Home
ಸುದ್ದಿಜಾಲ

ವಾಟ್ಸಾಪ್‌ನಲ್ಲಿ ಇನ್ಮುಂದೆ 'ಚಾಟ್‌ ಲಾಕ್‌' ಮಾಡಬಹುದು!..ಬೇರೆ ಯಾವುದೇ ಆಪ್‌ ಬೇಡ!

ಮೆಟಾ ಮಾಲೀಕತ್ವದ ಜನಪ್ರಿಯ ವಾಟ್ಸಾಪ್‌ ಆಪ್‌ ತನ್ನ ಬಳಕೆದಾರರಿಗಾಗಿ ಈಗಾಗಲೇ ಹಲವು ಅನುಕೂಲಕರ ಆಯ್ಕೆಗಳನ್ನು ಪರಿಚಯಿಸಿದೆ. ಅಲ್ಲದೇ ತನ್ನ ನೂತನ ಅಪ್‌ಡೇಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುತ್ತಾ ಸಾಗಿದೆ. ಇದೀಗ ವಾಟ್ಸಾಪ್‌ ಸಂಸ್ಥೆಯು ಮೆಸೆಜ್‌ ಕಳುಹಿಸುವಿಕೆಯ ಅನುಭವದಲ್ಲಿ ಭಾರೀ ಬದಲಾವಣೆ ತರಲು ಕಾರ್ಯ ನಿರ್ವಹಿಸುತ್ತಿದೆ.

ಹೌದು, ವಾಟ್ಸಾಪ್‌ ಬಳಕೆದಾರರ ಸ್ನೇಹಿ ಆಗಿದ್ದು, ಉಪಯುಕ್ತ ಆಯ್ಕೆ ನೀಡುತ್ತಾ ಬಂದಿದೆ. ಈಗ ಅಚ್ಚರಿ ಎಂಬಂತೆ ವಾಟ್ಸಾಪ್‌ ಹೊಸದಾಗಿ 'ಚಾಟ್‌ ಲಾಕ್‌' ಫೀಚರ್‌ ಬಿಡುಗಡೆ ಮಾಡಿದೆ. ಈ ಫೀಚರ್ಸ್‌ ಸಕ್ರಿಯದಿಂದ ಮೆಸೆಜ್‌/ ಚಾಟ್‌ ಸುರಕ್ಷತೆ ಮತ್ತಷ್ಟು ಹೆಚ್ಚಾಗಲಿದೆ. ಬಳಕೆದಾರರು ಸಂಪೂರ್ಣ ವಾಟ್ಸಾಪ್‌ ಲಾಕ್‌ ಮಾಡದೇ, ಕೇವಲ ನಿರ್ದಿಷ್ಟ ಚಾಟ್‌ ಮಾತ್ರ ಲಾಕ್ ಮಾಡಬಹುದಾಗಿರುತ್ತದೆ.

ವಾಟ್ಸಾಪ್‌ನಲ್ಲಿ ಇನ್ಮುಂದೆ 'ಚಾಟ್‌ ಲಾಕ್‌' ಮಾಡಬಹುದು!..ಬೇರೆ ಯಾವುದೇ ಆಪ್‌ ಬೇಡ!

ವಾಟ್ಸಾಪ್‌ನ ಈ ಹೊಸ ಫೀಚರ್‌ ಭಾರೀ ವಿಶೇಷ ಎನಿಸಿದರೂ ಸಹ, ಸದ್ಯ ಎಲ್ಲರಿಗೂ ಈ ಫೀಚರ್ ಲಭ್ಯ ಇಲ್ಲ. ಏಕೆಂದರೆ ವಾಟ್ಸಾಪ್‌ನ ಕೆಲವು ಬೀಟಾ ಪರೀಕ್ಷಕರು ಈಗ ಹೊಸ ಲಾಕ್ ಚಾಟ್ ಫೀಚರ್‌ ಅನ್ನು ಬಳಸಬಹುದು ಎಂದು WaBetaInfo ನ ವರದಿಯು ಬಹಿರಂಗಪಡಿಸುತ್ತದೆ. ಹಾಗಾದರೇ ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ನಲ್ಲಿ ಇನ್ಮುಂದೆ 'ಚಾಟ್‌ ಲಾಕ್‌' ಮಾಡಬಹುದು!..ಬೇರೆ ಯಾವುದೇ ಆಪ್‌ ಬೇಡ!

