ವಾಟ್ಸಪ್‌ ಮತ್ತು ಟೆಲಿಗ್ರಾಮ್ ಬಳಕೆದಾರರೇ ಸ್ವಲ್ಪ ಎಚ್ಚರ ವಹಿಸಿ!

|

ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್‌ಗಳಾದ 'ವಾಟ್ಸಪ್' ಹಾಗೂ 'ಟೆಲಿಗ್ರಾಮ್'ಗಳನ್ನು ಪ್ರಸ್ತುತ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ ಬಳಕೆದಾರರು ಬಳಸುತ್ತಿರುವುದು ಗೊತ್ತಿರುವ ಸಂಗತಿಯೇ ಆಗಿದೆ. ವಾಟ್ಸಪ್ ಮತ್ತು ಟೆಲಿಗ್ರಾಂ ಆಪ್ಸ್‌ಗಳಲ್ಲಿ ಬಳಕೆದಾರರು ಸ್ವೀಕರಿಸುವ ಮತ್ತು ಕಳುಹಿಸುವ ಮೀಡಿಯಾ ಫೈಲ್‌ಗಳು ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರ್‌ ಆಗುತ್ತವೇ. ಆದ್ರೆ ಸ್ಟೋರ್‌ ಆದ ಮೀಡಿಯಾ ಫೈಲ್‌ಗಳು ಸುರಕ್ಷಿತವೇ?.ಉತ್ತರ ಖಂಡಿತಾ ಇಲ್ಲ.

ವಾಟ್ಸಪ್‌ ಮತ್ತು ಟೆಲಿಗ್ರಾಮ್ ಬಳಕೆದಾರರೇ ಸ್ವಲ್ಪ ಎಚ್ಚರ ವಹಿಸಿ!

ಹೌದು, ವಾಟ್ಸಪ್ ಮತ್ತು ಟೆಲಿಗ್ರಾಂ ಆಪ್ಸ್‌ಗಳಲ್ಲಿ ಮೂಲಕ ಸೇವ್ ಆಗುವ ಮೀಡಿಯಾ ಫೈಲ್ಸ್‌ಗಳು ಸುಕ್ಷಿತವಲ್ಲ ಮತ್ತು ಮೀಡಿಯಾ ಫೈಲ್‌ಗಳು ಸುಲಭವಾಗಿ ಹ್ಯಾಕ್ ಆಗುವ ಮಟ್ಟದಲ್ಲಿವೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ಈ ಆಪ್ಸ್‌ 'ಎಂಡ್‌ ಟು ಎಂಡ್ ಎನ್‌ಕ್ರಿಪ್ಶನ್' ಹೊಂದಿದ್ದರೂ ಫೋನಿನಲ್ಲಿ ಸ್ಟೋರ್‌ ಆಗುವ ಮೀಡಿಯಾ ಫೈಲ್‌ಗಳಿಗೆ ಸುರಕ್ಷತವಾಗಿಲ್ಲ. ಹೀಗಾಗಿ ಸಂಶೋಧಕರು ಇದನ್ನು ಮೀಡಿಯಾ ಫೈಲ್‌ ಜಾಕಿಂಗ್ ಎಂದಿದ್ದಾರೆ.

ವಾಟ್ಸಪ್‌ ಮತ್ತು ಟೆಲಿಗ್ರಾಮ್ ಬಳಕೆದಾರರೇ ಸ್ವಲ್ಪ ಎಚ್ಚರ ವಹಿಸಿ!

ಈ ಆಪ್ಸ್‌ಗಳ ಮೂಲಕ ಬರುವ ಮೀಡಿಯಾ ಫೈಲ್ಸ್‌ಗಳು ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರ್ ಆಗುತ್ತವೆ. ಆದ್ರೆ ಮಾಲ್ವೇರ್‌ಗಳು ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರ್‌ ಆಗಿರುವ ಮೀಡಿಯಾ ಫೈಲ್‌ಗಳನ್ನು ಆಕ್ಸಸ್‌ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ. ಹಾಗಾದರೇ ವಾಟ್ಸಪ್ ಮತ್ತು ಟೆಲಿಗ್ರಾಮ್ ಆಪ್ಸ್‌ಗಳ ಮೂಲಕ ಸ್ಟೋರ್‌ ಆಗುವ ಮೀಡಿಯಾ ಫೈಲ್‌ಗಳ ಸುರಕ್ಷತೆಯ ಕುರಿತು ಮತ್ತಷ್ಟು ಮಾಹಿತಿಯನ್ನು ಮುಂದೆ ನೊಡೋಣ ಬನ್ನಿರಿ.

