ಸದ್ಯದಲ್ಲೇ ವಾಟ್ಸಾಪ್‌ ಸೇರಲಿವೆ 5 ಕುತೂಹಲಕರ ಫೀಚರ್ಸ್‌ಗಳು!

|

ಜನಪ್ರಿಯ ಮೆಸೆಜ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್‌ ಈಗಾಗಲೇ ಹಲವು ಆಕರ್ಷಕ ಮತ್ತು ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸಿದೆ. ವಿಶ್ವಾದ್ಯಂತ 2 ಬಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಇತ್ತೀಚಿಗಷ್ಟೆ ಅಪ್‌ಡೇಟ್‌ ಕಂಡಿದ್ದು, ಸಾಕಷ್ಟು ಹೊಸ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಈಗ ಮತ್ತೆ ಕೆಲವು ಫೀಚರ್ಸ್‌ಗಳನ್ನು ಸೇರಿಸಲಿದ್ದು, ಬಳಕೆದಾರರಿಗೆ ಭಾರಿ ಕುತೂಹಲ ಮೂಡಿಸಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಒಡೆತನದ ವಾಟ್ಸಾಪ್ ಅಪ್ಲಿಕೇಶನ್‌ ಮೊಬೈಲ್‌ ಆವೃತ್ತಿಗಾಗಿ ಈಗ ಕೆಲವು ಹೊಸ ಫೀಚರ್ಸ್‌ಗಳನ್ನು ಸೇರಿಸಲು ತಯಾರಿ ನಡೆಸಿದೆ. ಈಗಾಗಲೇ ನೂತನ ಫೀಚರ್ಸ್‌ಗಳು ಪ್ರಯೋಗಿಕ ಹಂತದಲ್ಲಿವೆ ಎನ್ನಲಾಗಿದೆ. ಹಾಗೆಯೇ ಕೆಲವು ವಿಶೇಷ ಫೀಚರ್ಸ್‌ಗಳು ಈಗಾಗಲೇ ಬೀಟಾ ಆವೃತ್ತಿಯಲ್ಲಿ ಸೇರಿವೆ. ಹಾಗಾದರೇ ಸದ್ಯದಲ್ಲಿಯೇ ವಾಟ್ಸಾಪ್ ಸೇರಲಿರುವ ಕುತೂಹಲಕಾರಿ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಮೆಸೆಜ್ ಆಟೋ ಡಿಲೀಟ್

ಮೆಸೆಜ್ ಆಟೋ ಡಿಲೀಟ್

ವಾಟ್ಸಾಪ್ನಲ್ಲಿ ಮೆಸೆಜ್ ಎಕ್ಸ್‌ಪೇರ್ ಈ ಫೀಚರ್ ಚಾಟ್‌ ಮಾಡಿದ ನಂತರ ಒಂದು ನಿರ್ದಿಷ್ಟ ಅವಧಿಯ ಬಳಿಕ ಚಾಟ್‌ಗಳಲ್ಲಿನ ಮೆಸೆಜ್‌ಗಳು ಆಟೋಮ್ಯಾಟಿಕ್ ಆಗಿ ಡಿಲೀಟ್‌ ಆಗುತ್ತವೆ. ಈ ಫೀಚರ್ ವಾಟ್ಸಾಪ್‌ ಸೇರಲಿದ್ದು, ಬಳಕೆದಾರರು ಬೇಕಿದ್ದರೇ ಸಕ್ರಿಯ ಮಾಡುವ ಅಥವಾ ಆಫ್ ಮಾಡುವ ಅನುಕೂಲ ಸಹ ಇರಲಿದೆ ಎನ್ನಲಾಗಿದೆ. ಒಂದು ದಿನ, ಒಂದು ವಾರ ಮತ್ತು ಒಂದು ತಿಂಗಳು ಡಿಲೀಟ್ ಆಯ್ಕೆ ಇರುವ ಸಾಧ್ಯತೆಗಳಿವೆ.

ವೆಬ್‌ನಲ್ಲಿ ಸರ್ಚ್‌

ವೆಬ್‌ನಲ್ಲಿ ಸರ್ಚ್‌

ವಾಟ್ಸಾಪ್ ಈ ವಾರದ ಆರಂಭದಲ್ಲಿ ಈ ಫೀಚರ್‌ ಅನ್ನು ಹೊರತಂದಿದೆ. ಆದರೆ ಇದು ಭಾರತದಲ್ಲಿ ಇನ್ನೂ ಲಭ್ಯವಿಲ್ಲ. ಸರ್ಚ್ ಆನ್ ವೆಬ್‌ ಈ ವಿಶೇಷ ಆಯ್ಕೆಯು ಅಪ್ಲಿಕೇಶನ್‌ನಲ್ಲಿ ತಪ್ಪು ಮಾಹಿತಿಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ವಾಟ್ಸಾಪ್ನಲ್ಲಿ ಫಾರ್ವರ್ಡ್ ಮಾಡಲಾದ ಸಂದೇಶಗಳು ಈಗ ಸರ್ಚ್‌ ಐಕಾನ್ ಅನ್ನು ತೋರಿಸುತ್ತದೆ. ಇದನ್ನು ಟ್ಯಾಪ್ ಮಾಡುವುದರಿಂದ ಬಳಕೆದಾರರು ವೆಬ್‌ಗೆ ಮರುನಿರ್ದೇಶಿಸುತ್ತದೆ.