ವಾಟ್ಸಾಪ್‌ನಲ್ಲಿ ಚಾಟ್ ಲಾಕ್ ಸಕ್ರಿಯಗೊಳಿಸಲು ಈ ಕ್ರಮ ಅನುಸರಿಸಿ:

ಹಂತ 1: ನಿಮ್ಮ ವಾಟ್ಸಾಪ್‌ ಕಾಂಟ್ಯಾಕ್ಟ್‌ ಪ್ರೊಫೈಲ್ ವಿಭಾಗಕ್ಕೆ ಹೋಗಿ.

ಹಂತ 2: ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಚಾಟ್ ಲಾಕ್ ಅನ್ನು ಟ್ಯಾಪ್ ಮಾಡಿ.

ಹಂತ 3: 'ಫಿಂಗರ್‌ಪ್ರಿಂಟ್‌ನೊಂದಿಗೆ ಈ ಚಾಟ್ ಅನ್ನು ಲಾಕ್ ಮಾಡಿ' ಆಯ್ಕೆಯನ್ನು ಸಕ್ರಿಯಗೊಳಿಸಿ.

ಅಂದಹಾಗೆ ವಾಟ್ಸಾಪ್‌ ಆಯ್ದ ಬಳಕೆದಾರರಿಗಾಗಿ ಹೊಸ ಚಾಟ್ ಲಾಕ್ ಫೀಚರ್ ಅನ್ನು ಪರಿಚಯಿಸಿದೆ. WaBetaInfo ಶೇರ್ ಮಾಡಿರುವ ವಿವರಗಳ ಪ್ರಕಾರ, ಸಂಸ್ಥೆಯು ಕೆಲವು ಬೀಟಾ ಪರೀಕ್ಷಕರಿಗೆ ಅಪ್‌ಡೇಟ್‌ ಬಿಡುಗಡೆ ಮಾಡಿದ್ದು, ಮುಂಬರುವ ಕೆಲವು ವಾರಗಳಲ್ಲಿ ಈ ಫೀಚರ್ ವ್ಯಾಪಕವಾದ ಬಳಕೆದಾರರಿಗೆ ತಲುಪುತ್ತದೆ. ಆದ್ದರಿಂದ, ಈ ಫೀಚರ್‌ ಮುಂದಿನ ದಿನಗಳಲ್ಲಿ ಸ್ಥಿರ ಆವೃತ್ತಿಯಲ್ಲಿ (ಸಾರ್ವಜನಿಕರಿಗೆ) ಆಗಮಿಸುತ್ತದೆ ಎಂದು ನಿರೀಕ್ಷಿಸಬಹುದು.

ವಾಟ್ಸಾಪ್‌ನಲ್ಲಿ ಇನ್ಮುಂದೆ 'ಚಾಟ್‌ ಲಾಕ್‌' ಮಾಡಬಹುದು!..ಬೇರೆ ಯಾವುದೇ ಆಪ್‌ ಬೇಡ!

ಹಾಗೆಯೇ ವಾಟ್ಸಾಪ್‌ (WhatsApp) ಇತ್ತೀಚಿಗಷ್ಟೆ ಒಂದು ವಾಟ್ಸಾಪ್‌ ಖಾತೆಯನ್ನು ಒಂದೇ ವೇಳೆ ನಾಲ್ಕು ಸಾಧನಗಳಲ್ಲಿ ಬಳಕೆ ಮಾಡುವ ಆಯ್ಕೆ ಲಭ್ಯ ಮಾಡಿದೆ. ಇದ್ರಿಂದಾಗಿ ಈಗ ಖಾತೆಯನ್ನು ವೆಬ್ ಬ್ರೌಸರ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಡೆಸ್ಕ್‌ಟಾಪ್‌ಗಳೊಂದಿಗೆ ಹೇಗೆ ಲಿಂಕ್ ಮಾಡುತ್ತೀರೋ ಹಾಗೆಯೇ ನಾಲ್ಕು ಸಾಧನಗಳೊಂದಿಗೆ ಸಿಂಕ್ ಮಾಡಬಹುದು.

