ವಾಟ್ಸಾಪ್‌ ಪೇ ಮೂಲಕ 1ರೂ. ಕಳುಹಿಸಿದರೇ, ಸಿಗುತ್ತೆ 35ರೂ. ಕ್ಯಾಶ್‌ಬ್ಯಾಕ್!

|

ಜನಪ್ರಿಯ ಇನ್‌ಸ್ಟಂಟ್‌ ಮೆಸೆಜಿಂಗ್ ಆಪ್‌ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಈಗ ಭರ್ಜರಿ ಸಿಹಿಸುದ್ದಿ ನೀಡಿದೆ. ವಾಟ್ಸಾಪ್‌ ಪೇ ಬಳಸಿಕೊಂಡು ಪಾವತಿಗಳನ್ನು ಮಾಡುವ ಭಾರತದಲ್ಲಿನ ಬಳಕೆದಾರರಿಗೆ ಸಂಸ್ಥೆಯು ಒಟ್ಟು 105 ರೂ. ಕ್ಯಾಶ್‌ಬ್ಯಾಕ್‌ ಲಭ್ಯ ಆಗುವುದಾಗಿ ತಿಳಿಸಿದೆ. ವಾಟ್ಸಾಪ್‌ ಪೇ ಬಳಕೆಗೆ ಹೆಚ್ಚಿನ ಬಳಕೆದಾರರನ್ನು ಆಕರ್ಷಿಸಲು ಹೊಸ ಕ್ಯಾಶ್‌ಬ್ಯಾಕ್ ಕೊಡುಗೆಗೆ ಮುಂದಾಗಿದೆ. ಭಾರತದಲ್ಲಿ ಸಾಮಾನ್ಯವಾಗಿ ಗೂಗಲ್‌ ಪೇ, ಫೋನ್‌ ಪೇ ಹಾಗೂ ಪೇಟಿಎಮ್‌ ಆಪ್‌ಗಳು ಹೆಚ್ಚಾಗಿ ಬಳಕೆಯಲ್ಲಿವೆ.

ವಾಟ್ಸಾಪ್‌ ಪೇ ಮೂಲಕ 1ರೂ. ಕಳುಹಿಸಿದರೇ, ಸಿಗುತ್ತೆ 35ರೂ. ಕ್ಯಾಶ್‌ಬ್ಯಾಕ್!

ಹೌದು, ವಾಟ್ಸಾಪ್‌ ಪೇ ಆಯ್ದ ಬಳಕೆದಾರರಿಗೆ ಕ್ಯಾಶ್‌ಬ್ಯಾಕ್‌ ನೀಡುತ್ತಿದೆ. ಈ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಮುಂದಿನ ಮೂರು ಪಾವತಿಗಳಿಗೆ 35 ರೂ. ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಉದಾಹರಣೆಗೆ, ಬಳಕೆದಾರರು ವಾಟ್ಸಾಪ್ ಪಾವತಿ ಮೂಲಕ 1 ರೂ. ಕಳುಹಿಸಿದರೂ 35 ರೂ. ಕ್ಯಾಶ್‌ಬ್ಯಾಕ್ ಪಡೆಯಬಹುದು. ಹೀಗೆ 35 ರೂ. ನಂತೆ ಮೂರು ಬಾರಿ ಕ್ಯಾಶ್‌ಬ್ಯಾಕ್‌ ಸೇರಿದರೆ ಒಟ್ಟು 105ರೂ. ಕ್ಯಾಶ್‌ಬ್ಯಾಕ್‌ ಲಭ್ಯ. ಅಂದಹಾಗೆ ಇದು 'ಸೀಮಿತ ಸಮಯದ ಕೊಡುಗೆ' (limited time offer) ಮತ್ತು 'ಆಯ್ದ ಗ್ರಾಹಕರಿಗೆ' (select customers) ಮಾತ್ರ ಲಭ್ಯವಿದೆ ಎಂದು ಕಂಪನಿ ಸ್ಪಷ್ಟಪಡಿಸುತ್ತದೆ. ಹಾಗಾದರೇ ವಾಟ್ಸಾಪ್‌ ಪೇ ಬಳಸಿ ಹಣವನ್ನು ಕಳುಹಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ ಪೇ ಬಳಸಿ ಹಣವನ್ನು ಕಳುಹಿಸಲು ಹೀಗೆ ಮಾಡಿರಿ:
* ಸಂಪರ್ಕವನ್ನು ಆಯ್ಕೆ ಮಾಡಿ
* ಮುಂದೆ, ಚಾಟ್ ಬಾಕ್ಸ್ ಬಳಿ ಇರುವ ಪಾವತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
* ಅಗತ್ಯವಿದ್ದಲ್ಲಿ ಮೊತ್ತ ಮತ್ತು ನೋಟ್ ನಮೂದಿಸಿ
* ನೀವು ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು ಸೇರಿಸುವ ಅಗತ್ಯವಿದೆ
* 'ಪ್ರಾರಂಭಿಸಿ' ಕ್ಲಿಕ್ ಮಾಡಿ
* ನಿಮ್ಮ ಬ್ಯಾಂಕ್ ಹೆಸರನ್ನು ಆಯ್ಕೆಮಾಡಿ

