ಸಂದರ್ಶನ:ವಾಟ್ಸ್‌ ಆಪ್‌ ಹಿಂದಿರುವ ಭಾರತೀಯ ವ್ಯಕ್ತಿ

Posted By:

ವಾಟ್ಸ್‌ಆಪ್‌- ಫೇಸ್‌ಬುಕ್‌ ಖರೀದಿ ಬಗ್ಗೆ ಚರ್ಚೆ‌ಯಾಗುತ್ತಿರುವ ಬೆನ್ನಲ್ಲೇ ವಾಟ್ಸ್‌ ಆಪ್‌‌ ಉದ್ಯಮ ವಿಭಾಗದ ಮುಖ್ಯಸ್ಥ ಭಾರತೀಯ ಮೂಲದ ನೀರಜ್ ಅರೋರಾ ಸಹ ಮಾಧ್ಯಮಗಳಲ್ಲಿ,ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ.

ವಾಟ್ಸ್‌ ಆಪ್‌ ವಿಶ್ವದೆಲ್ಲೆಡೆ ಜನಪ್ರಿಯವಾಗಲು ವಾಟ್ಸ್‌ಆಪ್‌‌ನಲ್ಲಿರುವ ನೀರಜ್ ಅರೋರಾ ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ದೆಹಲಿ ಮೂಲದ ನೀರಜ್ ಅರೋರಾ ವಾಟ್ಸ್ ಅ್ಯಪ್ ಸಂಸ್ಥೆಗೆ ಉದ್ಯೋಗಿಯಾಗಿ ಸೇರ್ಪಡೆಯಾಗಿದ್ದು 2011ರ ನವೆಂಬರ್‌ನಲ್ಲಿ.ವಾಟ್ಸ್‌ಆಪ್‌ ಉದ್ಯೋಗಿಯಾಗುವ ಮೊದಲು ಗೂಗಲ್‌ನಲ್ಲಿ ನಾಲ್ಕು ವರ್ಷ‌,ಭಾರತದ ‌ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌‌ನಲ್ಲಿ ಕೆಲಕಾಲದ ನೀರಜ್ ಅರೋರಾ  ಉದ್ಯೋಗಿಯಾಗಿದ್ದರು.ದಿಲ್ಲಿ ಐಐಟಿಯ ಪದವೀಧರರಾಗಿರುವ ಅರೋರಾ ವಾಟ್ಸ್‌ಆಪ್‌ ಫೇಸ್‌ಬುಕ್‌ ಡೀಲ್‌ನಿಂದಾಗಿ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದು ಇವರನ್ನು ಎಕಾನಮಿಕ್‌ ಟೈಮ್ಸ್‌ ಸಂದರ್ಶನ ಮಾಡಿದೆ. ಸಂದರ್ಶ‌ನ ಆಯ್ದ ಭಾಗ ಇಲ್ಲಿದೆ.

ಇದನ್ನೂ ಓದಿ:ಗೂಗಲ್‌ ಹಿಂದಿರುವ ಭಾರತೀಯ ಟೆಕ್ಕಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಫೇಸ್‌‌ಬುಕ್‌ ಒಪ್ಪಂದದ ಬಗ್ಗೆ ನಿಮಗೆ ಏನನಿಸುತ್ತದೆ?ನೀವು ವಾಟ್ಸ್‌ಆಪ್‌ನಲ್ಲಿ ಷೇರು ಹೊಂದಿದ್ದೀರಾ?

#1


ವಾಟ್ಸ್‌ಆಪ್‌ನಲ್ಲಿರುವ ನಮಗೆಲ್ಲ ಹರ್ಷವಾಗುತ್ತಿದೆ. ವಾಟ್ಸ್‌ಆಪ್‌ ನಾನು ಸ್ವಲ್ಪ ಷೇರು ಹೊಂದಿದ್ದೇನೆ. ವಾಟ್ಸ್‌ಆಪ್‌ನ ಬಹುತೇಕ ಉದ್ಯೋಗಿಗಳು ಕಂಪೆನಿಯ ಷೇರುದಾರರಾಗಿದ್ದಾರೆ.

