Home
ಸುದ್ದಿಜಾಲ

ಈ ಫೋನ್‌ಗಳಲ್ಲಿ ವಾಟ್ಸಾಪ್ ಸ್ಥಗಿತವಾಗಲಿದೆ!..ಬಳಕೆದಾರರು ಏನು ಮಾಡೋದು?

ಸಾಮಾಜಿಕ ಜಾಲತಾಣಗಳ ಹಿರಿಯಣ್ಣ ಎಂದು ಗುರುತಿಸಿಕೊಂಡಿರುವ ಫೇಸ್‌ಬುಕ್ ಹಲವು ಉಪಯುಕ್ತ ಸೇವೆಗಳನ್ನು ಒಳಗೊಂಡಿದೆ. ಅವುಗಳಲ್ಲಿ ವಿಶ್ವ ಜನಪ್ರಿಯ ವಾಟ್ಸಾಪ್‌ ಸಹ ಒಂದಾಗಿದೆ. ಟೆಕ್ಸ್ಟ್, ಫೋಟೊ, ವಿಡಿಯೋಗಳನ್ನು ಶೇರ್ ಮಾಡಬಹುದಾದ ಆಯ್ಕೆಗಳನ್ನು ಒಳಗೊಂಡಿರುವ ವಾಟ್ಸಾಪ್ ಈಗಾಗಲೇ ಹಲವು ಅಪ್‌ಡೇಟ್ ಕಂಡು ಮತ್ತಷ್ಟು ನೂತನ ಫೀಚರ್ಸ್‌ಗಳನ್ನು ಭರ್ತಿ ಮಾಡಿಕೊಂಡಿದೆ. ಇನ್ನು ಇದೇ ನವೆಂಬರ್ 1, 2021 ರಿಂದ ಆಂಡ್ರಾಯ್ಡ್‌ ಮತ್ತು ಐಓಎಸ್‌ನ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಆಪ್ ಸ್ಥಗಿತವಾಗಲಿದೆ ಎಂದು ಹೇಳಲಾಗಿದೆ.

ಈ ಫೋನ್‌ಗಳಲ್ಲಿ ವಾಟ್ಸಾಪ್ ಸ್ಥಗಿತವಾಗಲಿದೆ!..ಬಳಕೆದಾರರು ಏನು ಮಾಡೋದು?

ಹೌದು, ವಾಟ್ಸಾಪ್ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು, ಇದು ನಿರಂತರವಾಗಿ ತನ್ನ ಬಳಕೆದಾರರಿಗೆ ಅತ್ಯುತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತ ಮುನ್ನಡೆದಿದೆ. ಕಂಪನಿಯು ಆಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿಯ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತಿದೆ. ಹೊಸ ಫೋನ್‌ಗಳಿಗೆ ಹೊಂದಾಣಿಕೆಯನ್ನು ಸುಧಾರಿಸಲು 1 ನೇ ನವೆಂಬರ್ 2021 ರಿಂದ ವಾಟ್ಸಾಪ್ ಹಳೆಯ ಆಪರೇಟಿಂಗ್ ಸಿಸ್ಟಮ್ (ಓಎಸ್‌) ಫೋನ್‌ಗಳಿಗೆ ತನ್ನ ಸಪೋರ್ಟ್‌ ನಿಲ್ಲಿಸಲಿದೆ.

ಈ ಫೋನ್‌ಗಳಲ್ಲಿ ವಾಟ್ಸಾಪ್ ಸ್ಥಗಿತವಾಗಲಿದೆ!..ಬಳಕೆದಾರರು ಏನು ಮಾಡೋದು?

ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೆಜ್‌ ದೈತ್ಯ ವಾಟ್ಸಾಪ್, ಇದೇ ನವೆಂಬರ್ 1, ಒಟ್ಟು 43 ಸ್ಮಾರ್ಟ್‌ಫೋನ್‌ಗಳಲ್ಲಿ ತನ್ನ ಕಾರ್ಯ ನಿರ್ವಹಣೆಯನ್ನು ಶಾಶ್ವತವಾಗಿ ನಿಲ್ಲಿಸುತ್ತದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ. ಆಪಲ್‌ ಐಓಎಸ್‌ 9 ಅಥವಾ ಆಂಡ್ರಾಯ್ಡ್‌ 4.0.3 ಓಎಸ್‌ ಗಿಂತ ಹಿಂದಿನ ಆಪರೇಟಿಂಗ್ ಸಿಸ್ಟಮ್‌ ಬೆಂಬಲದ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಕೆಲಸ ನಿಲ್ಲಿಸಲಿದೆ ಎನ್ನಲಾಗಿದೆ.

