ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ 'ಸರ್ಚ್ ಬಾರ್' ಫೀಚರ್ಸ್; ಇದರ ಕೆಲಸ ಏನು?
ಪ್ರಮುಖ ಮೆಸೆಜಿಂಗ್ ಪ್ಲಾಟ್ ಫಾರ್ಮ್ ಆಗಿರುವ ವಾಟ್ಸಾಪ್ ಈಗಾಗಲೇ ಸಾಕಷ್ಟು ಸುಧಾರಿತ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರಿಗೆ ವಿಶೇಷ ಅನುಭವ ನೀಡುತ್ತಾ ಬರುತ್ತಿದೆ. ಇದರ ಭಾಗವಾಗಿಯೇ ಈಗ ಮತ್ತೊಂದು ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಮೂಲಕ ಬಳಕೆದಾರರಿಗೆ ಸಾಕಷ್ಟು ಪ್ರಯೋಜನ ಸಿಗಲಿದೆ.
ಹೌದು, ವಾಟ್ಸಾಪ್ ಪ್ರತಿಕ್ಷಣವೂ ಅಪ್‌ಡೇಟ್ ಫೀಚರ್ಸ್‌ಗಳ ಮೇಲೆ ಕಾರ್ಯನಿರ್ವಹಿಸುತ್ತಲೇ ಬರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಈಗಾಗಲೇ ಸಾಕಷ್ಟು ಫೀಚರ್ಸ್‌ಗಳು ಗ್ರಾಹಕರನ್ನು ಸೆಳೆದಿವೆ. ಅದರಂತೆ ವಾಟ್ಸಾಪ್ ಹೊಸ ಸರ್ಚ್ ಬಾರ್ ಫೀಚರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಇದು ಯಾವಾಗ, ಯಾರಿಗೆ ಲಭ್ಯ?, ಇದರಿಂದ ಪ್ರಯೋಜನ ಏನು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಹೊಸ ಸರ್ಚ್ ಬಾರ್
ವಾಟ್ಸಾಪ್ ಸೆಟ್ಟಿಂಗ್ ವಿಭಾಗವನ್ನು ನ್ಯಾವಿಗೇಟ್ ಮಾಡಲು ಬಳಕೆದಾರರಿಗೆ ಸುಲಭವಾಗುವಂತೆ ಮಾಡಲು ಹೊಸ ಫೀಚರ್ಸ್ ಪರಿಚಯಿಸಲು ವಾಟ್ಸಾಪ್ ಮುಂದಾಗಿದೆ. ಈ ಮೂಲಕ ಸೆಟ್ಟಿಂಗ್‌ಗಳನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ. ಹಾಗೆಯೇ ಸರ್ಚ್ ಬಾರ್ ವಾಟ್ಸಾಪ್‌ನಲ್ಲಿ ನಿಖರವಾಗಿ ಬೇಕಾದ ಸೆಟ್ಟಿಂಗ್ ಆಯ್ಕೆಯನ್ನು ಸರ್ಚ್ ಮಾಡಲು ಅನುವು ಮಾಡಿಕೊಡಲಿದ್ದು, ಇದರಿಂದ ಸರಳವಾಗಿ ಹಾಗೂ ವೇಗವಾಗಿ ಅಗತ್ಯ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
ಯಾವೆಲ್ಲಾ ಬಳಕೆದಾರರಿಗೆ ಲಭ್ಯ?
ವಾಟ್ಸಾಪ್‌ನ ಈ ವಿಶೇಷ ಫೀಚರ್ಸ್ ಅನ್ನು WABetaInfo ಗುರುತಿಸಿದ್ದು, ಐಓಎಸ್ ಬಳಕೆದಾರರಿಗೆ ಲಭ್ಯ ಇರಲಿದೆ. ಹಾಗೆಯೇ ಐಒಎಸ್ ಬೀಟಾ ಆವೃತ್ತಿ 23.4.0.73 ನಲ್ಲಿ ವಾಟ್ಸಾಪ್ ಬಳಕೆ ಮಾಡುತ್ತಿರುವವರು ಈಗಾಗಲೇ ಈ ಫೀಚರ್ಸ್ ಅನ್ನು ಬಳಕೆ ಮಾಡುತ್ತಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಇತರ 23.4.0 ಬಿಲ್ಡ್‌ಗಳಲ್ಲಿ ಪರೀಕ್ಷಕರು ಹೊಸ ಸರ್ಚ್ ಬಾರ್ ಫೀಚರ್ಸ್ ಅನ್ನು ನೋಡಲು ಸಾಧ್ಯವಾಗುತ್ತದೆ ಎಂದು ವಾಟ್ಸಾಪ್ ತಿಳಿಸಿದೆ.

