Home
ಸುದ್ದಿಜಾಲ

ವಾಟ್ಸಾಪ್‌ನಲ್ಲಿ ಬಂದೇ ಬಿಡ್ತು ಮತ್ತೆ ಹೊಸ ಫೀಚರ್!..ಲಾಗ್‌ ಇನ್‌ ಈಗ ಸುಲಭ!

ಜನಪ್ರಿಯ ಮೆಸೆಜಿಂಗ್ ಪ್ಲಾಟ್‌ಫಾರ್ಮ್ ಎನಿಸಿಕೊಂಡಿರುವ ವಾಟ್ಸಾಪ್‌ ಹತ್ತು ಹಲವು ಫೀಚರ್ಸ್‌ಗಳ ಮೂಲಕ ಬಳಕೆದಾರರಿಗೆ ಇಷ್ಟವಾಗಿದೆ. ಇದೀಗ ಮಲ್ಟಿ ಡಿವೈಸ್ ಲಾಗ್‌ ಇನ್‌ ಫೀಚರ್ ಅನ್ನು ಅಧಿಕೃತವಾಗಿ ಪರಿಚಯಿಸಲು ಸಜ್ಜಾಗಿದೆ. ಬಳಕೆದಾರರು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಈ ಫೀಚರ್ ಸದ್ಯದಲ್ಲೇ ವಾಟ್ಸಾಪ್‌ ಸೇರಿಕೊಳ್ಳಲಿದೆ ಎನ್ನಲಾಗಿದೆ.

ವಾಟ್ಸಾಪ್‌ನಲ್ಲಿ ಬಂದೇ ಬಿಡ್ತು ಮತ್ತೆ ಹೊಸ ಫೀಚರ್!..ಲಾಗ್‌ ಇನ್‌ ಈಗ ಸುಲಭ!

ಹೌದು, ವಾಟ್ಸಾಪ್‌ ಈಗಾಗಲೇ ಒಂದೇ ವೇಳೆಗೆ ಎರಡು ಡಿವೈಸ್‌ಗಳಲ್ಲಿ ಆನ್‌ಲೈನ್‌ ಇರಬಹುದಾದ ಆಯ್ಕೆ ಹೊಂದಿದೆ. ಅದರ ಸಂಸ್ಥೆಯು ಈಗ ಮಲ್ಟಿ ಡಿವೈಸ್ ಲಾಗ್‌ ಇನ್‌ ಫೀಚರ್ (ವೆಬ್‌ ಲಾಗ್‌ ಇನ್) ಫೀಚರ್ ಪರಿಚಯಿಸಲು ರೆಡಿಯಾಗಿದೆ. ಸದ್ಯ ಈ ಫೀಚರ್ ಕೆಲವು ಆಂಡ್ರಾಯ್ಡ್‌ ಮತ್ತು ಐಓಎಸ್‌ನ ಬೀಟಾ ಆವೃತ್ತಿಗಳಲ್ಲಿ ಲಭ್ಯ ಇದ್ದು, ಪ್ರಾಯೋಗಿಕ ಹಂತದಲ್ಲಿ ಇದೆ. ನಂತರದಲ್ಲಿ ಎಲ್ಲ ಬಳಕೆದಾರರಿಗೆ ಲಭ್ಯ ಆಗಲಿದೆ.

ಬಳಕೆದಾರರು ಲ್ಯಾಪ್‌ಟಾಪ್‌/ಪಿಸಿ ನಲ್ಲಿ ವಾಟ್ಸಾಪ್‌ ಬಳಕೆ ಮಾಡಲು ಫೋನ್‌ ಸಹಾಯ ಪಡೆಯಬೇಕಿತ್ತು. ಆದ್ರೆ ಹೊಸ ವೆಬ್‌ ಲಾಗ್‌ ಇನ್‌ ಫೀಚರ್‌ ನೇರವಾಗಿ ಲ್ಯಾಪ್‌ಟಾಪ್‌/ಪಿಸಿಯಲ್ಲಿ ಲಾಗ್‌ ಇನ್ ಆಗಲು ಪೂರಕವಾಗಿರಲಿದೆ. ಸ್ಮಾರ್ಟ್‌ಫೋನ್ ಇಂಟರ್ನೆಟ್‌ಗೆ ಸಂಪರ್ಕ ಹೊಂದಿಲ್ಲದಿದ್ದರೂ ಸಹ ನಿಮ್ಮ ಪಿಸಿ/ಲ್ಯಾಪ್‌ಟಾಪ್ ಯಲ್ಲಿ ವಾಟ್ಸಾಪ್‌ ಅನ್ನು ಬಳಸಲು ಈ ಆಯ್ಕೆಯು ಬಳಕೆದಾರರಿಗೆ ಅನುಮತಿಸುತ್ತದೆ.

