Home
ಸುದ್ದಿಜಾಲ

ಕೆಲವೇ ದಿನಗಳಲ್ಲಿ ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌; ಗ್ರೂಪ್‌ ಅಡ್ಮಿನ್‌ಗಳಿಗೆ ಹೆಚ್ಚಿನ ಜವಾಬ್ದಾರಿ!

ವಾಟ್ಸಾಪ್‌ ತನ್ನ ಬಳಕೆದಾರರಿಗೆ ವಿಭಿನ್ನವಾದ ಸೇವೆ ನೀಡುವ ಉದ್ದೇಶದಿಂದ ಹೊಸ ರೀತಿಯ ಫೀಚರ್ಸ್‌ಗಳನ್ನು ಪರಿಚಯಿಸಿಕೊಂಡು ಬರತ್ತಿದ್ದು, ಈ ಹೊಸ ಫೀಚರ್ಸ್‌ಗಳ ಸಾಲಿಗೆ ಮತ್ತೊಂದು ಫೀಚರ್ಸ್‌ ಸೇರ್ಪಡೆ ಆಗಲಿದ್ದು, ಇದು ಗ್ರೂಪ್‌ ಅಡ್ಮಿನ್‌ಗಳಿಗೆ ಸಾಕಷ್ಟು ಪ್ರಯೋಜನ ನೀಡಲಿದೆ.

ಹೌದು, ಗ್ರೂಪ್‌ ವಿಭಾಗದಲ್ಲಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಲು ಮುಂದಾಗಿರುವ ವಾಟ್ಸಾಪ್‌, ಈ ಮೂಲಕ ಗ್ರೂಪ್‌ ಅಡ್ಮಿನ್‌ಗಳಿಗೆ ಹೆಚ್ಚಿನ ಕಂಟ್ರೋಲ್‌ ಆಯ್ಕೆಯನ್ನು ನೀಡಲು ಮುಂದಾಗಿದೆ. ಹೀಗಾಗಿ ಗ್ರೂಪ್‌ನಲ್ಲಿ ಆಗುವ ಅನಾನುಕೂಲತೆ ಅಥವಾ ಅನವಶ್ಯಕ ವ್ಯಕ್ತಿಗಳ ಎಂಟ್ರಿಯಿಂದ ಆಗುವ ಇರುಸುಮುರುಸನ್ನು ತಡೆಗಟ್ಟಬಹುದಾಗಿದೆ. ಹಾಗಿದ್ರೆ, ಏನಿದು ಹೊಸ ಫೀಚರ್ಸ್‌?, ಎಂದಿನಿಂದ ಬಳಕೆದಾರರಿಗೆ ಲಭ್ಯ? ಇದರಿಂದ ಆಗುವ ಇತರೆ ಅನುಕೂಲಗಳು ಏನು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌; ಗ್ರೂಪ್‌ ಅಡ್ಮಿನ್‌ಗಳಿಗೆ ಹೆಚ್ಚಿನ ಜವಾಬ್ದಾರಿ!