ಬಳಕೆದಾರರು ಎರಡು ಆಂಡ್ರಾಯ್ಡ್ ಫೋನ್‌ಗಳು ಅಥವಾ ಐಫೋನ್‌ಗಳನ್ನು ಹೊಂದಿದ್ದರೆ. ಅವರು ಒಂದೇ ಸಮಯದಲ್ಲಿ ಅವರ ವಾಟ್ಸಾಪ್‌ ಖಾತೆಯನ್ನು ಐಫೋನ್‌ ಮತ್ತು ಆಂಡ್ರಾಯ್ಡ್‌ ಎರಡರಲ್ಲೂ ಏಕಕಾಲದಲ್ಲಿ ಬಳಸಬಹುದು. ಹಾಗೆಯೇ ಅದೇ ಸಮಯದಲ್ಲಿ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿಯೂ ಅದೇ ವಾಟ್ಸಾಪ್‌ ಖಾತೆಯನ್ನು ಬಳಕೆ ಮಾಡಬಹುದಾಗಿದೆ.

ವಾಟ್ಸಾಪ್‌ನಲ್ಲಿ ಇನ್ಮುಂದೆ 'ಚಾಟ್‌ ಲಾಕ್‌' ಮಾಡಬಹುದು!..ಬೇರೆ ಯಾವುದೇ ಆಪ್‌ ಬೇಡ!

ಈ ಹೊಸ ಮಲ್ಟಿ-ಡಿವೈಸ್‌ ಲಾಗಿನ್ ಬೆಂಬಲ ಫೀಚರ್‌ ಬಳಕೆದಾರರು ತಮ್ಮ ಖಾತೆಗೆ ನಾಲ್ಕು ಸಾಧನಗಳನ್ನು ಲಿಂಕ್ ಮಾಡಲು ಅನುಮತಿಸುತ್ತದೆ. ಪ್ರತಿಯೊಂದು ಲಿಂಕ್ ಮಾಡಲಾದ ಸಾಧನವು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಪ್ರಾಥಮಿಕ ಸಾಧನವು ಇಂಟರ್ನೆಟ್‌ಗೆ ಸಂಪರ್ಕ ಹೊಂದಿಲ್ಲದಿದ್ದರೂ ಸಹ, ಸ್ವತಂತ್ರ ಸಾಧನಗಳಲ್ಲಿ ಮೆಸೆಜ್‌ಗಳನ್ನು ಸ್ವೀಕರಿಸುವುದನ್ನು ಖಾತ್ರಿಪಡಿಸುತ್ತದೆ.

ಆದಾಗ್ಯೂ, ಪ್ರಾಥಮಿಕ ಫೋನ್‌ ದೀರ್ಘಾವಧಿಯವರೆಗೆ ನಿಷ್ಕ್ರಿಯವಾಗಿದ್ದರೆ, ವಾಟ್ಸಾಪ್‌ ಸ್ವಯಂಚಾಲಿತವಾಗಿ ಎಲ್ಲಾ ಕಂಪ್ಯಾನಿಯನ್ ಸಾಧನಗಳಿಂದ ಲಾಗ್ ಔಟ್ ಆಗುತ್ತದೆ. ನಾಲ್ಕು ಹೆಚ್ಚುವರಿ ಸಾಧನಗಳು ಸ್ಮಾರ್ಟ್‌ಫೋನ್‌ಗಳು, ಪಿಸಿಗಳು ಅಥವಾ ಎರಡರ ಸಂಯೋಜನೆಯಾಗಿರಬಹುದು, ವಿವಿಧ ಸಾಧನಗಳಲ್ಲಿ ತಮ್ಮ ವಾಟ್ಸಾಪ್‌ ಖಾತೆಗಳನ್ನು ಪ್ರವೇಶಿಸಲು ಬಳಕೆದಾರರಿಗೆ ನಮ್ಯತೆಯನ್ನು ನೀಡುತ್ತದೆ.

Best Mobiles in India

English summary
WhatsApp Chat Lock feature as now people don’t need to lock WhatsApp completely just to hide a few chats and one will be able to lock a particular chat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+