Home
ಸುದ್ದಿಜಾಲ

Whatsapp ನ ಈ ಹೊಸ ಫೀಚರ್ಸ್‌ ಎಲ್ಲರಿಗೂ ಅನುಕೂಲ, ಇನ್ಮುಂದೆ ಈ ರೀತಿಯ ಕಷ್ಟವೇ ಇರೋಲ್ಲ!

ಪ್ರಮುಖ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ವಾಟ್ಸಾಪ್ (Whatsapp)‌ ಬಳಕೆದಾರರಿಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ಅದರಲ್ಲೂ ಭದ್ರತಾ ವಿಚಾರದಲ್ಲಿ ಹೆಚ್ಚಿನ ಗಮನಹರಿಸುವ ವಾಟ್ಸಾಪ್ ಸಾಕು ಎನಿಸುವಷ್ಟು ಸೌಲಭ್ಯಗಳನ್ನು ನೀಡಿದೆ. ಈ ನಡುವೆ ಪ್ರತಿಯೊಬ್ಬರಿಗೂ ಅಗತ್ಯವಾದ ಹೊಸ ಫೀಚರ್ಸ್‌ ಅನ್ನು ಪರಿಚಯಿಸಲಾಗಿದೆ.

ಹೌದು, ವಾಟ್ಸಾಪ್‌ನಲ್ಲಿ ನೀವು ಇನ್ಮುಂದೆ ಯಾರೊಬ್ಬರ ಫೋನ್ ಸಂಖ್ಯೆಯನ್ನು ನಿಮ್ಮ ಫೋನ್‌ನಲ್ಲಿ ಆಡ್‌ ಮಾಡಿಕೊಳ್ಳದೆಯೇ ನೇರವಾಗಿ ಮೆಸೆಜ್‌ ಮಾಡಬಹುದಾಗಿದೆ. ಈ ಮೂಲಕ ಈ ಹಿಂದೆ ಮಾಡಲಾಗುತ್ತಿದ್ದ ನಂಬರ್‌ ಸೇವ್‌ ಪ್ರಕ್ರಿಯೆ ಕೊನೆಯಾಗಲಿದೆ. ಅದರಲ್ಲೂ ಫೋನ್ ಸಂಖ್ಯೆಯನ್ನು ತಮ್ಮ ಸಂಪರ್ಕಗಳ ಪಟ್ಟಿಯಲ್ಲಿ ಉಳಿಸಲು ಇಷ್ಟಪಡದ ಬಳಕೆದಾರರಿಗಾಗಿ ಇದು ಸಾಕಷ್ಟು ಅನುಕೂಲ ಆಗಲಿದೆ. ಹಾಗಿದ್ರೆ, ಹೇಗೆ ನಂಬರ್ ಸೇವ್‌ ಮಾಡಿಕೊಳ್ಳದೆ ಮೆಸೆಜ್‌ ಮಾಡುವುದು? ಹಾಗೂ ಈ ಫೀಚರ್ಸ್ ಹೇಗೆ ಕೆಲಸ ಮಾಡುತ್ತದೆ? ಎಂಬುದನ್ನು ತಿಳಿಯೋಣ ಬನ್ನಿ.

Whatsappನ ಈ ಹೊಸ ಫೀಚರ್ಸ್‌ ಎಲ್ಲರಿಗೂ ಅನುಕೂಲ, ಈ ರೀತಿಯ ಕಷ್ಟವೇ ಇರೋಲ್ಲ!

ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌: ವಾಟ್ಸಾಪ್‌ನಲ್ಲಿ ಈ ಮೊದಲು ಯಾರಿಗೇ ಮೆಸೆಜ್‌ ಮಾಡಬೇಕೆಂದರೂ ಸಹ ಅವರ ನಂಬರ್‌ ಅನ್ನು ಸೇವ್ ಮಾಡಿಕೊಳ್ಳುವುದು ಕಡ್ಡಾಯವಾಗಿತ್ತು ಅಥವಾ ಯಾವುದಾದರೂ ಚಾಟಿಂಗ್‌ ವಿಭಾಗದಲ್ಲಿ ಆ ನಂಬರ್‌ ಅನ್ನು ಎಂಟ್ರಿ ಮಾಡಿ ಆ ಮೂಲಕ ಅದಕ್ಕೆ ಮೆಸೆಜ್‌ ಮಾಡಬೇಕಿತ್ತು. ಆದರೆ, ಇನ್ಮುಂದೆ ನೇರವಾಗಿ ಚಾಟಿಂಗ್‌ ಐಕಾನ್‌ ಕ್ಲಿಕ್‌ ಮಾಡುವ ಮೂಲಕ ಮೆಸೆಜ್‌ ಮಾಡಬಹುದು.

