WhatsApp ನ ಈ ಫೀಚರ್ಸ್ ಬಗ್ಗೆ ತಿಳಿದ್ರೆ ವಾವ್ ಅಂತೀರಾ...ಎಲ್ಲರಿಗೂ ಉಪಯುಕ್ತ!
ವಾಟ್ಸಾಪ್ (Whatsapp) ಬಳಕೆದಾರರು ಆಗಾಗ್ಗೆ ಹೊಸ ಹೊಸ ಸೌಲಭ್ಯದ ಮೂಲಕ ಹೊಸ ಅನುಭವ ಪಡೆಯುವುದು ಸಾಮಾನ್ಯ. ಆದರೆ, ಈಗ ಮಾತ್ರ ಅಸಾಮಾನ್ಯ ಫೀಚರ್ಸ್‌ವೊಂದು ವಾಟ್ಸಾಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಮೂಲಕ ಬಳಕೆದಾರರು ಕ್ಷಣ ಮಾತ್ರದಲ್ಲಿ ಅಗತ್ಯ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಹೌದು, ವಾಟ್ಸಾಪ್‌ನಲ್ಲಿ ಈಗಾಗಲೇ ವಿವಿಧ ರೀತಿಯ ಸಾಕಷ್ಟು ಫೀಚರ್ಸ್ ಬಳಕೆದಾರರಿಗೆ ಲಭ್ಯ ಇದೆ. ಅದರಲ್ಲೂ ಇತ್ತೀಚಿಗೆ ಘೋಷಣೆ ಮಾಡಲಾದ ಸ್ಕ್ರೀನ್ ಶೇರಿಂಗ್ ಫೀಚರ್ಸ್, ಎಡಿಟ್ ಮೆಸೆಜ್, ಶೇರಿಂಗ್ ಹೈ ಕ್ವಾಲಿಟಿ ಇಮೇಜ್ ಹಾಗೂ ವಾಯ್ಸ ಸ್ಟೇಟಸ್ ಸೇರಿದಂತೆ ಅನೇಕ ಹೊಸ ಫೀಚರ್ಸ್‌ಗಳು ವಾಟ್ಸಾಪ್ ಅನ್ನು ಇನ್ನಷ್ಟು ಹೆಚ್ಚಿನ ಸಮಯ ಬಳಕೆ ಮಾಡುವಂತೆ ಮಾಡಿವೆ. ಇದರೊಂದಿಗೆ ಈಗ ಕ್ಯೂಆರ್ ಕೋಡ್ ಮೂಲಕ ಸದ್ದು ಮಾಡಲು ಸಜ್ಜಾಗಿದೆ.

