Home
ಸುದ್ದಿಜಾಲ

ಕಾತುರದಿಂದ ಕಾಯುತ್ತಿದ್ದ ಈ ಬಳಕೆದಾರರಿಗೆ ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌!; ಏನದು?

ವಾಟ್ಸಾಪ್‌ ತನ್ನ ಬಳಕೆದಾರರಿಗೆ ವಿವಿಧ ಫೀಚರ್ಸ್‌ಗಳನ್ನು ಕಾಲಕಾಲಕ್ಕೆ ಪರಿಚಯಿಸಿಕೊಂಡು ಬರುತ್ತಿದೆ. ಅದರಲ್ಲೂ ಕೆಲವು ಫೀಚರ್ಸ್‌ಗಳು ಬಳಕೆದಾರರಿಗೆ ಹೆಚ್ಚಿನ ಭದ್ರತೆ ಜೊತೆಗೆ ವಿಶೇಷ ಅನುಭವ ನೀಡುತ್ತಾ ಬರುತ್ತಿದ್ದು, ಹಲವಾರು ಅನುಕೂಲಗಳನ್ನು ಇದರಿಂದ ಪಡೆಯಲಾಗುತ್ತಿದೆ. ಅದರಲ್ಲೂ ಇತ್ತೀಚೆಗೆ ವಾಟ್ಸಾಪ್‌ನಲ್ಲಿ ಒಂದೇ ಬಾರಿಗೆ 100 ವಿಡಿಯೋಗಳನ್ನು ಶೇರ್‌ ಮಾಡುವ ಬಗ್ಗೆ ಘೋ‍ಷಣೆ ಮಾಡಿರುವುದು ವಿಶೇಷವೆನಿಸಿದೆ.

ಕಾತುರದಿಂದ ಕಾಯುತ್ತಿದ್ದ ಈ ಬಳಕೆದಾರರಿಗೆ ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌!;ಏನದು?

ಹೌದು, ವಾಟ್ಸಾಪ್‌ ಇದೀಗ ಹೊಸ ಫೀಚರ್ಸ್‌ ಬಗ್ಗೆ ಘೋಷಣೆ ಮಾಡಲಾಗಿದ್ದು, ಈ ಮೂಲಕ ವಿಡಿಯೋ ಕರೆಯಲ್ಲಿ ಮತ್ತಷ್ಟು ಹೊಸ ರೀತಿಯ ಅನುಭವ ಬಳಕೆದಾರರಿಗೆ ಸಿಗಲಿದೆ. ಹಾಗಿದ್ರೆ ಈ ಹೊಸ ಫೀಚರ್ಸ್‌ ಯಾವಾಗಲಿಂದ ಲಭ್ಯ, ಯಾವೆಲ್ಲಾ ಬಳಕೆದಾರರು ಬಳಕೆ ಮಾಡಬಹುದು ಹಾಗೂ ವಿಡಿಯೋ ಕರೆ ಆಯ್ಕೆಯಲ್ಲಿ ಇದರ ಪಾತ್ರ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿಡಿಯೋ ಕರೆಗಾಗಿ ಪಿಕ್ಚರ್-ಇನ್-ಪಿಕ್ಚರ್ ಫೀಚರ್ಸ್‌

ವಾಟ್ಸಾಪ್‌ ಈಗಾಗಲೇ ಪರಿಚಯಿಸಿರುವ ಹಲವಾರು ಫೀಚರ್ಸ್‌ಗಳ ವಿಭಾಗಕ್ಕೆ ಇನ್ಮುಂದೆ ಈ ಹೊಸ ಪಿಕ್ಚರ್-ಇನ್-ಪಿಕ್ಚರ್ ಫೀಚರ್ಸ್‌ ಸೇರಿಕೊಳ್ಳಲಿದೆ. ಈ ಮೂಲಕ ವಾಟ್ಸಾಪ್‌ ಬಳಕೆದಾರರು ಯಾವುದೇ ಅಡೆತಡೆ ಇಲ್ಲದೆ ವಿಡಿಯೋ ಕರೆಯಲ್ಲಿ ತಲ್ಲೀನವಾಗಬಹುದು.

