ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್; ಇದರ ಸೌಲಭ್ಯ ತಿಳಿದ್ರೆ ಖುಷಿ ಪಡೋದು ಪಕ್ಕಾ!?
ಪ್ರಮುಖ ಮೆಸೆಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್ ಈಗಾಗಲೇ ತನ್ನದೇ ಆದ ವಿಶೇಷ ಸುಧಾರಿತ ಫೀಚರ್ಸ್‌ಗಳ ಮೂಲಕ ಬಳಕೆದಾರರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಅದಾಗ್ಯೂ ನಿರಂತರವಾಗಿ ಆಪ್ ನಲ್ಲಿ ಹೊಸ ರೀತಿಯ ಫೀಚರ್ಸ್‌ಗಳು ಲಭ್ಯವಾಗುತ್ತಿದ್ದು, ಇದೀಗ ಮತ್ತೊಂದು ಆಕರ್ಷಕ ಹಾಗೂ ಎಲ್ಲರಿಗೂ ಅತ್ಯಗತ್ಯವಾಗಿ ಬೇಕಾಗಿರುವ ಫೀಚರ್ಸ್‌ನಲ್ಲಿ ವಾಟ್ಸಾಪ್ ಕೆಲಸ ಮಾಡುತ್ತಿದೆ.
ಹೌದು, ಮೆಸೆಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಎಲ್ಲಾ ವಿಷಯದಲ್ಲೂ ಒಂದು ಹೆಜ್ಜೆ ಮುಂದಿರುವ ವಾಟ್ಸಾಪ್ ಕಡಿಮೆ ಅಂತರದಲ್ಲಿ ಹೆಚ್ಚಿನ ಫೀಚರ್ಸ್‌ಗಳನ್ನು ಪಡೆಯುತ್ತಿದೆ. ಅದರಂತೆ ಇದೀಗ ನ್ಯೂಸ್ ಲೆಟರ್ ಫೀಚರ್ಸ್ (newsletter feature)ಪಡೆಯಲು ಮುಂದಾಗಿದ್ದು,ಈ ನ್ಯೂಸ್ ಲೆಟರ್ ಮಾಹಿತಿಯನ್ನು ಪ್ರಸಾರ ಮಾಡುವ ಫೀಚರ್ಸ್ ಆಗಿದ್ದು, ಜನರು ಮತ್ತು ಗುಂಪುಗಳಿಂದ ಉಪಯುಕ್ತ ಅಪ್‌ಡೇಟ್‌ಗಳನ್ನು ಸ್ವೀಕರಿಸಲು ಇದು ಸಹಾಯಕವಾಗಲಿದೆ ಎನ್ನಲಾಗಿದೆ. ಹಾಗಿದ್ರೆ, ಇದರ ಪ್ರಯೋಜನ ಏನು? ಎಂಬ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಾಟ್ಸಾಪ್ ನ್ಯೂಸ್‌ಲೆಟರ್ ಫೀಚರ್ಸ್
WABetaInfo ವರದಿಯ ಪ್ರಕಾರ ವಾಟ್ಸಾಪ್ ಇತ್ತೀಚಿನ ಬೀಟಾ ಆವೃತ್ತಿಯೊಂದಿಗೆ (2.23.5.3) ಗೂಗಲ್ ಪ್ಲೇ ಬೀಟಾ ಪ್ರೋಗ್ರಾಂ ಮೂಲಕ ಹೊಸ ನವೀಕರಣವನ್ನು ಹೊರತರಲು ಮುಂದಾಗಿದೆ ಎನ್ನಲಾಗಿದೆ. ಈ ಮೂಲಕ ಈ ಅಪ್‌ಡೇಟ್‌ನಲ್ಲಿ ಖಾಸಗಿ ನ್ಯೂಸ್‌ಲೆಟರ್ ಟೂಲ್ಸ್ ಅನ್ನು ಪರೀಕ್ಷಿಸುತ್ತಿದೆ. ಅದರಂತೆ ಈ ಟೂಲ್ಸ್ ಮಾಹಿತಿಯನ್ನು ಪ್ರಸಾರ ಮಾಡುವ ಸಾಧನವಾಗಿದ್ದು, ಜನರು ಮತ್ತು ಗುಂಪುಗಳಿಂದ ಉಪಯುಕ್ತ ಅಪ್‌ಡೇಟ್‌ಗಳನ್ನು ಸ್ವೀಕರಿಸಲು ಸಹಾಯಕವಾಗಲಿದೆ ಎಂದು ತಿಳಿದುಬಂದಿದೆ.
ವಾಟ್ಸಾಪ್ ನ್ಯೂಸ್‌ಲೆಟರ್ ನಿಂದ ಪ್ರಯೋಜನ ಏನು?
ವಾಟ್ಸಾಪ್ ನ್ಯೂಸ್‌ಲೆಟರ್ ಫೀಚರ್ಸ್ ಸ್ಥಳೀಯ ಅಧಿಕಾರಿಗಳು, ಕ್ರೀಡಾ ತಂಡಗಳು ಅಥವಾ ಇತರ ಸಂಸ್ಥೆಗಳನ್ನು ಒಳಗೊಂಡಿರಲಿದ್ದು, ಈ ಮೂಲಕ ಬಳಕೆದಾರರು ತಮಗೆ ಅಗತ್ಯವಾಗಿ ಬೇಕಾದ ಸಂಪರ್ಕಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡಲಾಗುತ್ತದೆ. ಹಾಗೆಯೆ, ವಾಟ್ಸಾಪ್ ಒಳಗೆ ತಮ್ಮ ಆದ್ಯತೆಯ ಪ್ರಸಾರಕರನ್ನು ಅನುಸರಿಸಲು ಬಳಕೆದಾರರಿಗೆ ಮುಕ್ತ ಆಯ್ಕೆಯ ಸೌಕರ್ಯವನ್ನು ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ಯಾವುದೇ ಮೆಸೆಜಿಂಗ್ ಪ್ಲಾಟ್‌ಫಾರ್ಮ್‌ಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಭದ್ರತಾ ಫೀಚರ್ಸ್‌ಗೆ ಪ್ರಮುಖ ಆದ್ಯತೆ ನೀಡುತ್ತವೆ. ಆದರೆ, ಈ ಹೊಸ ಫೀಚರ್ಸ್ ಆದ ನ್ಯೂಸ್ ಲೆಟರ್‌ನಲ್ಲಿ ಭದ್ರತಾ ಫೀಚರ್ಸ್ ಇರಲಿದೆ ಎಂಬ ನಿರೀಕ್ಷೆ ಇಲ್ಲ ಎನ್ನಲಾಗಿದೆ. ಆದರೆ, ನ್ಯೂಸ್‌ಲೆಟರ್ ಕ್ರಿಯೇಟ್ ಮಾಡಿದ ಮತ್ತು ಚಂದಾದಾರರಾಗಿರುವ ಬಳಕೆದಾರರ ಫೋನ್ ಸಂಖ್ಯೆಯನ್ನು ಯಾರಿಗೂ ಕಾಣದ ಹಾಗೆ ಮಾಡುವ, ಅವರ ಗುರುತನ್ನು ಬಹಿರಂಗಪಡಿಸುವುದನ್ನು ತಡೆಯುತ್ತದೆ ಎಂದು ಹೇಳಲಾಗಿದೆ.
ವಾಟ್ಸಾಪ್ ನ್ಯೂಸ್‌ಲೆಟರ್ ಫೀಚರ್ಸ್ ಹ್ಯಾಂಡಲ್‌ಗಳನ್ನು ಬೆಂಬಲಿಸುತ್ತದೆ
ಇನ್ನು ಇದರ ಮಗದೊಂದು ಪ್ರಯೋಜನ ಎಂದರೆ ಈ ನ್ಯೂಸ್ ಲೆಟರ್ ಫೀಚರ್ಸ್ ಹ್ಯಾಂಡಲ್‌ಗಳನ್ನು ಬೆಂಬಲಿಸಲಿದ್ದು, ವಾಟ್ಸಾಪ್‌ನಲ್ಲಿಯೇ ಬಳಕೆದಾರ ಹೆಸರನ್ನು ಬಳಸಿಕೊಂಡು ಹುಡುಕುವ ಮೂಲಕ ನ್ಯೂಸ್‌ಲೆಟರ್ ಹುಡುಕಲು ಮತ್ತು ಆ ಗ್ರೂಪ್ ಗೆ ಸೇರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಜೊತೆಗೆ ಬಳಕೆದಾರರು ತಮ್ಮ ಸಂಪರ್ಕಗಳ ಪಟ್ಟಿಯಲ್ಲಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಅವರು ಅನುಸರಿಸುವ ಬಳಕೆದಾರರನ್ನು ಸಹ ತೋರಿಸುತ್ತದೆ.

ಖಾಸಗಿ ಮೆಸೆಜ್‌ಗಳಿಗೆ ತೊಂದರೆ ಉಂಟಾಗುವುದಿಲ್ಲ
ಇದೆಲ್ಲದರ ಜೊತೆಗೆ ಈ ನ್ಯೂಸ್‌ಲೆಟರ್ ಪ್ರತ್ಯೇಕ (ಐಚ್ಛಿಕ) ವಿಭಾಗದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ ಎನ್ನಲಾಗಿದ್ದು, ಈ ಫೀಚರ್ಸ್ ವಾಟ್ಸಾಪ್ ಸ್ಟೇಟಸ್ ಟ್ಯಾಬ್ ವಿಭಾಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಚಾಟ್ ವಿಭಾಗದಲ್ಲಿ ಈ ಫೀಚರ್ಸ್ ಕಾಣಿಸಿಕೊಳ್ಳುವುದಿಲ್ಲ. ಇದರಿಂದ ಖಾಸಗಿ ಸಂದೇಶ ಕಳುಹಿಸುವಿಕೆಯ ವಿಭಾಗಕ್ಕೆ ನೀಡಲಾಗಿರುವ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಫೀಚರ್ಸ್ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿದುಬಂದಿದೆ.
ನ್ಯೂಸ್ ಲೆಟರ್ ಫೀಚರ್ಸ್ ಜಾಹೀರಾತು ಬೆಂಬಲಿಸುವುದಿಲ್ಲ
ಈ ಹೊಸ ಫೀಚರ್ಸ್‌ಸಾರ್ವಜನಿಕ ಸಾಮಾಜಿಕ ನೆಟ್‌ವರ್ಕ್‌ನಂತೆ ಕಾರ್ಯನಿರ್ವಹಿಸುವುದಿಲ್ಲ ಎನ್ನಲಾಗಿದ್ದು, ವೈಯಕ್ತಿಕ ಸ್ಥಳವಾಗಿ ಕಾರ್ಯನಿರ್ವಹಿಸಬಹುದು ಎಂದು ಹೇಳಬಹುದು. ಅದರಂತೆ ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಈ ಫೀಚರ್ಸ್ ಯಾವುದೇ ಜಾಹೀರಾತುಗಳನ್ನು ಬೆಂಬಲಿಸುವುದಿಲ್ಲವಂತೆ ಅಥವಾ ಅಲ್ಗಾರಿದಮಿಕ್ ಶಿಫಾರಸುಗಳ ಚಿಹ್ನೆಯನ್ನು ಹೊಂದಿಲ್ಲ ಎಂದು ದೃಢಪಡಿಸಲಾಗಿದೆ.


Click it and Unblock the Notifications