 ವಾಟ್ಸ್‌ಆಪ್‌‌‌‌‌ನಲ್ಲಿ ಬೇರೆ ಭಾರತೀಯರು ಉದ್ಯೋಗಲ್ಲಿ ಇದ್ದಾರೆಯೇ?

#2


ಮೂರು ಜನ ಇದ್ದಾರೆ. ಇಬ್ಬರು ಎಂಜಿನಿಯರ್‌ ವಿಭಾಗದಲ್ಲಿ ಒಬ್ಬರು ಆಫೀಸ್‌ ಮ್ಯಾನೇಜರ್‌ ಆಗಿ ವಾಟ್ಸ್‌ಆಪ್‌ನಲ್ಲಿದ್ದಾರೆ.

 ಗೂಗಲ್‌ ತೊರೆದು ವಾಟ್ಸ್‌ಆಪ್‌ನ್ನು ಸೇರಿದ್ದು ಯಾಕೆ?

#3


ಗೂಗಲ್‌‌ ದೊಡ್ಡ ಶ್ರೇಷ್ಠ ಕಂಪೆನಿ.ನಾಲ್ಕು ವರ್ಷ‌ಗಳ ಕಾಲ ಗೂಗಲ್‌‌ನಲ್ಲಿ ಸಂತೋಷದಿಂದ ಕೆಲಸ ಮಾಡಿದ್ದೇನೆ.ಆದರೆ ನಾನು ಬಳಕೆದಾರರ ಹತ್ತಿರ ಕೆಲಸ ಮಾಡುವ ಕಂಪೆನಿಯೊಂದನ್ನು ಹುಡುಕುತ್ತಿದ್ದೆ.ವಾಟ್ಸ್‌ಆಪ್‌ ಸೇವೆ ಮತ್ತು ಅಲ್ಲಿನ ಸಂಸ್ಕೃತಿ ನನಗೆ ಹಿಡಿಸಿತು.ಜೊತೆಗೆ ನನ್ನ ಹುಡುಕುತ್ತಿದ್ದ ಕೆಲಸಕ್ಕೆ ಪೂರಕ ವಾತಾವರಣ ವಾಟ್ಸ್‌ಆಪ್‌ನಲ್ಲಿ ಇರುವುದರಿಂದ ಈ ಕಂಪೆನಿಗೆ ಸೇರಿಕೊಂಡೆ. ಮೊದಲ ಬಿಸಿನೆಸ್‌ ವಿಭಾಗದ ಅಧಿಕಾರಿಯಾಗಿ ಕಂಪೆನಿ ನನ್ನನ್ನು ನೇಮಿಸಿತ್ತು. ಕಂಪೆನಿಯ ಎಂಜಿನಿಯರಿಂಗ್‌ ವಿಭಾಗದ ಹೊರತಾದ ಬಿಸಿನೆಸ್‌,ಹಣಕಾಸು,ಮಾರುಕಟ್ಟೆ ವಿಭಾಗವನ್ನು ನಾನು ನೋಡಿಕೊಳ್ಳುತ್ತಿದ್ದೇನೆ.

 ವಾಟ್ಸ್‌ ಆಪ್‌ ಬೆಳವಣಿಗೆಯಲ್ಲಿ ನಿಮ್ಮ ಪಾತ್ರವೇನು?

#4


ಕಂಪೆನಿಯ ಪರವಾಗಿ ನಾನು ಮತ್ತು ನಮ್ಮ ತಂಡ ವಿವಿಧ ಮೊಬೈಲ್‌ ನೆಟ್‌ವರ್ಕ್‌‌‌ ಕಂಪೆನಿಗಳ ಜೊತೆಗೆ ಒಪ್ಪಂದ ನಡೆಸಿದ್ದೇವೆ. ಈ ಒಪ್ಪಂದಿದಾಗಿ ವಿಶ್ವದಲ್ಲಿರುವ ಐವತ್ತಕ್ಕೂ ಹೆಚ್ಚು ಕಂಪೆನಿಗಳು ಕಡಿಮೆ ಬೆಲೆಯ ಮೊಬೈಲ್‌ ಡೇಟಾದಲ್ಲಿ ವಾಟ್ಸ್‌ ಆಪ್‌ನ್ನು ಗ್ರಾಹಕರಿಗೆ ನೀಡುತ್ತಿದೆ. ಇದರಿಂದಾಗಿ ವಾಟ್ಸ್‌ ಆಪ್‌ ಇಂದು ಜನಪ್ರಿಯ ಮೆಸೆಜಿಂಗ್‌ ಆಪ್‌ ಆಗಿ ಪರಿವರ್ತ‌ನೆಯಾಗಿದೆ.

