Home
ಸುದ್ದಿಜಾಲ

ವಾಟ್ಸಪ್‌ ಬಳಕೆದಾರರೇ ಇನ್ಮುಂದೆ ನಿಮ್ಮ ಬೆರಳ ಗುರುತು ವಾಟ್ಸಪ್‌ ಕೀಲಿ ಕೈ!

ಜಗತ್ತಿನಲ್ಲಿಯೇ ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ವಾಟ್ಸಪ್‌ ಮೆಸೆಂಜರ್ ಅಪ್ಲಿಕೇಶನ್ ಈಗಾಗಲೇ ಬಳಕೆದಾರರಿಗಾಗಿ ಹಲವು ಪ್ರೈವೆಸಿ ಫೀಚರ್ಸ್‌ಗಳನ್ನು ಬಿಡುಗಡೆ ಮಾಡಿ ಮೆಚ್ಚುಗೆ ಪಡೆದಿದೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ಸಂಸ್ಥೆಯು ಇತ್ತೀಚಿಗೆ ಹೊಸ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದ್ದು, ಈಗ ಮತ್ತೆ ಗ್ರಾಹಕರು ಬಹುನಿರೀಕ್ಷಿತವಾಗಿ ಕಾಯುತ್ತಿದ್ದ ಫಿಂಗರ್‌ಪ್ರಿಂಟ್ ಅನ್‌ಲಾಕ್ ಫೀಚರ್ ಅನ್ನು ಪರಿಚಯಿಸಿದೆ.

ವಾಟ್ಸಪ್‌ ಬಳಕೆದಾರರೇ ಇನ್ಮುಂದೆ ನಿಮ್ಮ ಬೆರಳ ಗುರುತು ವಾಟ್ಸಪ್‌ ಕೀಲಿ ಕೈ!

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್‌ ಅಪ್ಲಿಕೇಶನ್ ಪ್ರೈವೆಸಿ ಕುರಿತಾಗಿ ಹೆಚ್ಚಿನ ಆದ್ಯತೆ ನೀಡುತ್ತಾ ಸಾಗಿದ್ದು, ಅದಕ್ಕಾಗಿ ಈಗ ಫಿಂಗರ್‌ಪ್ರಿಂಟ್ ಅನ್‌ಲಾಕ್ ಫೀಚರ್‌ ಅನ್ನು ತನ್ನ ವಾಟ್ಸಪ್‌ ಬೇಟಾ ವರ್ಷನ್‌ನಲ್ಲಿ ಪರಿಚಯಿಸಿದೆ. ಪ್ರಸ್ತುತ ಬಹುತೇಕ ಬಳಕೆದಾರರು ವಾಟ್ಸಪ್‌ ಆಪ್‌ ಅನ್ನು ಲಾಕ್ ಮಾಡಲು ಥರ್ಡ್‌ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಆದ್ರೆ ಸಂಸ್ಥೆಯ ಈ ಹೊಸ ಫೀಚರ್‌ನಿಂದಾಗಿ ಇನ್ನು ಥರ್ಡ್‌ಪಾರ್ಟಿ ಲಾಕ್‌ ಆಪ್‌ ಅಗತ್ಯ ಇರುವುದಿಲ್ಲ.

ವಾಟ್ಸಪ್‌ ಬಳಕೆದಾರರೇ ಇನ್ಮುಂದೆ ನಿಮ್ಮ ಬೆರಳ ಗುರುತು ವಾಟ್ಸಪ್‌ ಕೀಲಿ ಕೈ!

ಆಂಡ್ರಾಯ್ಡ್‌ ಬೇಟಾ ವರ್ಷನ್‌ನಲ್ಲಿ ಸದ್ಯ ಈ ಫಿಂಗರ್‌ಪ್ರಿಂಟ್ ಅನ್‌ಲಾಕ್‌ ಫೀಚರ್ ಲಭ್ಯವಾಗಿದ್ದು, ಬೇಟಾ ವರ್ಷನ್‌ ಬಳಕೆದಾರರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಹಾಗೂ ಶೀಘ್ರದಲ್ಲೇ ವಾಟ್ಸಪ್‌ ಅಪ್‌ಡೇಟ್‌ ವರ್ಷನ್‌ನಲ್ಲಿಯೂ ಈ ಫೀಚರ್ ಸೇರಿಕೊಳ್ಳಲಿದೆ. ಈ ಆಯ್ಕೆಯಲ್ಲಿ ಬಳಕೆದಾರರು ಬೆರಳಗುರುತನ್ನು ಸ್ಕ್ಯಾನ್‌ ಮಾಡುವ ಮೂಲಕ ಆಪ್‌ ಲಾಕ್‌ ಮಾಡಬಹುದು ಮತ್ತು ಅನ್‌ಲಾಕ್ ಮಾಡಬಹುದಾಗಿದೆ.

