Home
ಸುದ್ದಿಜಾಲ

ವಾಟ್ಸಾಪ್‌ ಪೇ, ಗೂಗಲ್‌ ಪೇ ಮತ್ತು ಫೋನ್‌ ಪೇ: ಹಣ ವರ್ಗಾವಣೆಗೆ ಯಾವುದು ಉತ್ತಮ?

ಸದ್ಯ ಸ್ಮಾರ್ಟ್‌ಫೋನ್‌ ಬಳಕೆದಾರರು UPI ಆಧಾರಿತ ಪೇಮೆಂಟ್‌ ಅಪ್ಲಿಕೇಶನ್‌ಗಳ ಬಳಕೆ ನಡೆಸುತ್ತಿದ್ದಾರೆ. ಪುಟ್ಟ ಟೀ ಸ್ಟಾಲ್‌, ತರಕಾರಿ ಅಂಗಡಿ, ಕಿರಾಣಿ ಸ್ಟೋರ್, ಸೂಪರ್ ಮಾರ್ಕೆಟ್‌ ಸೇರಿದಂತೆ ಶೋ ರೂಮ್‌/ಮಾಲ್‌ಗಳಲ್ಲಿಯೂ UPI ಆಪ್‌ಗಳನ್ನು ಬಳಕೆ ಮಾಡಿ ಬಿಲ್ ಪಾವತಿಸುತ್ತಿದ್ದಾರೆ. ಈಗಾಗಲೇ ಗೂಗಲ್‌ ಪೇ, ಫೋನ್‌ ಪೇ ಹಾಗೂ ಪೇಟಿಎಮ್‌ ಮಹತ್ತರ ಹೆಜ್ಜೆ ಗುರುತುಗಳನ್ನು ಮೂಡಿವೆ. ಇವುಗಳ ಪೈಪೋಟಿ ನೀಡಲು ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಪೇ ಸಹ ಈಗ ಎಂಟ್ರಿ ನೀಡಿದೆ.

ಪೇಮೆಂಟ್‌

ಹೌದು, ದೇಶದಲ್ಲಿ UPI ಪೇಮೆಂಟ್‌ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ವಾಟ್ಸಾಪ್‌ ಸಹ ವಾಟ್ಸಾಪ್‌ ಪೇ ಸೇವೆಯನ್ನು ಪರಿಚಯಿಸಿದೆ. ಸದ್ಯ ಬಳಕೆದಾರರು ಗೂಗಲ್‌ ಪೇ, ಫೋನ್ ಪೇ ಆಪ್‌ಗಳನ್ನು ಹೆಚ್ಚಾಗಿ ಬಳಸುತ್ತಿದ್ದು, ವಾಟ್ಸಾಪ್‌ ಪೇ ಹೊಸದಾಗಿದೆ. ಹಾಗಾದರೇ ಗೂಗಲ್ ಪೇ, ಫೋನ್ ಪೇ ಹಾಗೂ ವಾಟ್ಸಾಪ್‌ ಪೇ ಇವುಗಳಲ್ಲಿ ಯಾವುದು ಬೆಸ್ಟ್‌? ಈ ಆಪ್‌ಗಳು ಯಾವೆಲ್ಲಾ ಪ್ರಯೋಜನಗಳನ್ನು ಒಳಗೊಂಡಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಗೂಗಲ್‌ ಪೇ - Google Pay

