ವಾಟ್ಸಾಪ್‌ನಲ್ಲಿ ಮತ್ತೆ ಹೊಸ ಫೀಚರ್; ಇನ್ನು ಫೋನ್ ಸ್ಟೋರೇಜ್ ಫುಲ್ ಆಗಲ್ಲ ಬಿಡಿ!
ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಅಪ್ಲಿಕೇಶನ್ ವಾಟ್ಸಾಪ್ ಈಗಾಗಲೇ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ಇದೀಗ ಬಳಕೆದಾರರು ನಿರೀಕ್ಷಿಸಿದ ಮತ್ತೊಂದು ಬಹುಮುಖ್ಯ ಫೀಚರ್‌ಯೊಂದನ್ನು ಸೇರ್ಪಡೆ ಮಾಡದೆ.

ಹೌದು, ವಾಟ್ಸಾಪ್ ಅಪ್ಲಿಕೇಶನ್ ಈಗ ಹೊಸದಾಗಿ 'ಸ್ಟೋರೇಜ್ ಮ್ಯಾನೇಜಮೆಂಟ್ ಟೂಲ್'-storage management tool ಆಯ್ಕೆಯನ್ನು ಪರಿಚಯಿಸಿದೆ. ವಾಟ್ಸಾಪ್‌ನಿಂದ ಬಳಕೆದಾರರ ಸ್ಮಾರ್ಟ್‌ಫೋನ್ ಸ್ಟೋರೇಜ್ ಫುಲ್ ಆಗುವ ಕಿರಿಕಿರಿಯನ್ನು ತಪ್ಪಿಸಲು ನೆರವಾಗಲಿದೆ. ಸ್ಟೋರೇಜ್ ಮ್ಯಾನೇಜಮೆಂಟ್ ಟೂಲ್ ನಲ್ಲಿ ಮೂರು ಆಯ್ಕೆಗಳು ಇದ್ದು, ಬಳಕೆದಾರರಿಗೆ ಅನಗತ್ಯ ಫೈಲ್‌ಗಳನ್ನು ಡಿಲೀಟ್ ಮಾಡಲು ಸುಲಭವಾಗಿಸಲಿವೆ.

ವಾಟ್ಸಾಪ್‌ನ ಈ ಹೊಸ ಟೂಲ್ Storage Usage-ಸ್ಟೋರೇಜ್ ಯೂಸೆಜ್, Forwarded many times- ಫಾರ್ವಡೆಡ್ ಮೇನಿ ಟೈಮ್ಸ್ ಮತ್ತು Larger than 5 MB-ಲಾರ್ಜರ್ ದೇನ್ 5 MB ಹೆಸರಿನ ಮೂರು ಆಯ್ಕೆಗಳನ್ನು ಒಳಗೊಂಡಿದೆ. ಸ್ಟೋರೇಜ್ ಯೂಸೆಜ್ ಮೆಸೆಜ್, ಪೋಟೊ, Gif, ವಿಡಿಯೊ ಹೀಗೆ ಪ್ರತಿ ಫೈಲ್ ಎಷ್ಟು ಸ್ಪೆಸ್ ಹೊಂದಿವೆ ಎನ್ನುವದನ್ನು ಸಾರ್ಟ್ ಮಾಡಿ ತೋರಿಸುತ್ತದೆ. ಬಳಕೆದಾರರು ಸುಲಭವಾಗಿ ಕೇಟಗರಿಗಳನ್ನು ಆಯ್ಕೆ ಮಾಡುವ ಮೂಲಕ ಡಿಲೀಟ್ ಮಾಡಬಹುದು.

