ಬಳಕೆದಾರರಿಗೆ ಮತ್ತೊಂದು ಉಪಯುಕ್ತ ಫೀಚರ್‌ ಪರಿಚಯಿಸುವ ತಯಾರಿಯಲ್ಲಿ ವಾಟ್ಸಾಪ್‌!

|

ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ಮೆಸೆಜಿಂಗ್ ಆಪ್ ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ವಾಟ್ಸಾಪ್‌ ಈಗಾಗಲೇ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಹಾಗೂ ಸೇವೆಗಳನ್ನು ಪರಿಚಯಿಸಿದೆ. ಇತ್ತೀಚಿಗಷ್ಟೆ ವಿಡಿಯೊ ಕಳುಹಿಸುವ ಮುನ್ನ ವಿಡಿಯೊ ಆಡಿಯೋ ಮ್ಯೂಟ್ ಮಾಡುವ ಆಯ್ಕೆ ಪರಿಚಯಿಸಿದೆ. ಅದರ ಬೆನ್ನಲ್ಲೇ ಇದೀಗ ಮತ್ತೊಂದು ಅಚ್ಚರಿಯ ಫೀಚರ್ಸ್‌ ಅನ್ನು ವಾಟ್ಸಾಪ್‌ ಅಳವಡಿಸಿಕೊಳ್ಳಲು ಸಜ್ಜಾಗಿದೆ.

ಅಪ್ಲಿಕೇಶನ್‌ನಲ್ಲಿನ

ಹೌದು, ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ನ ವಾಟ್ಸಾಪ್ ಸದ್ಯದಲ್ಲೇ ಅಪ್ಲಿಕೇಶನ್‌ನಲ್ಲಿನ ವಾಯಿಸ್‌ ಮೆಸೆಜ್‌ಗಳ ಪ್ಲೇಬ್ಯಾಕ್ ವೇಗವನ್ನು ಬದಲಾಯಿಸಲು ಫೀಚರ್‌ ಅನ್ನು ಬಳಕೆದಾರರಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು WABetaInfo ನ ವರದಿಯಿಂದ ತಿಳಿದುಬಂದಿದೆ. ಪ್ರಸ್ತುತ ಈ ಫೀಚರ್‌ ಈಗಿನ್ನೂ ಪರೀಕ್ಷಾ ಹಂತದಲ್ಲಿದೆ ಮತ್ತು ಇದು ಕಂಪನಿಯ ಆಂಡ್ರಾಯ್ಡ್ ಮತ್ತು ಐಒಎಸ್ ಆಧಾರಿತ ಅಪ್ಲಿಕೇಶನ್‌ಗಳಲ್ಲಿ ಮುಂದಿನ ನೂತನ ಅಪ್‌ಡೇಟ್‌ ಆವೃತ್ತಿಗಳಲ್ಲಿ ಲಭ್ಯವಿರುತ್ತದೆ ಎಂದು ವರದಿ ಹೇಳುತ್ತದೆ.

ಇಂಟರ್ಫೇಸ್

ವಾಟ್ಸಾಪ್ನ ಬಳಕೆದಾರ ಇಂಟರ್ಫೇಸ್ ಹೇಗೆ ಕಾಣುತ್ತದೆ ಮತ್ತು ಕಂಪನಿಯು ಒದಗಿಸುವ ಎಲ್ಲ ಪ್ಲೇಬ್ಯಾಕ್ ವೇಗ ಆಯ್ಕೆಗಳ ಬಗ್ಗೆ ನಮಗೆ ಒಂದು ನೋಟವನ್ನು ನೀಡುವ ಯಾವುದೇ ಚಿತ್ರಗಳನ್ನು ಬ್ಲಾಗ್ ಸೈಟ್ ಹಂಚಿಕೊಂಡಿಲ್ಲ. ಆದ್ದರಿಂದ, ಈ ಫೀಚರ್‌ನ ಕುರಿತು ಹೆಚ್ಚಿನ ವಿವರಗಳನ್ನು ನೀಡಲು ಮುಂದಿನ ವರದಿಗಳಿಗಾಗಿ ನಾವು ಕಾಯಬೇಕಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ, ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಾಯಿಸ್‌ ಮೆಸೆಜ್ಗಳಿಗಾಗಿ ವೇರಿಯಬಲ್ ಪ್ಲೇಬ್ಯಾಕ್ ವೇಗವನ್ನು ಪರಿಚಯಿಸುವ ಕೆಲಸ ಮಾಡುತ್ತಿರುವಾಗ, ಟೆಲಿಗ್ರಾಮ್ ಈ ಫೀಚರ್‌ ಅನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ 2018 ರಲ್ಲಿ ಮತ್ತೆ ಪರಿಚಯಿಸಿತು. ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಈ ಫೀಚರ್‌ ಅನ್ನು ಹೇಗೆ ಅಳವಡಿಸುತ್ತದೆ ಎಂಬುದನ್ನು ನೋಡಬೇಕಾಗಿದೆ.