ಓದಿರಿ : ಕೇವಲ 590ರೂ.ಗಳಿಗೆ 'ಟಾಟಾಸ್ಕೈ'ನಿಂದ ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್ ಸೇವೆ!ಓದಿರಿ : ಕೇವಲ 590ರೂ.ಗಳಿಗೆ 'ಟಾಟಾಸ್ಕೈ'ನಿಂದ ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್ ಸೇವೆ!

ಏನಿದು ಮೀಡಿಯಾ ಫೈಲ್‌ ಜಾಕಿಂಗ್

ಏನಿದು ಮೀಡಿಯಾ ಫೈಲ್‌ ಜಾಕಿಂಗ್

ವಾಟ್ಸಪ್ ಮತ್ತು ಟೆಲಿಗ್ರಾಂ ಮೆಸೆಜ್ ಆಪ್ಸ್‌ಗಳ ಮೂಲಕ ಬಳಕೆದಾರರು ಮೀಡಿಯಾ ಫೈಲ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಕಳುಹಿಸಿದ ಮತ್ತು ಸ್ವೀಕರಿಸಿದ ಫೈಲ್‌ಗಳು ಸ್ಮಾರ್ಟ್‌ಫೋನ್‌ಗಳಲ್ಲಿ ಶೇಖರಣೆಯಾಗುತ್ತವೆ. ಆದ್ರೆ ಅವುಗಳು ಹೆಚ್ಚು ಸುರಕ್ಷಿತವಾಗಿಲ್ಲ ಸುಲಭವಾಗಿ ಹ್ಯಾಕರ್ಸ್‌ಗೆ ಲಭ್ಯವಾಗುವಂತಿವೆ. ಹೀಗಾಗಿ ಸಂಶೋಧಕರು ಇದನ್ನು 'ಮೀಡಿಯಾ ಫೈಲ್‌ ಜಾಕಿಂಗ್' ಎಂದಿದ್ದಾರೆ.

ಮೀಡಿಯಾ ಫೈಲ್‌ಗಳ ಸ್ಟೋರೇಜ್

ಮೀಡಿಯಾ ಫೈಲ್‌ಗಳ ಸ್ಟೋರೇಜ್

ಈ ಮೆಸ್ಸೆಜಿಂಗ್ ಆಪ್ಸ್‌ಗಳ ಮೂಲಕ ಬಳಕೆದಾರರು ಸ್ವೀಕರಿಸುವ ಮತ್ತು ಕಳುಹಿಸುವ ಮೀಡಿಯಾ ಫೈಲ್‌ಗಳು ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಟೋರೇಜ್ ಆಗುತ್ತವೆ. ಕೇಲವು ಬಳಕೆದಾರರು ಫೋನ್‌ ಆಂತರಿಕ ಸ್ಟೋರೇಜ್‌ನಲ್ಲಿ ಸೇವ್ ಆಗುವ ಸೆಟ್ಟಿಂಗ್ ಮಾಡಿರುತ್ತಾರೆ ಮತ್ತು ಇನ್ನು ಕೇಲವು ಬಳಕೆದಾರರು ಎಸ್‌ಡಿ ಕಾರ್ಡ್‌ನಲ್ಲಿ ಸೇವ್ ಆಗುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡಿರುತ್ತಾರೆ.

ಓದಿರಿ : ಫ್ಲಿಪ್‌ಕಾರ್ಟ್‌ 'ಬಿಗ್‌ ಶಾಪಿಂಗ್ ಡೇಸ್' : ಇದುವೇ ಫೋನ್‌ ಖರೀದಿಗೆ ರೈಟ್‌ ಟೈಮ್! ಓದಿರಿ : ಫ್ಲಿಪ್‌ಕಾರ್ಟ್‌ 'ಬಿಗ್‌ ಶಾಪಿಂಗ್ ಡೇಸ್' : ಇದುವೇ ಫೋನ್‌ ಖರೀದಿಗೆ ರೈಟ್‌ ಟೈಮ್!