ಇದರಿಂದ ಪ್ರಯೋಜನ ಏನು?

ವಾಟ್ಸಾಪ್‌ ಕಳೆದ ವರ್ಷ ಮೊದಲ ಬಾರಿಗೆ ಈ ಫೀಚರ್ಸ್‌ ಅನ್ನು ಪರೀಕ್ಷಿಸಲು ಪ್ರಾರಂಭಿಸಿತ್ತು. ಅದರಂತೆ ಈ ಫೀಚರ್ಸ್‌ ಮೂಲಕ ಯಾವುದೇ ಅಡಚಣೆಗಳಿಲ್ಲದೆ ವಿಡಿಯೋ ಕರೆಗಳ ಸಮಯದಲ್ಲಿ ಇತರ ಆಪ್‌ಗಳನ್ನು ಓಪನ್ ಮಾಡಲು ಬಳಕೆದಾರರಿಗೆ ಅನುಮತಿ ನೀಡುತ್ತದೆ.

ಫೇಸ್‌ಟೈಮ್‌ನ ಪಿಕ್ಚರ್-ಇನ್-ಪಿಕ್ಚರ್ ಮೋಡ್‌ನಂತೆಯೇ ಇದು ಕೆಲಸ ಮಾಡಲಿದ್ದು, ಗ್ರೂಪ್‌ ಕರೆ ಅಥವಾ ವೈಯುಕ್ತಿಕ ಕರೆಯಲ್ಲಿದ್ದಾಗ ಇತರೆ ಆಪ್‌ಗಳನ್ನು ಓಪನ್‌ ಮಾಡುವ ಮೂಲಕ ಒಂದೇ ಬಾರಿಗೆ ಎರಡು ಪ್ರಯೋಜನ ಪಡೆದುಕೊಳ್ಳಬಹುದು. ಹಾಗೆಯೇ ಬಳಕೆದಾರರು ಯಾವುದೇ ವೆಬ್‌ ಬ್ರೌಸರ್‌ ಆಗಲಿ ಅಥವಾ ವೆಬ್‌ಸೈಟ್‌ ಆಗಲಿ ಓಪನ್ ಮಾಡಿದರೂ ಅದರ ಮೇಲೆ ಚಿಕ್ಕದಾಗಿ ವಿಡಿಯೋ ಸಂಬಂಧಿಸಿದ ವಿಂಡೋ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಕರೆಯಲ್ಲಿರುವಾಗಲೇ ಮೊಬೈಲ್‌ನಲ್ಲಿ ಏನಾದರೂ ಓದಬಹುದು, ಗೇಮ್‌ ಆಡಬಹುದು ಅಥವಾ ಇತರೆ ಚಟುವಟಿಕೆ ನಡೆಸಬಹುದು.

ಕಾತುರದಿಂದ ಕಾಯುತ್ತಿದ್ದ ಈ ಬಳಕೆದಾರರಿಗೆ ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌!;ಏನದು?

ಯಾರಿಗೆ ಲಭ್ಯ?

ಈ ಫೀಚರ್ಸ್‌ ಇದೀಗ iOS ಬಳಕೆದಾರರಿಗೆ ಲಭ್ಯವಾಗಲಿದ್ದು, ಈ ಮೂಲಕ ಆಪಲ್‌ ಡಿವೈಸ್ ಬಳಕೆದಾರರು ಆವೃತ್ತಿ 23.3.77 ಗೆ ಅಪ್‌ಡೇಟ್‌ ಮಾಡಿಕೊಳ್ಳಬೆಕಿದೆ. ಇದರಿಂದ ಬಳಕೆದಾರರಿಗೆ ಪಿಕ್ಚರ್-ಇನ್-ಪಿಕ್ಚರ್ ಮೋಡ್‌ಗೆ ಫೀಚರ್ಸ್‌ ಲಭ್ಯವಾಗಲಿದೆ.

