Home
ಸುದ್ದಿಜಾಲ

ವಾಟ್ಸಾಪ್‌ ಬಳಕೆದಾರರೇ ಗಮನಿಸಿ: ಈ ಕರೆ, ಮೆಸೆಜ್‌ ಸ್ವೀಕರಿಸುವ ಮುನ್ನ ಇರಲಿ ಎಚ್ಚರ!

ವಾಟ್ಸಾಪ್‌ ಬಳಕೆ ಮಾಡಲು ಇತ್ತೀಚೆಗೆ ಬಳಕೆದಾರರು ಹೆದರುವಂತೆ ಆಗಿದೆ. ಕೆಲವು ದಿನಗಳಿಂದ ವಾಟ್ಸಾಪ್‌ನಲ್ಲಿ ತಂತಾನೆ ಮೈಕ್ರೋಫನ್‌ ಆನ್‌ ಆಗುವ ಮೂಲಕ ಬಳಕೆದಾರರ ಮಾತುಗಳನ್ನು ಆಲಿಸುತ್ತಿದೆ ಎನ್ನುವ ಆರೋಪ ಕೇಳಿಬಂದಿತ್ತು. ಇದರ ಜೊತೆಗೆ ಸ್ಕ್ಯಾಮರ್‌ಗಳು ಕರೆ ಮಾಡುವ ಮೂಲಕ ಬಳಕೆದಾರರಿಗೆ ವಂಚನೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಹೌದು, ವಾಟ್ಸಾಪ್‌ನಲ್ಲಿ ಒಂದಾದ ಮೇಲೊಂದರಂತೆ ಆಪಾದನೆಗಳು ಕೇಳಿಬರುತ್ತಿದ್ದು, ಈ ಸಂಬಂಧ ಕಂಪೆನಿ ಎಷ್ಟೇ ಭದ್ರತಾ ಸೌಲಭ್ಯ ನೀಡಿದರೂ ಸಹ ಮೋಸ ಹೋಗುವ ಜನರ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆ. ಅದರಲ್ಲೂ ನೀವೇನಾದರೂ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ವಾಟ್ಸಾಪ್‌ ಕರೆ ಸ್ವೀಕರಿಸುತ್ತಿದ್ದರೆ? ಅಥವಾ ಸಂದೇಶಗಳು ಬರುತ್ತಿದ್ದರೆ ತಕ್ಷಣವೇ ಈ 5 ಕೆಲಸಗಳನ್ನು ಕಡ್ಡಾಯವಾಗಿ ಮಾಡಿ.

ವಾಟ್ಸಾಪ್‌ ಬಳಕೆದಾರರೇ ಗಮನಿಸಿ:ಈ ಕರೆ, ಮೆಸೆಜ್‌ ಸ್ವೀಕರಿಸುವ ಮುನ್ನ ಇರಲಿ ಎಚ್ಚರ

ವಾಟ್ಸಾಪ್‌ನಲ್ಲಿ ಏನಿದು ಹೊಸ ಲೋಪ?: ಅನೇಕ ಭಾರತೀಯರು ವಾಟ್ಸಾಪ್‌ನಲ್ಲಿ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಅಪೇಕ್ಷಿಸದ ಕರೆಗಳು ಮತ್ತು ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ಟ್ವೀಟ್‌ ಮಾಡುವ ಮೂಲಕ ಕಿಡಿ ಕಾರುತ್ತಿದ್ದಾರೆ. ಈ ಬಗ್ಗೆ ಭಾರತ ಸರ್ಕಾರ ಕೂಡ ಬಳಕೆದಾರರಿಗೆ ಸಲಹೆ ನೀಡಿದ್ದು, ಎಚ್ಚರಿಕೆಯಿಂದ ವರ್ತಿಸಿ ಎಂದು ತಿಳಿಸಿದೆ. ಆದರೂ ಕೆಲವು ಬಳಕೆದಾರರು ಇದನ್ನು ನಿರ್ಲಕ್ಷಿಸಿದ್ದಾರೆ.