ಈ ಫೀಚರ್ಸ್‌ ಸಂಬಂಧ WABetaInfo ವರದಿ ಮಾಡಿದ್ದು, ವಾಟ್ಸಾಪ್ ಇದೀಗ ಹೆಚ್ಚು ವಿನಂತಿಸಿದ ಫೀಚರ್ಸ್‌ ಅನ್ನು ಸೇರಿಸುತ್ತಿದೆ. ಈ ಮೂಲಕ ವಾಟ್ಸಾಪ್‌ನಲ್ಲಿ ನಂಬರ್‌ ಸೇವ್ ಮಾಡದೆಯೇ ಯಾರಿಗಾದರೂ ಮೆಸೆಜ್‌ ಕಳುಹಿಸುವ ಸಾಮರ್ಥ್ಯವನ್ನು ಹೊರತರುತ್ತಿದೆ ಎಂದು ತಿಳಿಸಿದೆ. ಇನ್ನು ಈ ಫೀಚರ್ಸ್‌ಗಾಗಿ ಎಲ್ಲಾ ವಾಟ್ಸಾಪ್‌ ಬಳಕೆದಾರರು ಕಾತುರದಿಂದಲೇ ಕಾಯುತ್ತಿದ್ದರು ಎಂದರೆ ತಪ್ಪಾಗಲಾರದು.

ಇದು ಹೇಗೆ ಸಹಾಯಕ?: ಈ ಹೊಸ ಫೀಚರ್ಸ್‌(features ) ಹೇಗೆ ಸಹಾಯಕ ಎಂದು ಉದಾಹರಣೆ ಸಹಿತ ಹೇಳುವುದಾದರೆ, ನೀವು ಆನ್‌ಲೈನ್ ಡೇಟಿಂಗ್ ಮಾಡುತ್ತಿದ್ದೀರಿ ಎಂದುಕೊಳ್ಳಿ. ಟಿಂಡರ್, ಹಿಂಜ್ ಅಥವಾ ಬಂಬಲ್‌ನಿಂದ ವಾಟ್ಸಾಪ್‌ ಗೆ ಹೋಗಲು ಮುಂದಾದಾಗ ಈ ಹಿಂದೆ ನೀವು ಅವರಿಗೆ ಮೆಸೆಜ್‌ ಅನ್ನು ಕಳುಹಿಸುವ ಮೊದಲು ಅವರ ಫೋನ್ ಸಂಖ್ಯೆಯನ್ನು ನಿಮ್ಮ ಸೇವ್‌ಮಾಡಿಕೊಳ್ಳಬೇಕಿತ್ತು. ಆದರೀಗ ಹೊಸ ಚಾಟ್ ಪ್ರಾರಂಭಿಸಿ ಆಯ್ಕೆ ಮೂಲಕ ಫೋನ್‌ ಸಂಖ್ಯೆಯನ್ನು ನಕಲಿಸಬಹುದು ಮತ್ತು ಅಂಟಿಸಬಹುದು.

ಇದರಿಂದಾಗಿ ನೀವು ಒಂದಕ್ಕಿಂತ ಹೆಚ್ಚು ಬಾರಿ ಮಾತನಾಡದ ಹಲವಾರು ಸಂಪರ್ಕಗಳಿಂದ ದೂರ ಇರಬಹುದಾಗಿದೆ. ಇದು ಆನ್‌ಲೈನ್ ಡೇಟಿಂಗ್‌ಗೆ ಮಾತ್ರವಲ್ಲದೆ ಬಹು ಮೂಲಗಳನ್ನು ಸಂಪರ್ಕಿಸಬೇಕಾದ ಪತ್ರಕರ್ತರು, ಪಿಆರ್‌ ಮ್ಯಾನೇಜರ್‌ಗಳು, ಸ್ಥಳೀಯ ರೆಸ್ಟೋರೆಂಟ್‌ಗಳು ಅಥವಾ ಸೇವೆಗಳಿಂದ ಮಾಹಿತಿಯನ್ನು ಹುಡುಕುತ್ತಿರುವ ಜನರು ಮತ್ತು ಹೆಚ್ಚಿನವರಿಗೆ ಇದು ಅನುಕೂಲ ಆಗಲಿದೆ.

