ವಾಟ್ಸಪ್ ಈಗ ಮತ್ತಷ್ಟು ಸುಲಭ!..ಸೇರಲಿದೆ ಮತ್ತೆ ಹೊಸ ಫೀಚರ್!
ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಿಶ್ವ ಜನಪ್ರಿಯ 'ವಾಟ್ಸಪ್' ತನ್ನ ಬಳಕೆದಾರರಿಗೆ ಅತ್ಯುತ್ತಮ ಫೀಚರ್ಸ್‌ಗಳನ್ನು ಅಳವಡಿಸಿಕೊಳ್ಳುತ್ತಲೇ ಸಾಗಿದ್ದು, ಪ್ರೈವಸಿ ಮತ್ತು ಅಗತ್ಯ ಅನುಕೂಲಕರ ಆಯ್ಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಈ ನಿಟ್ಟಿನಲ್ಲಿ ಮುಂದುವರೆದಿರುವ ಕಂಪನಿಯು ಈಗ ಮತ್ತೆ ಬಳಕೆದಾರರಿಗೆ ಹೊಸದೊಂದು ಫೀಚರ್ ಅನ್ನು ಪರಿಚಯಿಸಲು ಉತ್ಸುಕವಾಗಿದೆ.

ಹೌದು, ಫೇಸ್‌ಬುಕ್ ಮಾಲೀಕತ್ವದ ಇನ್‌ಸ್ಟಂಟ್ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಪ್ ಇದೀಗ 'ಕ್ವಿಕ್ ಎಡಿಟ್ ಮೀಡಿಯಾ ಶಾರ್ಟ್‌ಕಟ್' ಆಯ್ಕೆಯನ್ನು ಸೇರಿಸಲು ಸಜ್ಜಾಗಿದೆ. ಈ ಫೀಚರ್‌ನಲ್ಲಿ ಬಳಕೆದಾರರಿಗೆ ಸ್ವೀಕರಿಸಿದ ಮತ್ತು ಕಳುಹಿಸಿದ ಮೀಡಿಯಾ ಫೈಲ್‌ಗಳನ್ನು ಎಡಿಟ್ ಮಾಡುವ ಅವಕಾಶ ದೊರೆಯಲಿದ್ದು, ಅದಕ್ಕಾಗಿ ವಾಟ್ಸಪ್ ತನ್ನ ಮುಂದಿನ ಅಪ್‌ಡೇಟ್ ವರ್ಷನ್‌ನಲ್ಲಿ 'ಎಡಿಟ್' ಬಟನ್ ಸೇರಿಸುವ ಸೂಚನೆ ನೀಡಿದೆ.

ಬಳಕೆದಾರರು ವಾಟ್ಸಪ್‌ನಲ್ಲಿ ಸ್ವೀಕರಿಸುವ ಮತ್ತು ಕಳುಹಿಸುವ ಮೀಡಿಯಾ ಫೈಲ್ ಅಥವಾ ಫೋಟೊಗಳನ್ನು ಕ್ವಿಕ್ ಆಗಿ ಎಡಿಟ್ ಮಾಡಲು ಅನುಕೂಲವಾಗಲೆಂದು ಸಂಸ್ಥೆಯು 'ಎಡಿಟ್ ಫೀಚರ್' ಅನ್ನು ಪರಿಚಯಿಸಲಿದೆ. ಈ ಎಡಿಟ್ ಫೀಚರ್ ಆಂಡ್ರಾಯ್ಡ್ ಮತ್ತು ಐಓಎಸ್ ಆಪರೇಟಿಂಗ್ ಸಿಸ್ಟಮ್ ಬಳಕೆದಾರರಿಬ್ಬರಿಗೂ ಲಭ್ಯವಾಗಲಿದ್ದು, ಈ ಆಯ್ಕೆಯು ವಾಟ್ಸಪ್ ಬಳಕೆಯನ್ನು ಮತ್ತಷ್ಟು ಸರಳವಾಗಿಸಲಿದೆ.

ನಿರೀಕ್ಷಿತ 'ಎಡಿಟ್ ಬಟನ್' ಆಯ್ಕೆಯು ಬಳಕೆದಾರರಿಗೆ ಫೋಟೋಗಳನ್ನು ಬಹುಬೇಗನೆ ಎಡಿಟ್ ಮಾಡಲು ಅವಕಾಶ ಮಾಡಿಕೊಡಲಿದ್ದು, ವೈಯಕ್ತಿಕ ಮತ್ತು ಗ್ರೂಪ್ ಎರಡರ ಮೀಡಿಯಾ ಫೈಲ್‌ಗಳನ್ನು ಸಹ ಎಡಿಟ್ ಮಾಡಬಹುದಾಗಿದೆ. ವಾಟ್ಸಪ್‌ನ ಹೊಸ ಫೀಚರ್ ಕುರಿತು WABetaInfo ತಾಣದಲ್ಲಿ ಹಲವು ಸ್ಕ್ರೀನ್‌ಶಾಟ್ ಫೋಟೊಗಳು ಲೀಕ್ ಆಗಿದ್ದು, ಕ್ರಾಪ್, ಟೆಕ್ಟ್ಸ್ ಮತ್ತು ಡ್ರಾ ಡ್ಯುಡಲ್ ಆಯ್ಕೆಗಳು ಇರಲಿವೆ ಎನ್ನಲಾಗಿದೆ.
ವಾಟ್ಸಪ್‌ನ ಹೊಸ 'ಎಡಿಟ್' ಫೀಚರ್, ಪ್ರಸ್ತುತ ಲಭ್ಯವಿರುವ ಫೋಟೊ ಸೇಂಡ್ ಮಾಡುವ ಮೊದಲು ಎಡಿಟ್ ಮಾಡುವ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎನ್ನಲಾಗಿದೆ. ಈ ಆಯ್ಕೆಯು ಐಫೋನ್‌ಗಳಲ್ಲಿ ವಾಟ್ಸಪ್‌ನಲ್ಲಿ ಶೇರ್ ಆಯ್ಕೆಯ ನಂತರದಲ್ಲಿ ಕಾಣಿಸಿಕೊಳ್ಳಲಿದೆ ಹಾಗೆಯೇ ಆಂಡ್ರಾಯ್ಡ್ ಓಎಸ್ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಪ್ ಮೀಡಿಯಾ ಫೈಲ್‌ನಲ್ಲಿ ಈ ಆಯ್ಕೆಯು ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.


Click it and Unblock the Notifications