ಬಳಕೆದಾರರ

ವಾಟ್ಸಾಪ್‌ ತನ್ನ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ಸುಲಭವಾದ ಕಾರ್ಯಾಚರಣೆಯನ್ನು ಖಚಿತಪಡಿಸಿದೆ. ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ಮರು ಗಾತ್ರಗೊಳಿಸಬಹುದಾದ ಪರದೆಯ ಮೇಲೆ ಸ್ವತಂತ್ರ ವಿಂಡೋದಲ್ಲಿ ಡೆಸ್ಕ್‌ಟಾಪ್‌ಗಾಗಿ ವಾಟ್ಸಾಪ್ ಕಾಣಿಸುತ್ತದೆ. ತೆರೆದ ವಿಂಡೋಗಳು ಅಥವಾ ಬ್ರೌಸರ್ ಟ್ಯಾಬ್‌ಗಳ ಮಧ್ಯೆ ಬಳಕೆದಾರರು ತಮ್ಮ ವೀಡಿಯೊ ಚಾಟ್‌ಗಳನ್ನು ಕಳೆದುಕೊಳ್ಳದಂತೆ ಇದು ಯಾವಾಗಲೂ ಮೇಲ್ಭಾಗದಲ್ಲಿ ಕಾಣಿಸುತ್ತದೆ. ಇನ್ನು ತನ್ನ ಅಪ್ಲಿಕೇಶನ್‌ನಲ್ಲಿನ ಎಲ್ಲಾ ವಾಯ್ಸ್‌ ಮತ್ತು ವೀಡಿಯೊ ಕರೆಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿದೆ ಎಂದು ವಾಟ್ಸಾಪ್ ತನ್ನ ಇತ್ತೀಚಿಗೆ ಹೇಳಿಕೆಯಲ್ಲಿ ತಿಳಿಸಿದೆ.

ಗೌಪ್ಯತೆ

ಇದಲ್ಲದೆ ಮೊಬೈಲ್ ಡಿವೈಸ್‌ನಿಂದ ಅಥವಾ ಡೆಸ್ಕ್‌ಟಾಪ್ ಪಿಸಿಯಿಂದ ಕರೆ ಮಾಡಿದರೂ ಸುರಕ್ಷತೆ ಮತ್ತು ಗೌಪ್ಯತೆ ವೈಶಿಷ್ಟ್ಯಗಳು ಒಂದೇ ಆಗಿರುತ್ತವೆ ಎಂದು ವಾಟ್ಸಾಪ್‌ ತಿಳಿಸಿದೆ. ವಿಂಡೋಸ್ ಮತ್ತು ಮ್ಯಾಕ್ ಡಿವೈಸ್‌ಗಳಲ್ಲಿ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಿಂದ ಬಳಕೆದಾರರು ಒಂದರಿಂದ ಒಂದಕ್ಕೆ ಕರೆಗಳನ್ನು ಮಾತ್ರ ಮಾಡಬಹುದಾಗಿದೆ. ಮುಂದಿನ ಅಪ್‌ಡೇಟ್‌ಗಳಲ್ಲಿ ಗ್ರೂಪ್‌ ವಾಯ್ಸ್‌ ಮತ್ತು ವೀಡಿಯೊ ಕಾಲ್‌ ಫೀಚರ್ಸ್‌ಗಳನ್ನು ಸಹ ಪರಿಚಯಿಸುವ ಮಾತುಗಳನ್ನ ವಾಟ್ಸಾಪ್‌ ಇತ್ತೀಚಿಗೆ ಹೇಳಿದೆ.

ಫಿಂಗರ್ಪ್ರಿಂಟ್

ವಾಟ್ಸಾಪ್‌ ಜನವರಿಯಲ್ಲಿ, ವಾಟ್ಸಾಪ್ ವೆಬ್ ಮತ್ತು ಡೆಸ್ಕ್‌ಟಾಪ್‌ಗಾಗಿ ಮತ್ತೊಂದು ಹೊಸ ಭದ್ರತಾ ಫೀಚರ್ಸ್‌ ಅನ್ನು ಸಹ ಪರಿಚಯಿಸಿತ್ತು. ಡಿವೈಸ್‌ಗಳನ್ನು ಲಿಂಕ್ ಮಾಡುವಾಗ ಫೇಸ್‌ ಮತ್ತು ಫಿಂಗರ್ಪ್ರಿಂಟ್ ಅನ್ಲಾಕ್ ಫೀಚರ್ಸ್‌ ಒದಗಿಸಿದೆ. ಇದರಿಂದ ನಿಮ್ಮ ಕಂಪ್ಯೂಟರ್‌ಗೆ ನಿಮ್ಮ ವಾಟ್ಸಾಪ್ ಖಾತೆಯನ್ನು ಲಿಂಕ್ ಮಾಡಲು ನೀವು ಬಯಸಿದಾಗ ಇದು ಹೆಚ್ಚುವರಿ ರಕ್ಷಣೆಯ ಪದರವನ್ನು ಸೇರಿಸುತ್ತದೆ ಎಂದು ಕಂಪನಿ ಹೇಳಿದೆ. ಈ ಫೀಚರ್ಸ್‌ ಮೂಲಕ ಬಳಕೆದಾರರು ತಮ್ಮ ವಾಟ್ಸಾಪ್ ಖಾತೆಗಳನ್ನು ಫಿಂಗರ್‌ಪ್ರಿಂಟ್ ಅಥವಾ ಫೇಸ್ ಐಡಿ ಮೂಲಕ ತಮ್ಮ ಕಂಪ್ಯೂಟರ್‌ಗೆ ಲಿಂಕ್ ಮಾಡಬಹುದಾಗಿದೆ.

Best Mobiles in India

English summary
This feature is still in development and it will arrive on WhatsApp's Android and iOS-based apps in future.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X