ಈ ಕರೆ ಹಾಗೂ ಮೆಸೆಜ್‌ ಯಾಕಾಗಿ ಬರುತ್ತಿವೆ?: ವಂಚಕರು ಬಳಕೆದಾರರನ್ನು ಮೋಸಗೊಳಿಸಲು ಮತ್ತು ಹಣವನ್ನು ಕದಿಯಲು ವಾಟ್ಸಾಪ್‌ ಮತ್ತು ಟೆಲಿಗ್ರಾಮ್‌ನಂತಹ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ಗಳನ್ನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಸ್ಕ್ಯಾಮರ್‌ಗಳು ಬಳಕೆದಾರರನ್ನು ವಂಚಿಸಲು ವಿಭಿನ್ನ ಮಾರ್ಗವನ್ನು ಕಂಡುಕೊಂಡಿದ್ದಾರೆ. ಅದರಲ್ಲಿ ಅರೆಕಾಲಿಕ ಉದ್ಯೋಗ, ಹೆಚ್ಚಿನ ಆದಾಯದ ಆಮಿಷ ನೀಡುತ್ತಿದ್ದಾರೆ. ಈ ಮೂಲಕ ಜನರಿಂದ ಲಕ್ಷ ಲಕ್ಷ ಹಣ ವಂಚನೆ ಮಾಡುತ್ತಿದ್ದಾರೆ. ಹೀಗಾಗಿ ಈ ರೀತಿಯ ಕರೆಗಳು ಬಂದಾಗ ಮೊದಲು ಈ ಕೆಲಸ ಮಾಡಿ.

ಕರೆಗೆ ಉತ್ತರಿಸಬೇಡಿ: ಅಂತಾರಾಷ್ಟ್ರೀಯ ಕರೆಗಳು ನಿಮ್ಮ ಫೋನ್‌ಗೆ ಬಂದಾಗ ನೀವು ಮಾಡಬೇಕಾದ ಕೆಲಸ ಏನೆಂದರೆ ಆ ಕರೆಯನ್ನು ಸ್ವೀಕರಿಸಿದೆ ಇರುವುದು. ಅಂದರೆ ಈ ಕರೆಗೆ ಉತ್ತರಿಸುವುದನ್ನು ತಪ್ಪಿಸಬೇಕಿದೆ. ನೀವೇನಾದರೂ ಏನಾಗುತ್ತೋ ನೋಡೇ ಬಿಡೋಣ ಎಂದು ಕರೆ ಸ್ವೀಕಾರ ಮಾಡಿದ್ದೇ ಆದರೆ ನಿಮ್ಮನ್ನು ಅವರು ತಮ್ಮ ಚಾಣಾಕ್ಷ ಬುದ್ಧಿಯಿಂದ ಮರಳು ಮಾಡಿ ಮೋಸಗೊಳಿಸುವುದು ಖಚಿತ.

ವಾಟ್ಸಾಪ್‌ ಬಳಕೆದಾರರೇ ಗಮನಿಸಿ:ಈ ಕರೆ, ಮೆಸೆಜ್‌ ಸ್ವೀಕರಿಸುವ ಮುನ್ನ ಇರಲಿ ಎಚ್ಚರ

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಮೆಸೆಜ್‌ಗಳಿಗೆ ಪ್ರತಿಕ್ರಿಯಿಸಬೇಡಿ: ಬಹುಪಾಲು ಮಂದಿ ಈ ರೀತಿಯ ಮೆಸೆಜ್‌ಗಳನ್ನು ಖಂಡಿತಾ ಸ್ವೀಕಾರ ಮಾಡಿರುತ್ತಾರೆ. ಈ ಮೆಸೆಜ್‌ಗಳು ಬಹುಮಾನ ಅಥವಾ ಲಾಟರಿ ಗೆಲುವಿನಂತಹ ಹಣಕಾಸಿನ ಪ್ರಯೋಜನಗಳನ್ನು ನೀಡುವ ರೀತಿಯಲ್ಲಿದ್ದು, ಇವುಗಳನ್ನು ಸಹ ಅಂತಾರಾಷ್ಟ್ರೀಯ ಸಂಖ್ಯೆಯಿಂದ ಕಳುಹಿಸಲಾಗಿರುತ್ತದೆ. ಈ ಮೆಸೆಜ್‌ಗಳನ್ನು ನೋಡಿದೊಡನೆ ಇದು ಹಗರಣ ಎಂದು ಅರ್ಥ ಮಾಡಿಕೊಳ್ಳಿ, ಬಳಿಕ ವರದಿ ಮಾಡಿ.

