ವಾಟ್ಸಾಪ್ ಪ್ರಿಯರಿಗೆ ಶಾಕ್; ನವೆಂಬರ್ 1ರಿಂದ ಈ ಫೋನ್‌ಗಳಲ್ಲಿ ವಾಟ್ಸಾಪ್ ಬಂದ್ ಆಗಲಿದೆ!
ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಆಪ್ ವಾಟ್ಸಾಪ್‌ಇದೀಗ ಬಳಕೆದಾರರಿಗೆ ಬಿಗ್ ಶಾಕ್ ನೀಡಿದೆ. ನವೆಂಬರ್ 1, 2021 ರಿಂದ ಆಂಡ್ರಾಯ್ಡ್ ಮತ್ತು ಐಓಎಸ್‌ನ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಶಾಶ್ವತವಾಗಿ ವಾಟ್ಸಾಪ್ ಆಪ್ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದೆ.

ಹೌದು, ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೆಜ್ ದೈತ್ಯ ವಾಟ್ಸಾಪ್, ನವೆಂಬರ್ 1, ಒಟ್ಟು 43 ಸ್ಮಾರ್ಟ್‌ಫೋನ್‌ಗಳಲ್ಲಿ ತನ್ನ ಕಾರ್ಯ ನಿರ್ವಹಣೆಯನ್ನು ಶಾಶ್ವತವಾಗಿ ನಿಲ್ಲಿಸುತ್ತದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ. ಆಪಲ್ ಐಓಎಸ್ 9 ಅಥವಾ ಆಂಡ್ರಾಯ್ಡ್ 4.0.3 ಓಎಸ್ ಗಿಂತ ಹಿಂದಿನ ಆಪರೇಟಿಂಗ್ ಸಿಸ್ಟಮ್ ಬೆಂಬಲದ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ನಿಲ್ಲಿಸಲಿದೆ ಎನ್ನಲಾಗಿದೆ. ಹಾಗಾದರೇ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಸ್ಥಗಿತವಾಗಲಿದೆ ಎಂಬುದರ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಈ ಓಎಸ್ ಇದ್ರೆ ಮಾತ್ರ ವಾಟ್ಸಾಪ್
ಆಪಲ್ ಐಓಎಸ್ 9 ಅಥವಾ ಆಂಡ್ರಾಯ್ಡ್ 4.0.3 ಓಎಸ್ ಗಿಂತ ಹಿಂದಿನ ಓಎಸ್ ನಲ್ಲಿ ಕಾರ್ಯನಿರ್ವಹಿಸುವ ಫೋನ್‌ಗಳಲ್ಲಿ ವಾಟ್ಸಾಪ್ ನವೆಂಬರ್‌ನಿಂದ ಕಾರ್ಯನಿರ್ವಹಿಸಲ್ಲ. ಹೀಗಾಗಿ 4.1 ಓಎಸ್ ಅಥವಾ ಅದಕ್ಕಿಂತ ಮೇಲ್ಪಟ್ಟ ಓಎಸ್‌ನ ಆಂಡ್ರಾಯ್ಡ್ ಫೋನ್‌ಗಳನ್ನು ಮತ್ತು ಐಒಎಸ್ 10 ಮತ್ತು ಅದಕ್ಕಿಂತ ಮೇಲ್ಪಟ್ಟ ಐಫೋನ್ ಮಾಡೆಲ್‌ಗಳನ್ನು ಬಳಸುವ ಬಳಕೆದಾರರಿಗೆ ಮಾತ್ರ ವಾಟ್ಸಾಪ್ ಲಭ್ಯವಾಗಲಿದೆ.

ಸ್ಯಾಮ್‌ಸಂಗ್‌ನ ಈ ಫೋನ್‌ಗಳಲ್ಲಿ ವಾಟ್ಸಾಪ್ ಅಧ್ಯಾಯ ಮುಗಿಯಲಿದೆ:
* ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ರೆಂಡ್ ಲೈಟ್
* ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ರೆಂಡ್ ಲೈಟ್ II
* ಸ್ಯಾಮ್‌ಸಂಗ್ ಗ್ಯಾಲಕ್ಸಿ SII
* ಸ್ಯಾಮ್‌ಸಂಗ್ಗ್ಯಾಲಕ್ಸಿ S3 ಮಿನಿ
* ಸ್ಯಾಮ್‌ಸಂಗ್ ಗ್ಯಾಲಕ್ಸಿ Xcover 2
* ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್
* ಸ್ಯಾಮ್‌ಸಂಗ್ ಗ್ಯಾಲಕ್ಸಿ ಏಸ್ 2

