WhatsApp: ವಾಟ್ಸಾಪ್‌ನಲ್ಲಿ ಶೀಘ್ರದಲ್ಲೇ ಬಳಕೆದಾರರಿಗೆ ಬರಲಿದೆ ಈ ಫೀಚರ್ಸ್: ಉಪಯೋಗ ಏನು?
ವಾಟ್ಸಾಪ್ (WhatsApp) ಆಗಾಗ್ಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈ ನಡುವೆ ವಾಟ್ಸಾಪ್ ಹೊಸ ಫೀಚರ್ಸ್ ಅನ್ನು ನೀಡಲು ಮುಂದಾಗಿದ್ದು, ಕೆಲವೇ ದಿನಗಳಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
ಹೌದು, ಪ್ರಮುಖ ಮೆಸೆಜಿಂಗ್ ಆಪ್ ಆಗಿರುವ ವಾಟ್ಸಾಪ್‌ನಲ್ಲಿ ಸಾಕಷ್ಟು ಫೀಚರ್ಸ್‌ಗಳನ್ನು ನೀವು ನೋಡಿರಬಹುದು. ಈ ಫೀಚರ್ಸ್‌ಗಳ ಸಾಲಿಗೆ ವಿಶೇಷ ಫೀಚರ್ಸ್‌ವೊಂದು ಸೇರಿಕೊಳ್ಳಲಿದೆ. ಈ ಫೀಚರ್ಸ್ ಮೂಲಕ ಚಾಟ್‌ಗಳಲ್ಲಿ ಲಿಂಕ್ ಪೂರ್ವವೀಕ್ಷಣೆ ಬೇಕೇ ಅಥವಾ ಬೇಡವೇ ಎಂಬ ಆಯ್ಕೆಯನ್ನು ಪಡೆಯಬಹುದಾಗಿದೆ. ಹಾಗಿದ್ರೆ, ಇದರಿಂದ ಏನೆಲ್ಲಾ ಪ್ರಯೋಜನ? ಬನ್ನಿ ನೋಡೋಣ.

ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್: ವಾಟ್ಸಾಪ್ ಹೊಸ ಗೌಪ್ಯತೆ ಫೀಚರ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಬಳಕೆದಾರರಿಗೆ ಚಾಟ್‌ಗಳಲ್ಲಿ ಲಿಂಕ್ ಪೂರ್ವವೀಕ್ಷಣೆಗಳನ್ನು (Link preview) ನಿಷ್ಕ್ರಿಯಗೊಳಿಸಲು ಅನುಮತಿಸುತ್ತದೆ. ಈ ಮೂಲಕ ಬಳಕೆದಾರರ ಕಂಟ್ರೋಲ್ ಮತ್ತು ಗೌಪ್ಯತೆಯನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಅದರಲ್ಲೂ ಗೂಗಲ್ ಪ್ಲೇ ಬೀಟಾ ಪ್ರೋಗ್ರಾಂ ಮೂಲಕ ಇತ್ತೀಚಿನ ಅಪ್‌ಡೇಟ್ ನಲ್ಲಿ ಈ ಸೌಲಭ್ಯ ಸಿಗಲಿದೆ.
WABetaInfo ಈ ಸಂಬಂಧ ವರದಿ ಮಾಡಿದೆ. ಈ ವರದಿ ಪ್ರಕಾರ ವಾಟ್ಸಾಪ್ ಹೊಸ ಅಪ್‌ಡೇಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಅದು ಬಳಕೆದಾರರಿಗೆ ಚಾಟ್‌ಗಳಲ್ಲಿ ಲಿಂಕ್ ಪೂರ್ವವೀಕ್ಷಣೆಗಳನ್ನು ನಿಷ್ಕ್ರಿಯಗೊಳಿಸಲು ಅನುವು ಮಾಡಿಕೊಡುತ್ತದೆ ಎಂದು ಉಲ್ಲೇಖಿಸಿದೆ. ಅಲ್ಲದೆ ಈ ಫೀಚರ್ಸ್ ಪ್ರಸ್ತುತ ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ (2.24.7.12) ಅಭಿವೃದ್ಧಿ ಹಂತದಲ್ಲಿದೆ ಮತ್ತು ಭವಿಷ್ಯದ ಅಪ್‌ಡೇಟ್‌ನಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ ಅನ್ನೋ ಮಾಹಿತಿ ತಿಳಿದುಬಂದಿದೆ.