ಇದರಿಂದ ಪ್ರಯೋಜನ ಏನು?
WABetaInfo ಶೇರ್ ಮಾಡಿಕೊಂಡಿರುವ ಚಿತ್ರದ ಪ್ರಕಾರ, ಸೆಟ್ಟಿಂಗ್‌ಗಳ ಪುಟದಲ್ಲಿ ಬಳಕೆದಾರರ ಪ್ರೊಫೈಲ್ ಚಿತ್ರದ ಮೇಲೆ ಸರ್ಚ್ ಬಾರ್ ಕಾಣಿಸಿಕೊಳ್ಳುತ್ತದೆ. ಇನ್ನು ಬಳಕೆದಾರರು ಸೆಟ್ಟಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ಳುವ ಸರ್ಚ್ ಬಾರ್‌ನಲ್ಲಿ ಬೇಕಾದ ಪದ ಎಂಟ್ರಿ ಮಾಡಿದರೆ ಅದಕ್ಕೆ ತಕ್ಕ ಮಾಹಿತಿಯನ್ನು ತಕ್ಷಣವೇ ತೋರಿಸಲಾಗುತ್ತದೆ. ಉದಾಹರಣೆಗೆ ನೀವು ಫೋಟೋ ಎಂದು ಸರ್ಚ್ ಮಾಡಿದರೆ ಸ್ಟೋರೇಜ್ ವಿಭಾಗದಲ್ಲಿನ ಫೋಟೋ, ಪ್ರೊಫೈಲ್ ಪೋಟೋ ವಿಭಾಗ ತೆರೆದುಕೊಳ್ಳುತ್ತದೆ. ಇದರಿಂದ ತಕ್ಷಣವೇ ಆ ವಿಭಾಗಕ್ಕೆ ಎಂಟ್ರಿಯಾಗಬಹುದು.
ಈ ಫೀಚರ್ಸ್ ಸಾಮಾನ್ಯವಾಗಿ ವಯಸ್ಸಾದ ಬಳಕೆದಾರರಿಗೆ ಅಥವಾ ಆಪ್ ಬಳಕೆ ಮಾಡಲು ಆಗತಾನೆ ಇನ್‌ಸ್ಟಾಲ್ ಮಾಡಿಕೊಂಡಿರುವವರಿಗೆ ಸಾಕಷ್ಟು ಅನುಕೂಲ ಎನ್ನಬಹುದು. ಯಾಕೆಂದರೆ ಸೆಟ್ಟಿಂಗ್ ವಿಭಾಗಕ್ಕೆ ಹೋಗಿ ಅಲ್ಲಿ ಬೇಕಾದ ಬದಲಾವಣೆ ಮಾಡುವ ಬದಲು ನೇರವಾಗಿ ಯಾವ ವಿಭಾಗದಲ್ಲಿ ಏನೆಲ್ಲಾ ಬದಲಾವಣೆ ಬೇಕು, ಅಥವಾ ಏನನ್ನು ನೋಡಬೇಕು ಎನ್ನುವುದನ್ನು ಸುಲಭವಾಗಿ ಪತ್ತೆ ಕಂಡುಕೊಳ್ಳಬಹುದು. ಇದರಿಂದ ಸುಲಭವಾಗಿ ವಾಟ್ಸಾಪ್‌ನಲ್ಲಿ ತಲ್ಲೀನವಾಗಬಹುದಾಗಿದೆ.
ಇನ್ನುಳಿದಂತೆ ಐಓಎಸ್ ಬೀಟಾ ಆವೃತ್ತಿ 23.4.0.74 ಗಾಗಿ ವಾಟ್ಸಾಪ್ ಸ್ಟೇಟಸ್ ಅಪ್‌ಡೇಟ್ ವರದಿ ಮಾಡುವ ವಿಷಯದಲ್ಲೂ ವಾಟ್ಸಾಪ್ ಪರೀಕ್ಷಿಸುತ್ತಿದೆ ಎನ್ನಲಾಗಿದೆ. ಈ ಫೀಚರ್ಸ್ ಅನ್ನು ಕೆಲವು ತಿಂಗಳ ಹಿಂದೆ ಆಂಡ್ರಾಯ್ಡ್ ಬಳಕೆದಾರರಿಗೆ ಪರಿಚಯಿಸಲಾಗಿದ್ದು, ಈ ಮೂಲಕ ಏನಾದರೂ ನೀತಿ ನಿಯಮ ಉಲ್ಲಂಘನೆಯ ಸ್ಟೇಟಸ್‌ಗಳಿದ್ದರೆ ವರದಿ ಮಾಡುವ ಮೂಲಕ ಕ್ರಮ ಜರುಗಿಸಲು ಬಳಕೆದಾರರು ಸಹಾಯ ಮಾಡಬಹುದು.

ಸಾಮಾನ್ಯವಾಗಿ ವಾಟ್ಸಾಪ್‌ನ ಯಾವುದೇ ವಿಭಾಗ ಅಂದರೆ ಚಾಟ್ ವಿಭಾಗವಾಗಿರಬಹುದು, ಸ್ಟೇಟಸ್ ವಿಭಾಗ ಆಗಿರಬಹುದು ಇವೆಲ್ಲವೂ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನಿಂದ ರಕ್ಷಿಸಲ್ಪಟ್ಟಿವೆ. ಯಾವುದೇ ಮೂರನೇ ವ್ಯಕ್ತಿಗೆ ಇದನ್ನು ನೋಡಲು ಆಗುವುದಿಲ್ಲ. ಆದರೆ, ಸ್ಟೇಟಸ್‌ನಲ್ಲಿ ವಾಟ್ಸಾಪ್ ನ ನೀತಿಗಳಿಗೆ ಧಕ್ಕೆ ತಂದರೆ ಮಾತ್ರ ಮೆಸೆಜ್‌ಗಳ ಕಂಟೆಂಟ್‌ಅನ್ನು ಮಾಡರೇಶನ್‌ಗಾಗಿ ಪರಿಶೀಲಿಸಲು ವಾಟ್ಸಾಪ್ ಮುಂದಾಗುತ್ತದೆ.


Click it and Unblock the Notifications








