ವೈರಲ್‌ ಮೆಸೆಜ್‌ಗಳ ನಿಯಂತ್ರಣಕ್ಕೆ ವಾಟ್ಸಪ್‌ನಿಂದ ಲಕ್ಷ್ಮಣರೇಖೆ!

|

ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಪ್‌ ಈಗಾಗಲೇ ತನ್ನ ಬಳಕೆದಾರರ ಖಾಸಗಿ ಮಾಹಿತಿ ರಕ್ಷಣೆಗಾಗಿ ಹಲವು ಸುರಕ್ಷತಾ ಕ್ರಮಗಳನ್ನು ಅಳವಡಿಸಿದೆ. ಇತ್ತೀಚಿಗೆ ಫಿಂಗರ್‌ಪ್ರಿಂಟ್ ಲಾಕ್‌ ಸೌಲಭ್ಯವನ್ನು ಪರಿಚಯಿಸಿರುವ ಸಂಸ್ಥೆಯು ತಪ್ಪು ಮಾಹಿತಿಯ ಮೆಸೆಜ್‌ಗಳು ಹರಡುವುದಕ್ಕೆ ಬ್ರೇಕ್ ಹಾಕಲು ಕ್ರಮಗಳನ್ನು ತೆಗೆದುಕೊಂಡಿದೆ. ಅದೇ ರೀತಿ ಇದೀಗ ವಾಟ್ಸಪ್‌ ಮತ್ತೊಂದು ಮಹತ್ವದ ಬದಲಾವಣೆಯ ನಿರ್ಧಾರ ಮಾಡಿದೆ.

ಇನ್‌ಸ್ಟಂಟ್‌ ಮೆಸೆಜಿಂಗ್ ವಾಟ್ಸಪ್

ಹೌದು, ಜನಪ್ರಿಯ ಇನ್‌ಸ್ಟಂಟ್‌ ಮೆಸೆಜಿಂಗ್ ವಾಟ್ಸಪ್ ಈಗ ಕೋವಿಡ್ -19 ಬಗ್ಗೆ ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ವಾಟ್ಸಾಪ್ ಹೆಚ್ಚಾಗಿ ಫಾರ್ವರ್ಡ್ ಮಾಡಲಾಗಿರುವ ಮೆಸೆಜ್‌ಗಳ ಫಾರ್ವರ್ಡ್‌ಗೆ ಮಿತಿ ನಿಗದಿಪಡಿಸಿದೆ. ಹೀಗಾಗಿ ಒಂದು ಮೆಸೆಜ್‌ ಅನ್ನು ಐದು ಬಾರಿ ಅಥವಾ ಅದಕ್ಕಿಂತಲೂ ಹೆಚ್ಚು ಬಾರಿ ಶೇರ್ ಮಾಡಲು ಸಾಧ್ಯವಾಗುವುದಿಲ್ಲ. ಹಾಗೆಯೇ ವಾಟ್ಸಪ್‌ನಲ್ಲಿ ಫಾರ್ವರ್ಡ್‌ ಮೆಸೆಜ್ ವೈರಿಫೈ ಮಾಡುವ ಫೀಚರ ಚಾಲ್ತಿಯಲ್ಲಿದೆ.

ಲಕ್ಷ್ಮಣ ರೇಖೆ ಎಳೆದ ವಾಟ್ಸಪ್

ಲಕ್ಷ್ಮಣ ರೇಖೆ ಎಳೆದ ವಾಟ್ಸಪ್

ಸದ್ಯ ಕೊರೊನಾ ವೈರಸ್‌ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು, ಭಾರತದಲ್ಲಿಯು ತನ್ನ ಕರಾಳ ಮುಖವನ್ನು ಪರಿಚಯಿಸುತ್ತಿದೆ. ಹೀಗಾಗಿ ಈಗ ಎಲ್ಲೆಲ್ಲೂ ಕೊರೊನಾ ವೈರಾಣು ಕುರಿತಾಗಿಯೇ ಸುದ್ದಿ. ಆದರೆ ಸಾಮಾಜಿಕ ತಾಣಗಳಲ್ಲಿ ನಕಲಿ ಸುದ್ದಿಗಳು ಹರಿದಾಡುತ್ತಿವೆ. ಕೊರೊನಾ ಬಗೆಗಿನ ನಕಲಿ ಸುದ್ದಿಗಳ ಹರಿದಾಟಕ್ಕೆ ಲಕ್ಷ್ಮಣರೇಖೆ ಹಾಕುವ ಪ್ರಯತ್ನಕ್ಕೆ ವಾಟ್ಸಪ್ ಮುಂದಾಗಿದೆ.