ವಾಟ್ಸಪ್‌ ಬಳಕೆದಾರರೇ ಇನ್ಮುಂದೆ ನಿಮ್ಮ ಬೆರಳ ಗುರುತು ವಾಟ್ಸಪ್‌ ಕೀಲಿ ಕೈ!

ಹಾಗೆಯೇ ಐಓಎಸ್‌ ಬಳಕೆದಾರರಿಗೂ ಟಚ್ ಐಡಿ ಲಾಕ್‌ ಫೀಚರ್‌ ಅನ್ನು ಕಂಪನಿಯು ಈಗಾಗಲೇ ಪರಿಚಯಿಸಿದ್ದು, ಇದೀಗ ಆಂಡ್ರಾಯ್ಡ್‌ ಓಎಸ್‌ ಬಳಕೆದಾರರಿಗೆ ಈ ಫಿಂಗರ್‌ಪ್ರಿಂಟ್ ಸೌಲಭ್ಯವನ್ನು ಸೇರಿಸುತ್ತಿದೆ. ಇದರಲ್ಲಿ ಬಳಕೆದಾರುರು ತಮ್ಮ ವಾಟ್ಸಪ್‌ಗೆ ಬರುವ ಮಸೆಜ್‌ಗಳನ್ನು ನೋಟಿಫಿಕೇಶನ್‌ನಲ್ಲಿಯೇ ವೀಕ್ಷಿಸುವ ಅಥವಾ ಕಾಣದಂತೆ ಸೆಟ್‌ ಮಾಡಿಕೊಳ್ಳವ ಆಯ್ಕೆಗೆ ಸಹ ಅವಕಾಶ ಇರಲಿದೆ.

ಸದ್ಯ ವಾಟ್ಸಪ್ ಬೇಟಾ ವರ್ಷನ್‌ನ ಪ್ರಾಯೋಗಿಕ ಹಂತಗಳಲ್ಲಿ ಲಭ್ಯವಾಗಿರುವ ಫಿಂಗರ್‌ಪ್ರಿಂಟ್ ಅನ್‌ಲಾಕ್ ಫೀಚರ್‌ ಹೊಸ ಅಪ್‌ಡೇಟ್‌ ವರ್ಷನ ಸೇರುವ ಸಮಯವು ಹತ್ತಿರದಲ್ಲಿದೆ. ಹಾಗಾದರೇ ಫಿಂಗರ್‌ಪ್ರಿಂಟ್ ಫೀಚರ್‌ ಸೆಟ್‌ ಮಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
* ವಾಟ್ಸಪ್‌ ಸೆಟ್ಟಿಂಗ್ ತೆರೆಯಿರಿ
* ಫಿಂಗರ್‌ಪ್ರಿಂಟ್ ಅನ್‌ಲಾಕ್‌ ಫೀಚರ್ ಸೆಲೆಕ್ಟ್ ಮಾಡಿರಿ
* ಫಿಂಗರ್‌ಪ್ರಿಂಟ್ ಆಯ್ಕೆ ಸಕ್ರಿಯ ಮಾಡಿರಿ
* ಆಗ ನಿಮ್ಮ ಫಿಂಗರ್‌ಪ್ರಿಂಟ್ ಸೆನ್ಸಾರ್ ಸ್ಕ್ಯಾನ್ ಕೇಳುತ್ತದೆ.
* ನಂತರ ಅಲ್ಲಿರುವ ಟೈಮ್‌ ಲಿಮಿಟ್‌ನಲ್ಲಿ ನಿಮಗೆ ಅಗತ್ಯವಾದದನ್ನು ಸೆಟ್‌ ಮಾಡಿ.

ಜಿಯೋ, ವೊಡಾಫೋನ್, ಏರ್‌ಟೆಲ್,ನ 999ರೂ. ಪ್ಲ್ಯಾನ್‌ನಲ್ಲಿ ಯಾವುದು ಸೂಕ್ತ!

ಜಿಯೋ, ವೊಡಾಫೋನ್, ಏರ್‌ಟೆಲ್,ನ 999ರೂ. ಪ್ಲ್ಯಾನ್‌ನಲ್ಲಿ ಯಾವುದು ಸೂಕ್ತ!

