ನಾಳೆಯಿಂದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಕಥೆ ಮುಕ್ತಾಯ!

|

ವಿಶ್ವದಲ್ಲಿಯೇ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಜನಪ್ರಿಯ ಇನ್‌ಸ್ಟಂಟ್‌ ಮೆಸೆಜ್‌ ಆಪ್‌ ವಾಟ್ಸಪ್ ವರ್ಷದ ಅಂತ್ಯದಲ್ಲಿ ಬಳಕೆದಾರರಿಗೆ ದೊಡ್ಡ ಅಚ್ಚರಿ ನೀಡಿದೆ. ಇತ್ತೀಚಿಗಷ್ಟೆ ಹಲವು ಹೊಸ ಅಪ್‌ಡೇಟ್ ಫೀಚರ್ಸ್‌ಗಳನ್ನು ಪರಿಚಯಿಸಿ ಸದ್ದು ಮಾಡಿರುವ ವಾಟ್ಸಾಪ್‌ ಜನವರಿ 1, 2021 ರಿಂದ ಕೆಲವು ಆಂಡ್ರಾಯ್ಡ್‌ ಹಾಗೂ ಐಫೋನ್‌ಗಳಲ್ಲಿ ವಾಟ್ಸಾಪ್‌ ಸಪೋರ್ಟ್ ಆಗುವುದಿಲ್ಲ ಎಂದು ಸಂಸ್ಥೆಯು ಹೇಳಿಕೊಂಡಿದೆ.

ವಾಟ್ಸಪ್

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಮೆಸೆಜಿಂಗ್ ಆಪ್‌ ಇದೇ ಜನವರಿ 1, 2021 ರಿಂದ ಕೆಲವು ಆಂಡ್ರಾಯ್ಡ್‌ ಹಾಗೂ ಐಫೋನ್‌ಗಳಿಗೆ ಸಪೋರ್ಟ್‌ ಮಾಡುವುದಿಲ್ಲ ಎಂದು ವರದಿಯೊಂದರಿಂದ ತಿಳಿದುಬಂದಿದೆ. ಆಪಲ್‌ ಐಓಎಸ್‌ 9 ಅಥವಾ ಆಂಡ್ರಾಯ್ಡ್‌ 4.0.3 ಓಎಸ್‌ ಗಿಂತ ಹಿಂದಿನ ಆಪರೇಟಿಂಗ್ ಸಿಸ್ಟಮ್‌ ಬೆಂಬಲದ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಮುಂದೆ ವಾಟ್ಸಾಪ್‌ ಕೆಲಸ ನಿಲ್ಲಿಸಲಿದೆ ಎನ್ನಲಾಗಿದೆ.

ಈ ಐಫೋನ್‌ ಆವೃತ್ತಿಗಳಲ್ಲಿ ವಾಟ್ಸಾಪ್‌ ಕಥೆ ಮುಕ್ತಾಯ

ಈ ಐಫೋನ್‌ ಆವೃತ್ತಿಗಳಲ್ಲಿ ವಾಟ್ಸಾಪ್‌ ಕಥೆ ಮುಕ್ತಾಯ

ಆಪಲ್‌ ಐಓಎಸ್‌ 9 ಓಎಸ್‌ಗಿಂತ ಹಿಂದಿನ ಆಪರೇಟಿಂಗ್ ಸಿಸ್ಟಮ್ ವಾಟ್ಸಾಪ್ ಸಪೋರ್ಟ್‌ ನಿಲ್ಲಿಸಲಿದೆ. ಹೀಗಾಗಿ ಐಫೋನ್ 4S, ಐಫೋನ್ 5, ಐಫೋನ್ 5S, ಐಫೋನ್ 5C, ಐಫೋನ್ 6 ಮತ್ತು ಐಫೋನ್ 6S ಫೋನ್‌ಗಳು ಸಪೋರ್ಟ್‌ ಕಳೆದುಕೊಳ್ಳುವ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿವೆ. ಬಳಕೆದಾರರು ವಾಟ್ಸಾಪ್ ಮೆಸೇಜಿಂಗ್ ಅಪ್ಲಿಕೇಶನ್ ಬಳಸುವುದನ್ನು ಮುಂದುವರಿಸಲು ಆಪರೇಟಿಂಗ್ ಸಿಸ್ಟಮ್ ಅನ್ನು ಐಒಎಸ್ 9 ಅಥವಾ ಆ ನಂತರದ ಆವೃತ್ತಿಗೆ ಅಪ್‌ಗ್ರೇಡ್‌ ಮಾಡುವುದು.

