Home
ಸುದ್ದಿಜಾಲ

ಸ್ಮಾರ್ಟ್‌ವಾಚ್‌ ಬಳಕೆದಾರರಿಗೆ ಸಂತಸದ ವಿಚಾರ: ಇನ್ಮುಂದೆ ವಾಟ್ಸಾಪ್ ಸಹ ಲಭ್ಯ!

ಸ್ಮಾರ್ಟ್‌ವಾಚ್‌ಗಳು ಇಂದು ಸ್ಮಾರ್ಟ್‌ಫೋನ್‌ಗಿಂತಲೂ ಹೆಚ್ಚಿನ ಜನಮನ್ನಣೆ ಪಡೆದುಕೊಳ್ಳುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ ಸ್ಮಾರ್ಟ್‌ವಾಚ್‌ ಮೂಲಕವೇ ಕರೆ ಸ್ವೀಕಾರ ಮಾಡಬಹುದು, ಕಡಿತಗೊಳಿಸಬಹುದು, ಹಾಡನ್ನು ಪ್ಲೇ ಮಾಡಬಹುದು. ಈ ಫೀಚರ್ಸ್‌ಗಳೊಂದಿಗೆ ಇನ್ಮುಂದೆ ವಾಟ್ಸಾಪ್‌ ಸೌಲಭ್ಯ ಸಹ ಈ ಸ್ಮಾರ್ಟ್‌ವಾಚ್‌ಗಳಲ್ಲಿ ಲಭ್ಯ ಇರಲಿದೆ.

ಹೌದು, ವಾಟ್ಸಾಪ್‌ ಇದೀಗ Wear OS ಆಧಾರಿತ ಆಂಡ್ರಾಯ್ಡ್‌ ಸ್ಮಾರ್ಟ್‌ವಾಚ್‌ಗಳಲ್ಲಿ ಲಭ್ಯ ಇರಲಿದೆ. ಈ ಮೂಲಕ ಬಳಕೆದಾರರು ತಮ್ಮ ಮಣಿಕಟ್ಟಿನ ಮೂಲಕವೇ ಚಾಟ್ ಮಾಡಬಹುದು ಮತ್ತು ಮೆಸೆಜ್‌ಗಳನ್ನು ರೆಕಾರ್ಡ್ ಮಾಡಬಹುದಾಗಿದೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಸ್ಮಾರ್ಟ್‌ವಾಚ್‌ನಲ್ಲಿ ವಾಟ್ಸಾಪ್‌ ಇನ್‌ಸ್ಟಾಲ್‌ ಮಾಡುವುದು ಹೇಗೆ? ಹಾಗೂ ಇದನ್ನು ಬಳಕೆ ಮಾಡುವುದು ಹೇಗೆ? ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸ್ಮಾರ್ಟ್‌ವಾಚ್‌ ಬಳಕೆದಾರರಿಗೆ ಸಂತಸದ ವಿಚಾರ: ಇನ್ಮುಂದೆ ವಾಟ್ಸಾಪ್ ಸಹ ಲಭ್ಯ!

ಸ್ಮಾರ್ಟ್‌ವಾಚ್‌ಗಳಲ್ಲಿ ವಾಟ್ಸಾಪ್‌: ಈವರೆಗೂ ಆಂಡ್ರಾಯ್ಡ್‌ ಬೆಂಬಲಿತ ಸ್ಮಾರ್ಟ್‌ವಾಚ್‌ಗಳಲ್ಲಿ ವಾಟ್ಸಾಪ್‌ ಲಭ್ಯ ಇರಲಿಲ್ಲ. ಆದರೆ, ಇನ್ಮುಂದೆ ಈ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ವಾಟ್ಸಾಪ್‌ ಎಲ್ಲಾ ತಯಾರಿ ನಡೆಸುತ್ತಿದೆ. ಈ ಬಗ್ಗೆ WABetaInfo ವರದಿ ಮಾಡಿದ್ದು, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಆಂಡ್ರಾಯ್ಡ್‌ 2.23.10.10 ಗಾಗಿ ಇತ್ತೀಚಿನ ವಾಟ್ಸಾಪ್‌ ಬೀಟಾವನ್ನು ಡೌನ್‌ಲೋಡ್‌ ಮಾಡಿದ ನಂತರ, ಕೆಲವು ಬಳಕೆದಾರರು ತಮ್ಮ ಸ್ಮಾರ್ಟ್‌ವಾಚ್‌ಗೆ ವಾಟ್ಸಾಪ್‌‌ ಬೆಂಬಲ ನೀಡುವುದನ್ನು ಕಂಡುಕೊಂಡಿದ್ದಾರಂತೆ.