ವಾಟ್ಸಾಪ್‌ನಲ್ಲಿ ಕ್ಯೂಆರ್ ಕೋಡ್ ಫೀಚರ್ಸ್: ಇನ್ಮುಂದೆ ನಿಮ್ಮ ವಿವರಗಳನ್ನು ಶೇರ್ ಮಾಡಿಕೊಳ್ಳಲು ಅಥವಾ ನಿಮ್ಮ ಸಂಪರ್ಕ ಪಟ್ಟಿಗೆ ಜನರನ್ನು ಸೇರಿಸಲು ವಾಟ್ಸಾಪ್‌ನ ಕ್ಯೂ ಆರ್ ಕೋಡ್ ಫೀಚರ್ಸ್ (WhatsApp QR Code Features) ಬಳಕೆ ಮಾಡಬಹುದಾಗಿದೆ. ಈ ಮೂಲಕ ನೇರವಾಗಿ ಯಾರಿಗಾದರೂ ಫೋನ್ ಸಂಖ್ಯೆಯನ್ನು ಶೇರ್ ಮಾಡುವುದು ತಪ್ಪಲಿದ್ದು, ಇದು ಹಲವಾರು ಜನರಿಗೆ ಅದರಲ್ಲೂ ಮಹಿಳೆಯರಿಗೆ ಸಾಕಷ್ಟು ಅನುಕೂಲ ಆಗಲಿದೆ.
ಅದರಲ್ಲೂ ನಿಮ್ಮ ಸಂಪರ್ಕ ಪಟ್ಟಿಗೆ ಜನರನ್ನು ಹಸ್ತಚಾಲಿತವಾಗಿ (manually)ಸೇರಿಸುವ ತೊಂದರೆಯನ್ನು ತಪ್ಪಿಸಲು ಮುಂದಾದರೆ ಈ ಕ್ಯೂಆರ್ ಕೋಡ್ ಫೀಚರ್ಸ್ ಬಳಕೆ ಮಾಡಬಹುದು. ಹಾಗಿದ್ರೆ ಈ ಫೀಚರ್ಸ್ ಅನ್ನು ಹೇಗೆ ಬಳಕೆ ಮಾಡುವುದು ಎಂಬುದನ್ನು ಕೆಲವು ಸರಳ ಮಾರ್ಗಗಳ ಮೂಲಕ ತಿಳಿಸಿಕೊಡಲಾಗಿದೆ ಇಲ್ಲಿ ಗಮನಿಸಿ
- ಮೊದಲು ನಿಮ್ಮ ವಾಟ್ಸಾಪ್ ಕ್ಯೂಆರ್ ಕೋಡ್ ಅನ್ನು ಸರ್ಚ್ ಮಾಡಲು ನಿಮ್ಮ ಫೋನ್‌ನಲ್ಲಿ ಆಪ್ ಓಪನ್ ಆಡಿ ಮತ್ತು ಡಿಸ್‌ಪ್ಲೇ ಮೇಲಿನ ಬಲಭಾಗದಲ್ಲಿರುವ ಮೂರು-ಡಾಟ್ ಮೆನುವಿನಲ್ಲಿ ಟ್ಯಾಪ್ ಮಾಡಿ.
- ಇದಾದ ನಂತರದಲ್ಲಿ ಡ್ರಾಪ್-ಡೌನ್ ಮೆನುವಿನಿಂದ, 'ಸೆಟ್ಟಿಂಗ್ಸ್' ಎಂಬ ಆಯ್ಕೆ ಕಾಣಿಸಿಕೊಳ್ಳಲಿದ್ದು, ಅದರ ಮೇಲೆ ಟ್ಯಾಪ್ ಮಾಡಿ ಇದಾದ ಬಳಿಕ ಹೊಸ ಪೇಜ್ ಕಾಣಿಸಿಕೊಳ್ಳುತ್ತದೆ.
- ನಂತರದಲ್ಲಿ ನಿಮ್ಮ ಪ್ರೊಫೈಲ್ ಚಿತ್ರದ ಬಲಭಾಗದಲ್ಲಿ ಕ್ಯೂಆರ್ ಕೋಡ್ ಐಕಾನ್ ಮೇಲೆ ಟ್ಯಾಪ್ ಮಾಡಿದ್ರೆ 'ನನ್ನ ಕೋಡ್' ವಿಭಾಗದ ಅಡಿಯಲ್ಲಿ ಇದನ್ನು ನೀವು ನೋಡಲು ಸಾಧ್ಯ ಆಗುತ್ತದೆ.
- ಈ ಕೆಲಸ ಮಾಡಿದ ನಂತರ ಬಳಕೆದಾರರು ತಮ್ಮ ಕ್ಯಾಮರಾವನ್ನು ಬಳಸಿಕೊಂಡು ರಚಿಸಲಾದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು ಅಥವಾ ಮೇಲಿನ ಬಲಭಾಗದಲ್ಲಿರುವ 'ಶೇರ್' ಬಟನ್ ಅನ್ನು ಬಳಸಿಕೊಂಡು ನೀವು ಅದನ್ನು ಸುಲಭವಾಗಿ ಇತರರಿಗೆ ಕಳುಹಿಸಬಹುದು.
ಇನ್ನು ವಿಭಾಗದಲ್ಲಿ ನಿಮ್ಮ ಕ್ಯೂಆರ್ ಕೋಡ್ ಖಾಸಗಿಯಾಗಿರಲಿದೆ. ಆದರೆ ಅದನ್ನು ಯಾರಾದರೂ ಸ್ಕ್ಯಾನ್ ಮಾಡಬಹುದು ಮತ್ತು ನಿಮಗೆ ಮೆಸೆಜ್ ಅನ್ನು ಕಳುಹಿಸಬಹುದು. ನೀವು ಅದನ್ನು ಮರುಹೊಂದಿಸಲು ಬಯಸಿದರೆ, ಅದೇ ವಿಭಾಗದಿಂದ ಮೂರು-ಡಾಟ್ ಮೆನುವನ್ನು ಒತ್ತಿರಿ ಮತ್ತು 'ಕ್ಯೂಆರ್ ಕೋಡ್ ಮರುಹೊಂದಿಸಿ' ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಇನ್ನು ವಾಟ್ಸಾಪ್ ಹೊಸ ಬಹು-ಖಾತೆ ಫೀಚರ್ಸ್ ಅನ್ನು ಪರೀಕ್ಷಿಸುತ್ತಿದೆ, ಇದು ದೀರ್ಘಾವಧಿಯ ಬಳಕೆದಾರರ ವಿನಂತಿಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದ್ದು, ಸಮಾನಾಂತರ ಅಥವಾ ಕ್ಲೋನ್ ಮಾಡಿದ ಆಪ್‌ಗಳ ಅಗತ್ಯವಿಲ್ಲದೇ ಅದೇ ಡಿವೈಸ್‌ಗೆ ಬೇರೆ ಖಾತೆಯನ್ನು ಸೇರಿಸಲು ಅವರಿಗೆ ಅವಕಾಶ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಈ ಮೂಲಕ ಮರುವಿನ್ಯಾಸಗೊಳಿಸಲಾದ ಸೆಟ್ಟಿಂಗ್‌ಗಳ ಇಂಟರ್ಫೇಸ್ ಅನ್ನು ಸಹ ಅನಾವರಣಗೊಳಿಸುತ್ತಿದೆ.

ಅಷ್ಟೇ ಅಲ್ಲದೆ ವಾಟ್ಸಾಪ್ ವಿಭಿನ್ನ ಖಾತೆಗಳಿಂದ ಮೆಸೆಜ್‌ಗಳು ಮತ್ತು ನೋಟಿಫಿಕೇಶನ್ ಅನ್ನು ಪ್ರತ್ಯೇಕವಾಗಿ ಇರಿಸುವ ಕಾರ್ಯವನ್ನು ಸಹ ಸರಳಗೊಳಿಸುತ್ತದೆ. ಪ್ರಸ್ತುತ, ನಿಮ್ಮ ವಾಟ್ಸಾಪ್ ಅಪ್ಲಿಕೇಶನ್‌ಗೆ ನೀವು ಕೇವಲ ಒಂದು ಹೆಚ್ಚುವರಿ ಖಾತೆಯನ್ನು ಮಾತ್ರ ಸೇರಿಸಬಹುದು, ಆದರೆ ಭವಿಷ್ಯದ ನವೀಕರಣದಲ್ಲಿ ಈ ಮಿತಿಯನ್ನು ವಿಸ್ತರಿಸಬಹುದು ಎಂದು ಹೇಳಲಾಗಿದೆ.


Click it and Unblock the Notifications








