Home
ಸುದ್ದಿಜಾಲ

ವಾಟ್ಸಪ್‌ನಲ್ಲಿ ವಿಶೇಷ ಫೀಚರ್!..ಮೀಡಿಯಾ ಫೈಲ್ ಹುಡುಕಾಟ ಇನ್ನು ಸುಲಭ!

ಫೇಸ್‌ಬುಕ್ ಒಡೆತನದ ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಪ್, ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿದೆ. ಪ್ರತಿ ನೂತನ ಆವೃತ್ತಿಯಲ್ಲಿಯೂ ವಾಟ್ಸಪ್ ತನ್ನ ಬಳಕೆದಾರರಿಗೆ ಉಪಯುಕ್ತ ಫೀಚರ್‌ ಪರಿಚಯಿಸುತ್ತಾ ಸಾಗಿ ಬಂದಿದೆ. ಹಾಗೆಯೇ ಇದೀಗ ವಾಟ್ಸಪ್ ಆಂಡ್ರಾಯ್ಡ್‌ ಬೀಟಾ ಆವೃತ್ತಿ ಹೊಸ ಅಪ್‌ಡೇಟ್ ಕಂಡಿದ್ದು, ಮತ್ತೊಂದು ಅನುಕೂಲಕರ ಸೌಲಭ್ಯವನ್ನು ವಾಟ್ಸಪ್‌ ಸೇರಿಸಿದೆ.

ಆಂಡ್ರಾಯ್ಡ್ ಬೀಟಾ ಆವೃತ್ತಿ

ಹೌದು, ವಾಟ್ಸಪ್ ಸಂಸ್ಥೆಯು ಇದೀಗ ತನ್ನ ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ 'ಅಡ್ವಾನ್ಸ್‌ ಸರ್ಚ್ ಮೋಡ್ ಫೀಚರ್' ಅನ್ನು ಅಳವಡಿಸಿದೆ. ವಾಟ್ಸಪ್‌ನ 2.20.117 ಬೀಟಾ ಆವೃತ್ತಿಯಲ್ಲಿ ಸೇರಿದ ಈ ಹೊಸ ಫೀಚರ್ ಬಳಕೆದಾರರಿಗೆ ಫೋಟೊಗಳು, ವಿಡಿಯೊಗಳು, ಆಡಿಯೊ ಫೈಲ್ ಹಾಗೂ ಮೀಡಿಯಾ ಫೈಲ್‌ಗಳನ್ನು ಸುಲಭವಾಗಿ ಹುಡುಕಲು ಅವಕಾಶ ಮಾಡಿಕೊಡುತ್ತದೆ. ಈ ಬಗ್ಗೆ WABetaInfo ಬ್ಲಾಗ್‌ ಮಾಹಿತಿ ಹೊರಹಾಕಿದೆ.