ಗೂಗಲ್‌ ಪೇ - Google Pay

ಟೆಕ್‌ ದೈತ್ಯ ಗೂಗಲ್‌ ಕಂಪನಿಯ ಒಡೆತನದ ಗೂಗಲ್‌ ಪೇ ಅಪ್ಲಿಕೇಶನ್ UPI ಆಧಾರಿತ ಪೇಮೆಂಟ್‌ ಅಪ್ಲಿಕೇಶನ್‌ಗಳಲ್ಲಿ ಭಾರೀ ಜನಪ್ರಿಯತೆ ಪಡೆದಿದೆ. ಈ ಅಪ್ಲಿಕೇಶನಿನಲ್ಲಿ ಹಣ ವರ್ಗಾವಣೆಗೆ, ವಿದ್ಯುತ್ ಬಿಲ್ ಪಾವತಿ, ನೀರಿನ ಬಿಲ್ ಪಾವತಿ, ಮೊಬೈಲ್‌ ರೀಚಾರ್ಜ್‌ ಸೇರಿದಂತೆ ಹಲವು ವಿಧವಾದ ಸೇವೆಗಳು ಲಭ್ಯ ಇವೆ. ಹಾಗೆಯೇ ಗೂಗಲ್‌ ಪೇನಲ್ಲಿ ಬಳಕೆದಾರರ ಹಣ ವರ್ಗಾವಣೆಯ ಸಂಪೂರ್ಣ ಮಾಹಿತಿ ಸಿಗಲಿದೆ. ಪ್ರತಿ ಟ್ರಾನ್ಸಾಕ್ಶನಿಗೂ ರೀವಾರ್ಡ್‌ ಲಭ್ಯವಾಗುತ್ತದೆ. ಹಣ ವರ್ಗಾವಣೆ ಮಾಡುವಾಗ ಲೋಕೇಶನ್‌ ಆಕ್ಸಸ್‌ ಅನುಮತಿ ಪಡೆಯುತ್ತದೆ.

ಫೋನ್ ಪೇ - PhonePe app

ಫೋನ್ ಪೇ - PhonePe app

ಜನಪ್ರಿಯ ಗೂಗಲ್ ಪೇ ಆಪ್‌ನಂತೆಯೇ ಸೇವೆ ಒದಗಿಸುತ್ತಿರುವ 'ಪೋನ್‌ ಪೇ' ಆಪ್‌ ಈಗಾಗಲೇ ಸಾಕಷ್ಟು ಬಳಕೆದಾರರನ್ನು ಹೊಂದಿದ್ದು, ಇದು ಸಹ UPI ಆಧಾರಿತವಾಗಿದೆ. ಈ ಆಪ್‌ನಲ್ಲಿಯೂ ಪೇಮೆಂಟ್ ಮಾಡಲು ಹಲವು ಆಯ್ಕೆಗಳಿದ್ದು, ಟ್ರೆಂಡಿಂಗ್‌ನಲ್ಲಿರುವ ಕ್ಯೂಆರ್‌-QR ಕೋಡ್‌ ಸ್ಕ್ಯಾನ್‌ ಸೌಲಭ್ಯವು ಸಹ ಇದೆ. ಫೋನ್‌ ಪೇ ಹಲವು ಭಾಷೆಗಳ ಆಯ್ಕೆಗಳನ್ನು ಹೊಂದಿದ್ದು, ಗ್ರಾಹಕರ ಕೆಲವು ಟ್ರಾನ್ಸಾಕ್ಶನ್‌ಗಳಿಗೆ ಕ್ಯಾಶ್‌ಬ್ಯಾಕ್ ಕೊಡುಗೆಗಳು ಲಭ್ಯವಾಗುತ್ತವೆ. ಗ್ರಾಹಕರು ಬ್ಯಾಂಕ್‌ಗೆ ನೊಂದಾಯಿತ ಮೊಬೈಲ್‌ನಂಬರ್‌ನಿಂದ ಫೋನ್‌ ಪೇ ಖಾತೆ ಹೊಂದುವುದು. ಸೆಕ್ಯುರಿಟಿಗಾಗಿ ನಾಲ್ಕು ನಂಬರ್‌ ಪಿನ್‌ಸೆಟ್‌ ಮಾಡಿಕೊಳ್ಳುವ(UPI PIN) ಆಯ್ಕೆ ಇದೆ. ಪಾಸ್‌ಬುಕ್, ಬ್ಯಾಂಕ್ ಬ್ಯಾಲೆನ್ಸ್‌, ಟ್ರಾನ್ಸಾಕ್ಶನ್ ಹಿಸ್ಟರಿ ಸೌಲಭ್ಯಗಳು ಇವೆ.

