Home
ಸುದ್ದಿಜಾಲ

iPhone ಬಳಕೆದಾರರಿಗೆ ಶಾಕಿಂಗ್ ಸುದ್ದಿ; ನಿಮ್ಮ ಐಫೋನಿನಲ್ಲಿ WhatsApp ಕೆಲಸ ಮಾಡಲ್ಲ!

ಮೆಟಾ ಮಾಲೀಕತ್ವದ ಅಧಿಕ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಲೀಡಿಂಗ್ ಇನ್‌ಸ್ಟಂಟ್‌ ಮೆಸೆಜ್‌ ಅಪ್ಲಿಕೇಶನ್ ವಾಟ್ಸಾಪ್‌ (WhatsApp) ಇದೀಗ ಆಪಲ್‌ ಐಫೋನ್‌ ಬಳಕೆದಾರರಿಗೆ ಬಿಗ್‌ ಶಾಕ್ ತಿಳಿಸಿದೆ. ಆಪಲ್‌ ಸಂಸ್ಥೆಯ ಇತ್ತೀಚಿನ ಅಪ್‌ಡೇಟ್ ಪ್ರಕಾರ ಇದೇ ಅಕ್ಟೋಬರ್ 24 ರಿಂದ ಹಳೆಯ ಐಓಎಸ್‌ (iOS) ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಐಫೋನ್‌ಗಳಲ್ಲಿ ವಾಟ್ಸಾಪ್‌ ಕೆಲಸ ಮಾಡುವುದನ್ನು ನಿಲ್ಲಿಸಲಿದೆ ಎಂದು ಸೂಚಿಸಿದೆ.

ಹೌದು, ವಾಟ್ಸಾಪ್‌ ಸಂಸ್ಥೆಯು 2025 ರಲ್ಲಿ ಹಳೆಯ iOS ಆವೃತ್ತಿಗಳಲ್ಲಿ ಬಳಕೆದಾರರಿಗೆ ಬೆಂಬಲವನ್ನು ಕೊನೆಗೊಳಿಸುವುದಾಗಿ ಇತ್ತೀಚೆಗೆ ಘೋಷಿಸಿದೆ. ಆಪಲ್‌ iOS 12 ಮತ್ತು iOS 11 ನಲ್ಲಿ ಕೆಲಸ ನಿರ್ವಹಿಸುತ್ತಿರುವ ಐಫೋನ್‌/ ಡಿವೈಸ್‌ಗಳಲ್ಲಿ ವಾಟ್ಸಾಪ್‌ (WhatsApp App) ಅಪ್ಲಿಕೇಶನ್ ಬೆಂಬಲಿಸುವುದನ್ನು ನಿಲ್ಲಿಸುತ್ತದೆ ಎಂದು ಇತ್ತೀಚಿನ WABetaInfo ವರದಿಯಿಂದ ತಿಳಿದುಬಂದಿದೆ.

iPhone ಬಳಕೆದಾರರಿಗೆ ಶಾಕಿಂಗ್ ಸುದ್ದಿ; ಐಫೋನಿನಲ್ಲಿ WhatsApp ಕೆಲಸ ಮಾಡಲ್ಲ!

ಸದ್ಯ ವಾಟ್ಸಾಪ್‌ ಆಪ್‌ iOS 12 ಮತ್ತು ಅದಕ್ಕಿಂತ ನಂತರದ ಆವೃತ್ತಿಯ ಡಿವೈಸ್‌ಗಳಲ್ಲಿ ಸಪೋರ್ಟ್‌ ಕಾಣಬಹುದಾಗಿದೆ. ಆದರೆ ಮುಂದಿನ ಅಪ್‌ಡೇಟ್‌ನೊಂದಿಗೆ, ಅತ್ಯುತ್ತಮ ಕಾರ್ಯಕ್ಕಾಗಿ ವಾಟ್ಸಾಪ್‌ ಅಪ್ಲಿಕೇಶನ್‌ಗೆ ಕನಿಷ್ಠ iOS 15.1 ಅಗತ್ಯ ಇರುತ್ತದೆ.

ವಾಟ್ಸಾಪ್‌ ಅಪ್ಲಿಕೇಶನ್‌ ಬಳಕೆ ಮುಂದುವರಿಸಲು, ಬಳಕೆದಾರರು ತಮ್ಮ ಡಿವೈಸ್‌ ನಲ್ಲಿ ಐಓಎಸ್‌ ಅಪ್‌ಡೇಟ್‌ ಮಾಡಿಕೊಳ್ಳಬೇಕಿದೆ. ಒಂದು ವೇಳೆ ಬಳಕೆದಾರರ ಫೋನ್ ಹಾರ್ಡ್‌ವೇರ್ ನೂತನ iOS ಆವೃತ್ತಿಗಳನ್ನು ಸಪೋರ್ಟ್‌ ಮಾಡಿದ್ದರೆ, ಗ್ರಾಹಕರು ಅವರ ಡಿವೈಸ್‌ಗಳನ್ನು ನವೀಕರಿಸಲು ಅಥವಾ ಪರ್ಯಾಯಗಳನ್ನು ಮಾರ್ಗಗಳಿಗೆ ಅವರಿಗೆ ಅವಕಾಶ ನೀಡುತ್ತದೆ. ಐಫೋನ್‌ ಬಳಕೆದಾರರು ವಾಟ್ಸಾಪ್‌ ಆಪ್‌ ಅನ್ನು ಬಳಕೆ ಮಾಡುವುದನ್ನು ಮುಂದುವರಿಸಲು iOS 15.1 ಅಥವಾ ಅದಕ್ಕೂ ಮುಂದಿನ (ಇತ್ತೀಚಿನ) ಐಓಎಸ್‌ ಹೊಂದಿರುವುದು ಅಗತ್ಯ ಇದೆ.

