ವಾಟ್ಸಾಪ್‌ನ ಹೊಸ ರೂಲ್ಸ್ ಸ್ವೀಕರಿಸಿದ್ದೀರಾ?..ರೂಲ್ಸ್ ಬಗ್ಗೆ ನಿಮಗೆಷ್ಟು ಗೊತ್ತು?
ವಾಟ್ಸಾಪ್ ಬಳಕೆದಾರರೇ ಕಳೆದ ಕಳೆದ 24 ಗಂಟೆಗಳ ಅವಧಿಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪಾಪ್-ಅಪ್ ನೋಟಿಫಿಕೇಶನ್‌ವೊಂದನ್ನು ಬಹುಶಃ ನೀವು ಗುರುತಿಸಿರುತ್ತಿರಿ. ವಾಟ್ಸಾಪ್ ತನ್ನ ಟರ್ಮ್ಸ್ ಮತ್ತು ಪ್ರೈವಸಿ ಪಾಲಿಸಿ ಅಪ್‌ಡೇಟ್ ಮಾಡುವ ಕುರಿತಾಗಿರುವ ನೋಟಿಫಿಕೇಶನ್ ಅದಾಗಿತ್ತು ಅಲ್ಲವೇ.

ವಾಟ್ಸಾಪ್‌ನ ಈ ಹೊಸ ನಿಯಮಗಳನ್ನು ಓದಲು ಮತ್ತು ಒಪ್ಪಿಕೊಳ್ಳಲು ಬಳಕೆದಾರರಿಗೆ ಫೆಬ್ರವರಿ 8 ರವರೆಗೆ ವಾಟ್ಸಾಪ್ ಕಾಲಾವಧಿ ನೀಡಿದೆ. ಸಂಸ್ಥೆಯ ಹೊಸ ನಿಯಮಗಳನ್ನು ಬಳಕೆದಾರರು ಒಪ್ಪದೇ ಇದ್ದಲ್ಲಿ ಅವರ ವಾಟ್ಸಾಪ್ ಖಾತೆಯನ್ನು ಸಂಸ್ಥೆಯು ಡಿಲೀಟ್ ಮಾಡಲಿದೆ.

ಹೊಸ ರೂಲ್ಸ್ ಬಗ್ಗೆ ಓದುವುದನ್ನು ಬಹುತೇಕರು ಸ್ಕಿಪ್ ಮಾಡಿರಬಹುದು. ಆದಾಗ್ಯೂ, 2 ಬಿಲಿಯನ್‌ಗಿಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಚಾಟ್ ಅಪ್ಲಿಕೇಶನ್‌ನ ಗೌಪ್ಯತೆ ನೀತಿಯಲ್ಲಿನ ಬದಲಾವಣೆಗಳು ಗಮನಾರ್ಹವಾಗಿವೆ. ಈ ಹೊಸ ನೀತಿಯ ಉನ್ನತ ಮಟ್ಟದ ವಿಷಯವೆಂದರೆ ಫೇಸ್‌ಬುಕ್‌ನ ಉತ್ಪನ್ನಗಳ ಕುಟುಂಬದೊಂದಿಗೆ ಉತ್ತಮವಾಗಿ ಸಂಯೋಜನೆಗೊಳ್ಳುವುದು, ವ್ಯವಹಾರಗಳೊಂದಿಗೆ ಹೆಚ್ಚಿನ ಸಂವಹನ ನಡೆಸಲು ಅವಕಾಶ ನೀಡುವುದು ಮತ್ತು ಬಳಕೆದಾರರಿಂದ ಹಣಕಾಸಿನ ಡೇಟಾವನ್ನು ಸಂಗ್ರಹಿಸುವುದು.

ಹೊಸ ರೂಲ್ಸ್‌ನಂತೆ ಬಳಕೆದಾರರ ಫೋನ್ ಸಂಖ್ಯೆ, ನಿಮ್ಮ ಪ್ರೊಫೈಲ್ ಚಿತ್ರ, ನಿಮ್ಮ ಬಳಕೆಯ ಮಾದರಿಗಳು (ನೀವು ಬಳಸುವ ಫೀಚರ್ಸ್, ನೀವು ಸೇರ್ಪಡೆಗೊಂಡ ಗುಂಪುಗಳು ಮತ್ತು ಸ್ಟೋರಿ ಫಾರ್ಮೇಟ್) ಹಾಗೆಯೇ ಡಿವೈಸ್ ಡೇಟಾದಂತಹ ಖಾತೆಗೆ ಸಂಬಂಧಿಸಿದ ಬಹಳಷ್ಟು ಮೆಟಾಡೇಟಾವನ್ನು ವಾಟ್ಸಾಪ್ ಅಪ್ಲಿಕೇಶನ್ ಸಂಗ್ರಹಿಸುತ್ತದೆ ಎನ್ನಲಾಗಿದೆ. ಇಷ್ಟೇ ಅಲ್ಲದೆ, ಆಪ್ ಯಾವ ಡಿವೈಸ್‌ನಲ್ಲಿ ಇನ್‌ಸ್ಟಾಲ್ ಆಗಿದೆ ಮತ್ತು ಅದರಲ್ಲಿ ಸಕ್ರಿಯವಾಗಿರುವ ಇಂಟರ್‌ನೆಟ್ ಸಂಪರ್ಕದ ಮಾಹಿತಿಗಳನ್ನೂ ಪಡೆಯುತ್ತದೆ. ಮೊಬೈಲ್ ಆಗಿದ್ದರೆ ಯಾವ ಮಾಡೆಲ್, ಐಪಿ ಅಡ್ರೆಸ್ ಇತ್ಯಾದಿ.

ನಮ್ಮ ಆಸಕ್ತಿಯ ಮಾಹಿತಿ ಆಧಾರದ ಮೇಲೆ ಫೇಸ್‌ಬುಕ್ ನಮ್ಮ ಖಾತೆಯಲ್ಲಿ ಇನ್ನಷ್ಟು ವಿಡಿಯೊಗಳು ಕಾಣಿಸಿಕೊಳ್ಳುವಂತೆ ಮಾಡುತ್ತದೆ. ನಮ್ಮ ಪ್ರತಿ ಆಕ್ಟಿವಿಟಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ ಎನ್ನಬಹುದಾಗಿದೆ. ಫೇಸ್‌ಬುಕ್ ಸಮೂಹ ಕಂಪನಿಗಳು ಪರಸ್ಪರ ಸಂಯೋಜಿಸಲ್ಪಟ್ಟರೆ, ನಾವು ಒಂದು ಆಪ್ ಇನ್‌ಸ್ಟಾಲ್ ಮಾಡಿದ್ದರೆ ಸಾಕು ಉಳಿದ ಕಂಪನಿಗಳಿಗೆ ನಮ್ಮ ಮಾಹಿತಿ ತನ್ನಷ್ಟಕ್ಕೇ ಸಿಕ್ಕಿಬಿಡುತ್ತದೆ.


Click it and Unblock the Notifications