ಮೆಸೆಜ್‌ ಫಾರ್ವರ್ಡ್‌ಗೆ ಬ್ರೇಕ್

ಮೆಸೆಜ್‌ ಫಾರ್ವರ್ಡ್‌ಗೆ ಬ್ರೇಕ್

ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕ ನಕಲಿ/ತಪ್ಪು ಮಾಹಿತಿಯ ಫಾರ್ವರ್ಡ್ ಮೆಸೆಜ್‌ಗಳು ಮೇಲಿಂದ ಮೇಲೆ ಒಬ್ಬರಿಂದ ಇನ್ನೊಬ್ಬರಿಗೆ ಶೇರ್ ಆಗುತ್ತಲೆ ಇರುತ್ತವೆ. ತಪ್ಪು ಮಾಹಿತಿ ಈ ರೀತಿಯ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ವಾಟ್ಸಾಪ್ ಹೊಸ ಫೀಚರ್ ಪರಿಚಯಿಸಿದೆ. ಈ ಫೀಚರನಲ್ಲಿ ಅತೀ ಹೆಚ್ಚು ಫಾರ್ವರ್ಡ್‌ ಆಗಿರುವ ಮೆಸೆಜ್‌ ಅನ್ನು ಒಂದು ಬಾರಿ ಒಂದು ಚಾಟ್‌ಗೆ ಮಾತ್ರ ಫಾರ್ವರ್ಡ್‌ವುದಕ್ಕೆ ಮಾತ್ರ ಅವಕಾಶ ಲಭ್ಯವಾಗಲಿದೆ.

ಐದಕ್ಕಿಂತ ಹೆಚ್ಚು ಫಾರ್ವರ್ಡ್ ಇಲ್ಲ

ಐದಕ್ಕಿಂತ ಹೆಚ್ಚು ಫಾರ್ವರ್ಡ್ ಇಲ್ಲ

ವಾಟ್ಸಾಪ್ ಈಗಾಗಲೇ ಹೆಚ್ಚು ಫಾರ್ವರ್ಡ್‌ ಆಗಿರುವ ಮೆಸೆಜ್‌ಗಳು ಹೆಚ್ಚು ಶೇರ್‌ ಆಗದಂತೆ ತಡೆಯಲು 5 ನಂಬರ್‌ಗೆ ಮಾತ್ರ ಫಾರ್ವರ್ಡ್‌ ಮಾಡುವ ಆಯ್ಕೆ ಪರಿಚಯಿಸಿತ್ತು. ಈ ಫೀಚರ್ ನಿಂದ ಈಗಾಗಲೇ 25% ರಷ್ಟು ಫೇಕ್‌ ಮೆಸೆಜ್‌ಗಳು ಹೆಚ್ಚು ಶೇರ್ ಆಗುವುದಕ್ಕೆ ತಡೆ ಆಗಿದೆ ಎಂದು ವಾಟ್ಸಪ್ ಹೇಳಿದೆ. ಅದೇ ರೀತಿ ಹೊಸ ಫೀಚರ್ ಕೆಲಸ ಮಾಡಲಿದೆ. ಮೆಸೆಜ್‌ಗಳಲ್ಲಿ ಡಬಲ್‌ ಟಿಕ್ ಮಾರ್ಕ್‌ ಕಂಡರೇ ಆ ಮೆಸೆಜ್ ಹೆಚ್ಚು ಫಾರ್ವರ್ಡ್‌ ಆಗಿರುವ ಮೆಸೆಜ್ ಆಗಿರುತ್ತದೆ.

ಮಾಹಿತಿ ಪರಿಶೀಲಿಸುವ ಆಯ್ಕೆ

ಮಾಹಿತಿ ಪರಿಶೀಲಿಸುವ ಆಯ್ಕೆ

ಸುರಕ್ಷತೆಯಡೆಗೆ ವಾಟ್ಸಪ್ನಿಂದ ಮತ್ತೊಂದು ಹೊಸ ಹೆಜ್ಜೆ. ಮೆಸೆಜ್ ಮಾಹಿತಿ ಪರಿಶೀಲಿಸುವ ಆಯ್ಕೆಯನ್ನು ವಾಟ್ಸಪ್‌ ಪರಿಚಯಿಸಿದ್ದು, ಬಳಕೆದಾರರು ತಮಗೆ ಬಂದಿರುವ ಮೆಸೆಜ್‌ನ ಸತ್ಯ ಸತ್ಯೆತೆಯನ್ನು ತಿಳಿಯಲು ವೆಬ್‌ನಲ್ಲಿ ಆ ಮಾಹಿತಿ ಸರ್ಚ್ ಮಾಡುವ ಆಯ್ಕೆಯನ್ನು ಪರಿಚಯಿಸಿದೆ. ಆದರೆ ಸದ್ಯ ಈ ಫೀಚರ್ ಇನ್ನು ವಾಟ್ಸಪ್ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಸಾಮಾನ್ಯ ಆವೃತ್ತಿಗೂ ಲಭ್ಯವಾಗಲಿದೆ.

Most Read Articles
Best Mobiles in India

English summary
WhatsApp has reduced the limit on frequently forwarded messages to help slow down misinformation on Covid-19.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X