ಈ ಫೀಚರ್ಸ್‌ ಐಓಎಸ್‌ (ios) ಮತ್ತು ಆಂಡ್ರಾಯ್ಡ್‌(Android) ಬಳಕೆದಾರರಿಗಾಗಿ ಲಭ್ಯ ಇದೆ ಎಂದು ತಿಳಿಸಲಾಗಿದ್ದು, ಈಗಾಗಲೇ ಸಾಕಷ್ಟು ಜನರು ಬಳಕೆ ಮಾಡುತ್ತಿದ್ದಾರೆ. ಆದರೆ, ಇದು ಸಂಪೂರ್ಣವಾಗಿ ಎಲ್ಲರಿಗೂ ಲಭ್ಯ ಆಗಲು ಕೆಲಸ ಕಾಲ ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ನಿಮ್ಮ ವಾಟ್ಸಾಪ್‌ ಈ ಫೀಚರ್ಸ್ ಪಡೆದಿದೆಯೇ ಎಂದು ತಿಳಿದುಕೊಳ್ಳಲು ಹೀಗೆ ಮಾಡಿ.

ನೀವು ಐಒಎಸ್‌ ಗಾಗಿ ವಾಟ್ಸಾಪ್‌ ಬಳಕೆ ಮಾಡುತ್ತಿದ್ದರೆ ಚಾಟ್ ಪಟ್ಟಿಯಲ್ಲಿ 'ಹೊಸ ಚಾಟ್ ಪ್ರಾರಂಭಿಸಿ' ಎಂಬ ಬಟನ್ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ ಮತ್ತು ಸರ್ಚ್‌ ಪಟ್ಟಿಯಲ್ಲಿ ಅಪರಿಚಿತ ಫೋನ್ ಸಂಖ್ಯೆಯನ್ನು ಎಂಟ್ರಿ ಮಾಡಿ. ಈ ವೇಳೆ ನೀವು ಎಂಟ್ರಿ ಮಾಡಿರುವ ಸಂಪರ್ಕ ವಾಟ್ಸಾಪ್‌ ಖಾತೆ (whatsapp account) ಹೊಂದಿದ್ದರೆ ನೀವು ಅವರೊಂದಿಗೆ ಚಾಟಿಂಗ್‌(chat) ಮುಂದುವರೆಸಬಹುದು.

ಈ ನಡುವೆ ಕೆಲವೇ ದಿನಗಳಲ್ಲಿ ಮತ್ತೊಂದು ಹೊಸ ಫೀಚರ್ಸ್‌ ಎಂಟ್ರಿ ನೀಡಲಿದೆ. ಈ ಫೀಚರ್ಸ್‌ ಪ್ಲಾಟ್‌ಫಾರ್ಮ್‌ಗೆ ಬಳಕೆದಾರರ ಹೆಸರನ್ನು ಸೇರಿಸುವ ಸಾಮರ್ಥ್ಯದ ಮೇಲೆ ಕೆಸ ಮಾಡುತ್ತದೆ. ಅಂದರೆ ಯಾರೊಂದಿಗಾದರೂ ಚಾಟ್ ಮಾಡಲು ನೀವು ಫೋನ್ ಸಂಖ್ಯೆಯನ್ನು ತಿಳಿದುಕೊಳ್ಳಬೇಕಾಗಿಲ್ಲ, ಬದಲಾಗಿ ಅವರ ಹ್ಯಾಂಡಲ್(Handle) ಮಾತ್ರ ತಿಳಿದುಕೊಂಡು ಮುಂದುವರೆಬಹುದು. ಇದು ಬಳಕೆದಾರರಿಗೆ ಖಾಸಗಿಯಾಗಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ.

Whatsappನ ಈ ಹೊಸ ಫೀಚರ್ಸ್‌ ಎಲ್ಲರಿಗೂ ಅನುಕೂಲ, ಈ ರೀತಿಯ ಕಷ್ಟವೇ ಇರೋಲ್ಲ!

ಇದಲ್ಲದೆ ಕೆಲವು ದಿನಗಳ ಹಿಂದೆ ಒಂದೇ ಖಾತೆಯ ವಾಟ್ಸಾಪ್‌ ಅನ್ನು ಹಲವು ಡಿವೈಸ್‌ಗಳಲ್ಲಿ ಬಳಕೆ ಮಾಡಬಹುದಾದ ಆಯ್ಕೆಯನ್ನು ನೀಡಲಾಗಿದೆ. ಅಂದರೆ ನಿಮ್ಮ ಒಂದು ವಾಟ್ಸಾಪ್‌ ಖಾತೆಯನ್ನು ನಾಲ್ಕು ಫೋನ್‌ಗಳಲ್ಲಿ ಬಳಕೆ ಮಾಡಬಹುದು. ಈ ಮೂಲಕ ಬಳಕೆದಾರರಿಗೆ ವಾಟ್ಸಾಪ್‌ ಹೊಸ ಹೊಸ ಫೀಚರ್ಸ್‌ ಪರಿಚಯಿಸಿಕೊಂಡು ಬರುತ್ತಲೇ ಇದ್ದು, ಬಳಕೆದಾರರು ಸಹ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

Best Mobiles in India

English summary
You can now directly message someone on WhatsApp without adding their phone number to your phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+