ಸದ್ಯದಲ್ಲೇ 'ವಾಟ್ಸಾಪ್‌'ನಲ್ಲಿ ಕಾಣಿಸಲಿವೆ ನಿಮ್ಮನ್ನು ಚಕಿತಗೊಳಿಸುವ ಫೀಚರ್ಸ್!

|

ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ಜನಪ್ರಿಯ ಮೆಸೆಜ್‌ ಆಪ್‌ ವಾಟ್ಸಾಪ್‌ ಈಗಾಗಲೇ ತನ್ನ ಬಳಕೆದಾರರಿಗೆ ಹಲವು ಆಕರ್ಷಕ ಆಯ್ಕೆಗಳನ್ನು ಪರಿಚಯಿಸಿದೆ. ಪ್ರತಿ ಹೊಸ ಅಪ್‌ಡೇಟ್‌ನಲ್ಲಿ ಬಳಕೆದಾರರಿಗಾಗಿ ಹೊಸ ಫೀಚರ್ಸ್‌ ಅಳವಡಿಸಿಕೊಳ್ಳುತ್ತಾ ಮುನ್ನಡೆದಿದೆ. ಇದೀಗ ವಾಟ್ಸಾಪ್‌ ಸಂಸ್ಥೆಯ ನೂತನ ಅಪ್‌ಡೇಟ್‌ನಲ್ಲಿ ಕೆಲವು ಅಚ್ಚರಿಯ ಫೀಚರ್ಸ್‌ಗಳು ಸೇರಲಿವೆ ಎಂದು ವರದಿವೊಂದರಿಂದ ತಿಳಿದುಬಂದಿದೆ.

ವಾಟ್ಸಾಪ್‌

ಹೌದು, ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್‌ ಮೆಸೆಜ್‌ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್‌ ತನ್ನ ಮುಂದಿನ ಅಪ್‌ಡೇಟ್‌ನಲ್ಲಿ ಕೆಲವು ಹೊಸ ಫೀಚರ್ಸ್‌ ಪರಿಚಯಿಸಲಿದೆ. ಅವುಗಳೆಂದರೇ ಮ್ಯಾನೇಜ್ ಚಾಟ್ಸ್‌ ಬ್ಯಾಕ್‌ಅಪ್ ಸೈಜ್‌(Manage Chats Backup Size), ಕಮ್ಯೂನಿಟಿ ಫೀಚರ್ ಫಾರ್ ಗ್ರೂಪ್ ಕನ್ವರ್ಸೇಶನ್ (Community Feature for Group Conversations) ಎನ್ನಲಾಗಿದೆ. ಸದ್ಯ ವಾಟ್ಸಾಪ್‌ನ ಈ ಫೀಚರ್ಸ್‌ಗಳು ಪ್ರಾಯೋಗಿಕ ಹಂತದಲ್ಲಿವೆ ಎಂದು ಹೇಳಲಾಗಿದೆ.

WABetaInfo

ವಾಟ್ಸಾಪ್‌ ಬೀಟಾ ಟ್ರ್ಯಾಕರ್ WABetaInfo ವರದಿಯ ಪ್ರಕಾರ, ಬಳಕೆದಾರರು ವಾಟ್ಸಾಪ್‌ ಚಾಟ್‌ ಬ್ಯಾಕ್‌ಅಪ್‌ ಅನ್ನು ಕ್ಲೌಡ್‌ಗೆ ಅಪ್‌ಲೋಡ್ ಮಾಡುವ ಮೊದಲು ತಮ್ಮ ಬ್ಯಾಕ್‌ಅಪ್ ಗಾತ್ರವನ್ನು ನಿರ್ವಹಿಸಲು ಅನುಮತಿಸಲು ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ. ಹಾಗೆಯೇ 'ಕಮ್ಯೂನಿಟಿ ಫೀಚರ್ ಫಾರ್ ಗ್ರೂಪ್ ಕನ್ವರ್ಸೇಶನ್' ಆಯ್ಕೆಯು ಬಳಕೆದಾರರಿಗೆ ಉತ್ತಮ ಗ್ರೂಪ್‌ ಸಂಭಾಷಣೆಯ ಅನುಭವವನ್ನು ಒದಗಿಸಲು ಸಹಾಯ ಮಾಡಲು ವಾಟ್ಸಾಪ್ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು ವಾಟ್ಸಾಪ್‌ನ ಬರಲಿರುವ ಈ ಹೊಸ ಫೀಚರ್ಸ್‌ಗಳು ಆರಂಭದಲ್ಲಿ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಅಥವಾ

