ಬಹುನಿರೀಕ್ಷಿತ 'ವಾಟ್ಸಪ್‌ ಪೇ' ಬಿಡುಗಡೆ ಖಚಿತ!..ಯಾವಾಗ ಗೊತ್ತೆ?

|

ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೆಜಿಂಗ್ ಆಪ್‌ 'ವಾಟ್ಸಪ್‌', UPI ಆಧಾರಿತ ಪೇಮೆಂಟ್‌ ಸೇವೆಯನ್ನು ಆರಂಭಿಸುತ್ತಿರುವುದು ಗೊತ್ತಿರುವ ಸಂಗತಿಯೇ ಆಗಿದೆ. ಆದರೆ ಯಾವಾಗ ಈ ಸೇವೆ ಬಳಕೆಗೆ ಬರಲಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿದಿತ್ತು. ಆದರೆ ಅದೆಲ್ಲದಕ್ಕೂ ಈಗ ಫುಲ್‌ಸ್ಟಾಪ್‌ ಹಾಕುವ ಸಮಯ ಬಂದಿದ್ದು, ವಾಟ್ಸಪ್‌ ಪೇ ಯಾವಾಗ ಬರಲಿದೆ ಎಂಬುದನ್ನು ಸಂಸ್ಥೆಯು ಗೊತ್ತು ಮಾಡಿದೆ.

ವಾಟ್ಸಪ್‌

ಹೌದು, ಜನಪ್ರಿಯ ವಾಟ್ಸಪ್‌ ಸಂಸ್ಥೆಯು ತನ್ನ ಬಹುನಿರೀಕ್ಷಿತ 'ವಾಟ್ಸಪ್ ಪೇ' ಸೇವೆಯನ್ನು ಜಾರಿಗೆ ತರಲು ಈಗಾಗಲೇ ಸಕಲ ರೀತಿ ಸಜ್ಜಾಗಿದ್ದು, ಈ ವರ್ಷದ (2019) ಅಂತ್ಯದ ವೇಳೆಗೆ ಬಿಡುಗಡೆ ಮಾಡುವ ನಿರ್ಧಾರ ಮಾಡಿದೆ. ಈ ಮೂಲಕ ದೇಶಿಯ UPI ಆಧಾರಿತ ಪೇಮೆಂಟ್‌ ಆಪ್‌ಗಳ ಲಿಸ್ಟಿಗೆ 'ವಾಟ್ಸಪ್‌ ಪೇ' ಸಹ ಸೇರಿಕೊಳ್ಳಲಿದೆ. ಹಾಗಾದರೇ ವಾಟ್ಸಪ್‌ ಪೇ ಪೇಮೆಂಟ್‌ ಸೇವೆಯ ಇನ್ನಷ್ಟು ಕುತೂಹಲಕರ ಮಾಹಿತಿಯನ್ನು ತಿಳಿಯಲು ಮುಂದೆ ಓದಿರಿ.

ಡಿಜಿಟಲ್ ಪೇಮೆಂಟ್

ಡಿಜಿಟಲ್ ಪೇಮೆಂಟ್

ಸದ್ಯ ಭಾರತದಲ್ಲಿ ಕ್ಯಾಶ್‌ಲೆಸ್‌ ವ್ಯವಹಾರ ಬಳಕೆ ಕ್ರಮೇಣ ವೃದ್ಧಿಯಾಗುತ್ತಿದ್ದು, ಹೀಗಾಗಿ ಇ-ಪೇಮೆಂಟ್ ಆಪ್ಸ್‌ಗಳ ಬೇಡಿಕೆ ಸಹ ದ್ವಿಗುಣಗೊಳ್ಳುತ್ತಲೇ ಸಾಗಿದೆ. ಸಂಶೋಧನೆಯೊಂದರ ಪ್ರಕಾರ 2023ರಲ್ಲಿ ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಬಳಕೆಯ ಪ್ರಮಾಣ 1 ಟ್ರಿಲಿಯನ್‌ ಗಡಿ ದಾಟಲಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ವಾಟ್ಸಪ್ ಸಹ ನೂತನವಾಗಿ 'ವಾಟ್ಸಪ್‌ ಪೇ'‌ ಅನ್ನು ಆರಂಭಿಸಲು ಮುಂದಾಗಿದೆ.

UPI ಆಪ್‌ಗಳ ಪೈಪೋಟಿ

UPI ಆಪ್‌ಗಳ ಪೈಪೋಟಿ

ಭಾರತದಲ್ಲಿ ಈಗಾಗಲೇ ಹಲವು ಡಿಜಿಟಲ್ UPI ಪೇಮೆಂಟ್ ಆಪ್ಸ್‌ಗಳು ಲಗ್ಗೆ ಇಟ್ಟಿದ್ದು, ಎಲ್ಲ ಆಪ್‌ಗಳು ಬಳಕೆದಾರರಿಗೆ ಅತ್ಯುತ್ತಮ ಫೀಚರ್ಸ್‌ಗಳನ್ನು ನೀಡಿವೆ. ಅವುಗಳಲ್ಲಿ ಗೂಗಲ್ ಪೇ, ಫೋನ್‌ಪೇ, ಪೇಟಿಎಮ್, ಅಮೆಜಾನ್ ಪೇ, ಭಾರತ್ ಪೇ, ಆಪ್‌ಗಳು ಭಾರಿ ಜನಪ್ರಿಯತೆ ಪಡೆದುಕೊಂಡಿವೆ. ಇದೀಗ 'ವಾಟ್ಸಪ್ ಪೇ' ಇವುಗಳೊಂದಿಗೆ ನೇರ ಪೈಪೋಟಿ ನಡೆಸಲಿದೆ.