ಹಾಗೆಯೇ ಫಾರ್ವಡೆಡ್ ಮೇನಿ ಟೈಮ್ಸ್ ಆಯ್ಕೆಯು ಅತೀ ಹೆಚ್ಚು ಬಾರಿ ಫಾರ್ವಡ್ ಆಗಿರುವ ಮೆಸೆಜ್ ಕಂಟೆಂಟ್ ತೋರಿಸುತ್ತದೆ. ಬಳಕೆದಾರರು ಅವುಗಳನ್ನು ಜಸ್ಟ್ ಟ್ಯಾಪ್ ಮಾಡುವ ಮೂಲಕ ಡಿಲೀಟ್ ಮಾಡಬಹುದಾಗಿದೆ. ಇನ್ನು 5 MB ಗಿಂತ ಹೆಚ್ಚಿನ ಸ್ಥಳಾವಕಾಶ ಕಬಳಿಸಿರುವ ಫೋಟೊ, ವಿಡಿಯೊಗಳ ಲಿಸ್ಟ್ ತೋರಿಸುತ್ತದೆ. ಬಳಕೆದಾರರು ಎಲ್ಲಾ ಫೈಲ್‌ಗಳನ್ನು ಅಥವಾ ಯಾವುದು ಬೇಡವೋ ಆ ಫೈಲ್‌ಗಳನ್ನು ಮಾತ್ರ ಸೆಲೆಕ್ಟ್ ಮಾಡಿ ಡಿಲೀಟ್ ಮಾಡುವ ಅವಕಾಶ ಹೊಂದಿದೆ.

ಸ್ಟೋರೇಜ್ ಮ್ಯಾನೇಜಮೆಂಟ್ ಟೂಲ್ ಬಳಕೆ ಹೇಗೆ
* ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ವಾಟ್ಸಾಪ್ ಆಪ್ ತೆರೆಯಿರಿ.
* ನಂತರ ಸೆಟ್ಟಿಂಗ್ ಆಯ್ಕೆ ಸೆಲೆಕ್ಟ್ ಮಾಡಿ
* ಆನಂತರ ಸ್ಟೋರೇಜ್ ಮತ್ತು ಡೇಟಾ ಆಯ್ಕೆಯನ್ನು ಕ್ಲಿಕ್ ಮಾಡಿರಿ.
* ಆಗ ನಿಮಗೆ ಮ್ಯಾನೇಜ್ ಸ್ಟೋರೇಜ್ ಆಯ್ಕೆಯು ಕಾಣಿಸುತ್ತದೆ.

ಹಾಗೆಯೇ ವಾಟ್ಸಾಪ್ ಮೆಸೆಜ್ ಡಿಸ್‌ಅಪಿಯರ್ ಆಯ್ಕೆಯನ್ನು ಸದ್ಯದಲ್ಲಿಯೇ ಅಳವಡಿಸಲಿದ್ದು, ಈ ಫೀಚರ್ಸ್‌ನಲ್ಲಿ ವಾಟ್ಸಾಪ್‌ನಲ್ಲಿನ ನೂತನ ಮೆಸೆಜ್‌ಗಳು ಏಳು ದಿನಗಳ ನಂತರ ಕಣ್ಮರೆಯಾಗುತ್ತದೆ(disappear). ಇನ್ನು ಈ ಆಯ್ಕೆಯು ಗ್ರೂಪ್ ಮೆಸೆಜ್ ಹಾಗೂ ವೈಯಕ್ತಿಕ ಮೆಸೆಜ್ ಎರಡಕ್ಕೂ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಬಳಕೆದಾರರು ವೈಯಕ್ತಿಕ ಮೆಸೆಜ್‌ನಲ್ಲಿ ಈ ಆಯ್ಕೆಯನ್ನು ಆನ್- ಆಫ್ ಮಾಡುವ ಅವಕಾಶವನ್ನು ಹೊಂದಿರುತ್ತಾರೆ. ಆನ್ ಮಾಡಿದ್ದರೇ ಏಳು ದಿನಗಳ ನಂತರ ಮೆಸೆಜ್‌ಗಳು ಕಣ್ಮರೆಯಾಗುತ್ತವೆ-disappear, ಆಫ್ ಮಾಡಿದರೇ ಮೆಸೆಜ್‌ಗಳು ಕಾಣಸಿಗುತ್ತವೆ.


Click it and Unblock the Notifications