ಮೀಡಿಯಾ ಫೈಲ್‌ಗಳಿಗೆ ಬಣ್ಣದ ಹೈಲೈಟ್ಸ್‌

ಮೀಡಿಯಾ ಫೈಲ್‌ಗಳಿಗೆ ಬಣ್ಣದ ಹೈಲೈಟ್ಸ್‌

ವಾಟ್ಸಪ್‌ನಲ್ಲಿನ ಮೀಡಿಯಾ ಫೈಲ್‌ಗಳನ್ನು ಹುಡುಕಲು ಅಡ್ವಾನ್ಸ್‌ ಸರ್ಚ್ ಮೋಡ್ ಫೀಚರ್ ಆಯ್ಕೆಯು ಅನುಕೂಲ ಮಾಡಿಕೊಡುತ್ತದೆ. ಮೀಡಿಯಾ ಫೈಲ್‌ಗಳ ಗುರುತಿಗೆ ಕಲರ್ ಕೋಡ್ ಸೂಚಿಸುತ್ತದೆ. ಫೋಟೊ ಫೈಲ್‌ಗಳಿಗೆ ಮಸ್ಟರ್ಡ್‌ ಬಣ್ಣ, GIFs ಮಾದರಿಯ ಫೈಲ್‌ಗಳಿಗೆ ಪಿಂಕ್‌ ಬಣ್ಣ, ವಿಡಿಯೊ ಫೈಲ್‌ಗಳಿಗೆ ವೈಲೆಟ್‌/ನೆರಳೆ ಬಣ್ಣ, ಲಿಂಕ್‌ಗಳಿಗೆ ಗ್ರೀನ್‌ ಬಣ್ಣ ಹಾಗೂ ಡಾಕ್ಯುಮೆಂಟ್‌ ಫೈಲ್‌ಗಳು ಬ್ಲೂ ಬಣ್ಣಗಳಿಂದ ಹೈಲೈಟ್ಸ್‌ ಆಗಲಿವೆ ಎಂದು ಹೇಳಲಾಗಿದೆ.

ವಾಟ್ಸಪ್‌ ಬೀಟಾ ಆವೃತ್ತಿಯಲ್ಲಿ ಲಭ್ಯ

ವಾಟ್ಸಪ್‌ ಬೀಟಾ ಆವೃತ್ತಿಯಲ್ಲಿ ಲಭ್ಯ

ವಾಟ್ಸಾಪ್‌ನ ಅಡ್ವಾನ್ಸ್‌ ಸರ್ಚ್ ಮೋಡ್ ಫೀಚರ್ ಈಗಾಗಲೆ ಐಒಎಸ್ ಬೀಟಾ ಆವೃತ್ತಿಯಲ್ಲಿ ಜಾರಿ ಆಗಿದೆ. ಆದ್ರೆ ಇದೀಗ ಹೊಸದಾಗಿ ಆಂಡ್ರಾಯ್ಡ್ ಓಎಸ್‌ ವಾಟ್ಸಪ್ ಬೀಟಾ ಆವೃತ್ತಿಯಲ್ಲಿ ಅಡ್ವಾನ್ಸ್‌ ಸರ್ಚ್ ಮೋಡ್ ಫೀಚರ್ ಆಯ್ಕೆಯನ್ನು ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಫೀಚರ್ ಸಾಮಾನ್ಯ ವಾಟ್ಸಪ್ ಆವೃತ್ತಿಯ ಬಳಕೆದಾರರಿಗೂ ಲಭ್ಯವಾಗಲಿದೆ. ಸದ್ಯ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯ.

ವಾಟ್ಸಪ್ ಗ್ರೂಪ್ ಕರೆ ಸುಲಭ ಮಾಡಿದೆ

ವಾಟ್ಸಪ್ ಗ್ರೂಪ್ ಕರೆ ಸುಲಭ ಮಾಡಿದೆ

ವಾಟ್ಸಪ್‌ನಲ್ಲಿ ಗ್ರೂಪ್ ವಿಡಿಯೊ ಕರೆ ಮಾಡಲು ಸದಸ್ಯರಿಗೆ ಪ್ರತ್ಯೇಕವಾಗಿ ಕರೆ ಮಾಡುವ ಅಗತ್ಯ ಇರಲ್ಲ. ಕೇವಲ ಒಂದು ಟ್ಯಾಪ್ ಮಾಡುವ ಮೂಲಕ ಗುಂಪು ವಿಡಿಯೊ ಅಥವಾ ವಾಯಿಸ್‌ ಕರೆ ಮಾಡುವ ಹೊಸ ಸೌಲಭ್ಯವು ವಾಟ್ಸಪ್‌ನಲ್ಲಿ ಸೇರಿದೆ. ಗುಂಪು ವಿಡಿಯೊ ಕರೆ ಸೇವೆಯಲ್ಲಿ ಬಳಕೆದಾರರು ಗರಿಷ್ಠ ನಾಲ್ಕು ಬಳಕೆದಾರರನ್ನು ಸೇರಿಸಬಹುದಾಗಿದೆ. ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ ಹಾಗೂ ಆಪಲ್ ಆಪ್‌ ಸ್ಟೋರ್‌ನಲ್ಲಿ ವಾಟ್ಸಪ್‌ ಅಪ್‌ಡೇಟ್ ಮಾಡಿಕೊಳ್ಳಬಹುದಾಗಿದೆ.

