ವಾಟ್ಸಪ್‌ಗೂ ಕೊರೊನಾ ಕಾಟ; ಬದಲಾಯ್ತು ವಿಡಿಯೊ ಸ್ಟೇಟಸ್‌ ಟೈಮ್!

|

ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಾಹಾಮಾರಿ ಕೊರೊನಾ ವೈರಸ್‌ ಭಾರತದಲ್ಲಿಯೂ ತನ್ನ ಕರಿನೆರಳು ಬೀರಿದೆ. ಕೊರೊನಾ ವ್ಯಾಪಕವಾಗಿ ಹರಡದಂತೆ ನಿಯಂತ್ರಿಸಲು ಸರ್ಕಾರ 21 ದಿನಗಳ ಲಾಕ್‌ಡೌನ್‌ ಜಾರಿ ಮಾಡಿದೆ. ಈ ಹಿನ್ನಲೆಯಲ್ಲಿ ಗ್ಯಾಡ್ಜೆಟ್ಸ್‌ ವಲಯ ಸೇರಿದಂತೆ ಬಹುತೇಕ ವಲಯಗಳು ತಮ್ಮ ಕಾರ್ಯಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿವೆ. ಹಾಗೆಯೇ ಜನಪ್ರಿಯ ಮೆಸೆಜಿಂಗ್ ಆಪ್‌ ವಾಟ್ಸಪ್‌ಗೂ ಕೊರೊನಾ ಬಿಸಿ ತಟ್ಟಿದೆ.

ಫೇಸ್‌ಬುಕ್

ಹೌದು, ಫೇಸ್‌ಬುಕ್ ಮಾಲೀಕತ್ವದ ಇನ್‌ಸ್ಟಂಟ್ ಮೆಸೆಜಿಂಗ್ ಆಪ್‌ ವಾಟ್ಸಪ್‌ಗೂ ಕೊರೊನಾ ಕಾಟ ತಟ್ಟಿದ್ದು, ವಾಟ್ಸಪ್‌ ತನ್ನ ಸ್ಟೇಟಸ್‌ ಸೇವೆಯಲ್ಲಿ ಬದಲಾವಣೆ ಮಾಡಿದೆ. 30 ಸೆಕೆಂಡಗಳ ಸ್ಟೇಟಸ್‌ ಆಯ್ಕೆಯ ಅವಧಿಯಲ್ಲಿ ಕತ್ತರಿ ಹಾಕಿದ್ದು, ಸ್ಟೇಟಸ್‌ ಅವಧಿಯನ್ನು 15 ಸೆಕೆಂಡಗಳಿಗೆ ಇಳಿಸಿದೆ. ಪ್ರಸ್ತತ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಇಂಟರ್ನೆಟ್ ಬಳಕೆ ಅಧಿಕವಾಗಿದ್ದು, ಸರ್ವರ್‌ಗಳ ಒತ್ತಡ ಕಡಿಮೆ ಮಾಡಲು ವಾಟ್ಸಪ್ ಈ ನಿರ್ಧಾರ ತೆಗೆದುಕೊಂಡಿದೆ.

ಲಾಕ್‌ಡೌನ್‌

ಲಾಕ್‌ಡೌನ್‌ ಎಫೆಕ್ಟ್‌ನಿಂದಾಗಿ ವಾಟ್ಸಪ್‌ ವಿಡಿಯೊ ಮತ್ತು ವಾಯಿಸ್‌ ಕರೆಗಳ ಸೇವೆಯ ಬಳಕೆಯು ಕಳೆದ ಡಬಲ್‌ ಆಗಿದೆಯಂತೆ. ಇದರಿಂದ ಸರ್ವರ್‌ಗಳ ಲೋಡ್‌ ಸಹ ಹೆಚ್ಚಾಗಿದೆ. ಹೀಗಾಗಿ ವಾಟ್ಸಪ್‌ ವಿಡಿಯೊ ಸ್ಟೇಟಸ್‌ ಅವಧಿಯನ್ನು ಕಡಿತ ಮಾಡಲಾಗಿದೆ ಎನ್ನುವ ಬಗ್ಗೆ WABetaInfo ತಾಣದಲ್ಲಿ ಮಾಹಿತಿ ತಿಳಿಸಲಾಗಿದೆ. ವಾಟ್ಸಪ್ ಸ್ಟೇಟಸ್‌ ಅವಧಿ ಇಳಿಕೆಯಿಂದ ಸರ್ವರ್‌ಗಳ ಲೋಡ್‌ ಕಡಿಮೆ ಆಗಲಿದೆ.