ವಾಟ್ಸಾಪ್‌ ಗ್ರೂಪ್‌ಗೆ ಹೊಸ ಫೀಚರ್ಸ್‌

ವಾಟ್ಸಾಪ್‌ನಲ್ಲಿ ಇರುವ ಹಲವಾರು ಗ್ರೂಪ್‌ಗಳು ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಅನುಕೂಲ ಒದಗಿಸುತ್ತವೆ. ಅದರಂತೆ ಗ್ರೂಪ್‌ಗೆ ಸೇರಲು ಬಯಸುವ ಜನರಿಂದ ವಿನಂತಿಗಳನ್ನು ಹಸ್ತಚಾಲಿತವಾಗಿ ಸ್ವೀಕರಿಸಲು ಅಥವಾ ತಿರಸ್ಕರಿಸಲು ಗ್ರೂಪ್‌ ಅಡ್ಮಿನ್‌ಗಳಿಗೆ ಅನುಮತಿಸುವ ವ್ಯವಸ್ಥೆಯನ್ನು ವಾಟ್ಸಾಪ್‌ ಹೊರತರುತ್ತಿದೆ. ಇದಕ್ಕೆ ಹೊಸ ಸದಸ್ಯರನ್ನು ಅನುಮತಿಸು(Approve New Participants) ಎಂಬ ಹೆಸರಿಡಲಾಗಿದೆ. ಈ ಬಗ್ಗೆ WABetaInfo ಈ ವಿಷಯದ ಬಗ್ಗೆ ವರದಿ ಮಾಡಿದ್ದು, ಇದರಿಂದ ಗ್ರೂಪ್‌ಗಳಲ್ಲಿನ ಅಡ್ಮಿನ್‌ಗಳಿಗೆ ಹೆಚ್ಚಿನ ಕಂಟ್ರೋಲ್‌ ಸಿಕ್ಕಿದಂತೆ ಆಗಿದೆ.

ಇದರಿಂದ ಯಾರಿಗೆಲ್ಲಾ ಅನುಕೂಲ?

ಮೊದಲೇ ತಿಳಿಸಿದಂತೆ ಈ ವಿಶೇಷ ಸೌಲಭ್ಯವು ವಾಟ್ಸಾಪ್‌ನ ಗ್ರೂಪ್‌ ಅಡ್ಮಿನ್‌ಗಳಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ. ಯಾಕೆಂದರೆ ತಾವು ಕ್ರಿಯೇಟ್‌ ಮಾಡಲಾಗುವ ಗ್ರೂಪ್‌ಗೆ ಯಾರು ಸೇರಬೇಕು?, ಯಾರು ಸೇರಬಾರದು? ಎಂದು ಕಂಟ್ರೋಲ್‌ ಮಾಡುವ ಅಧಿಕಾರ ಪಡೆದುಕೊಳ್ಳಬಹುದು. ಹಾಗೆಯೇ ಲಿಂಕ್‌ ಮೂಲಕ ಗ್ರೂಪ್‌ಗೆ ಎಂಟ್ರಿಯಾಗುವವರನ್ನು ಗ್ರೂಪ್‌ ಒಳಗೆ ಸೇರಿಸಿಕೊಳ್ಳಬೇಕೆ? ಅಥವಾ ಅವರ ಅನುಮೋದನೆಯನ್ನು ತಿರಸ್ಕರಿಸಬೇಕೆ? ಎಂಬ ಸರಳ ಮಾರ್ಗಗಳು ಇದರಿಂದ ಸಿಗಲಿದೆ.

ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌; ಗ್ರೂಪ್‌ ಅಡ್ಮಿನ್‌ಗಳಿಗೆ ಹೆಚ್ಚಿನ ಜವಾಬ್ದಾರಿ!

ಯಾಕಾಗಿ ವಾಟ್ಸಾಪ್‌ ಈ ಫೀಚರ್ಸ್‌ ಪರಿಚಯಿತ್ತಿದೆ?

ವಾಟ್ಸಾಪ್‌ತಾನು ಪರಿಚಯಿಸುತ್ತಿರುವ ಯಾವುದೇ ಹೊಸ ಫೀಚರ್ಸ್‌ಗಳ ಹಿಂದೆ ಬಳಕೆದಾರರಿಗೆ ಅನುಕೂಲ ಆಗುವ ಅದೆಷ್ಟೋ ಪ್ರಯೋಜನಗಳು ಇರುತ್ತವೆ. ಅದರಂತೆ ಈಗ ಪರಿಚಯಿಸಲು ಮುಂದಾಗಿರುವ ಫೀಚರ್ಸ್‌ನಿಂದಾಗಿ ಯಾರೆಲ್ಲಾ ಹೆಚ್ಚು ಸದಸ್ಯರು ಇರುವ ಹಾಗೂ ಹೆಚ್ಚು ಗ್ರೂಪ್‌ಗಳನ್ನು ಕಂಟ್ರೋಲ್‌ ಮಾಡುತ್ತಿರುತ್ತಾರೋ ಅವರಿಗೆ ಸಾಕಷ್ಟು ಅನುಕೂಲ ಮಾಡಿಕೊಡುತ್ತದೆ. ಈ ಮೂಲಕ ಅನವಶ್ಯಕ ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳಬಹುದಾಗಿದೆ.

