ವಾಟ್ಸಪ್‌ನ ಹೊಸ ಫೀಚರ್: ಕಳುಹಿಸಿದ ಮೆಸೆಜ್ ತಾನೇ ಡಿಲೀಟ್ ಆಗುತ್ತೆ!

|

ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ಇನ್‌ಸ್ಟಂಟ್ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಪ್ ಈಗಾಗಲೇ ನಂಬರ್ ಒನ್ ಸ್ಥಾನದಲ್ಲಿದೆ. ತನ್ನ ಬಳಕೆದಾರರಿಗೆ ಅನುಕೂಲ ಆಗಲೆಂದು ಸಾಕಷ್ಟು ಸುರಕ್ಷತಾ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇತ್ತೀಚಿಗೆ ಡಾರ್ಕ್‌ಮೋಡ್ ಫೀಚರ್ ಅನ್ನು ಸಹ ಅಳವಡಿಸಿಕೊಂಡಿದೆ. ಆದರೆ ಇದೀಗ ವಾಟ್ಸಪ್ ಸೇರಲಿರುವ ಮತ್ತೊಂದು ಅಚ್ಚರಿಯ ಮತ್ತು ಕುತೂಹಲಕಾರಿ ಫೀಚರ್ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ಫೇಸ್‌ಬುಕ್

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಹೊಸದಾಗಿ ಡಿಲೀಟ್ ಮೆಸೆಜ್ಸ ಫೀಚರ್ ಸೇರಲಿರುವ ಬಗ್ಗೆ WABetaInfo ತಾಣವು ಮಾಹಿತಿಯನ್ನು ಬಹಿರಂ ಪಡಿಸಿದೆ. ಅಂದಹಾಗೆ ಹೊಸ ಡಿಲಿಟ್ ಮೆಸೆಜ್ಸ ಫೀಚರ್ ಈಗಾಗಲೆ ವಾಟ್ಸಪ್ ಬೀಟಾ ಆವೃತ್ತಿಯ ಬಳಕೆದಾರರಿಗೆ ಲಭ್ಯವಾಗಲಿದ್ದು, ಸಾಮಾನ್ಯ ವಾಟ್ಸಪ್ ಬಳಕೆದಾರರಿಗೆ ಅತೀ ಶೀಘ್ರದಲ್ಲಿಯೇ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಸೆಲ್ಫ್ ಡಿಲೀಟ್ ಮೆಸೆಜ್'

ವಾಟ್ಸಪ್ 'ಸೆಲ್ಫ್ ಡಿಲೀಟ್ ಮೆಸೆಜ್' ಆಯ್ಕೆ ಇನ್ನು ಪ್ರಾಯೋಗಿಕ ಹಂತದಲ್ಲಿದ್ದು, ಬಳಕೆದಾರರು ವಾಟ್ಸಪ್‌ ನಲ್ಲಿ ವೈಯಕ್ತಿಕವಾಗಿ ಕಳುಹಿಸಿದ ಮೆಸೆಜ್ ಅನ್ನು ಆಟೋಮ್ಯಾಟಿಕ್ ಡಿಲೀಟ್ ಮಾಡಲು ಈ 'ಸೆಲ್ಫ್ ಡಿಲೀಟ್ ಮೆಸೆಜ್ಸ' ಆಯ್ಕೆ ನೆರವು ನೀಡುತ್ತದೆ. ಅಂದರೇ ಕಳುಹಿಸಿದ ಮೆಸೆಜ್ ಅನ್ನು ನಿಗದಿತ ಸಮಯದ ಬಳಿಕ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುವಂತೆ ಸೆಟ್‌ ಮಾಡುವ ಅವಕಾಶವನ್ನು ಈ ಫೀಚರ್ ಒದಗಿಸಲಿದೆ.

ಮೆಸೆಜ್ ನಿರ್ದಿಷ್ಟ

ಕಳುಹಿಸಿದ ಮೆಸೆಜ್ ನಿರ್ದಿಷ್ಟ ಸಮಯದ ನಂತರ ಮೆಸೆಜ್ ಸ್ವೀಕರಿಸಿದ ಚಾಟ್‌ನಿಂದ ಸ್ವಯಂ ಪ್ರೇರಿತವಾಗಿ ಡಿಲೀಟ್ ಆಗುವ ವ್ಯವಸ್ಥೆಯನ್ನು (self-destructing messages) ಈ ಆಯ್ಕೆಯನ್ನು ಹೊಂದಿರಲಿದೆ. ಇನ್ನು ಮೆಸೆಜ್ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗಲು ಸಮಯದ ಆಯ್ಕೆಗಳನ್ನು ಈ ಫೀಚರ್ ಒಳಗೊಂಡಿರಲಿದೆ. ಅವುಗಳು ಕ್ರಮವಾಗಿ ಒಂದು ಗಂಟೆ, ಒಂದು ವಾರ, ಒಂದು ತಿಂಗಳು ಮತ್ತು ಒಂದು ವರ್ಷ ಹೀಗೆ ಇರಲಿವೆ ಎಂದು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ.

ಸಕ್ರಿಯ

ಬಳಕೆದಾರರು ಸೆಲ್ಫ್ ಡಿಲೀಟ್ ಮೆಸೆಜ್ ಆಯ್ಕೆಯನ್ನು ಸಕ್ರಿಯ ಮಾಡಿಕೊಂಡರೇ ನಿಗದಿ ಪಡಿಸಿದ ಸಮಯದ ನಂತರ ಕಳುಹಿಸಿದ ಮೆಸೆಜ್‌ಗಲು ಡಿಲೀಟ್ ಆಗುತ್ತ ಸಾಗುತ್ತವೆ. ಬೇಡವೆಂದರೇ ಈ ಆಯ್ಕೆಯನ್ನು ಆಫ್ ಮಾಡಬಹುದು. ಈ ಆಯ್ಕೆಯು ಗ್ರೂಪ್ ಚಾಟ್‌ಗಳಲ್ಲಿಯೂ ಕಾಣಿಸಿಕೊಳ್ಳುವ ನಿರೀಕ್ಷೆಗಳಿವೆ. ಈ ಆಯ್ಕೆಯನ್ನು ಸಕ್ರಿಯ ಮಾಡಲು ಗ್ರೂಪ್ ಅಡ್ಮಿನ್‌ಗೆ ಮಾತ್ರ ಅವಕಾಶ ಇರಲಿದೆ ಎಂದು ತಿಳಿದು ಬಂದಿದೆ.

ಡಾರ್ಕ್ ಮೋಡ್

ವಾಟ್ಸಪ್ ಇತ್ತೀಚಿಗೆ ತನ್ನ ಬಹುನಿರೀಕ್ಷಿತ ಡಾರ್ಕ್ ಮೋಡ್ ಫೀಚರ್‌ ಅನ್ನು ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಬಿಡುಗಡೆ ಮಾಡಿದೆ. ಆಂಡ್ರಾಯ್ಡ್ 10 ಓಎಸ್ ಫೋನ್‌ಗಳು ಡಾರ್ಕ್‌ಮೋಡ್ ಆಯ್ಕೆಯನ್ನು ಪಡೆದಿವೆ. ಅದಾಗ್ಯೂ ಅವರಿಗೂ ವಾಟ್ಸ್ ಡಾರ್ಕ್ ಮೋಡ್ ಆಯ್ಕೆ ಲಭ್ಯವಿದೆ.

Best Mobiles in India

English summary
WhatsApp’s latest beta update shows development on the self-destructing messages feature.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X