 ವಾಟ್ಸ್‌ಆಪ್‌ನಲ್ಲಿ ಭಾರತದ ಪಾತ್ರ?

#5


ವಿಶ್ವದ ಅತಿ ಹೆಚ್ಚು ವಾಟ್ಸ್‌ ಆಪ್‌ ಬಳಕೆದಾರರ ಹೊಂದಿರುವ ದೇಶಗಳ ಪೈಕಿ ಭಾರತವೂ ಒಂದು.ನಮಗೆ ಬಹಳ ಸಂತೋಷವಾಗುತ್ತಿದೆ. ಸ್ಮಾರ್ಟ್‌ಫೋನ್‌ ಬಂದ ಮೇಲೆ ವಾಟ್ಸ್‌ ಆಪ್‌ ಬಳಸುವ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಭಾರತದಲ್ಲಿ ನಾಲ್ಕು ಕೋಟಿಗೂ ಅಧಿಕ ಜನ ಪ್ರತಿ ತಿಂಗಳು ವಾಟ್ಸ್‌ಆಪ್‌ನ್ನು ಸಕ್ರೀಯವಾಗಿ ಬಳಸುತ್ತಿದ್ದಾರೆ.

 ಎಲ್ಲಾ ಮೆಸೇಜಿಂಗ್‌ ಆಪ್‌ಗಿಂತಲೂ ವಾಟ್ಸ್ ಆಪ್‌ ಹೆಚ್ಚು ಜನಪ್ರಿಯವಾಗಿದ್ದು ಹೇಗೆ?

#6


ನಮ್ಮ ಉತ್ಪನ್ನವನ್ನು ಗ್ರಾಹಕ ಸ್ನೇಹಿಯಾಗಿ ತಯಾರಿಸಲು ಹೆಚ್ಚಿನ ಗಮನಹರಿಸುತ್ತೇವೆ. ಜೊತೆಗೆ ವಾಟ್ಸ್‌ಆಪ್‌‌ನಲ್ಲಿರುವ ಸಣ್ಣ ವಿಶೇಷತೆಯಿಂದಾಗಿ ನಾವು ಈ ರೀತಿಯಾಗಿ ಬೆಳೆದಿದ್ದೇವೆ.

 ವಾಟ್ಸ್‌ ಆಪ್‌ ಬೆಳವಣಿಗೆಗೆ ಫೇಸ್‌ಬುಕ್‌ ಹೇಗೆ ಸಹಕಾರಿ?

#7


ಫೇಸ್‌‌ಬುಕ್‌ ಸ್ವಾಧೀನದಿಂದಾಗಿ ವಾಟ್ಸ್‌ಆಪ್‌ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ ವಾಟ್ಸ್‌ ಆಪ್‌ ಇನ್ನು ಮುಂದೆಯೂ ಸ್ವತಂತ್ರವಾಗಿ ಕಾರ್ಯ‌‌ನಿರ್ವ‌ಹಿಸಲಿದೆ.ಫೇಸ್‌‌ಬುಕ್‌ನಲ್ಲಿ ಸಾಕಷ್ಟು ತಜ್ಞರಿದ್ದು ಇದರಿಂದಾಗಿ ವಾಟ್ಸ್‌ ಆಪ್‌ ಬೆಳವಣಿಗೆ ಮತ್ತಷ್ಟು ಸಹಕಾರಿಯಾಗಿದೆ.

ಸುದ್ದಿ ಕೃಪೆ:economictimes.indiatimes.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot