ಮತ್ತೆ ವಾಟ್ಸಪ್ ಸೇರಲಿವೆ ಮೂರು ಅಚ್ಚರಿಯ ಫೀಚರ್ಸ್‌ಗಳು!

|

ಫೇಸ್‌ಬುಕ್ ಒಡೆತನದ ಜನಪ್ರಿಯ ಮೆಸೆಜಿಂಗ್ ಆಪ್‌ ವಾಟ್ಸಪ್ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಹಾಗೆಯೇ ತನ್ನ ಬಳಕೆದಾರರ ಖಾಸಗಿತನ ಕಾಪಾಡಲು ಈಗಾಗಲೆ ವಾಟ್ಸಪ್‌ ಸಹ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಬಳಕೆದಾರರಿಗೆ ಅನುಕೂಲವಾಗಲೆಂದು ಸದಾ ಒಂದಿಲ್ಲೊಂದು ಫೀಚರ್‌ ಪರಿಚಯಿಸುತ್ತಲೆ ಸಾಗಿದ್ದು, ಸದ್ಯದಲ್ಲಿಯೇ ಮತ್ತೆ ಮೂರು ಅಚ್ಚರಿಯ ಫೀಚರ್ಸ್‌ಗಳು ವಾಟ್ಸಪ್ ಸೇರಲು ರೆಡಿಯಾಗಿವೆ.

ವಾಟ್ಸಪ್ ಸಂಸ್ಥೆ

ಹೌದು, ವಾಟ್ಸಪ್ ಸಂಸ್ಥೆಯು ಈಗಾಗಲೆ ಅತ್ಯುತ್ತಮ ಫೀಚರ್ಸ್‌ಗಳನ್ನು ಅಳವಡಿಸಿ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಇತ್ತೀಚಿಗೆ ಬೀಟಾ ಆವೃತ್ತಿಯಲ್ಲಿ ಅಡ್ವಾನ್ಸ್‌ ಸರ್ಚ್ ಮೋಡ್ ಫೀಚರ್' ಅನ್ನು ಅಳವಡಿಸಿದೆ. ಹಾಗೆಯೇ ಸುಳ್ಳು ಸುದ್ದಿ ತಡೆಗೆ ಆಯ್ಕೆ, ವಾಟ್ಸಪ್ ಗ್ರೂಪ್ ವಿಡಿಯೊ ಕರೆ ಮಿತಿಯಲ್ಲಿ ಬದಲಾವಣೆ ಮಾಡಿದೆ. ಈ ಲಿಸ್ಟಿಗೆ ಶೀಘ್ರದಲ್ಲೇ ಹೊಸ ಅಪ್‌ಡೇಟ್ ಆವೃತ್ತಿಯಲ್ಲಿ ಮತ್ತೆ ಕೆಲವು ಹೊಸ ಫೀಚರ್ಸ್‌ಗಳು ಸೇರಲಿವೆ. ಹಾಗಾದರೆ ಆ ಫೀಚರ್ಸ್‌ ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಪಾಸ್‌ವರ್ಡ್‌ ಪ್ರೊಟೆಕ್ಷನ್

ಪಾಸ್‌ವರ್ಡ್‌ ಪ್ರೊಟೆಕ್ಷನ್

ವಾಟ್ಸಪ್‌ ಚಾಟ್ ಬ್ಯಾಕ್‌ಅಪ್ ಆಯ್ಕೆಯ ಮೂಲಕ ಗೂಗಲ್ ಡ್ರೈವ್‌ಗೆ ಬ್ಯಾಕ್‌ಅಪ್ ಮಾಡುವ ಆಯ್ಕೆ ಸದ್ಯ ವಾಟ್ಸಪ್‌ನಲ್ಲಿ ಇದೆ. ಆದರೆ ಯಾವುದೇ ಸುರಕ್ಷತಾ ಕ್ರಮಗಳು ಇದರಲ್ಲಿಲ್ಲ. ಸದ್ಯದಲ್ಲಿಯೆ ವಾಟ್ಸಪ್‌ನ ನೂತನ ಅಪ್‌ಡೇಟ್‌ನಲ್ಲಿ ಪಾಸ್‌ವರ್ಡ್‌ ಪ್ರೊಟೆಕ್ಷನ್ ಆಯ್ಕೆ ಲಭ್ಯವಾಗಲಿದೆ. ಬ್ಯಾಕ್‌ಅಪ್‌ ಗೌಪ್ಯತೆಗಾಗಿ ಪಾಸ್‌ವರ್ಡ್‌ ಇಡುವ ಅವಕಾಶ ಸಿಗಲಿದೆ. ಹಾಗೂ ಬ್ಯಾಕ್‌ಅಪ್‌ ಚಾಟ್‌ ಎನ್‌ಕ್ರಿಪ್ಟ್ ಸುರಕ್ಷಿತ ಆಗಿರಲಿವೆ.

