ್ಯೂವ್ ನೋಡುವ ಅವಕಾಶವಿದೆ ಆದರೆ ವಾಯಿಸ್‌ ಮೆಸೆಜ್‌ ಕಳಿಹಿಸುವಾಗ ಪ್ರಿ ವ್ಯೂವ್ ನೋಡುವ ಅವಕಾಶ ಇರಲಿಲ್ಲ. ಆದ್ರೆ ಇದೀಗ ಸೆಂಡ್‌ ಮಾಡುವ ಮೊದಲು ಕೇಳುವ ಅವಕಾಶ ಸೇರಲಿದೆ.

ಕಾಂಟ್ಯಾಕ್ಟ್‌ ರ್ಯಾಂಕಿಂಗ್.(Ranking of Contacts)

ಕಾಂಟ್ಯಾಕ್ಟ್‌ ರ್ಯಾಂಕಿಂಗ್.(Ranking of Contacts)

ಬಳಕೆದಾರ ಅನುಕೂಲಕರವಾದ ಫೀಚರ್ಸ್‌ಗಳನ್ನು ಪರಿಚಯಿಸುತ್ತಿರುವ ವಾಟ್ಸಪ್‌ ಇದೀಗ ಬಳಕೆದಾರ ಕಾಂಟ್ಯಾಕ್ಟ್‌ ರ್ಯಾಂಕಿಂಗ್ ಲಿಸ್ಟ್‌ ಮಾಡಲಿದೆ. ಅಂದರೇ ಬಳಕೆದಾರರು ಹೆಚ್ಚಾಗಿ ಯಾವ ಕಾಂಟ್ಯಾಕ್ಟ್‌ ನೊಂದಿಗೆ ಚಾಟ್‌ ಮಾಡುತ್ತಾರೋ ಆ ಕಾಂಟ್ಯಾಕ್ಟ್‌ ರ್ಯಾಂಕಿಂಗ್ ಲಿಸ್ಟ್‌ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲಿದೆ. ಇದು ಬಳಕೆದಾರರಿಗೆ ಚಾಟ್‌ ಮಾಡಲು ಅನುಕೂಲಕರ ಎನಿಸಲಿದೆ.

ಬೂಮ್‌ರಾಂಗ್ -Boomerang

ಬೂಮ್‌ರಾಂಗ್ -Boomerang

ವಾಟ್ಸಪ್‌ ತನ್ನ ಮಲ್ಟಿಮೀಡಿಯಾ ಫೈಲ್‌ ಅಟ್ಯಾಚ್‌ಗೆ ಈಗ ಹೊಸದಾಗಿ ಬೂಮ್‌ರಾಂಗ್ ಫೀಚರ್‌ ಸೇರಿಸುತ್ತಿದ್ದು, ಇದು ಆಯ್ಕೆ ವಿಡಿಯೊ ಮಾದರಿಯಲ್ಲಿರಲಿದೆ. ಈ ಫೀಚರ್‌ ಇನ್‌ಸ್ಟಾಗ್ರಾಂನಲ್ಲಿರುವಂತೆ ಬೂಮ್‌ರಾಂಗ್ ಆಯ್ಕೆಯನ್ನು ಹೋಲುತ್ತದೆ. ಈ ಆಯ್ಕೆಯಲ್ಲಿ ಬಳಕೆದಾರರು ಚಿಕ್ಕ ವಿಡಿಯೊ ಮಾದರಿಯಲ್ಲಿ (ಕ್ರಿಯೆಟ್‌) ಸೆಂಡ್ ಮಾಡಬಹುದಾಗಿದೆ.

ಫೇಸ್‌ಬುಕ್‌ಗೆ ವಾಟ್ಸಪ್‌ ಸ್ಟೇಟಸ್‌ ಶೇರ್‌ ಆಯ್ಕೆ

ಫೇಸ್‌ಬುಕ್‌ಗೆ ವಾಟ್ಸಪ್‌ ಸ್ಟೇಟಸ್‌ ಶೇರ್‌ ಆಯ್ಕೆ

ವಾಟ್ಸಪ್‌ನಲ್ಲಿ 24 ಗಂಟೆ ವ್ಯಾಲಿಡಿಟಿ ಹೊಂದಿರುವ ಸ್ಟೇಟಸ್‌ ಇಡುವ ಫೀಚರ್ ಇದೀಗ ಬಳಕೆಅದರರಲ್ಲಿ ಭಾರೀ ಕ್ರೇಜ್ ಮೂಡಿಸಿದ್ದು, ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ಸ್ಟೇಟಸ್‌ಗಳಿಗಿಂತ ವಾಟ್ಸಪ್‌ಗೆ ಸ್ಟೇಟಸ್‌ ಜನಪ್ರಿಯತೆ ಗಳಿಸಿದೆ. ವಾಟ್ಸಪ್‌ ಸ್ಟೇಟಸ್‌ ಅನ್ನು ಬಳಕೆದಾರರು ಇನ್ಮುಂದೆ ನೇರವಾಗಿ ಅವರ ಫೇಸ್‌ಬುಕ್‌ಗೂ ಶೇರ್ ಮಾಡಬಹುದಾದ ಫೀಚರ್ಸ್ ಕಾಣಿಸಿಕೊಳ್ಳಲಿದೆ.

ಡಾರ್ಕ್‌ಮೋಡ್ ಆಯ್ಕೆ

ಡಾರ್ಕ್‌ಮೋಡ್ ಆಯ್ಕೆ

ಪ್ರಸ್ತುತ ಡಾರ್ಕ್‌ಮೋಡ್‌ ಫೀಚರ್‌ ಸ್ಮಾರ್ಟ್‌ಫೋನ್‌ ಮತ್ತು ಇತರೆ ಜನಪ್ರಿಯ ಆಪ್‌ಗಳಲ್ಲಿ ಹೊಸ ಟ್ರೆಂಡ್‌ನಲ್ಲಿದ್ದು, ವಾಟ್ಸಪ್‌ ಸಹ ಈ ಡಾರ್ಕ್‌ಫೀಚರ್‌ ಪರಿಚಯಿಸುವುದಾಗಿ ತಿಳಿಸಿತ್ತು. ಹಾಗೆಯೇ ಐಓಎಸ್‌ 13 ಮತ್ತು ಆಂಡ್ರಾಯ್ಡ್ 10 ಓಎಸ್‌ ಮಾದರಿಯಲ್ಲಿ ಪ್ರಾಯೋಗಿಕವಾಗಿ ಡಾರ್ಕ್‌ಮೋಡ್‌ ಫೀಚರ್ ನೋಡಬಹುದಾಗಿದೆ. ಮುಂದಿನ ಅಪ್‌ಡೇಟ್‌ನಲ್ಲಿ ಈ ಫೀಚರ್ ಸೇರಿಕೊಳ್ಳಲಿದೆ.

Best Mobiles in India

English summary
whatsapp soon adding amazing feature in the app. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X