ಲಾಕ್‌ಡೌನ್ ಎಫೆಕ್ಟ್‌

ಲಾಕ್‌ಡೌನ್ ಎಫೆಕ್ಟ್‌ ನಿಂದಾಗಿ ಎಲ್ಲರು ಮನೆಯಲ್ಲಿಯೇ ಇರುವಂತಾಗಿದೆ ಹಾಗೆಯೇ ಬಹುತೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್ ಮಾಡಲು ತಿಳಿಸಿವೆ. ಆನ್‌ಲೈನ್‌ ಗೇಮ್ಸ್‌, ವಿಡಿಯೊ ಸ್ಟ್ರೀಮಿಂಗ್ ಯಾಣಗಳ ವೀಕ್ಷಣೆ ಸಹ ಹೆಚ್ಚಾಗಿದ್ದು, ಇಂಟರ್ನೆಟ್ ಬಳಕೆ ಅಧಿಕವಾಗಿದೆ. ಡೇಟಾ ಹೊರೆ ನಿರ್ವಹಣೆಗಾಗಿ ಜನಪ್ರಿಯ ಅಮೆಜಾನ್, ನೆಟ್‌ಫ್ಲಿಕ್ಸ್‌ ಹಾಗೂ ಇತರೆ ವಿಡಿಯೊ ಕಂಟೆಂಟ್‌ ಸಂಸ್ಥೆಗಳು ವಿಡಿಯೊ ಕ್ವಾಲಿಟಿ ಬದಲಾವಣೆಗಳನ್ನು ಮಾಡಿವೆ.

ವಾಟ್ಸಪ್‌ನಲ್ಲಿ ವಿಡಿಯೊ ಸ್ಟೇಟಸ್‌ ಶೇರ್‌ ಮಾಡಲು ಹೀಗೆ ಮಾಡಿ

ವಾಟ್ಸಪ್‌ನಲ್ಲಿ ವಿಡಿಯೊ ಸ್ಟೇಟಸ್‌ ಶೇರ್‌ ಮಾಡಲು ಹೀಗೆ ಮಾಡಿ

* ವಾಟ್ಸಪ್‌ ಆಪ್ ತೆರೆಯಿರಿ

* ಚಾಟ್ಸ್‌ ಪಕ್ಕದ ಸ್ಟೇಟಸ್‌ ಒತ್ತಿರಿ. ನಂತರ ಮೈ ಸ್ಟೇಟಸ್‌ ಆಯ್ಕೆ ಕ್ಲಿಕ್ ಮಾಡಿ .

* ಆ ನಂತರ ಕ್ಯಾಮೆರಾ ಐಕಾನ್ ಕ್ಲಿಕ್ ಮಾಡಿ.

* ಸ್ಟೇಟಸ್‌ ಇಡಲು ಫೋನ್ ಗ್ಯಾಲರಿಯ ವಿಡಿಯೊ ಫೈಲ್ ಆಯ್ಕೆಮಾಡಿ.

* ಆಗ ನಿಮ್ಮ ವಿಡಿಯೊವನ್ನು ಹೊಸ ಮಿತಿ 15 ಸೆಕೆಂಡುಗಳಿಗೆ ಸೆಟ್‌ ಮಾಡಿ

* ನಂತರ ಸೆಂಡ್ ಬಟನ್ ಕ್ಲಿಕ್ ಮಾಡಿ.

ಸ್ಟೇಟಸ್‌ 24

ವಾಟ್ಸಪ್‌ ಸ್ಟೇಟಸ್‌ 24 ಗಂಟೆಗಳು ಇರಲಿದ್ದು, ಬಳಿಕ ಆಟೋಮ್ಯಾಟಿಕ್ ಆಗಿ ಡೀಲಿಟ್ ಆಗುತ್ತದೆ. ಮೆಸೆಜ್‌ ಇತ್ತೀಚಿಗೆ ವಾಟ್ಸಪ್‌ 'ಸ್ಟೇಟಸ್' ಫೀಚರ್‌ನಲ್ಲಿ ಬದಲಾವಣೆ ತಂದಿದ್ದು, ವಾಟ್ಸಪ್‌ ಸ್ಟೇಟಸ್‌ ಅನ್ನು ನೇರವಾಗಿ ಫೇಸ್‌ಬುಕ್‌ ಒಡೆತನದ ಯಾವುದೇ ಸಾಮಾಜಿಕ ಆಪ್‌ ಖಾತೆಗೆ ಶೇರ್‌ ಮಾಡಬಹುದಾಗಿದೆ.

Best Mobiles in India

English summary
WhatsApp has now limited video time duration to be uploaded as Status to 15 seconds.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X