ಆಪಲ್‌ನ ಈ ಐಫೋನ್‌ಗಳಲ್ಲಿ ವಾಟ್ಸಾಪ್ ಸಪೋರ್ಟ್ ಮಾಡಲ್ಲ:
* ಆಪಲ್ ಐಫೊನ್ SE
* ಆಪಲ್ ಐಫೊನ್ 6S
* ಆಪಲ್ ಐಫೊನ್ 6S ಪ್ಲಸ್

ಸೋನಿಯ ಈ ಫೋನ್‌ಗಳಲ್ಲಿ ವಾಟ್ಸಾಪ್ ಕಥೆ ಕ್ಲೋಸ್:
* ಸೋನಿ ಎಕ್ಸ್‌ಪಿರಿಯಾ ಮಿರೋ
* ಸೋನಿ ಎಕ್ಸ್‌ಪಿರಿಯಾ ನಿಯೋ L
* ಸೋನಿ ಎಕ್ಸ್‌ಪಿರಿಯಾ Arc S

ZTE ಈ ಫೋನ್‌ಗಳಲ್ಲಿ ವಾಟ್ಸಾಪ್ ಇನ್ನು ಇರಲ್ಲ:
* ZTE ಗ್ರ್ಯಾಂಡ್ S ಫ್ಲೆಕ್ಸ್
* ZTE V956
* ZTE ಗ್ರ್ಯಾಂಡ್ ಮೆಮೊ
* ZTE ಗ್ರ್ಯಾಂಡ್ X Quad V987

ಹುವಾವೇ ಈ ಫೋನ್‌ಗಳಲ್ಲಿ ವಾಟ್ಸಾಪ್ ಸಪೋರ್ಟ್ ಇರಲ್ಲ
* ಹುವಾವೇ Ascend G740
* ಹುವಾವೇ Ascend D1 Quad XL
* ಹುವಾವೇ Ascend P1 S
* ಹುವಾವೇ Ascend Mate
* ಹುವಾವೇ Ascend D Quad XL
* ಹುವಾವೇ Ascend D2

ಎಲ್‌ಜಿ ಕಂಪನಿಯ ಈ ಫೋನ್‌ಗಳಲ್ಲಿ ಇನ್ನು ವಾಟ್ಸಾಪ್ ಕೆಲಸ ಮಾಡಲ್ಲ:
* ಎಲ್‌ಜಿ ಆಪ್ಟಿಮಸ್ 2
* ಎಲ್‌ಜಿ ಆಪ್ಟಿಮಸ್ F7
* ಎಲ್‌ಜಿ ಆಪ್ಟಿಮಸ್ F5
* ಎಲ್‌ಜಿ ಆಪ್ಟಿಮಸ್ L3 II Dual
* ಎಲ್‌ಜಿ ಆಪ್ಟಿಮಸ್ F5
* ಎಲ್‌ಜಿ ಆಪ್ಟಿಮಸ್ L5
* ಎಲ್‌ಜಿ ಆಪ್ಟಿಮಸ್ L5 II
* ಎಲ್‌ಜಿ ಆಪ್ಟಿಮಸ್ L5 Dual
* ಎಲ್‌ಜಿ ಆಪ್ಟಿಮಸ್ L3 II
* ಎಲ್‌ಜಿ ಆಪ್ಟಿಮಸ್ L7
* ಎಲ್‌ಜಿ ಆಪ್ಟಿಮಸ್ L7 II Dual
* ಎಲ್‌ಜಿ ಆಪ್ಟಿಮಸ್ L7 II
* ಎಲ್‌ಜಿ ಆಪ್ಟಿಮಸ್ F6
* ಎಲ್‌ಜಿ Enact
* ಎಲ್‌ಜಿ ಆಪ್ಟಿಮಸ್ L4 II Dual
* ಎಲ್‌ಜಿ ಆಪ್ಟಿಮಸ್ F3
* ಎಲ್‌ಜಿ ಆಪ್ಟಿಮಸ್ L4 II
* ಎಲ್‌ಜಿ ಆಪ್ಟಿಮಸ್ L2 II
* ಎಲ್‌ಜಿ ಆಪ್ಟಿಮಸ್ ನಿಟ್ರೋ HD ಮತ್ತು 4X HD
* ಎಲ್‌ಜಿ ಆಪ್ಟಿಮಸ್ F3Q


Click it and Unblock the Notifications