ಭಾರತೀಯ ಟೆಲಿಕಾಂ ವಲಯದಲ್ಲಿ ಜಿಯೋ ನಾಗಾಲೋಟದಲ್ಲಿ ಮುನ್ನುಗ್ಗುತ್ತಲಿದ್ದು, ಇದಕ್ಕೆ ಅನುಗುಣವಾಗಿ ಏರ್‌ಟೆಲ್, ವೊಡಾಫೋನ್, ಐಡಿಯಾ ಸಂಸ್ಥೆಗಳು ಸಹ ಪೈಪೋಟಿಯ ಓಟದಲ್ಲಿ ಹಿಂದೆ ಬಿದ್ದಿಲ್ಲ. ಸದ್ಯ ಟೆಲಿಕಾಂ ಕಂಪನಿಗಳ ನಡುವಣ ಸ್ಪರ್ಧಾತ್ಮಕ ವಾತಾವರಣ ನಿರ್ಮಾಣವಾಗಿದ್ದು, ಇರುವ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಕಂಪೆನಿಗಳು ಹವಣಿಸುತ್ತಿವೆ. ಈ ನಿಟ್ಟಿನಲ್ಲಿ ಬಹುತೇಕ ಸಾಮ್ಯತೆಯ ಪ್ಲ್ಯಾನ್‌ಗಳು ಪರಿಚಯಿಸುತ್ತಲಿವೆ

ಹೌದು, ಜಿಯೋ, ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ಕಂಪೆನಿಗಳ ಉಚಿತ ಡೇಟಾ ಮತ್ತು ಉಚಿತ ಕರೆ ಸೌಲಭ್ಯಗಳ ತಿಂಗಳ ವ್ಯಾಲಿಡಿಟಿಯ ಪ್ಲ್ಯಾನ್‌ಗಳು ಈಗಾಗಲೇ ಜನಪ್ರಿಯವಾಗಿವೆ. ಇವುಗಳೊಂದಿಗೆ, ವಾರ್ಷಿಕ ವ್ಯಾಲಿಡಿಟಿಯ ಪ್ರೀಪೇಡ್ ಪ್ಲ್ಯಾನ್‌ಗಳು ಗ್ರಾಹಕರನ್ನು ಆಕರ್ಷಿಸಿವೆ. 1699ರೂ.ಗಳ ವಾರ್ಷಿಕ ವ್ಯಾಲಿಡಿಟಿ ಪ್ಲ್ಯಾನ್‌ ಕುರಿತು ಹಿಂದಿನ ಲೇಖನದಲ್ಲಿ ತಿಳಿಸಿದ್ದೆವು. ಹಾಗಾದರೇ ಇಂದಿನ ಲೇಖನದಲ್ಲಿ 999ರೂ.ಗಳ ವಾರ್ಷಿಕ ಪ್ಲ್ಯಾನ್‌ನಲ್ಲಿ ಲಭ್ಯವಾಗುವ ಪ್ರಯೋಜನೆಯನ್ನು ತಿಳಿಯಲು ಮುಂದೆ ನೋಡೋಣ ಬನ್ನಿರಿ.

ವೊಡಾಫೋನ್ 999ರೂ.ಗಳ ಪ್ಲ್ಯಾನ್

ವೊಡಾಫೋನ್ 999ರೂ.ಗಳ ಪ್ಲ್ಯಾನ್

ವೊಡಾಫೋನ್ 999ರೂ.ಗಳ ಪ್ಲ್ಯಾನ್ ಪ್ರೀಪೇಡ್‌ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ 365 ದಿನಗಳ ವ್ಯಾಲಿಡಿಟಿಯನ್ನು ಲಭ್ಯವಾಗಲಿದೆ. 12GB ಉಚಿತ ಡೇಟಾ ಸೌಲಭ್ಯವು ಗ್ರಾಹಕರಿಗೆ ಸಿಗಲಿದೆ. ಈ ಅವಧಿಯಲ್ಲಿ ಅನಿಯಮಿತ ಕರೆಗಳು, 3600 ಉಚಿತ ಎಸ್‌ಎಮ್‌ಎಸ್‌ಗಳು ದೊರೆಯಲಿದ್ದು, ಇದರೊಂದಿಗೆ ವೊಡಾಫೋನ್ ಪ್ಲೇ ಆಪ್‌ನಲ್ಲಿ ಲೈವ್ ಟಿವಿ ಮತ್ತು ಮ್ಯೂಸಿಕ್ ಪ್ರಯೋಜನಗಳು ಲಭ್ಯವಾಗಲಿವೆ.

ಏರ್‌ಟೆಲ್ 998ರೂ.ಗಳ ಪ್ಲ್ಯಾನ್

ಏರ್‌ಟೆಲ್ 998ರೂ.ಗಳ ಪ್ಲ್ಯಾನ್

ಏರ್‌ಟೆಲ್ ಕಂಪೆನಿಯ 998ರೂ.ಗಳ ಪ್ರೀಪೇಡ್ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ 12GB ಉಚಿತ ಡೇಟಾ ಲಭ್ಯವಾಗಲಿದೆ. ಹಾಗೆಯೇ ಅನಿಯಮಿತ ಉಚಿತ ಕರೆಗಳು ದೊರೆಯಲಿದ್ದು, ಪ್ರತಿ 28 ದಿನಗಳಿಗೊಮ್ಮೆ 300 ಉಚಿತ ಎಸ್‌ಎಮ್‌ಎಸ್‌ಗಳು ಸಹ ಲಭ್ಯವಾಗಲಿವೆ. ಕಂಪನಿಯ Wynk ಮ್ಯೂಸಿಕ್ ಮತ್ತು ಏರ್‌ಟೆಲ್ ಟಿವಿ ಸದಸ್ಯತ್ವವು ಸಿಗಲಿದೆ.