ವಾಟ್ಸಾಪ್‌ನಲ್ಲಿ ಬಂದೇ ಬಿಡ್ತು ಮತ್ತೆ ಹೊಸ ಫೀಚರ್!..ಲಾಗ್‌ ಇನ್‌ ಈಗ ಸುಲಭ!

ಬಳಕೆದಾರರು ಪಿಸಿ/ಲ್ಯಾಪ್‌ ಟಾಪ್‌ ನಿಂದ ಲಾಗ್ ಔಟ್ ಆಗುವವರೆಗೆ ಅವರ ವಾಟ್ಸಾಪ್‌ ಖಾತೆಯು ಬ್ರೌಸರ್‌ ನಲ್ಲಿ ಗೋಚರಿಸುತ್ತದೆ. ವಿಂಡೋಸ್ 10, ವಿಂಡೋಸ್ 11, ಮತ್ತು ಮ್ಯಾಕ್‌ OS ನಲ್ಲಿ, ಇದು ಡೆಸ್ಕ್‌ ಟಾಪ್ ಅಪ್ಲಿಕೇಶನ್‌ ಗಾಗಿ ವಾಟ್ಸಾಪ್‌ ನೊಂದಿಗೆ ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ ಆಂಡ್ರಾಯ್ಡ್ ಸ್ಮಾರ್ಟ್‌ ಫೋನ್‌ಗಳಿಗೆ ಕನೆಕ್ಟ್‌ ಮಾಡಿದಾಗ, ವೆಬ್ ಪೋರ್ಟಲ್ ಮೂಲಕ ಮೆಸೆಜ್‌ಗಳನ್ನು ಮತ್ತು ಥ್ರೆಡ್‌ಗಳನ್ನು ಡಿಲೀಟ್ ಮಾಡಬಹುದು. ಆದಾಗ್ಯೂ, iOS ನಲ್ಲಿ, ಇದು ಹಾಗಲ್ಲ. ಮತ್ತೊಂದೆಡೆ, ನೀವು ಬೀಟಾ ಮೋಡ್‌ನಲ್ಲಿ ಐಫೋನ್‌ಗಳಲ್ಲಿ ಮೆಸೆಜ್‌ಗಳನ್ನು ಡಿಲೀಟ್ ಮಾಡಬಹುದು.

ಹಾಗೆಯೇ ಇತ್ತೀಚಿಗಷ್ಟೆ ವಾಟ್ಸಾಪ್‌ ತನ್ನ ವೆಬ್‌ ಆವೃತ್ತಿಯ ಬಳಕೆದಾರರಿಗೆ ಹೊಸದಾಗಿ ಮೂರು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಿಂದ ವಾಟ್ಸಾಪ್‌ ವೆಬ್‌ ಬಳಕೆದಾರರು ಇನ್ಮುಂದೆ ಫೋಟೋ ಗಳನ್ನು ಎಡಿಟ್‌ ಮಾಡ ಬಹುದು ಮತ್ತು ಪ್ರಿವ್ಯೂ ಲಿಂಕ್ಸ್‌ ಫೀಚರ್ಸ್‌ಗಳನ್ನು ಸೇರಿಸಿರುವುದಾಗಿ ವಾಟ್ಸಾಪ್‌ ಘೊಷಣೆ ಮಾಡಿದೆ. ಇದಲ್ಲದೆ ಹೊಸ ಸ್ಟಿಕ್ಕರ್ ಸಜೇಷನ್‌ ನೀಡುವ ಫೀಚರ್ಸ್‌ ಅನ್ನು ಕೂಡ ಸೇರಿಸಿದೆ.

ವಾಟ್ಸಾಪ್‌ನಲ್ಲಿ ಬಂದೇ ಬಿಡ್ತು ಮತ್ತೆ ಹೊಸ ಫೀಚರ್!..ಲಾಗ್‌ ಇನ್‌ ಈಗ ಸುಲಭ!