ವಾಟ್ಸಾಪ್‌ನ ನೂತನ ಆಂಡ್ರಾಯ್ಡ್ ಬೀಟಾ 2.21.21.7 ಅಪ್‌ಡೇಟ್ ನ ಕುರಿತಾಗಿ WABetaInfo ಸೈಟ್ ಕೆಲವು ಸ್ಕ್ರೀನ್‌ಶಾಟ್ ಅನ್ನು ಶೇರ್ ಮಾಡಿದೆ. ವಾಟ್ಸಾಪ್‌ನಲ್ಲಿ ಕಾಣಿಸಿಕೊಲ್ಳುವ ನೂತನ ಆಯ್ಕೆಯು ಬಳಕೆದಾರರು ತಮ್ಮ ಬ್ಯಾಕ್‌ಅಪ್‌ಗಳಿಂದ ಫೋಟೋಗಳು, ಆಡಿಯೋ ಅಥವಾ ಡಾಕ್ಯುಮೆಂಟ್‌ಗಳನ್ನು ಹೊರತುಪಡಿಸಿ ತಮ್ಮ ಬ್ಯಾಕ್‌ಅಪ್ ಗಾತ್ರ ನಿರ್ವಹಿಸುವುದು ಎಂಬುದನ್ನು ಸೂಚಿಸುತ್ತದೆ.

ಟ್ವಿಟ್ಟರ್

ಇನ್ನು WABetaInfo ಸೈಟ್‌ನ ಮಾಹಿತಿ ಪ್ರಕಾರ 'ಕಮ್ಯೂನಿಟಿ ಫೀಚರ್ ಫಾರ್ ಗ್ರೂಪ್ ಕನ್ವರ್ಸೇಶನ್' ಫೀಚರ್ ಬಳಕೆದಾರರಿಗೆ ತಮ್ಮ ವಾಟ್ಸಾಪ್‌ ಗ್ರೂಪ್‌ಗಳನ್ನು ಅತ್ಯುತ್ತಮವಾಗಿ ಸಂಘಟಿಸಲು ಒಂದು ವೇದಿಕೆ ಆಗಲಿದೆ ಎಂದು ತಿಳಿಸಿದೆ. ಈ ಆಯ್ಕೆಯು ಈಗಾಗಲೇ ಫೇಸ್‌ಬುಕ್ ಮತ್ತು ಟ್ವಿಟ್ಟರ್ ಪ್ಲಾಟ್‌ಫಾರ್ಮ್ ಗಳಲ್ಲಿ ಲಭ್ಯ ಇರುವ ಕಮ್ಯೂನಿಟಿ ಆಯ್ಕೆಯಂತೆ ಇರುವುದಿಲ್ಲ. ಇದೊಂದು ಭಿನ್ನ ಮಾದರಿಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

ಭದ್ರತಾ

ಇತ್ತೀಚಿಗೆ ವಾಟ್ಸಾಪ್‌ ಆಪ್‌ ಕ್ಲೌಡ್ ಬ್ಯಾಕ್‌ಅಪ್‌ಗಳಲ್ಲಿ ಮೆಸೆಜ್‌ಗಳಿಗೆ ಇರುವ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಸಹ ಜಾರಿಗೊಳಿಸುತ್ತಿದೆ. ಈ ಬಗ್ಗೆ ಕಳೆದ ವಾರ, ಇದು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಲ್ಲಿ ಭದ್ರತಾ ಕೇಂದ್ರಿತ ಅಪ್‌ಡೇಟ್ ಅನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಪ್ರಾರಂಭಿಸಿತು. ಹಾಗೆಯೇ ಇತ್ತೀಚಿಗೆ ವಾಟ್ಸಾಪ್‌ ಪೇ ನಲ್ಲಿ ಬಳಕೆದಾರರು ಹಣವನ್ನು ಕಳುಹಿಸುವಾಗ ಪೇಮೆಂಟ್‌ ಬ್ಯಾಕ್‌ಗ್ರೌಂಡ್‌ ಸೇರಿಸಲು ಫೀಚರ್ ಪರಿಚಯಿಸಿ ಗಮನ ಸೆಳೆದಿತ್ತು.

