Home
ಸುದ್ದಿಜಾಲ

ನೀವಿನ್ನೂ 'ವಾಟ್ಸಪ್‌' ಅಪ್‌ಡೇಟ್ ಮಾಡಿಲ್ಲವೇ?.ಹಾಗಿದ್ರೆ ಈ ಕೂಡಲೇ ಅಪ್‌ಡೇಟ್ ಮಾಡಿ!

ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೆಜಿಂಗ್ ಆಪ್‌ 'ವಾಟ್ಸಪ್‌' ಅನ್ನು ಎಲ್ಲರ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಆದರೆ ಇನ್ನು ಬಹುತೇಕ ಬಳಕೆದಾರರು ಹಳೆಯ ಆವೃತ್ತಿಯನ್ನೇ ಬಳಕೆ ಮಾಡುತ್ತಿದ್ದಾರೆ. ಹಾಗೇನಾದರು ನೀವು ಸಹ ಇನ್ನು ಆವೃತ್ತಿಯನ್ನೇ ಬಳಕೆ ಮಾಡುತ್ತಿದ್ದರೇ ಮೊದಲು ಅಪ್‌ಡೇಟ್ ಮಾಡಿಕೊಳ್ಳಿ. ಏಕೆಂದರೇ ವಾಟ್ಸಪ್‌ ಅಪ್ಲಿಕೇಶನ್ ಮೇಲಿಂದಮೇಲೆ ಅಪ್‌ಡೇಟ್‌ ಆಗುತ್ತಾ ಸಾಗಿದ್ದು, ಈಗ ಬಳಕೆದಾರರು ನಿರೀಕ್ಷಿಸದ ಹಲವು ನೂತನ ಫೀಚರ್ಸ್‌ಗಳು ಸೇರಿಕೊಂಡಿವೆ.

ವಾಟ್ಸಪ್‌

ಹೌದು, ವಿಶ್ವದ ಜನಪ್ರಿಯ ವಾಟ್ಸಪ್‌ ಆಪ್‌ ತನ್ನ ಬಳಕದಾರರಿಗೆ ಹೆಚ್ಚಿನ ಅನುಕೂಲ ಒದಗಿಸುವ ದೃಷ್ಠಿಯಿಂದ ಕೆಲವು ಅಗತ್ಯ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಹೊಸ ಫೀಚರ್ಸ್‌ಗಳನ್ನು ಬಳಕೆದಾರರು ಬಳಕೆ ಮಾಡಲು ವಾಟ್ಸಪ್‌ ಅನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಿದೆ. ವಾಟ್ಸಪ್‌ ಸೇರಿರುವ ನೂತನ ಫೀಚರ್ಸ್‌ಗಳು ವಾಟ್ಸಪ್‌ ಬಳಕೆಯನ್ನು ಮತ್ತಷ್ಟು ಸುಲಭವಾಗಿಸುವುದರಲ್ಲಿ ಅನುಮಾನವೇ ಇಲ್ಲ. ಆ ಕುರಿತು ಇನ್ನಷ್ಟು ಮಾಹಿತಿಯನ್ನು ಮುಂದೆ ತಿಳಿಯೋಣ ಬನ್ನಿರಿ.

ಹೊಸ ಆವೃತ್ತಿ

ಹೊಸ ಆವೃತ್ತಿ

ಈಗಾಗಲೇ ಜನಪ್ರಿಯವಾಗಿರುವ ವಾಟ್ಸಪ್‌ ಇದೀಗ ಮತ್ತಷ್ಟು ಬಳಕೆದಾರ ಸ್ನೇಹಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಆಂಡ್ರಾಯ್ಡ್‌ ಓಎಸ್‌ ಮತ್ತು ಐಓಎಸ್‌ ಬಳಕೆದಾರರಿಬ್ಬರಿಗೂ ನೂತನ ಫೀಚರ್ಸ್‌ಗಳು ಲಭ್ಯವಾಗಲಿವೆ. ಹೊಸ ಆವೃತ್ತಿಯು 78MB ಸಾಮರ್ಥ್ಯದ ಹೆಚ್ಚಿನ ಸ್ಥಳಾವಕಾಶವನ್ನು ಬೇಡುತ್ತದೆ. ಆದರೆ ಹಾಗೆಯೇ ಅಧಿಕ ಮೀಡಿಯಾ ಎಡಿಟಿಂಗ್ ಸೌಲಭ್ಯಗಳನ್ನು ಒಳಗೊಂಡಿದೆ. ಹೀಗಾಗಿ ವಾಟ್ಸಪ್ ಅಪ್‌ಡೇಟ್ ಮಾಡೋದನ್ನು ಮರೆತು ಹೊಸ ಫೀಚರ್ಸ್‌ಗಳನ್ನು ಮಿಸ್‌ ಮಾಡ್ಕೋಬೇಡಿ.

