Home
ಸುದ್ದಿಜಾಲ

Telegram: ನೀವು ಟೆಲಿಗ್ರಾಮ್ ಬಳಕೆದಾರರೇ.. ಎಚ್ಚರ! ನಿಮ್ಮ ಮೇಲೆ ಆಗುತ್ತಿರುವ ದಾಳಿ ಅಂತಿಂಥದ್ದಲ್ಲ

ಟೆಲಿಗ್ರಾಮ್ (Telegram) ಬಳಕೆ ಈಗ ಎಲ್ಲಾ ಕಡೆ ವ್ಯಾಪಕವಾಗುತ್ತಿದೆ. ಯಾಕೆಂದರೆ ಇದರಲ್ಲಿ ದೊಡ್ಡ ಗಾತ್ರದ ಗ್ರೂಪ್‌ ಮಾಡಬಹುದು, ದೊಡ್ಡ ದೊಡ್ಡ ಸೈಜ್‌ನ ವಿಡಿಯೋಗಳನ್ನು ಸೆಂಡ್‌ ಮಾಡಬಹುದು. ಹೀಗೆ ಯಾವುದೇ ಮೆಸೆಜಿಂಗ್ ಆಪ್‌ ನೀಡದ ಸೌಕರ್ಯವನ್ನು ಟೆಲಿಗ್ರಾಮ್‌ ನೀಡುತ್ತಿರುವುದರಿಂದ ಇದರ ಬಳಕೆ ಸಹ ಹೆಚ್ಚಾಗುತ್ತಿದೆ. ಆದರೆ ಅಷ್ಟೇ ಪ್ರಮಾಣದಲ್ಲಿ ಸಮಸ್ಯೆಗಳೂ ಸಹ ವರದಿಯಾಗುತ್ತಿವೆ.

ಹೌದು, ಅಕ್ಟೋಬರ್‌ನಲ್ಲಿ ಟೆಲಿಗ್ರಾಮ್ ಬಳಕೆದಾರರ ಮೇಲೆ 340,000 ಕ್ಕೂ ಹೆಚ್ಚು ದಾಳಿಗಳು ನಡೆದಿವೆ ಎಂದು ತಿಳಿದುಬಂದಿದೆ. ಜೊತೆಗೆ ಸೈಬರ್‌ ಸುರಕ್ಷತೆಯ ಸಂಶೋಧಕರು ಇತ್ತೀಚಿನ ವರದಿಯಲ್ಲಿ ಈ ಆಪ್‌ ಬಳಕೆದಾರರಿಗೆ ಗಂಭೀರವಾದ ದುರ್ಬಲತೆ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಹಾಗಿದ್ರೆ, ಏನಿದು ಸಮಸ್ಯೆ?, ಹೇಗೆಲ್ಲಾ ಈ ಆಪ್‌ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ನೀವು ಟೆಲಿಗ್ರಾಮ್ ಬಳಕೆದಾರರೇ..! ನಿಮ್ಮ ಮೇಲೆ ಆಗುತ್ತಿರುವ ದಾಳಿ ಅಂತಿಂಥದ್ದಲ್ಲ

ವಾಟ್ಸಾಪ್‌ ಸ್ಪೈ ಮೋಡ್: ಟೆಲಿಗ್ರಾಮ್‌ನಲ್ಲಿ ವಾಟ್ಸಾಪ್‌ ಸ್ಪೈ ಮೋಡ್ ಎಂದು ಕರೆಯಲ್ಪಡುವ ಗಂಭೀರವಾದ ಸೈಬರ್ ಸುರಕ್ಷತೆ ಸಮಸ್ಯೆಯಿಂದ ಉಂಟಾಗಿದೆ ಎಂದು ತಿಳಿದುಬಂದಿದೆ. ಈ ಮಾಲ್‌ವೇರ್‌ ಪ್ರಾಥಮಿಕವಾಗಿ ಅರೇಬಿಕ್ ಮತ್ತು ಅಜೆರಿ ಮಾತನಾಡುವವರ ಮೇಲೆ ಪರಿಣಾಮ ಬೀರಿದೆ. ಇದು ಥರ್ಡ್-ಪಾರ್ಟಿ ಮೆಸೇಜಿಂಗ್ ಆಪ್‌ಗಳಿಗೆ ಸಮಸ್ಯೆ ನಿರ್ಮಾಣ ಮಾಡಲಿದೆ. ಈ ಸಂಬಂಧ ಸೈಬರ್‌ ಸುರಕ್ಷತೆಯ ಸಂಶೋಧಕರು ಇತ್ತೀಚಿನ ವರದಿಯಲ್ಲಿ ಈ ದೋಷವನ್ನು ಕಂಡುಕೊಂಡಿದ್ದಾರೆ.