ವಾಟ್ಸಾಪ್‌ ಪೇ ಮೂಲಕ 1ರೂ. ಕಳುಹಿಸಿದರೇ, ಸಿಗುತ್ತೆ 35ರೂ. ಕ್ಯಾಶ್‌ಬ್ಯಾಕ್!

* ಮುಂದೆ, ವೆರಿಫೈ ಕ್ಲಿಕ್ ಮಾಡುವ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ. ಗಮನಾರ್ಹವಾಗಿ, ಪಾವತಿಗಳನ್ನು ಬಳಸಲು ನಿಮ್ಮ ವಾಟ್ಸಾಪ್‌ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ನೋಂದಾಯಿತ ಸಂಖ್ಯೆ ಒಂದೇ ಆಗಿರಬೇಕು
* ಪರಿಶೀಲಿಸು ಕ್ಲಿಕ್ ಮಾಡಿ
* ಬ್ಯಾಂಕ್ ಪರಿಶೀಲಿಸಿದ ನಂತರ, ನಿಮ್ಮ ಬ್ಯಾಂಕ್ ಖಾತೆಯನ್ನು ಸೇರಿಸಿ. ಸೇರಿಸು ಆಯ್ಕೆಯ ಮೇಲೆ ಕ್ಲಿಕ್ ಮಾಡಿ
* ನಂತರ, ಮುಂದುವರಿಸಿ ಆಯ್ಕೆಯನ್ನು ಕ್ಲಿಕ್ ಮಾಡಿ
* ಈಗ ಬ್ಯಾಂಕ್ ಖಾತೆಯನ್ನು ಸೇರಿಸಲಾಗಿದೆ, ನೀಡಿರುವ ಜಾಗದಲ್ಲಿ ಮೊತ್ತವನ್ನು ನಮೂದಿಸಿ
* ಮುಂದೆ ಕ್ಲಿಕ್ ಮಾಡಿ

* ಒಂದಕ್ಕಿಂತ ಹೆಚ್ಚು ಸೇರಿಸಿದ್ದರೆ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ
* ಪಾವತಿ ಕಳುಹಿಸು ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಮುಂದುವರಿಸಿ
* ನೀವು ಅಲ್ಲಿ UPI ಪಿನ್ ಅನ್ನು ದೃಢೀಕರಿಸುವ ಅಗತ್ಯವಿದೆ
* ಸ್ವೀಕರಿಸುವವರು ಮೊತ್ತವನ್ನು ಪಡೆಯುತ್ತಾರೆ ಮತ್ತು 35 ರೂ.ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
* ಮೊದಲೆ ಹೇಳಿದಂತೆ, ಈ ಕ್ಯಾಶ್‌ಬ್ಯಾಕ್ ಆಫರ್ ಸದ್ಯಕ್ಕೆ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದೆ.

Best Mobiles in India

English summary
WhatsApp Pay is offering Rs 105 Cashback: Follow These Steps to avail the offer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X