ಆಯ್ಕೆಯಿಂದ

ವಾಟ್ಸಾಪ್‌ ನ ಪೇಮೆಂಟ್‌ ಬ್ಯಾಕ್‌ಗ್ರೌಂಡ್‌ ವೈಶಿಷ್ಟ್ಯವು ಗೂಗಲ್‌ ಪೇ ಆಪ್‌ನ ಪೇಮೆಂಟ್‌ ಬ್ಯಾಕ್‌ಗ್ರೌಂಡ್‌/ಹಿನ್ನೆಲೆ (ಯಾವುದಕ್ಕೆ ಹಣ ವರ್ಗಾವಣೆ ಮಾಡಿದ್ದೆವೆ ಎಂಬುದನ್ನು ಸೂಚಿಸುವ ಸ್ಟಿಕ್ಕರ್) ವೈಶಿಷ್ಟ್ಯದಂತೆ ಕಾಣುತ್ತದೆ. ಗೂಗಲ್‌ ಪೇ ನಲ್ಲಿ, ಹಣವನ್ನು ಕಳುಹಿಸುವಾಗ ಕಂಪನಿಯು ಒದಗಿಸಿದ ಆಯ್ಕೆಯಿಂದ ನೀವು ವಿವಿಧ ಹಿನ್ನೆಲೆಗಳನ್ನು ಸೇರಿಸಬಹುದು. ಬಳಕೆದಾರರು ಈಗ ವಾಟ್ಸಾಪ್‌ನಲ್ಲಿ ಇದೇ ರೀತಿಯ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ.

ವಾಟ್ಸಾಪ್‌ನಲ್ಲಿ ನೀವು ಪೇಮೆಂಟ್‌ ಬ್ಯಾಕ್‌ಗ್ರೌಂಡ್‌ ಸೇರಿಸಲು ಹೀಗೆ ಮಾಡಿ:

ವಾಟ್ಸಾಪ್‌ನಲ್ಲಿ ನೀವು ಪೇಮೆಂಟ್‌ ಬ್ಯಾಕ್‌ಗ್ರೌಂಡ್‌ ಸೇರಿಸಲು ಹೀಗೆ ಮಾಡಿ:

* ನೀವು ಹಣವನ್ನು ಕಳುಹಿಸಲು ಬಯಸುವ ಚಾಟ್ ಅನ್ನು ಟ್ಯಾಪ್ ಮಾಡಿ.
* ನೀವು ಸಂಪರ್ಕಕ್ಕೆ ಕಳುಹಿಸಲು ಬಯಸುವ ಮೊತ್ತವನ್ನು ನಮೂದಿಸಿ
* ಹಿನ್ನೆಲೆ (background icon) ಐಕಾನ್ ಮೇಲೆ ಟ್ಯಾಪ್ ಮಾಡಿ
* ಲಭ್ಯವಿರುವ ಆಯ್ಕೆಗಳ ಮೂಲಕ ಸ್ಕ್ರಾಲ್ ಮಾಡಿ ಮತ್ತು ನೀವು ಬಳಸಲು ಬಯಸುವ ಹಿನ್ನೆಲೆಯನ್ನು ಟ್ಯಾಪ್ ಮಾಡಿ.
* ನಿಮ್ಮ ಪಾವತಿ ಸಂದೇಶಕ್ಕೆ ಹಿಂತಿರುಗಲು, ಪಾವತಿ ಮೊತ್ತವನ್ನು ಟ್ಯಾಪ್ ಮಾಡಿ ಅಥವಾ ಹಿನ್ನೆಲೆ ಆಯ್ಕೆಗಳನ್ನು ವಜಾಗೊಳಿಸಲು X ಅನ್ನು ಟ್ಯಾಪ್ ಮಾಡಿ.

Best Mobiles in India

English summary
WhatsApp Spotted Testing Option to Manage Chats Backup Size And Community Feature On Android.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X