ಎಂದಿನಿಂದ ಬಳಕೆಗೆ ಲಭ್ಯ?

iOS ಬಳಕೆದಾರರು ಈ ಫೀಚರ್ಸ್‌ ಬಳಕೆ ಮಾಡಬೇಕು ಎಂದರೆ ಸ್ವಲ್ಪ ಸಮಯ ಕಾಯಬೇಕಿದೆ. ಯಾಕೆಂದರೆ ಇನ್ನೇನು ಕೆಲವು ವಾರ ಅಥವಾ ಮುಂದಿನ ವಾರದಲ್ಲಿ ಈ ಫೀಚರ್ಸ್‌ ಅನ್ನು iOS ಬಳಕದಾರರಿಗೆ ಪರಿಚಯಿಸಲಾಗುತ್ತದೆ ಎಂದು ವಾಟ್ಸಾಪ್‌ ಮಾಹಿತಿ ನೀಡಿದೆ. ಹಾಗೆಯೇ ಇದೊಂದೇ ಫೀಚರ್ಸ್ ಅಲ್ಲದೆ ಇದರ ಜೊತೆಗೆ ವಿವಿಧ ಫೀಚರ್ಸ್‌ಗಳನ್ನು ಸಹ ಆ ವೇಳೆ ಪರಿಚಯಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ.

ಈ ಪ್ರಮುಖ ಫೀಚರ್ಸ್‌ಗಳಲ್ಲಿ ಪ್ರೊಫೈಲ್‌ ಫೋಟೋಗಾಗಿ ಕಸ್ಟಮೈಸ್‌ ಮಾಡಬಹುದಾದ ಅವತಾರ್‌ಗಳ ಆಯ್ಕೆ, ಗ್ರೂಪ್‌ಗಾಗಿ ವಿವರಣೆ ಹಾಗೂ ಡಾಕ್ಯುಮೆಂಟ್‌ಗಳನ್ನು ಕಳುಹಿಸುವಾಗ ಉಪಶೀರ್ಷಿಕೆ ಸೇರಿಸುವ ಆಯ್ಕೆಯು ಇದಕ್ಕೆ ಉದಾಹರಣೆಗಳಾಗಿವೆ.

ಕಾತುರದಿಂದ ಕಾಯುತ್ತಿದ್ದ ಈ ಬಳಕೆದಾರರಿಗೆ ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌!;ಏನದು?

ಇದರ ನಡುವೆ ವಾಟ್ಸಾಪ್‌ ಈ ತಿಂಗಳ ಆರಂಭದಲ್ಲಿ ಸ್ಟೇಟಸ್‌ ವಿಭಾಗದಲ್ಲಿ ಹೊಸ ಬದಲಾವಣೆ ತಂದಿದ್ದು, ಈ ಮೂಲಕ ಬಳಕೆದಾರರು ತಮ್ಮ ಸ್ಟೇಟಸ್‌ ಅನ್ನು ಆಯ್ದ ಗ್ರೂಪ್‌ನೊಂದಿಗೆ ಶೇರ್‌ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಹಾಗೆಯೇ ಬೇರೆಯವರ ಸ್ಟೇಟಸ್‌ಗೆ ಎಮೋಜಿಯೊಂದಿಗೆ ಪ್ರತ್ಯುತ್ತರಿಸಲು, ವಾಯ್ಸ್‌ ನೋಟ್‌ ಅನ್ನು ರೆಕಾರ್ಡ್ ಮಾಡಲು ಇದು ಅನುಮತಿಸಲಿದ್ದು, ಹೆಚ್ಚು ಆಕರ್ಷಕವಾಗಿದೆ.

Best Mobiles in India

English summary
WhatsApp has finally started rolling out picture-in-picture mode for video calls on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+