ಇನ್ನು ಬಳಕೆದಾರರು ವಾಟ್ಸಾಪ್ ಚಾಟ್‌ನಲ್ಲಿ ಲಿಂಕ್ ಅನ್ನು ಶೇರ್ ಮಾಡಿಕೊಂಡರೆ ಆಪ್ ಆಟೋಮ್ಯಾಟಿಕ್ ಆಗಿ ವೆಬ್‌ಪೇಜ್‌ನ ಪೂರ್ವವೀಕ್ಷಣೆಯನ್ನು ಪಡೆಯುತ್ತದೆ. ಈ ಪೂರ್ವವೀಕ್ಷಣೆಯು ಸಾಮಾನ್ಯವಾಗಿ ಶೀರ್ಷಿಕೆ, ಸಂಕ್ಷಿಪ್ತ ವಿವರಣೆ ಮತ್ತು ಕೆಲವೊಮ್ಮೆ ಥಂಬ್‌ನೇಲ್ ಚಿತ್ರವನ್ನು ಒಳಗೊಂಡಿರುತ್ತದೆ. ಈ ನಡುವೆ ಲಿಂಕ್ ಪೂರ್ವವೀಕ್ಷಣೆಗಳು ಕೆಲವೊಮ್ಮೆ ಸ್ವೀಕರಿಸುವವರು ಲಿಂಕ್ ಅನ್ನು ಕ್ಲಿಕ್ ಮಾಡುವ ಮೊದಲೇ ಮಾಹಿತಿಯನ್ನು ಬಹಿರಂಗಪಡಿಸಬಹುದು.
ಆದರೆ ಈ ಫೀಚರ್ಸ್ ಲಭ್ಯವಾದ ನಂತರ ದಾರಿತಪ್ಪಿಸುವ ಲಿಂಕ್‌ಗಳಿಂದ ಬಳಕೆದಾರರನ್ನು ರಕ್ಷಿಸಲು, ಬಳಕೆದಾರರು ಲಿಂಕ್ ಅನ್ನು ಶೇರ್ ಮಾಡಿಕೊಂಡಾಗೆಲ್ಲಾ ವಾಟ್ಸಾಪ್ ಪೂರ್ವವೀಕ್ಷಣೆಯನ್ನು ರಚಿಸಬೇಕೆ ಅಥವಾ ಬೇಡವೇ ಎಂಬುವ ಆಯ್ಕೆ ನೀಡುತ್ತದೆ. ಈ ಹೊಸ ಕಂಟ್ರೋಲ್ ಬಳಕೆದಾರರಿಗೆ ಲಿಂಕ್‌ಗಳನ್ನು ತೆರೆಯುವಾಗ ಅಥವಾ ಶೇರ್ ಮಾಡುವಾಗ ಎಚ್ಚರಿಕೆಯನ್ನು ವಹಿಸಲು ಅನುವು ಮಾಡಿಕೊಡುತ್ತದೆ.