ವಾಟ್ಸಾಪ್‌ ಹೊಸದಾಗಿ ತನ್ನ ವೆಬ್‌ ಆವೃತ್ತಿಯಲ್ಲಿ ಹೊಸದಾಗಿ ಸ್ಟಿಕರ್‌ ಸಜೇಷನ್‌ ಫೀಚರ್ಸ್ ಸೇರಿಸಿದೆ. ಇದು ಬಳಕೆದಾರರಿಗೆ ಸಂಭಾಷಣೆಗಳಿಗೆ ಸರಿಯಾದ ಸ್ಟಿಕ್ಕರ್ ಅನ್ನು ಸರ್ಚ್‌ ಮಾಡುವುದಕ್ಕೆ ಅನುಮತಿಸಲಿದೆ. ಸ್ನೇಹಿತರ ಜೊತೆ ಚಾಟ್‌ ಸಂಭಾಷಣೆ ನಡೆಸುವಾಗ ಸ್ಟಿಕ್ಕರ್ ಅನ್ನು ಬಳಸುವವರು ಸಾಮಾನ್ಯವಾಗಿ ಸರಿಯಾದ ಸ್ಟಿಕ್ಕರ್ ಅನ್ನು ಹುಡುಕಲು ಅನೇಕ ಟ್ಯಾಬ್‌ಗಳ ಮೂಲಕ ಸರ್ಚ್‌ ಮಾಡಬೇಕಾಗುತ್ತದೆ. ಆದರೆ ಈ ಹೊಸ ಫೀಚರ್ಸ್‌ ಅಗತ್ಯಕ್ಕೆ ಬೇಕಾದ ಸ್ಟಿಕ್ಕರ್ ಅನ್ನು ಕಳುಹಿಸುವುದಕ್ಕೆ ಇದು ಅವಕಾಶ ನೀಡಲಿದೆ. ಈ ಫೀಚರ್ಸ್‌ ಅನ್ನು ಗೌಪ್ಯತೆಯ ವಿಚಾರವನ್ನು ಗಮನದಲ್ಲಿಟ್ಟು ಕೊಂಡು ವಿನ್ಯಾಸ ಗೊಳಿಸಲಾಗಿದೆ.

ಇನ್ನು ವಾಟ್ಸಾಪ್‌ ಪ್ರಿವ್ಯೂ ಲಿಂಕ್ಸ್‌ ಫೀಚರ್ಸ್‌ ಅನ್ನು ಕೂಡ ವೆಬ್‌ ಆವೃತ್ತಿಯಲ್ಲಿ ಪರಿಚಯಿಸಿದೆ. ಇದರಿಂದಾಗಿ ವೆಬ್‌ ಆವೃತ್ತಿ ಬಳಸುವ ಬಳಕೆದಾರರು ಯಾವುದೇ ಲಿಂಕ್‌ಗಳು ಬಂದರೂ ಅವುಗಳ ಫುಲ್‌ ಪ್ರಿವ್ಯೂ ನೋಡುವುದಕ್ಕೆ ಅವಕಾಶ ಸಿಗಲಿದೆ. ಲಿಂಕ್ ಅನ್ನು ಸ್ವೀಕರಿಸುವ ಜನರು ಸಂದೇಶ ಕಳುಹಿಸುವ ಅಪ್ಲಿಕೇಶನ್‌ನ ವೆಬ್ ಆವೃತ್ತಿ ಯಲ್ಲಿ ಏನು ಕಳುಹಿಸಿದ್ದಾರೆ ಎಂದು ತಿಳಿಯುವುದಕ್ಕೆ ಇದು ಅನುಮತಿ ನೀಡಲಿದೆ.

ಇದಲ್ಲದೆ ಶೀಘ್ರದಲ್ಲೇ ವಾಟ್ಸಾಪ್‌ ತನ್ನ ಪ್ಲಾಟ್‌ ಫಾರ್ಮ್‌ನಲ್ಲಿ ಅಂಡೂ ರೀಡೂ ಬಟನ್‌ ಪರಿಚಯಿಸುವುದಕ್ಕೆ ಮುಂದಾಗಿದೆ. ಜೊತೆಗೆ ವಾಟ್ಸಾಪ್‌ ಸ್ಟೇಟಸ್‌ ಅಪ್ಡೇಟ್‌ ಮಾಡುವಾಗ ಇಮೇಜ್‌ ರದ್ದು ಗೊಳಿಸುವ ಬಟನ್‌ ಪರಿಚಯಿಸುವುದಕ್ಕೆ ಕಾರ್ಯ ನಿರ್ವಹಿಸುತ್ತಿದೆ ಎನ್ನ ಲಾಗಿದೆ. ಇದಲ್ಲದೆ ವಾಟ್ಸಸಾಪ್‌ನಲ್ಲಿ ನೀವು ಹಂಚಿಕೊಂಡ ಸ್ಟೇಟಸ್‌ ಅನ್ನು ಮತ್ತೆ ಪಡೆಯುವುದಕ್ಕೆ ಅವಕಾಶ ನೀಡಲಿದೆ. ಜೊತೆಗೆ ಆಕಸ್ಮಿಕವಾಗಿ ಪೋಸ್ಟ್ ಮಾಡಿರುವ ಸ್ಟೇಟಸ್ ಅಪ್‌ಡೇಟ್ ಅನ್ನು ತ್ವರಿತ ವಾಗಿ ಡಿಲೀಟ್ ಮಾಡಲು ಸಹಾಯ ಮಾಡುವ ಫೀಚರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದೆ.

Best Mobiles in India

English summary
WhatsApp Set To Roll Out New Multi Device Feature: Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+