Home
ಸುದ್ದಿಜಾಲ

ನೀವು ಇನ್ನೂ ವಾಟ್ಸಾಪ್‌ನ ಈ ಅಚ್ಚರಿಯ ಫೀಚರ್ಸ್‌ ಬಳಕೆ ಮಾಡಿಲ್ಲವೇ?

ಮೆಟಾ ಮಾಲೀಕತ್ವದ ವಾಟ್ಸಾಪ್‌ ಜನಪ್ರಿಯ ಮೆಸೆಜಿಂಗ್ ಆಪ್‌ ಆಗಿ ಮುನ್ನಡೆದಿದೆ. ವಾಟ್ಸಾಪ್‌ ಒಂದಿಲ್ಲೊಂದು ಒಂದು ಹೊಸ ಅಪ್‌ಡೇಟ್‌ ಮಾಡುವ ಮೂಲಕ ಬಳಕೆದಾರರಿಗೆ ಅನುಕೂಲಕರ ಫೀಚರ್ಸ್‌ ನೀಡುತ್ತಾ ಸಾಗಿದೆ. ಹಾಗೆಯೇ ವಾಟ್ಸಾಪ್‌ ಸಂಸ್ಥೆಯು ಇತ್ತೀಚಿಗೆ ಕೆಲವು ಗಮನಾರ್ಹ ಆಯ್ಕೆಗಳನ್ನು ಸೇರ್ಪಡೆ ಮಾಡಿದ್ದು, ಗ್ರಾಹಕರಿಗೆ ಭಾರೀ ಉಪಯುಕ್ತ ಎನಿಸಿವೆ.

ಹೌದು, ವಾಟ್ಸಾಪ್‌ (WhatsApp) ಪ್ಲಾಟ್‌ಫಾರ್ಮ್‌ನ ಇತ್ತೀಚಿನ ಹೊಸ ಫೀಚರ್ಸ್‌ಗಳು ಬಳಕೆದಾರರ ಗಮನ ಸೆಳೆದಿವೆ. ಚಾಟ್ ಲಾಕ್, ಎಡಿಟ್ ಬಟನ್, ಹೆಚ್‌ಡಿ ಫೋಟೋಗಳು, ಸ್ಕ್ರೀನ್ ಶೇರಿಂಗ್ ಹಾಗೂ ಇತರೆ ಕೆಲವು ಆಯ್ಕೆಗಳು ಬಹಳ ಪ್ರಮುಖವಾಗಿವೆ. ಹಾಗಾದರೆ 2023 ರಲ್ಲಿ ವಾಟ್ಸಾಪ್‌ ಸೇರ್ಪಡೆ ಮಾಡಿರುವ ಕೆಲವು ಅತ್ಯುತ್ತಮ ಫೀಚರ್ಸ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ನೀವು ಇನ್ನೂ ವಾಟ್ಸಾಪ್‌ನ ಈ ಅಚ್ಚರಿಯ ಫೀಚರ್ಸ್‌ ಬಳಕೆ ಮಾಡಿಲ್ಲವೇ?

ಎಡಿಟ್‌ ಮೆಸೆಜ್‌ ಫೀಚರ್‌ :
ವಾಟ್ಸಾಪ್‌ನ ಈ ಎಡಿಟ್‌ ಮೆಸೆಜ್‌ ಫೀಚರ್‌, ಕಳುಹಿಸಿದ ಮೆಸೆಜ್‌ ಅನ್ನು ಎಡಿಟ್‌ ಮಾಡಲು ಅನುಕೂಲ ಮಾಡಿಕೊಡುತ್ತದೆ. ತಪ್ಪಾಗಿ ಮೆಸೆಜ್‌ ಕಳುಹಿಸಿದ್ದರೆ, ಎಡಿಟ್‌ ಆಯ್ಕೆ ಮೂಲಕ ಅದನ್ನು ಸರಿಪಡಿಸಬಹುದಾಗಿದೆ. ಈ ಆಯ್ಕೆ ಬಳಕೆ ಮಾಡಲು ಹೀಗೆ ಮಾಡಿ. ಎಡಿಟ್ ಮಾಡಲು ಬಯಸುವ ಮೆಸೆಜ್‌ ಅನ್ನು ಟ್ಯಾಪ್‌ ಮಾಡಿ ಮತ್ತು ದೀರ್ಘ ಹಿಡಿದುಕೊಳ್ಳಿ ಬಲ ಭಾಗದಲ್ಲಿ ಮೂರು ಡಾಟ ಮೆನುವಿನಿಂದ ಎಡಿಟ್‌ ಆಯ್ಕೆ ಸೆಲೆಕ್ಟ್ ಮಾಡಿರಿ.

ಅಂದಹಾಗೆ ಮೆಸೆಜ್‌ ಕಳುಹಿಸಿದ ಮೊದಲ 15 ನಿಮಿಷದಲ್ಲಿ ಮಾತ್ರ ಬಳಕೆದಾರರಿಗೆ ಮೆಸೆಜ್‌ ಎಡಿಟ್ ಮಾಡಲು ಅವಕಾಶ ಇರುತ್ತದೆ. ಅಲ್ಲದೇ ನೀವು ಎಡಿಟ್ ಮಾಡಿದ ಮೆಸೆಜ್‌ ಕೆಳಭಾಗದಲ್ಲಿ ಎಡಿಟ್ ಮಾಡಲಾಗಿದೆ ಎಂಬ ಟ್ಯಾಗ್‌ ಇರುತ್ತದೆ.