ಅಂದರೆ ವಾಟ್ಸಾಪ್‌ನ ಇತ್ತೀಚಿನ ಬೀಟಾ ಆವೃತ್ತಿಯನ್ನು ಬಳಕೆ ಮಾಡುವವರು ಈಗ Wear OS ಚಾಲನೆಯಲ್ಲಿರುವ ತಮ್ಮ ಸ್ಮಾರ್ಟ್ ವಾಚ್‌ಗಳಲ್ಲಿ ವಾಟ್ಸಾಪ್‌ ಅನ್ನು ಸಹ ಇನ್‌ಸ್ಟಾಲ್‌ ಮಾಡಿಕೊಂಡು ಬಳಕೆ ಮಾಡಬಹುದು ಎಂದು ತಿಳಿದುಬಂದಿದೆ. ಜೊತೆಗೆ ಸ್ಮಾರ್ಟ್‌ವಾಚ್‌ ಮೂಲಕ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್ ಈಗ ಲಭ್ಯವಿದೆಯೇ ಎಂದು ಸ್ವತಂತ್ರವಾಗಿ ಪರಿಶೀಲಿಸಬಹುದಾಗಿದೆ.

ಇದರಿಂದ ಏನೆಲ್ಲಾ ಕಾರ್ಯ ಸಾಧ್ಯ?: ಬಳಕೆದಾರರು ವಾಚ್‌ನಲ್ಲಿರುವ ಮೈಕ್ ಮೂಲಕ ಸಂದೇಶಗಳನ್ನು ಟೈಪ್ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಇದರ ಹೊರತಾಗಿ ಧ್ವನಿ ಸಂದೇಶಗಳನ್ನು ಸಹ ರೆಕಾರ್ಡ್ ಮಾಡಬಹುದು. ಇದರಿಂದಾಗಿ ನಿರಂತರವಾಗಿ ವಾಟ್ಸಾಪ್‌ ಬಳಕೆ ಮಾಡಲು ಫೋನ್‌ ಅನ್ನು ಪಾಕೆಟ್‌ನಿಂದ ತೆಗೆದು ನೋಡುವವರು ಇನ್ಮುಂದೆ ಮಣಿಕಟ್ಟಿನಲ್ಲೇ ಯಾರ್ಯಾರು ಮೆಸೆಜ್‌ ಮಾಡಿದ್ದಾರೆ ಎಂದು ತಿಳಿದುಕೊಳ್ಳಬಹುದು.

ಹೆಚ್ಚಿನ ಭದ್ರತಾ ಸೌಲಭ್ಯ: ಸ್ಮಾರ್ಟ್‌ಫೋನ್‌ನಲ್ಲಿ ಹೇಗೆ ಸ್ಮಾರ್ಟ್‌ಫೋನ್‌ನಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆಯ್ಕೆ ಇದೆಯೋ ಅದೇ ರೀತಿ ಸ್ಮಾರ್ಟ್‌ವಾಚ್‌ನಲ್ಲಿ ವಾಟ್ಸಾಪ್‌ ಸಹ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆಗಿರಲಿದ್ದು, ಭದ್ರತೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಇದರಿಂದಾಗಿ ಮೆಸೆಜ್‌ ಅನ್ನು ಯಾರಾದರೂ ವೀಕ್ಷಣೆ ಮಾಡುತ್ತಾರೆ ಅಥವಾ ದುರುಪಯೋಗಪಡಿಸಿಕೊಳ್ಳುತ್ತಾರೆ ಎನ್ನುವ ಭಯ ಖಂಡಿತಾ ಬೇಡ.