ಮ್ಯೂಟ್‌ ಮಾಡುವುದು

ಮ್ಯೂಟ್‌ ಮಾಡುವುದು

ವಾಟ್ಸಾಪ್ ಪ್ರಸ್ತುತ 8 ಗಂಟೆಗಳ, 1 ವಾರ ಮತ್ತು 1 ವರ್ಷದವರೆಗೆ ಚಾಟ್‌ಗಳನ್ನು ಮ್ಯೂಟ್ ಮಾಡಲು ಆಯ್ಕೆ ನೀಡಿದೆ. ಆದರೆ ಹೊಸ ಫೀಚರ್‌ ಬಳಕೆದಾರರಿಗೆ ಚಾಟ್‌ಗಳನ್ನು ಶಾಶ್ವತವಾಗಿ ಮ್ಯೂಟ್ ಮಾಡಲು ಅನುಮತಿಸುತ್ತದೆ. Always ಮ್ಯೂಟ್ ಆಯ್ಕೆಯು ವಾಟ್ಸಾಪ್‌ನಲ್ಲಿ ಚಾಟ್‌ಗಳಿಗಾಗಿ 1 ವರ್ಷದ ಆಯ್ಕೆಯನ್ನು ಬದಲಾಯಿಸುತ್ತದೆ.

ಪೇಮೆಂಟ್‌ ಆಯ್ಕೆ

ಪೇಮೆಂಟ್‌ ಆಯ್ಕೆ

ವಾಟ್ಸಾಪ್‌ನ ಬಹುನಿರೀಕ್ಷಿತ ಪೇಮೆಂಟ್‌ ಟೆಸ್ಟಿಂಗ್ ಹಂತದಲಿದೆ. ಸದ್ಯ ಬೀಟಾದಲ್ಲಿ ಬಳಕೆದಾರರಿಗೆ ಲಭ್ಯವಿದೆ ಆದರೆ ಅಧಿಕೃತವಾಗಿ ಪ್ರಾರಂಭಿಸಲಾಗಿಲ್ಲ. ಭಾರತದಲ್ಲಿ ಡೇಟಾ ಸ್ಥಳೀಕರಣದ ಮಾನದಂಡಗಳೊಂದಿಗೆ ವಾಟ್ಸಾಪ್ ಸಮಸ್ಯೆಗಳನ್ನು ಎದುರಿಸುತ್ತಿದೆ ಆದರೆ ಇದಕ್ಕೆ ಹಸಿರು ಚಿಟ್ ನೀಡಲಾಗಿದೆ ಎಂದು ವರದಿಯಾಗಿದೆ. ಭಾರತದಲ್ಲಿ, ವಾಟ್ಸಾಪ್ ಪಾವತಿ ಸೇವೆಯು ಯುಪಿಐ ಅನ್ನು ಆಧರಿಸಿದೆ ಮತ್ತು ಇದು ಐಸಿಐಸಿಐ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಜೊತೆ ಪಾಲುದಾರಿಕೆ ಹೊಂದಿದೆ.

ಹೊಸ ಇಮೋಜಿ

ಹೊಸ ಇಮೋಜಿ

ಇದೆನೂ ಹೊಸ ಫೀಚರ್ ಅಲ್ಲದಿದ್ದರೂ ವಾಟ್ಸಾಪ್‌ ಹಲವು ನೂತನ ಇಮೋಜಿಗಳನ್ನು ಅಳವಡಿಸಿಕೊಳ್ಳಲಿದೆ. ಹೊಸ ಅಪ್‌ಡೇಟ್‌ ನಲ್ಲಿ ಸುಮಾರು 138 ಹೊಸ ಎಮೋಜಿಗಳಿಗೆ ಅಳವಡಿಕೆ ಆಗಲಿದೆ ಎನ್ನಲಾಗಿದೆ. Android ನಲ್ಲಿ ಕೆಲವು ಬೀಟಾ ಆವೃತ್ತಿಯ ಬಳಕೆದಾರರಿಗೆ ಹೊಸ ಇಮೋಜಿ ಲಭ್ಯವಿದೆ.

Most Read Articles
Best Mobiles in India

English summary
You Will See These 5 Interesting Features In Upcoming WhatsApp Update.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X