ಸರ್ಕಾರ ನೀಡಿದ್ದ ಸೂಚನೆ ಪಾಲಿಸಲು ವಾಟ್ಸ್‌ಆಪ್ ನಕಾರ!..ಏಕೆ?

ಸುಳ್ಳುಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳು ಹರಿಯದಂತೆ ತಡೆಯಲು ತಾಂತ್ರಿಕ ಪರಿಹಾರವನ್ನು ನೀಡುವಂತೆ ಕೇಂದ್ರ ಸರ್ಕಾರ ನೀಡಿದ್ದ ಸೂಚನೆಯನ್ನು ವಾಟ್ಸ್‌ಆಪ್ ನಿರಾಕರಿಸಿದೆ. ವಾಟ್ಸ್‌ಆಪ್‌ನಲ್ಲಿ ಹರಿದಾಡುವ ಸುಳ್ಳುಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳು ಹತ್ತಿಕ್ಕುವಂತಹ ಸೂಚನೆಯನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ವಾಟ್ಸ್‌ಆಪ್ ಸಂಸ್ಥೆ ಹೇಳಿದೆ.
ವಾಟ್ಸ್‌ಆಪ್‌ನಲ್ಲಿ ಹರಿದಾಡುವ ಸಂದೇಶಗಳ ಮೂಲವನ್ನು ಪತ್ತೆಹಚ್ಚುವುದರಿಂದ ವಾಟ್ಸ್ಆಪ್ ಬಳಕೆದಾರರ ಖಾಸಾಗೀತನಕ್ಕೆ ಅಡ್ಡಿಪಡಿಸಿದಂತಾಗುತ್ತದೆ. ಜನರು ತಮ್ಮ ತಮ್ಮ ಸೂಕ್ಮ ಸಂಭಾಷಣೆಗಳನ್ನು ನಡೆಸಲು ವಾಟ್ಸ್ಆಪ್ ಅನ್ನು ಅವಲಂಬಿಸಿದ್ದಾರೆ. ಅದಲ್ಲದೆ, ಸಂದೇಶಗಳ ಮೂಲ ಪತ್ತೆ ಹಚ್ಚುವಿಕೆ ದುರ್ಬಳಕೆ ಸಾಧ್ಯತೆಯನ್ನು ಸೃಷ್ಟಿಸುತ್ತದೆ ಎಂದು ವಾಟ್ಸ್ಆಪ್ ತಿಳಿಸಿದೆ.

ಬಳಕೆದಾರರಿಗೆ ಸಧ್ಯ ಒದಗಿಸಲಾಗಿರುವ ಗೌಪ್ಯತೆ ಸುರಕ್ಷತೆಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಆದರೆ, ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರ ವಹಿಸುವಂತೆ ಮತ್ತು ಸುರಕ್ಷಿತವಾಗಿರಲು ಮಾಹಿತಿ ನಿಡುವತ್ತ ನಾವು ಗಮನಹರಿಸುತ್ತೇವೆ. ಸುಳ್ಳು ಸುದ್ದಿಗಳನ್ನು ತಡೆಯಬಹುದಾದ ಸಾಧ್ಯತೆಗಳನ್ನು ನಾವು ಕೂಡ ಎದುರು ನೋಡುತ್ತಿದ್ದೇವೆ ಎಂದು ವಾಟ್ಸ್‌ಆಪ್ ಸಂಸ್ಥೆ ಸ್ಪಷ್ಟವಾಗಿ ತಿಳಿಸಿದೆ.

ವಾಟ್ಸ್ಆಪ್ನಲ್ಲಿ ಹರಿದಾಡುವ ಸುಳ್ಳು ಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳನ್ನು ಹತ್ತಿಕ್ಕಲು, ಅವುಗಳ ಮೂಲ ಪತ್ತೆಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕೆಂದು ವಾಟ್ಸ್ಆಪ್ ಸಂಸ್ಥೆಗೆ ಕೇಂದ್ರ ಸರ್ಕಾರ ಮಂಗಳವಾರ ಸೂಚಿಸಿತ್ತು. ಪ್ರಚೋದನಕಾರಿ ಸಂದೇಶಗಳನ್ನು ಹತ್ತಿಕ್ಕಲು, ಅವುಗಳ ಮೂಲ ಪತ್ತೆಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕು ಎಂದು ಸಂಸ್ಥೆಗೆ ಹೇಳಲಾಗಿತ್ತು.

ಈ ಮೊದಲು ಕೇಂದ್ರ ಸರ್ಕಾರ ನೀಡಿರುವ ಸಲಹೆ ಮತ್ತು ಎಚ್ಚರಿಕೆಗಳನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಕ್ರಿಸ್ ಡೇನಿಯಲ್ ಒಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸುಳ್ಳುಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳು ಹತ್ತಿಕ್ಕುವಂತಹ ಸೂಚನೆಯನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ವಾಟ್ಸ್‌ಆಪ್ ಸಂಸ್ಥೆ ಹೇಳಿರುವುದು ಕತೊಹಲವನ್ನು ಮೂಡಿಸಿದೆ.
ಓದಿರಿ: ಎರಡು ತಿಂಗಳ ಉಚಿತ 'ಪೋಸ್ಟ್ಪೇಯ್ಡ್' ಸೇವೆ ನೀಡಿದ ಜಿಯೋ!!


Click it and Unblock the Notifications