ಈ ಆಂಡ್ರಾಯ್ಡ್‌ ಓಎಸ್‌ ಆವೃತ್ತಿಗಳಲ್ಲಿ ವಾಟ್ಸಾಪ್‌ ಸಪೋರ್ಟ್‌

ಈ ಆಂಡ್ರಾಯ್ಡ್‌ ಓಎಸ್‌ ಆವೃತ್ತಿಗಳಲ್ಲಿ ವಾಟ್ಸಾಪ್‌ ಸಪೋರ್ಟ್‌

ಆಂಡ್ರಾಯ್ಡ್ 4.0.3 ಓಎಸ್‌ ಗಿಂತ ಹಿಂದಿನ ಆವೃತ್ತಿಯ ಓಎಸ್‌ ಫೋನ್‌ಗಳಲ್ಲಿ ವಾಟ್ಸಾಪ್‌ ಇನ್ನು ಕಾರ್ಯನಿಲ್ಲಿಸಲಿದೆ. ಹೀಗಾಗಿ HTC ಡಿಸೈರ್, ಎಲ್‌ಜಿ ಆಪ್ಟಿಮಸ್ ಬ್ಲ್ಯಾಕ್, ಮೊಟೊರೊಲಾ ಡ್ರಾಯಿಡ್ ರೇಜರ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S2 ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಸೇವೆ ಸ್ಥಗಿತವಾಗಲಿದೆ. ಆದ್ದರಿಂದ, ಬಳಕೆದಾರರು ತಮ್ಮ Android ಫೋನ್ ಆಂಡ್ರಾಯ್ಡ್ 4.0.3 ಆವೃತ್ತಿಯಲ್ಲಿ ಚಾಲನೆಯಲ್ಲಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಓಎಸ್‌ ಅಪ್‌ಡೇಟ್‌ ಸಾಧ್ಯವಿದ್ದರೇ ನೂತನ ಓಎಸ್‌ಗೆ ಅಪ್‌ಡೇಟ್‌ ಮಾಡಿಕೊಳ್ಳಬಹುದು.

ಓಎಸ್ ಅನ್ನು ಹೇಗೆ ಪರಿಶೀಲಿಸುವುದು?

ಓಎಸ್ ಅನ್ನು ಹೇಗೆ ಪರಿಶೀಲಿಸುವುದು?

ಐಫೋನ್‌ನಲ್ಲಿ ಓಎಸ್‌ ಬಗ್ಗೆ ತಿಳಿಯಬೇಕಿದ್ದರೇ, ಮೊದಲು ಫೋನ್ ಸೆಟ್ಟಿಂಗ್‌ ಮೆನುಗೆ ಭೇಟಿ ನೀಡಿ. ನಂತರ General ಮತ್ತು Information ಆಯ್ಕೆಗೆ ಕ್ಲಿಕ್ ಮಾಡಿ. ಬಳಕೆದಾರರು ನಿರ್ದಿಷ್ಟ ಐಫೋನ್ ಚಾಲನೆಯಲ್ಲಿರುವ ಓಎಸ್ ಅನ್ನು ನೋಡಲು ಸಾಧ್ಯವಾಗುತ್ತದೆ.

ಆಂಡ್ರಾಯ್ಡ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಯಾವ ಆಂಡ್ರಾಯ್ಡ್ ಆವೃತ್ತಿಯಲ್ಲಿ ಚಾಲನೆಯಲ್ಲಿದೆ ಎಂಬುದನ್ನು ನೋಡಲು ಸೆಟ್ಟಿಂಗ್‌ ಆಯ್ಕೆಯ ಮೂಲಕ ತಿಳಿಯಬಹುದಾಗಿದೆ.

Best Mobiles in India

English summary
WhatsApp To Stop Working On These Phones From January 1. Here is the list.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X