ಸುಳ್ಳ ಸುದ್ದಿಗೆ ಬ್ರೇಕ್

ಸುಳ್ಳ ಸುದ್ದಿಗೆ ಬ್ರೇಕ್

ಹಾಗೆಯೇ ವಾಟ್ಸಪ್‌ ಸಕಲಿ ಸುದ್ದಿಗಳಿಗೆ ಕಡಿವಾಣ ಹಾಕುವ ಫೀಚರ್ಸ್‌ ಪರಿಚಯಿಸಿದೆ. ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕ ನಕಲಿ/ತಪ್ಪು ಮಾಹಿತಿಯ ಫಾರ್ವರ್ಡ್ ಮೆಸೆಜ್‌ಗಳು ಮೇಲಿಂದ ಮೇಲೆ ಒಬ್ಬರಿಂದ ಇನ್ನೊಬ್ಬರಿಗೆ ಶೇರ್ ಆಗುತ್ತಲೆ ಇರುತ್ತವೆ. ತಪ್ಪು ಮಾಹಿತಿ ಈ ರೀತಿಯ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ವಾಟ್ಸಾಪ್ ಹೊಸ ಫೀಚರ್ ಪರಿಚಯಿಸಿದೆ. ಈ ಫೀಚರನಲ್ಲಿ ಅತೀ ಹೆಚ್ಚು ಫಾರ್ವರ್ಡ್‌ ಆಗಿರುವ ಮೆಸೆಜ್‌ ಅನ್ನು ಒಂದು ಬಾರಿ ಒಂದು ಚಾಟ್‌ಗೆ ಮಾತ್ರ ಫಾರ್ವರ್ಡ್‌ ಮಾಡುವುದಕ್ಕೆ ಮಾತ್ರ ಅವಕಾಶ ನೀಡುತ್ತದೆ.

ಮಾಹಿತಿ ನಿಜಾಂಶ ಪರಿಶೀಲಿಸುವ ಆಯ್ಕೆ

ಮಾಹಿತಿ ನಿಜಾಂಶ ಪರಿಶೀಲಿಸುವ ಆಯ್ಕೆ

ಸುರಕ್ಷತೆಯಡೆಗೆ ವಾಟ್ಸಪ್ನಿಂದ ಮತ್ತೊಂದು ಹೊಸ ಹೆಜ್ಜೆ. ಮೆಸೆಜ್ ಮಾಹಿತಿ ಪರಿಶೀಲಿಸುವ ಆಯ್ಕೆಯನ್ನು ವಾಟ್ಸಪ್‌ ಪರಿಚಯಿಸಿದ್ದು, ಬಳಕೆದಾರರು ತಮಗೆ ಬಂದಿರುವ ಮೆಸೆಜ್‌ನ ಸತ್ಯ ಸತ್ಯೆತೆಯನ್ನು ತಿಳಿಯಲು ವೆಬ್‌ನಲ್ಲಿ ಆ ಮಾಹಿತಿ ಸರ್ಚ್ ಮಾಡುವ ಆಯ್ಕೆಯನ್ನು ಪರಿಚಯಿಸಿದೆ. ಆದರೆ ಸದ್ಯ ಈ ಫೀಚರ್ ಇನ್ನು ವಾಟ್ಸಪ್ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಸಾಮಾನ್ಯ ಆವೃತ್ತಿಗೂ ಲಭ್ಯವಾಗಲಿದೆ.

Best Mobiles in India

English summary
WhatsApp recently released a new update for its WhatsApp beta for Android app.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+