ಕ್ಯಾಸ್ಪರ್ಸ್ಕಿಯ ಸಂಶೋಧನೆಯ ಪ್ರಕಾರ, ಈ ವಾಟ್ಸಾಪ್‌ ಸ್ಪೈ ಮೋಡ್ (Whatsapp spy mod) ಟೆಲಿಗ್ರಾಮ್ ಬಳಕೆದಾರರ ಮೇಲೆ ಸುಮಾರು 340,000 ದಾಳಿಗಳನ್ನು ಮಾಡಲಾಗಿದೆಯಂತೆ. ಇದು ದುರುದ್ದೇಶಪೂರಿತ ಸಾಫ್ಟ್‌ವೇರ್‌ನಿಂದ ಉಂಟಾಗಿವೆ ಎಂದು ಉಲ್ಲೇಖಿಸಲಾಗಿದೆ. ಮಾಲ್‌ವೇರ್‌ ಮುಖ್ಯವಾಗಿ ಅರೇಬಿಕ್ ಮತ್ತು ಅಜೆರಿ ಮಾತನಾಡುವವರ ಮೇಲೆ ಪರಿಣಾಮ ಬೀರುತ್ತದೆ, ಆದಾಗ್ಯೂ, ಪ್ರಪಂಚದಾದ್ಯಂತ ಇದರಿಂದ ಸಮಸ್ಯೆಗೆ ಒಳಗಾದವರು ಕಂಡುಬಂದಿದ್ದಾರೆ ಎಂದು ಕ್ಯಾಸ್ಪರ್ಸ್ಕಿಯ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ನೀವು ಟೆಲಿಗ್ರಾಮ್ ಬಳಕೆದಾರರೇ..! ನಿಮ್ಮ ಮೇಲೆ ಆಗುತ್ತಿರುವ ದಾಳಿ ಅಂತಿಂಥದ್ದಲ್ಲ

ಹೆಚ್ಚಿನ ಫೀಚರ್ಸ್‌ ಮತ್ತು ಕಾರ್ಯಚಟುವಟಿಕೆಗಳ ಹುಡುಕಾಟದಲ್ಲಿ ಬಹಳಷ್ಟು ಮಂದಿ ವಿವಿಧ ಮೆಸೆಜ್‌ ಕಳುಹಿಸುವಿಕೆ ಆಪ್‌ಗಳಿಗಾಗಿ ಮೂರನೇ ವ್ಯಕ್ತಿಯ ಮಾರ್ಪಾಡುಗಳನ್ನು ಆಶ್ರಯಿಸಿದ್ದಾರೆ. ಈ ಮಾರ್ಪಾಡುಗಳು ಸುಧಾರಿತ ಕಾರ್ಯನಿರ್ವಹಣೆಯ ಭರವಸೆ ನೀಡುತ್ತವೆಯಾದರೂ, ಮರೆಮಾಚಿಕೊಂಡಿರುವ ಮಾಲ್ವೇರ್ ಅನ್ನು ಹೊಂದಿರಬಹುದು ಎಂದು ಸಂಶೋಧಕರು ಈ ವೇಳೆ ಎಚ್ಚರಿಕೆ ನೀಡಿದ್ದಾರೆ.

ಇದು ಹೇಗೆ ಕೆಲಸ ಮಾಡಲಿದೆ?: ಬಳಕೆದಾರರ ಫೋನ್ ಚಾರ್ಜಿಂಗ್‌ಗೆ ಇಟ್ಟಾಗ ಅಥವಾ ಆನ್ ಮಾಡಿದಾಗ, ರಿಸೀವರ್ ಸ್ಪೈ ಮಾಡ್ಯೂಲ್ ಅನ್ನು ಪ್ರಾರಂಭಿಸುವ ಕೆಲಸ ಮಾಡುತ್ತದೆ. ದುರುದ್ದೇಶಪೂರಿತ ಇಂಪ್ಲಾಂಟ್ ಸಕ್ರಿಯವಾಗಿದ್ದಾಗ, ಅದು ಡಿವೈಸ್‌ನ ಮಾಹಿತಿಯನ್ನು ಒಳಗೊಂಡಂತೆ ಇತರೆ ಮಾಹಿತಿಯನ್ನು ಆಕ್ರಮಣಕಾರಿ ಸರ್ವರ್‌ಗೆ ಕಳುಹಿಸುತ್ತದೆ. ಈ ವಿಭಾಗದಲ್ಲಿ IMEI, ಫೋನ್ ಸಂಖ್ಯೆ, ದೇಶ ಮತ್ತು ನೆಟ್‌ವರ್ಕ್ ಕೋಡ್‌ಗಳಂತಹ ಸೂಕ್ಷ್ಮ ಮಾಹಿತಿ ಇರಲಿವೆ.