ಡಿಜಿಟಲ್ ಪೇಮೆಂಟ್‌ಗೆ ಉತ್ತೇಜನ

ಡಿಜಿಟಲ್ ಪೇಮೆಂಟ್‌ಗೆ ಉತ್ತೇಜನ

ವಾಟ್ಸಪ್‌ ಪೇ ಸೇವೆಯನ್ನು ಹೆಚ್ಚಾಗಿ 3ಲಕ್ಷದಿಂದ ಸುಮಾರು 75ಕೋಟಿ ವಾರ್ಷಿಕ ವಹಿವಾಟು ನಡೆಸುವ ಸಣ್ಣ, ಮಧ್ಯಮ ಮತ್ತು ಎಂಟರ್ಪ್ರೈಸ್ ಬ್ಯುಸಿನೆಸ್‌ ಮಾಲೀಕರು ಬಳಸಲು ಮುಂದಾಗುತ್ತಾರೆ. ಜೊತೆಗೆ ವಾಟ್ಸಪ್ ಸಂಸ್ಥೆಯು ಉದ್ಯಮಗಳಿಗೆ ವಾಟ್ಸಪ್‌ ಪೇ ಬಳಕೆ ಮಾಡಲು ಉತ್ತೇಜನ ನೀಡಲು ಹೆಚ್ಚಿನ ಸವಲತ್ತುಗಳನ್ನು ಮಾಡಿಕೊಡಲಿದೆ ಎನ್ನಲಾಗಿದೆ.

ಓದಿರಿ : ಏರ್‌ಟೆಲ್‌ನ ಈ ಹೊಸ ಸೆಟ್‌ಅಪ್‌ ಬಾಕ್ಸ್‌ ಬಗ್ಗೆ ತಿಳಿದ್ರೆ, 'ಜಿಯೋ' ಬೇಡ ಅಂತಿರಿ!ಓದಿರಿ : ಏರ್‌ಟೆಲ್‌ನ ಈ ಹೊಸ ಸೆಟ್‌ಅಪ್‌ ಬಾಕ್ಸ್‌ ಬಗ್ಗೆ ತಿಳಿದ್ರೆ, 'ಜಿಯೋ' ಬೇಡ ಅಂತಿರಿ!

'ವಾಟ್ಸಪ್‌ ಪೇ' ಜನಪ್ರಿಯತೆ

'ವಾಟ್ಸಪ್‌ ಪೇ' ಜನಪ್ರಿಯತೆ

ಪ್ರಸ್ತುತ ಸ್ಮಾರ್ಟ್‌ಫೋನ್‌ ಮೂಲಕವೇ ಹಣ ಪಾವತಿಸುವ ಪ್ರಕ್ರಿಯೆ ವ್ಯಾಪಕವಾಗಿದ್ದು, ಹೀಗಾಗಿ ವಾಟ್ಸಪ್ UPI ಆಧಾರಿತ ಪೇಮೆಂಟ್ ಸೇವೆ ಆರಂಭಿಸಲು ಯೋಜಿಸಿದೆ. ಅಷ್ಟಕ್ಕೂ ವಾಟ್ಸಪ್ ಪ್ರತಿದಿನ ಸುಮಾರು 300 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಹೀಗಾಗಿ 'ವಾಟ್ಸಪ್‌ ಪೇ' ಬಹುಬೇಗನೆ ಜನಪ್ರಿಯವಾಗಲಿದೆ ಎನ್ನುವ ವಿಶ್ವಾಸವನ್ನು ವಾಟ್ಸಪ್ ಹೊಂದಿದೆ.

ತಡವಾಗಿದ್ದು ಏಕೆ

ತಡವಾಗಿದ್ದು ಏಕೆ

ಕಳೆದ ವರ್ಷದಿಂದ ಸುಮಾರು ಒಂದು ಮಿಲಿಯನ್ ಬಳಕೆದಾರಿಗೆ ವಾಟ್ಸಪ್‌ ಪೇ ಅನ್ನು ಪ್ರಾಯೋಗಿಕವಾಗಿ ಟೆಸ್ಟಿಂಗ್ ಮಾಡಲಾಗಿದ್ದು, ಭಾರತ ಸರ್ಕಾರದ ಕೇಲವು ನಿಯಂತ್ರಕ ಮಾನದಂಡಗಳನ್ನು ಪಾಲಿಸುವಲ್ಲಿ ತಡವಾಗಿದೆ. ಆದ್ರೆ ಇದೀಗ ಕಂಪನಿಯು ಎಲ್ಲ ನಿಯಂತ್ರಕ ಮಾನದಂಡಗಳನ್ನು ಪೂರೈಸುವ ಹಂತದಲ್ಲಿದ್ದು, ಹಾಗೆಯೇ ಪ್ರಾಯೋಗಿಕ ಹಂತಗಳನ್ನು ಮುಗಿಸಿದೆ ಎನ್ನಲಾಗಿದೆ. ಹೀಗಾಗಿ ಈ ವರ್ಷದ ಅಂತ್ಯದಲ್ಲಿ ವಾಟ್ಸಪ್ ಪೇ ಭಾರತದ ಗ್ರಾಹಕರಿಗೆ ದೊರೆಯಲಿದೆ ಎನ್ನಲಾಗಿದೆ.

ಓದಿರಿ : ಜನಪ್ರಿಯ ನೋಕಿಯಾ ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ!ಓದಿರಿ : ಜನಪ್ರಿಯ ನೋಕಿಯಾ ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ!

Best Mobiles in India

English summary
WhatsApp India has revealed that it is planning to launch the much-anticipated payment service by the end of the year. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X