ಐಡಿಯಾ 999ರೂ.ಗಳ ಪ್ಲ್ಯಾನ್

ಐಡಿಯಾ 999ರೂ.ಗಳ ಪ್ಲ್ಯಾನ್

ಐಡಿಯಾ 999ರೂ.ಗಳ ಪ್ರೀಪೇಡ್‌ ಪ್ಲ್ಯಾನ್ ವೊಡಾಫೋನ್‌ನಂತೆಯೇ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 12GB ಉಚಿತ ಡೇಟಾ ಸೌಲಭ್ಯವು ಗ್ರಾಹಕರಿಗೆ ಸಿಗಲಿದೆ. ಈ ಅವಧಿಯಲ್ಲಿ ಅನಿಯಮಿತ ಕರೆಗಳು, 3600 ಉಚಿತ ಎಸ್‌ಎಮ್‌ಎಸ್‌ಗಳು ದೊರೆಯಲಿದ್ದು, ಇದರೊಂದಿಗೆ ವೊಡಾಫೋನ್ ಪ್ಲೇ ಆಪ್‌ನಲ್ಲಿ ಲೈವ್ ಟಿವಿ ಮತ್ತು ಮ್ಯೂಸಿಕ್ ಪ್ರಯೋಜನಗಳು ಲಭ್ಯವಾಗಲಿವೆ.

ಜಿಯೋ 999ರೂ.ಗಳ ಪ್ಲ್ಯಾನ್

ಜಿಯೋ 999ರೂ.ಗಳ ಪ್ಲ್ಯಾನ್

ರಿಲಾಯನ್ಸ್‌ ಜಿಯೋ 999ರೂ.ಗಳ ಪ್ರೀಪೇಡ್‌ ಪ್ಲ್ಯಾನ್ 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಮಾತ್ರ ಹೊಂದಿದೆ. ಈ ವ್ಯಾಲಿಡಿಟಿ ಅವಧಿಯಲ್ಲಿ 60GB ಉಚಿತ ಡೇಟಾ, ಪ್ರತಿದಿನ 100 ಉಚಿತ ಎಸ್ಎಮ್ಎಸ್‌ಗಳ ಪ್ರಯೋಜನ ದೊರೆಯಲಿದ್ದು, ಇದರೊಂದಿಗೆ ಉಚಿತ ಅನಿಯಮಿತ ಕರೆ ಸೌಲಭ್ಯ ಸಹ ದೊರೆಯಲಿದೆ. ಹಾಗೆಯೇ ಜಿಯೋ ಲೈವ್ ಟಿವಿ, ಆಪ್‌ಗಳ ಸದಸ್ಯತ್ವ ದೊರೆಯಲಿದೆ.

ಸಾಮ್ಯತೆ ಅಧಿಕ

ಸಾಮ್ಯತೆ ಅಧಿಕ

ಏರ್‌ಟೆಲ್, ವೊಡಾಫೋನ್, ಐಡಿಯಾ ಮತ್ತು ಜಿಯೋ ಟೆಲಿಕಾಂ ಸಂಸ್ಥೆಗಳು 999ರೂ.ಗಳ ಪ್ಲ್ಯಾನ್‌ ಬಹುತೇಕ ಒಂದೇ ಸಮನಾಗಿ ಕಂಡರೂ ಅವುಗಳ ಮಧ್ಯೆ ಸಣ್ಣ ಬದಲಾವಣೆಗಳಿವೆ. ಏರ್‌ಟೆಲ್, ವೊಡಾಫೋನ್, ಐಡಿಯಾ 365 ದಿನಗಳ ವ್ಯಾಲಿಡಿಟಿ ಹೊಂದಿದ್ದರೇ, ಜಿಯೋದ ವ್ಯಾಲಿಡಿಟಿ ಕೇವಲ 90ದಿನಗಳು ಮಾತ್ರ. ಹಾಗೆಯೇ ವೊಡಾಫೋನ್ ಮತ್ತು ಐಡಿಯಾ ಎರಡು ಒಂದೆ ಆಗಿವೆ. ಏರ್‌ಟೆಲ್‌ನ 998ರೂ. ಪ್ಲ್ಯಾನ್‌ ಸಹ ಹೆಚ್ಚೆನು ಬದಲಾವಣೆ ಹೊಂದಿಲ್ಲ.

Best Mobiles in India

English summary
WhatsApp is currently testing the fingerprint unlock feature on its beta Android app. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+