ಯಾವ ಡಿವೈಸ್‌ ಬಳಕೆದಾರರಿಗೆ ಲಭ್ಯ?

ಈ ಹೊಸ ಫೀಚರ್ಸ್‌ ಅನ್ನು ಐಓಎಸ್‌ ಹಾಗೂ ಆಂಡ್ರಾಯ್ಡ್‌ ಡಿವೈಸ್‌ನ ಬೀಟಾ ಆವೃತ್ತಿ ಮೂಲಕ ಪರೀಕ್ಷಿಸಲು ಮುಂದಾಗಿದೆ. ಆದರೆ, ಎಂದಿನಿಂದ ಈ ಸೇವೆ ಬಳಕೆದಾರರಿಗೆ ಲಭ್ಯ?, ಮೊದಲು ಐಓಎಸ್‌ಗೆ ನೀಡಲಾಗುತ್ತದೆಯೋ ಅಥವಾ ಆಂಡ್ರಾಯ್ಡ್‌ ಡಿವೈಸ್‌ಗಳಿಗೆ ನೀಡಲಾಗುತ್ತದೆಯೋ ಎಂಬ ಬಗ್ಗೆ ವಾಟ್ಸಾಪ್‌ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಅದಾಗ್ಯೂ ಕೆಲವೇ ದಿನಗಳಲ್ಲಿ ವಾಟ್ಸಾಪ್‌ ಈ ಫೀಚರ್ಸ್‌ ಅನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌; ಗ್ರೂಪ್‌ ಅಡ್ಮಿನ್‌ಗಳಿಗೆ ಹೆಚ್ಚಿನ ಜವಾಬ್ದಾರಿ!

ಈ ಫೀಚರ್ಸ್‌ ಅನ್ನು ವಾಟ್ಸಾಪ್‌ನಲ್ಲಿ ಸಕ್ರಿಯವಾಗಿಸುವುದು ಹೇಗೆ?

ನೀವು ವಾಟ್ಸಾಪ್‌ ಬೀಟಾ ಬಳಕೆದಾರರಾಗಿದ್ದರೆ ಅದರಲ್ಲೂ ಕೆಲವು ಗ್ರೂಪ್‌ಗಳನ್ನು ಕಂಟ್ರೋಲ್‌ ಮಾಡುತ್ತಿದ್ದರೆ ನೀವು ವಾಟ್ಸಾಪ್‌ನ ಗ್ರೂಪ್ ಸೆಟ್ಟಿಂಗ್‌ನಲ್ಲಿ ಈ ವಿಶೇಷ ಆಯ್ಕೆಯನ್ನು ಸಕ್ರಿಯಗೊಳಿಸಬಹುದಾಗಿದೆ. ಅಂದರೆ ಗ್ರೂಪ್‌ ಸೆಟ್ಟಿಂಗ್‌ ವಿಭಾಗದಲ್ಲಿ ಹೊಸ ಸದಸ್ಯರನ್ನು ಅನುಮೋದಿಸು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಇದನ್ನು ಆನ್‌ ಮಾಡಿದರೆ ಯಾರೆಲ್ಲಾ ಅನುಮೋದನೆಗಾಗಿ ರಿಕ್ವೆಸ್ಟ್‌ ಕಳುಹಿಸುತ್ತಾರೋ ಅವರನ್ನು ಗ್ರೂಪ್‌ಗೆ ಸೇರಿಸಬೇಕೆ? ಅಥವಾ ತಿರಸ್ಕರಿಸಬೇಕೆ? ಎಂಬ ನಿರ್ಧಾರ ಮಾಡಬಹುದು.

Best Mobiles in India

English summary
WhatsApp is going to introduce the feature of Approve New Participants in WhatsApp group section, which will be very convenient.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+