ಯಾವ ಸ್ಟೋರೇಜ್ ಉತ್ತಮ

ಯಾವ ಸ್ಟೋರೇಜ್ ಉತ್ತಮ

ಮೆಸ್ಸೆಜಿಂಗ್ ಆಪ್ಸ್‌ಗಳ ಮೂಲಕ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಟೋರ್‌ ಆಗುವ ಮೀಡಿಯಾ ಫೈಲ್‌ಗಳ ಸುರಕ್ಷತೆಗೆ, ಸ್ಮಾರ್ಟ್‌ಫೋನ್‌ಗಳ ಆಂತರಿಕ ಸ್ಟೋರೇಜ್‌ ಉತ್ತಮವಾಗಿದೆ. ಎಸ್‌ಡಿ ಕಾರ್ಡ್‌ನಲ್ಲಿ ಅಥವಾ ಬಾಹ್ಯ ಸ್ಟೋರೇಜ್‌ನಲ್ಲಿ ಫೈಲ್‌ಗಳ ಸುರಕ್ಷತೆ ಲೋಷಗಳು ಕಾಣಿಸುವ ಸಾಧ್ಯತೆಗಳು ಹೆಚ್ಚು ಎನ್ನಲಾಗಿದೆ. ಅದಕ್ಕಾಗಿ ಇಂಟರ್ನಲ್ ಸ್ಟೋರೇಜ್ ಬೆಸ್ಟ್‌ ಆಗಿದೆ.

ಸ್ಕೋಪ್ಡ್ ಸ್ಟೋರೇಜ್ (Scoped Storage)

ಸ್ಕೋಪ್ಡ್ ಸ್ಟೋರೇಜ್ (Scoped Storage)

ಈಗಾಗಲೇ ಹಲವು ಅಪ್‌ಡೇಟ್‌ ಆವೃತ್ತಿಗಳನ್ನು ಕಂಡಿರುವ ಆಂಡ್ರಾಯ್ಡ್‌ ಓಎಸ್‌ ಪ್ರಸ್ತುತ 'ಆಂಡ್ರಾಯ್ಡ್‌ Q ಓಎಸ್‌'ನ ಅಪ್‌ಡೇಟ್‌ಗೆ ತಯಾರಾಗಿದೆ. ಈ ವರ್ಷನ್‌ನಲ್ಲಿ ಹೊಸದಾಗಿ 'ಸ್ಕೋಪ್ಡ್ ಸ್ಟೋರೇಜ್' ಆಯ್ಕೆಯು ಬಳಕೆದಾರರಿಗೆ ಲಭ್ಯವಾಗಲಿದ್ದು, ಈ ಸ್ಟೋರೇಜ್ ಆಯ್ಕೆಯಲ್ಲಿ ಮೀಡಿಯಾ ಫೈಲ್‌ಗಳು ಹ್ಯಾಕ್ ಸಾಧ್ಯತೆಗಳು ಬಹಳ ಕಡಿಮೆ ಎನ್ನಲಾಗಿದೆ.

ಓದಿರಿ : ಮೊದಲು ಖರೀದಿಸಿ, ಆಮೇಲೆ ಪಾವತಿಸಿ ಇದು ಪೇಟಿಎಮ್‌ನ 'ಪೋಸ್ಟ್‌ಪೇಡ್' ಸೇವೆ! ಓದಿರಿ : ಮೊದಲು ಖರೀದಿಸಿ, ಆಮೇಲೆ ಪಾವತಿಸಿ ಇದು ಪೇಟಿಎಮ್‌ನ 'ಪೋಸ್ಟ್‌ಪೇಡ್' ಸೇವೆ!

Best Mobiles in India

English summary
A new report has surfaced online indicating that all the media files that you receive on WhatsApp or Telegram are not safe. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X