ವಾಟ್ಸಾಪ್‌ ಪೇ - Whatsapp Pay

ವಾಟ್ಸಾಪ್‌ ಪೇ - Whatsapp Pay

ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್‌ ಮೆಸೆಜಿಂಗ್‌ ಆಪ್‌ನಲ್ಲಿಯೇ, ಈ ವಾಟ್ಸಾಪ್‌ ಪೇ ಸೇವೆ ಸೇರ್ಪಡೆ ಆಗಿದೆ. ಹೀಗಾಗಿ ವಾಟ್ಸಾಪ್‌ ಪೇ ಬಳಕೆಗಾಗಿ ಪ್ರತ್ಯೇಕ ಆಪ್‌ ಇನ್‌ಸ್ಟಾಲ್‌ ಮಾಡುವ ಅಗತ್ಯ ಇರಲ್ಲ. ಇನ್ನು ಈ ಅಪ್ಲಿಕೇಶನ್ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಆಧಾರಿತವಾಗಿದ್ದು, ಬಳಕೆದಾರರು ಹಣವನ್ನು ವಾಟ್ಸಾಪ್ ವ್ಯಾಲೆಟ್ ನಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ. ಬಳಕೆದಾರರು ಹಣವನ್ನು ಬ್ಯಾಂಕ್ ಖಾತೆಯಿಂದ ನೇರವಾಗಿ ವಾಟ್ಸಾಪ್‌ ಪೇ ಸೇವೆ ಮೂಲಕ ಇತರರಿಗೆ ವರ್ಗಾಯಿಸುವ ವ್ಯವಸ್ಥೆ ಇದೆ. ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿದ್ದರು ಹೊಸ ವಾಟ್ಸಾಪ್‌ ಪೇ ಸೇವೆ ಇನ್ನೂ ಜನಪ್ರಿಯತೆ ಪಡೆದುಕೊಂಡಿಲ್ಲ.

ಬಳಕೆದಾರರು ಎಚ್ಚರ ವಹಿಸಬೇಕಾದ ಸಂಗತಿಗಳು

ಬಳಕೆದಾರರು ಎಚ್ಚರ ವಹಿಸಬೇಕಾದ ಸಂಗತಿಗಳು

ಬಳಕೆದಾರರು ವಾಟ್ಸಾಪ್‌ ಪೇ, ಗೂಗಲ್ ಪೇ ಅಥವಾ ಫೋನ್‌ ಪೇ ಯಾವುದೇ ಅಪ್ಲಿಕೇಶನ್ ಬಳಸಿ ಹಣ ವರ್ಗಾವಣೆ ಮಾಡುವ ಮುನ್ನ ಎಚ್ಚರವಹಿಸಬೇಕು. ಆ ಬಗ್ಗೆ ಕೆಲವು ಅಂಶಗಳನ್ನು ಈ ಕೆಳಗೆ ತಿಳಿಸಲಾಗಿದೆ ಮುಂದೆ ಓದಿರಿ.
* ಹಣ ವರ್ಗಾವಣೆ ಆಗಾದಿದ್ದರೇ ಕೆಲ ಸಮಯ ಕಾಯಿರಿ
* ಕೆಲವರು ರಿಕ್ಷೆಸ್ಟ್‌ ಮನಿ ಕಳುಹಿಸುತ್ತಾರೆ. ಅದನ್ನು ಅಕ್ಸೆಪ್ಟ್‌ ಮಾಡಬೇಡಿ. ಆ ಬಗ್ಗೆ ಎಚ್ಚರವಾಗಿರಿ.
* ಕಸ್ಟಮರ್‌ ಕೇರ್‌ ವ್ಯವಸ್ಥೆ ಹೊಂದಿಲ್ಲ. ಹೀಗಾಗಿ ಗೂಗಲ್‌ನಲ್ಲಿ ಕಸ್ಟ್‌ಮರ್‌ ನಂಬರ್ ಸರ್ಚ್ ಮಾಡಬೇಡಿ.
* ಗೊಂದಲವಿದ್ದಲ್ಲಿ ನೇರವಾಗಿ ಬ್ಯಾಂಕ್‌ಗೆ ಭೇಟಿ ನೀಡಿ, ಸಮಸ್ಯೆ ಪರಿಹರಿಸಿಕೊಳ್ಳಿ.
* ಗೂಗಲ್‌ ಪೇ, ಫೋನ್‌ಪೇ, ವಾಟ್ಸಾಪ್‌ಪೇ ಗಳ ಹೆಸರಿನಲ್ಲಿ ಬರುವ ಯಾವುದೇ ಲಿಂಕ್‌ ಕ್ಲಿಕ್‌ ಮಾಡಬೇಡಿ.
* UPI ನಂಬರ್ ಶೇರ್‌ ಮಾಡಬೇಡಿ.

Best Mobiles in India

English summary
WhatsApp Pay offers only peer-to-peer and UPI payments, while Google Pay and PhonePe provide an entire set of digital payment options.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+