ಸಂಖ್ಯೆಯನ್ನು ನಿರ್ಬಂಧಿಸಿ: ನೀವು ಒಂದೇ ಅಂತಾರಾಷ್ಟ್ರೀಯ ಸಂಖ್ಯೆಯಿಂದ ಬಹು ಕರೆಗಳನ್ನು ಸ್ವೀಕರಿಸಿದ್ದೇ ಆದರೆ ಆ ಸಂಖ್ಯೆಯನ್ನು ನಿರ್ಬಂಧಿಸುವುದು ಒಳ್ಳೆಯದು. ಇದಕ್ಕಾಗಿ ನೀವು ನಿಮ್ಮ ಕರೆ ಲಾಗ್‌ನಲ್ಲಿ ಈ ಸಂಖ್ಯೆಯನ್ನು ಪತ್ತೆ ಮಾಡಿ ನಂತರ ನಿರ್ಬಂಧಿಸುವ ಆಯ್ಕೆ ಮೇಲೆ ಟ್ಯಾಪ್‌ ಮಾಡಿ. ಇದರಿಂದ ಮುಂದಿನ ದಿನಗಳಲ್ಲಿ ಈ ಸಂಖ್ಯೆಯಿಂದ ಯಾವುದೇ ಕರೆ ಅಥವಾ ಮೆಸೆಜ್‌ ನಿಮ್ಮ ಸ್ಮಾರ್ಟ್‌ಫೋನ್‌ಗೆ ಬರುವುದಿಲ್ಲ.

ಸಂಖ್ಯೆಯನ್ನು ವರದಿ ಮಾಡಿ: ಒಂದೇ ಸಂಖ್ಯೆಯಿಂದ ಕರೆ ಬಂದರೆ ಬ್ಲಾಕ್‌ ಮಾಡಬಹುದು.ಆದರೆ,ಹಲವು ಸಂಖ್ಯೆಗಳಿಂದ ಕರೆಗಳು ಬರುತ್ತಿದ್ದರೆ ಇದೊಂದು ದೊಡ್ಡ ಮೋಸದ ಜಾಲ ಎಂದು ನೀವು ತಿಳಿದುಕೊಳ್ಳಬೇಕಾಗುತ್ತದೆ.ಈ ಸಂಖ್ಯೆಯು ಸ್ಪ್ಯಾಮ್, ವಂಚನೆ ಅಥವಾ ಇತರ ದುರುದ್ದೇಶಪೂರಿತ ಚಟುವಟಿಕೆಯಿಂದ ಕೂಡಿದೆ ಎಂದು ತಿಳಿದು ಈ ಸಂಖ್ಯೆಗಳನ್ನು ವಾಟ್ಸಾಪ್‌ಗೆ ವರದಿ ಮಾಡಬಹುದು. ಇದಕ್ಕಾಗಿ ನಿಮ್ಮ ಕರೆ ಲಾಗ್‌ನಲ್ಲಿರುವ ಸಂಖ್ಯೆಯ ಮೇಲೆ ಟ್ಯಾಪ್ ಮಾಡಿ ಮತ್ತು ಸಂಖ್ಯೆಯನ್ನು ವರದಿ ಮಾಡುವ ಆಯ್ಕೆಯನ್ನು ಆರಿಸಿದರೆ ಸಾಕು.