ಐಫೋನ್‌ 5 ಅಥವಾ ಐಫೋನ್‌ 5C ಬಳಸುವ ಐಫೋನ್‌ ಬಳಕೆದಾರರು iOS ಅಪ್‌ಡೇಟ್‌ ಮತ್ತು ವಾಟ್ಸಾಪ್‌ ಅಪ್‌ಡೇಟ್‌ ಮಾಡಿದ ನಂತರ ವಾಟ್ಸಾಪ್‌ ಅನ್ನು ಬಳಸಲು ಸಾಧ್ಯವಾಗಬಹುದು. ಆದಾಗ್ಯೂ, ಐಫೋನ್‌ 4 ಮತ್ತು ಐಫೋನ್‌ 4S ಡಿವೈಸ್‌ಗಳಲ್ಲಿ ಇನ್ಮುಂದೆ ವಾಟ್ಸಾಪ್‌ ಬೆಂಬಲಿಸುವುದಿಲ್ಲ ಎನ್ನಲಾಗಿದೆ. ಇನ್ನು ಆಪಲ್ iOS 10 ಮತ್ತು iOS 11 ಸಾಫ್ಟ್‌ವೇರ್ ಆವೃತ್ತಿ ಹೊಂದಿರುವ ಐಫೋನ್‌ಗಳ ಸಂಖ್ಯೆ ಹೆಚ್ಚಿಲ್ಲ ಎನ್ನಲಾಗಿದೆ.

ನೂತನ ಬದಲಾವಣೆಯು ಪ್ರಮುಖವಾಗಿ ಐಫೋನ್‌ 5s, ಐಫೋನ್‌ 6 ಮತ್ತು ಐಫೋನ್‌ 6 ಪ್ಲಸ್‌ ಬಳಕೆದಾರರ ಮೇಲೆ ಪರಿಣಾಮ ಎನಿಸಲಿದೆ. ಏಕೆಂದರೆ ಈ ಮಾದರಿಗಳು iOS 12.5.7 ವರೆಗೆ ಮಾತ್ರ ಸಪೋರ್ಟ್‌ ಮಾಡುತ್ತವೆ. ಈ ಡಿವೈಸ್‌ಗಳನ್ನು ಸುಮಾರು ಹತ್ತು ವರ್ಷಗಳ ಹಿಂದೆ ಬಿಡುಗಡೆ ಮಾಡಲಾಗಿದೆ.

ಇತ್ತೀಚಿನ ಕೆಲವು ಆಕರ್ಷಕ ಫೀಚರ್ಸ್‌ಗಳು

ವಾಟ್ಸಾಪ್‌ ಆಪ್‌ಗೆ ( WhatsApp ) ಇತ್ತೀಚಿನ ಆಯ್ಕೆಗಳಲ್ಲಿ ಚಾಟ್ ಲಾಕ್ ಕೂಡಾ ಸೇರಿದೆ. ಬಳಕೆದಾರರು ಪರ್ಸನಲ್ ಚಾಟ್‌ಗಳನ್ನು ಲಾಕ್ ಮಾಡುವ ಅವಕಾಶ ಈ ಫೀಚರ್ಸ್‌ ನೀಡಲಿದೆ. ಅಂದಹಾಗೆ ಬಳಕೆದಾರರು ಈ ಫೀಚರ್ಸ್‌ ಆಕ್ಟಿವ್ ಮಾಡಲು ಈ ಕ್ರಮ ಅನುಸರಿಸಿ ಮಾಡಿ ಚಾಟ್‌ನ ಪ್ರೊಫೈಲ್ ಆಯ್ಕೆ > ಚಾಟ್ ಲಾಕ್ ಫೀಚರ್ಸ್‌ ಅನ್ನು ಟ್ಯಾಪ್ ಮಾಡಿರಿ.

ಸ್ಟೇಟಸ್‌ ಪ್ರೊಫೈಲ್ ರಿಂಗ್‌ಗಳ ಆಯ್ಕೆಯು ವಾಟ್ಸಾಪ್‌ನ ಹೊಸ ಫೀಚರ್ಸ್‌ ಆಗಿದೆ. ಬಳಕೆದಾರರ ಚಾಟ್ ಸ್ಕ್ರೀನ್ ನಿಂದ ನಿಮ್ಮ ಕಾಂಟ್ಯಾಕ್ಟ್‌ ಸ್ಟೇಟಸ್‌ ಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ನಿಮ್ಮ ಸ್ನೇಹಿತರು ಅಥವಾ ಬಂಧುಗಳು ಪೋಸ್ಟ್ ಮಾಡಿದಾಗ, ಅವರ ಪ್ರೊಫೈಲ್ ಫೋಟೋದ ಸುತ್ತಲೂ ಹಸಿರು ಕಲರ್ ರಿಂಗ್‌ ಅನ್ನು ನೋಡಬಹುದು.

Best Mobiles in India

English summary
WhatsApp to Discontinue Support for These iPhones: Is Yours on the List. check more details and list is here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+