ಈ ನಡುವೆ ವಾಟ್ಸಾಪ್ ಬಳಕೆದಾರರ ಸಂವಹನವನ್ನು ರಕ್ಷಿಸಲು ಕಣ್ಮರೆಯಾಗುವ ಮೆಸೆಜ್‌ಗಳು ಮತ್ತು ಕರೆ ಎನ್‌ಕ್ರಿಪ್ಶನ್‌ನಂತಹ ಫೀಚರ್ಸ್ ಅನ್ನು ಈಗಾಗಲೇ ಪರಿಚಯಿಸಿದೆ. ಇದರೊಂದಿಗೆ ಲಿಂಕ್ ಪೂರ್ವವೀಕ್ಷಣೆಗಳನ್ನು ನಿಷ್ಕ್ರಿಯಗೊಳಿಸುವ ಆಯ್ಕೆಯನ್ನು ನೀಡುವ ಮೂಲಕ, ಬಳಕೆದಾರರು ತಮ್ಮ ಆನ್‌ಲೈನ್ ಸಂವಹನಗಳು ಮತ್ತು ಅವರು ಹಂಚಿಕೊಳ್ಳುವ ಮಾಹಿತಿಯ ಮೇಲೆ ಹೆಚ್ಚಿನ ಕಂಟ್ರೋಲ್ ಆಯ್ಕೆ ನೀಡಲು ವಾಟ್ಸಾಪ್ ಎಲ್ಲಾ ತಯಾರಿ ನಡೆಸಿದೆ.
ಆದರೂ ಸಹ ಈ ಲಿಂಕ್ ಪೂರ್ವವೀಕ್ಷಣೆಗಳನ್ನು ನಿಷ್ಕ್ರಿಯಗೊಳಿಸುವುದರಿಂದ ತಪ್ಪುದಾರಿಗೆಳೆಯುವ ಲಿಂಕ್‌ಗಳ ಅಪಾಯವನ್ನು ಸಂಪೂರ್ಣವಾಗಿ ತೆತೆದುಹಾಕಲು ಸಾಧ್ಯವಿಲ್ಲ ಅನ್ನೋ ವಿಚಾರ ಕಡ ನಿಮ್ಮ ಗಮನಕ್ಕೆ ಇರಲಿ. ಈ ಲಿಂಕ್ ಅನ್ನು ಶೇರ್ ಮಾಡಿಕೊಂಡಾಗ ಬಳಕೆದಾರರು ನಿಜವಾದ ಯುಆರ್‌ಎಲ್ ಅನ್ನು ನೋಡಬಹುದು ಮತ್ತು ದುರುದ್ದೇಶಪೂರಿತ ಸ್ಕ್ಯಾಮರ್‌ಗಳು ಮೋಸಗೊಳಿಸುವ ಲಿಂಕ್ ಶಾರ್ಟ್‌ನರ್‌ಗಳನ್ನು ಬಳಕೆ ಮಾಡಬಹುದು. ಈ ವಿಶೇಷ ಫೀಚರ್ಸ್ ಇನ್ನೂ ಬೀಟಾ ಪರೀಕ್ಷೆಯಲ್ಲಿದೆ. ಅಲ್ಲದೆ ಇದರ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.
ಈ ನಡುವೆ ವಾಟ್ಸಾಪ್ ಮತ್ತೊಂದು ಫೀಚರ್ಸ್‌ನಲ್ಲೂ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ. ಇದು ಬಳಕೆದಾರರಿಗೆ ಸ್ಟೇಟಸ್‌ನಂತೆಯೇ ಒಂದು ನಿಮಿಷದವರೆಗೆ ವಿಡಿಯೋಗಳನ್ನು ಪೋಸ್ಟ್ ಮಾಡಲು ಅನುಕೂಲ ಮಾಡಿಕೊಡಲಿದೆಯಂತೆ. ವಿಡಿಯೋಗಳಲ್ಲಿ ಪ್ರಸ್ತುತ 30 ಸೆಕೆಂಡ್ ಫುಲ್ ಸ್ಟೋರಿ ಅಥವಾ ವಿವರವಾದ ಘಟನೆಗಳನ್ನು ಶೇರ್ ಮಾಡಿಕೊಳ್ಳುವ ಬಳಕೆದಾರರ ಸಾಮರ್ಥ್ಯವನ್ನು ಮಿತಿಗೊಳಿಸುತ್ತದೆ.


Click it and Unblock the Notifications