ಇಷ್ಟೇ ಅಲ್ಲದೆ ಇದು ಮೈಕ್ರೊಫೋನ್ ಸಂಭಾಷಣೆಗಳನ್ನು ಸಹ ರೆಕಾರ್ಡ್ ಮಾಡಿಕೊಳ್ಳಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಜೊತೆಗೆ ಬಾಹ್ಯ ಸ್ಟೋರೇಜ್‌ನಿಂದ ಫೈಲ್‌ಗಳನ್ನು ಕದಿಯಬಹುದು ಮತ್ತು ಪ್ರತಿ ಐದು ನಿಮಿಷಗಳಿಗೊಮ್ಮೆ ಬಳಕೆದಾರರ ಖಾತೆಯ ವಿವರಗಳು ಮತ್ತು ಸಂಪರ್ಕಗಳನ್ನು ಸಂಬಂಧಿಸಿದವರಿಗೆ ಇಮೇಲ್ ಮಾಡಲಿದೆ ಎಂಬ ಗಂಭೀರ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ನೀವು ಟೆಲಿಗ್ರಾಮ್ ಬಳಕೆದಾರರೇ..! ನಿಮ್ಮ ಮೇಲೆ ಆಗುತ್ತಿರುವ ದಾಳಿ ಅಂತಿಂಥದ್ದಲ್ಲ

ಇನ್ನು ಅಜೆರ್ಬೈಜಾನ್, ಸೌದಿ ಅರೇಬಿಯಾ, ಯೆಮೆನ್, ಟರ್ಕಿ ಮತ್ತು ಈಜಿಪ್ಟ್ ಅತಿ ಹೆಚ್ಚು ದಾಳಿಯ ಪ್ರಮಾಣವನ್ನು ಹೊಂದಿರುವ ದೇಶಗಳಾಗಿದ್ದು, ಅರೇಬಿಕ್ ಮತ್ತು ಅಜೆರ್ಬೈಜಾನಿಗಳು ಸಹ ಈ ಸಮಸ್ಯೆಗೆ ಒಳಗಾಗಿದ್ದಾರೆ. ಇದರ ಜೊತೆಗೆ ಯುಎಸ್, ರಷ್ಯಾ, ಯುಕೆ, ಜರ್ಮನಿ ಮತ್ತು ಹಲವಾರು ಇತರ ರಾಷ್ಟ್ರಗಳಲ್ಲಿನ ಜನರ ಡಿವೈಸ್‌ಗಳು ಸಹ ಈ ಸೋಂಕಿಗೆ ಒಳಗಾಗಿವೆ ಎಂಬ ಮಾಹಿತಿ ತಿಳಿದುಬಂದಿದೆ.

ಹಾಗಿದ್ರೆ ಈ ಸಮಸ್ಯೆಗಳಿಂದ ಮುಕ್ತಿ ಪಡೆಯೋದೇಗೆ?: ಈ ರೀತಿಯ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಅಧಿಕೃತ ಆಪ್‌ ಸ್ಟೋರ್‌ ಮೂಲಕವೇ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿ ಅಥವಾ ಅಪ್‌ಡೇಟ್‌ ಮಾಡಿ. ಅಧಿಕೃತ ಮೂಲಗಳಿಂದ ಸಾಫ್ಟ್‌ವೇರ್ ಮತ್ತು ಪ್ರೋಗ್ರಾಂಗಳನ್ನು ಇನ್‌ಸ್ಟಾಲ್‌ ಮಾಡಿದ್ರೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಇದರ ಅರ್ಥ
ಥರ್ಡ್-ಪಾರ್ಟಿ ಆಪ್ ಸ್ಟೋರ್‌ ಬಳಕೆಯನ್ನು ನಿಲ್ಲಿಸಿ. ಇವು ಎಂದಿಗೂ ಸಹ ನಿಮ್ಮ ಡಿವೈಸ್‌ಗಳಿಗೆ ಕಂಟಕ.

Best Mobiles in India

English summary
According to Kaspersky research, WhatsApp spy mod has been used to attack almost 340,000 Telegram users. It is mentioned that it is caused by malicious software.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+