ಆಟೋ-ಡೌನ್‌ಲೋಡ್‌ಗೆ ಹೊಸ ರೂಲ್ಸ್‌

ಆಟೋ-ಡೌನ್‌ಲೋಡ್‌ಗೆ ಹೊಸ ರೂಲ್ಸ್‌

ವಾಟ್ಸಪ್‌ ಮೀಡಿಯಾ ಫೈಲ್‌ಗಳ ಆಟೋ ಡೌನ್‌ಲೋಡ್ ಆಯ್ಕೆ ನಿಯಂತ್ರಿಸುವ ಸೌಲಭ್ಯ ಈಗಾಗಲೆ ವಾಟ್ಸಪ್‌ನಲ್ಲಿ ಇವೆ. ಆ ಆಯ್ಕೆಗಳಲ್ಲಿ ಈಗ ಮತ್ತಷ್ಟು ಹೊಸ ಫೀಚರ್ಸ್‌ ಸೇರಿಸುವ ಮುನ್ಸೂಚನೆ ನೀಡಿದೆ. ವಾಟ್ಸಪ್ ಮೀಡಿಯಾ ಫೈಲ್ ಆಟೋ ಡೌನ್‌ಲೋಡ್ ನಲ್ಲಿನ ಹೊಸ ಫೀಚರ್ಸ್‌ ಬಳಕೆದಾರರ ಸ್ಟೋರೇಜ್ ಉಳಿಕೆಗೆ ಸಹಾಯಕವಾಗಲಿದೆ ಎನ್ನಲಾಗಿದೆ.

ಸೆಲ್ಫ್ ಡಿಲೀಟ್ ಮೆಸೆಜ್ಸ

ಸೆಲ್ಫ್ ಡಿಲೀಟ್ ಮೆಸೆಜ್ಸ

ವಾಟ್ಸಪ್‌ನಲ್ಲಿ ಸೆಲ್ಫ್ ಡಿಲೀಟ್ ಮೆಸೆಜ್- (self-destructing messages) ವಿಶೇಷ ಸೇರಲಿದೆ. ಈ ಆಯ್ಕೆಯು ಬಳಕೆದಾರರು ಕಳುಹಿಸಿದ ಮೆಸೆಜ್ ನಿರ್ದಿಷ್ಟ ಸಮಯದ ನಂತರ ಮೆಸೆಜ್ ಸ್ವೀಕರಿಸಿದ ಚಾಟ್‌ನಿಂದ ಸ್ವಯಂ ಪ್ರೇರಿತವಾಗಿ ಡಿಲೀಟ್ ಆಗುವ ವ್ಯವಸ್ಥೆಯನ್ನು ಹೊಂದಿರಲಿದೆ. ಇನ್ನು ಮೆಸೆಜ್ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗಲು ಸಮಯದ ಆಯ್ಕೆಗಳನ್ನು ಈ ಫೀಚರ್ ಒಳಗೊಂಡಿರಲಿದೆ. ಅವುಗಳು ಕ್ರಮವಾಗಿ ಒಂದು ಗಂಟೆ, ಒಂದು ವಾರ, ಒಂದು ತಿಂಗಳು ಮತ್ತು ಒಂದು ವರ್ಷ ಹೀಗೆ ಇರಲಿವೆ ಎಂದು ಹೇಳಲಾಗಿದೆ.

Most Read Articles
Best Mobiles in India

English summary
These new features that are coming to Whatsapp in the upcoming updates.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X