ಸ್ಮಾರ್ಟ್‌ವಾಚ್‌ ಬಳಕೆದಾರರಿಗೆ ಸಂತಸದ ವಿಚಾರ: ಇನ್ಮುಂದೆ ವಾಟ್ಸಾಪ್ ಸಹ ಲಭ್ಯ!

ವಾಟ್ಸಾಪ್‌ ಡೌನ್‌ಲೋಡ್ ಮಾಡುವುದು ಹೇಗೆ?: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹೇಗೆ ಗೂಗಲ್‌ ಖಾತೆಗೆ ಲಾಗ್ ಇನ್ ಆಗುವಿರೋ ಅದೇ ರೀತಿ ಸ್ಮಾರ್ಟ್‌ವಾಚ್‌ನಲ್ಲೂ ಮಾಡಿ. ನಂತರ ಸ್ಮಾರ್ಟ್‌ವಾಚ್‌ಗೆ ಸಂಪರ್ಕ ಆಗಿರುವ ಫೋನ್‌ನಲ್ಲಿ ಇತ್ತೀಚಿನ ವಾಟ್ಸಾಪ್‌ ಬೀಟಾವನ್ನು ಸ್ಥಾಪಿಸಿದ್ದರೆ ವಾಚ್‌ನಲ್ಲಿಯೂ ಅಪ್ಲಿಕೇಶನ್ ಅನ್ನು ಸ್ಥಾಪಿಸುವ ಆಯ್ಕೆಯನ್ನು ತೋರಿಸಲಾಗುತ್ತದೆ. ಅದಾಗ್ಯೂ ಈ ಆಯ್ಕೆ ಏನಾದರೂ ಕಾಣಿಸದೆ ಇದ್ದರೆ ವಾಚ್‌ನಲ್ಲಿನ ಪ್ಲೇ ಸ್ಟೋರ್‌ನಲ್ಲಿ ವಾಟ್ಸಾಪ್ ಅನ್ನು ಸ್ವತಂತ್ರವಾಗಿ ಹುಡುಕುವ ಮೂಲಕ ಇನ್‌ಸ್ಟಾಲ್ ಮಾಡಿಕೊಳ್ಳಬಹುದು.

ಸ್ಮಾರ್ಟ್‌ವಾಚ್‌ ಬಳಕೆದಾರರಿಗೆ ಸಂತಸದ ವಿಚಾರ: ಇನ್ಮುಂದೆ ವಾಟ್ಸಾಪ್ ಸಹ ಲಭ್ಯ!

ಇದಾದ ಬಳಿಕ ನಿಮ್ಮ ಫೋನ್ ಮತ್ತು ವಾಚ್ ಸಂಪರ್ಕಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನೀವು ವಾಚ್‌ನಲ್ಲಿ ಆಪ್‌ ಅನ್ನು ಓಪನ್‌ ನಂತರ ಸ್ಮಾರ್ಟ್‌ಫೋನ್‌ನಲ್ಲಿ ಲಿಂಕ್ ಮಾಡಲು ಪ್ರಯತ್ನಿಸುವಾಗ ವಾಟ್ಸಾಪ್‌ ನಿಮ್ಮ ಫೋನ್‌ನಲ್ಲಿ ನಿಮಗೆ ಅನುಮತಿ ಕೇಳುತ್ತದೆ. ಜೊತೆಗೆ ವಾಚ್‌ನಲ್ಲಿ 8 ಅಂಕಿಯ ಕೋಡ್ ಅನ್ನು ತೋರಿಸಲಾಗುತ್ತದೆ. ನೀವು ಫೋನ್‌ನಲ್ಲಿ ಈ ಕೋಡ್ ಅನ್ನು ನಮೂದಿಸಬೇಕು. ಇದಾದ ಬಳಿಕ ವಾಚ್ ನಿಮ್ಮ ಚಾಟ್‌ಗಳನ್ನು ಲೋಡ್ ಮಾಡಲು ಪ್ರಾರಂಭಿಸುತ್ತದೆ.

Best Mobiles in India

English summary
WhatsApp will now be available on Wear OS based Android smartwatches. With this, users can chat and record messaging right from their wrist.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+