ನೋಟಿಫಿಕೇಶನ್‌

ನೋಟಿಫಿಕೇಶನ್‌

ವಾಟ್ಸಪ್‌ನಲ್ಲಿ ಮ್ಯೂಟ್‌ ಚಾಟ್‌ ಆಯ್ಕೆ ಇದ್ದು, ಈ ಆಯ್ಕೆಯನ್ನು ಸೆಲೆಕ್ಟ್ ಮಾಡಿದರೇ ಸೆಲೆಕ್ಟ್ ಮಾಡಿದ ಕಾಂಟ್ಯಾಕ್ಟ್‌ನಿಂದ ಬರುವ ಮೆಸೆಜ್‌ಗಳು ಮ್ಯೂಟ್‌ ಆಗಿರುತ್ತವೆ. ಆದರೆ ನೋಟಿಫೀಶನ್ ಬ್ಯಾಡ್ಜ್‌ನಲ್ಲಿ ಮೆಸೆಜ್‌ಗಳು ಕಾಣಿಸುತ್ತಿದ್ದವು. ಆದ್ರೆ ಇನ್ನು ಹಾಗಲ್ಲ. ಬಳಕೆದಾರರು ಮ್ಯೂಟ್‌ ಮಾಡಿರುವ ಕಾಂಟ್ಯಾಕ್ಟ್‌ನಿಂದ ಬರುವ ಮೆಸೆಜ್ ನೋಟಿಫಿಕೇಶನ್ ಬ್ಯಾಡ್ಜ್‌ನಲ್ಲಿ ಕಾಣಿಸುವುದಿಲ್ಲ.

ಗ್ರೂಪ್‌ ಸೇರುವ ಅನುಮತಿ

ಗ್ರೂಪ್‌ ಸೇರುವ ಅನುಮತಿ

ವಾಟ್ಸಪ್‌ನಲ್ಲಿ ಈ ಮೊದಲು ಯಾರು ಬೇಕಾದರೂ ಗ್ರೂಪ್ ರಚಿಸಿ ಗ್ರೂಪಿಗೆ ಬಳಕೆದಾರರನ್ನು ಸೇರಿಸಬಹುದಾಗಿತ್ತು. ಆದ್ರೆ ಇದೀಗ ಯಾರಾದರೂ ಗ್ರೂಪ್‌ಗೆ ಸೇರಿಸಲು ಪ್ರಯತ್ನಿಸಿದರೇ, ಹೊಸ ಆಯ್ಕೆಯು ಬಳಕೆದಾರರ ಅನುಮತಿ ಕೇಳುತ್ತದೆ. ಈ ಫೀಚರ್ ಮೂರು ಆಯ್ಕೆಗಳನ್ನು ಒಳಗೊಂಡಿದ್ದು, ಎಲ್ಲರು(Everyone), ನನ್ನ ಕಾಂಟ್ಯಾಕ್ಟ್‌ಸ ಮಾತ್ರ (My Contacts) ಮತ್ತು ಇವರನ್ನು ಹೊರತುಪಡಿಸಿ ನನ್ನ ಕಾಂಟ್ಯಾಕ್ಟ್ಸ್‌ ಆಗಿವೆ.

ವಾಟ್ಸಪ್‌ ಬ್ಯಾಕ್‌ಅಪ್

ವಾಟ್ಸಪ್‌ ಬ್ಯಾಕ್‌ಅಪ್

ವಾಟ್ಸಪ್‌ ಇತ್ತೀಚಿಗೆ ಐಫೋನ್‌ ಐಕ್ಲೌಡ್‌ ಸ್ಟೋರೇಜ್ ಸಮಸ್ಯೆಯನ್ನು ಪರಿಹರಿಸಿದ್ದು, ಯಾವುದೆ ಅಡೆತಡೆಗಳಿ ಎದುರಾಗುವುದಿಲ್ಲ ಎನ್ನಲಾಗಿದೆ. ಹಾಗೆಯೇ ಐಕ್ಲೌಡ್‌ ಬ್ಯಾಕ್‌ಅಪ್‌ ಟ್ರಬಲ್‌ಶೂಟ್‌ ಗಾಗಿಯೇ ಪ್ರತ್ಯೇಕ್ ಸಪೋರ್ಟ್‌ ಪೇಜ್‌ವೊಂದನ್ನು ರಚಿಸಲಾಗಿದೆ.

ಇತರೆ ಫೀಚರ್ಸ್‌ಗಳು

ಇತರೆ ಫೀಚರ್ಸ್‌ಗಳು

ವಾಟ್ಸಪ್‌ ಅಪ್‌ಡೇಟ್ ವರ್ಷನ್ನಲ್ಲಿ ಇತ್ತೀಚಿಗೆ ಪರಿಚಯ ಮಾಡಿರುವ ವಾಟ್ಸಪ್‌ ಸ್ಟೇಟಸ್‌ ಶೇರಿಂಗ್ ಫೀಚರ್ ಲಭ್ಯವಾಗಲಿದೆ. ಹಾಗೆಯೇ ಕಳುಹಿಸಿದ ಮೆಸೆಜ್ ಸ್ವಲ್ಪ ಸಮಯದ ನಂತರ ಆಟೋಮ್ಯಾಟಿಕ್ ಆಗಿ ಡಿಲೀಟ್‌ ಆಗುವ ಫೀಚರ್ ಸಹ ಅಪ್‌ಡೇಟ್ ವರ್ಷನ್ ಸೇರಿಕೊಳ್ಳಲಿದೆ.

Best Mobiles in India

English summary
The new update of WhatsApp is of 78MB in size and also makes the media-editing easier. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+