ಹೆಚ್‌ಡಿ ಫೋಟೋ ಶೇರಿಂಗ್ ಆಯ್ಕೆ :
ಬಳಕೆದಾರರು ವಾಟ್ಸಾಪ್‌ ಆಪ್‌ನಲ್ಲಿ ಈಗ ಹೆಚ್‌ಡಿ ಗುಣಮಟ್ಟದಲ್ಲಿ ಫೋಟೋಗಳನ್ನು ಶೇರ್ ಮಾಡಲು ಅವಕಾಶ ಇದೆ. ಈ ಅವಕಾಶ ಒದಗಿಸಿದ್ದು, ವಾಟ್ಸಾಪ್‌ನ ಇತ್ತೀಚಿನ ಹೆಚ್‌ಡಿ ಫೋಟೋ ಶೇರಿಂಗ್ ಆಯ್ಕೆ. ಅಂದಹಾಗೆ ವಾಟ್ಸಾಪ್‌ನಲ್ಲಿ ಶೇರ್ ಮಾಡುವ ಫೋಟೋಗಳ ಗುಣಮಟ್ಟ ಸ್ವಲ್ಪ ಕಂಪ್ರೆಸ್ ಮಾಡುತ್ತದೆ. ಫೋಟೋ ಕಳುಹಿಸುವಾಗ ಹೆಚ್‌ಡಿ ಆಯ್ಕೆ ಕಾಣಿಸುತ್ತದೆ.

ಅಪರಿಚಿತ ಕರೆ ಸೈಲೆನ್ಸ್‌ ಮಾಡುವುದು :
ಫೋನಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದರೆ ಬೇಗನೆ ಕರೆ ಸ್ವೀಕಾರ ಮಾಡುವುದು ಕಡಿಮೆ. ಅಲ್ಲದೇ ಅನೇಕರು ಅಪರಿಚಿತ ಕರೆಗಳನ್ನು ರೀಸಿವ್ ಮಾಡುವುದು ವಿರಳ. ಆದರೆ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ಅಪರಿಚಿತ ಕರೆ ಮಾಡುವವರ ಕರೆಗಳನ್ನು ಸೈಲೆಂಟ್‌ ಆಯ್ಕೆ ಮಾಡಬಹುದು. ಈ ಆಯ್ಕೆ ಮೂಲಕ ಬಳಕೆದಾರರು ಗೌಪ್ಯತೆಯನ್ನು ಕಾಪಾಡುವ ಮತ್ತು ಅನಗತ್ಯ ಕಾಂಟ್ಯಾಕ್ಟ್‌ ತಡೆಯುವ ಸಂದರ್ಭದಲ್ಲಿ ಉಪಯುಕ್ತ.

ಸ್ಕ್ರೀನ್ ಶೇರಿಂಗ್ ಆಯ್ಕೆ :
ವಾಟ್ಸಾಪ್ ಹೊಸದಾಗಿ ಸ್ಕ್ರೀನ್ ಶೇರಿಂಗ್ ಆಯ್ಕೆ ಅನ್ನು ಸೇರಿಸುವುದಾಗಿ ಘೋಷಿಸಿದೆ. ವೀಡಿಯೊ ಕರೆ ಮಾಡಿದ ಸಂದರ್ಭಗಲ್ಲಿ ಬಳಕೆದಾರರು ತಮ್ಮ ಫೋನ್‌ನ ಸ್ಕ್ರೀನ್‌ ಅನ್ನು ಶೇರ್‌ ಮಾಡಿಕೊಳ್ಳಲು ಇದು ಪೂರಕವಾಗಿರಲಿದೆ. ಈ ಆಯ್ಕೆ ಮೂಲಕ ಬಳಕೆದಾರರಿಗೆ ಡಾಕ್ಯುಮೆಂಟ್‌ಗಳು, ಶೋಕೇಸ್ ಪ್ರೆಸೆಂಟೇಶನ್‌ಗಳು ಮತ್ತು ಇತರೆ ಅಗತ್ಯ ಸಂದರ್ಭಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಚಾಟ್ ಲಾಕ್ ಫೀಚರ್‌ :
ವಾಟ್ಸಾಪ್‌ ಸಂಸ್ಥೆಯು ಇತ್ತೀಚೆಗೆ ಪರಿಚಯಿಸಿರುವ ಆಯ್ಕೆಗಳಲ್ಲಿ ಚಾಟ್ ಲಾಕ್ ಫೀಚರ್‌ ಕೂಡಾ ಒಂದಾಗಿದೆ. ಇದು ಬಳಕೆದಾರರು ಪರ್ಸನಲ್ ಚಾಟ್‌ಗಳನ್ನು ಲಾಕ್ ಮಾಡುವ ಅವಕಾಶ ಹೊಂದಿದೆ. ಈ ಆಯ್ಕೆ ಸಕ್ರಿಯಗೊಳಿಸಲು ಬಳಕೆದಾರರು ಚಾಟ್‌ನ ಪ್ರೊಫೈಲ್ ಆಯ್ಕೆಯಲ್ಲಿ ಭೇಟಿ ನೀಡಿ, ಚಾಟ್ ಲಾಕ್ ಫೀಚರ್ಸ್‌ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ಪ್ರತಿ ಚಾಟ್‌ಗೆ ಇದೇ ಹಂತವನ್ನು ಅನುಸರಿಸಬೇಕು. ಇನ್ನು ಲಾಕ್ ಮಾಡಿದ ಚಾಟ್‌ಗಳನ್ನು ಫೋಲ್ಡರ್‌ಗೆ ಸೇರಿಸಲಾಗುತ್ತದೆ ಹಾಗೂ ಅದು ಸ್ಕ್ರೀನ್‌ ಮೇಲ್ಭಾಗದಲ್ಲಿ ಕಾಣಿಸುತ್ತದೆ.

Best Mobiles in India

English summary
WhatsApp new features in 2023: everything you need to know. all details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+