ವಾಟ್ಸಾಪ್‌ ಬಳಕೆದಾರರೇ ಗಮನಿಸಿ:ಈ ಕರೆ, ಮೆಸೆಜ್‌ ಸ್ವೀಕರಿಸುವ ಮುನ್ನ ಇರಲಿ ಎಚ್ಚರ

ಎರಡು ಹಂತದ ದೃಢೀಕರಣವನ್ನು ಸಕ್ರಿಯಗೊಳಿಸಿ: ಎರಡು ಹಂತದ ದೃಢೀಕರಣ ವ್ಯವಸ್ಥೆ ಈ ಹಿಂದಿನಿಂದಲೂ ಜಾರಿಯಲ್ಲಿದೆ.ಇದನ್ನು ಬಹುಪಾಲು ಮಂದಿ ಬಳಕೆ ಮಾಡುವುದೇ ಇಲ್ಲ.ಇದನ್ನು ಆರಂಭದಿಂದಲೇ ಮಾಡಿದ್ದೇ ಆದರೆ ನೀವು ಬಹುಶಃ ಮೋಸ ಹೋಗುವ ಪ್ರಮೇಯವೇ ಬರುವುದಿಲ್ಲ. ಇದಕ್ಕಾಗಿ ಅನಧಿಕೃತ ಪ್ರವೇಶದಿಂದ ನಿಮ್ಮ ವಾಟ್ಸಾಪ್‌ ಖಾತೆಯನ್ನು ಮತ್ತಷ್ಟು ರಕ್ಷಿಸಲು, ಎರಡು ಅಂಶದ ದೃಢೀಕರಣವನ್ನು ಸಕ್ರಿಯಗೊಳಿಸಿ.ಅಂದರೆ ನಿಮ್ಮ ಖಾತೆಗೆ ಲಾಗ್ ಇನ್ ಮಾಡುವಾಗ ನಿಮ್ಮ ಪಾಸ್‌ವರ್ಡ್‌ಗೆ ಹೆಚ್ಚುವರಿಯಾಗಿ ಪರಿಶೀಲನೆ ಕೋಡ್ ಅನ್ನು ನಮೂದಿಸಬೇಕಿದೆ.

ಇಷ್ಟೆಲ್ಲಾ ಮಾಡಿದರೂ ಸಹ ವಾಟ್ಸಾಪ್‌ ಸೇರಿದಂತೆ ನೀವು ಯಾವೆಲ್ಲಾ ಮೆಸೆಜಿಂಗ್‌ ಆಪ್‌ಗಳನ್ನು ಬಳಕೆ ಮಾಡುತ್ತೀರೋ ಅವುಗಳ ಮೇಲೆ ಸದಾ ಕಣ್ಣಿಡಬೇಕಾಗುತ್ತದೆ. ಯಾಕೆಂದರೆ ಮೊದಲೇ ತಿಳಿಸಿದಂತೆ ಸ್ಲ್ಯಾಮರ್‌ಗಳು ಒಂದಲ್ಲಾ ಒಂದು ಹೊಸ ಮಾರ್ಗಗಳನ್ನು ಕಂಡುಕೊಂಡು ನಿಮ್ಮನ್ನು ಅವರ ಮೋಸದ ಬಲೆಯಲ್ಲಿ ಬೀಳಿಸಲು ಮುಂದಾಗುತ್ತಲೇ ಇರುತ್ತಾರೆ. ಹೀಗಾಗಿ ನಾವು ವಾಟ್ಸಾಪ್‌ ಅಥವಾ ಇನ್ನಿತರೆ ಮೆಸೆಜಿಂಗ್‌ ಆಪ್‌ಗಳನ್ನು ದೂರುವ ಮುನ್ನ ಅಗತ್ಯ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಿದೆ.

Best Mobiles in India

English summary
Accusations are being heard one after the other on WhatsApp, and the number of people who are being cheated is increasing no matter how much security the company provideas in this regard. Do these five things if you are receiving WhatsApp calls from international numbers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+