ಈ ಫೋನ್‌ಗಳಲ್ಲಿ ವಾಟ್ಸಾಪ್ ಸ್ಥಗಿತವಾಗಲಿದೆ!..ಬಳಕೆದಾರರು ಏನು ಮಾಡೋದು?

ಈ ಆಪರೇಟಿಂಗ್ ಸಿಸ್ಟಮ್ ಇದ್ರೆ ನೋ ಪ್ರಾಬ್ಲಂ
ಆಪಲ್‌ ಐಓಎಸ್‌ 9 ಅಥವಾ ಆಂಡ್ರಾಯ್ಡ್‌ 4.0.3 ಓಎಸ್‌ ಗಿಂತ ಹಿಂದಿನ ಓಎಸ್‌ ನಲ್ಲಿ ಕಾರ್ಯನಿರ್ವಹಿಸುವ ಫೋನ್‌ಗಳಲ್ಲಿ ವಾಟ್ಸಾಪ್‌ ನವೆಂಬರ್‌ನಿಂದ ಕಾರ್ಯನಿರ್ವಹಿಸಲ್ಲ. ಹೀಗಾಗಿ 4.1 ಓಎಸ್ ಅಥವಾ ಅದಕ್ಕಿಂತ ಮೇಲ್ಪಟ್ಟ ಓಎಸ್‌ನ ಆಂಡ್ರಾಯ್ಡ್ ಫೋನ್‌ಗಳನ್ನು ಮತ್ತು ಐಒಎಸ್ 10 ಮತ್ತು ಅದಕ್ಕಿಂತ ಮೇಲ್ಪಟ್ಟ ಐಫೋನ್‌ ಮಾಡೆಲ್‌ಗಳನ್ನು ಬಳಸುವ ಬಳಕೆದಾರರಿಗೆ ಮಾತ್ರ ವಾಟ್ಸಾಪ್‌ ಲಭ್ಯವಾಗಲಿದೆ.

ನಿಮ್ಮ ಫೋನಿನ ಆಪರೇಟಿಂಗ್ ಸಿಸ್ಟಮ್ (OS) ತಿಳಿಯಲು ಹೀಗೆ ಮಾಡಿ:
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಫ್ಟ್‌ವೇರ್ ಆವೃತ್ತಿಯನ್ನು ತಿಳಿಯಲು ಈ ಹಂತಗಳನ್ನು ಫಾಲೋ ಮಾಡಿ: Settings > About Phone ಇನ್ನು ಐಒಎಸ್ ಫೋನ್‌ಗಳಲ್ಲಿ, Settings > General > About.

ಸ್ಯಾಮ್‌ಸಂಗ್‌ನ ಈ ಫೋನ್‌ಗಳಲ್ಲಿ ವಾಟ್ಸಾಪ್‌ ಅಧ್ಯಾಯ ಮುಗಿಯಲಿದೆ:
* ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ರೆಂಡ್‌ ಲೈಟ್‌
* ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ರೆಂಡ್‌ ಲೈಟ್‌ II
* ಸ್ಯಾಮ್‌ಸಂಗ್ ಗ್ಯಾಲಕ್ಸಿ SII
* ಸ್ಯಾಮ್‌ಸಂಗ್ಗ್ಯಾಲಕ್ಸಿ S3 ಮಿನಿ
* ಸ್ಯಾಮ್‌ಸಂಗ್ ಗ್ಯಾಲಕ್ಸಿ Xcover 2
* ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್
* ಸ್ಯಾಮ್‌ಸಂಗ್ ಗ್ಯಾಲಕ್ಸಿ ಏಸ್‌ 2

ಆಪಲ್‌ನ ಈ ಐಫೋನ್‌ಗಳಲ್ಲಿ ವಾಟ್ಸಾಪ್‌ ಸೇವೆ ಸ್ಥಗಿತ ಆಗಲಿದೆ:
* ಆಪಲ್ ಐಫೊನ್ SE
* ಆಪಲ್ ಐಫೊನ್ 6S
* ಆಪಲ್ ಐಫೊನ್ 6S ಪ್ಲಸ್‌

Best Mobiles in India

English summary
WhatsApp To Stop Working On These Phones From November 1: Everything You Need To Know.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+