ಬಳಕೆದಾರರಲ್ಲಿ ಕುತೂಹಲ ಮೂಡಿಸಿದ್ದ ಈ ಫೀಚರ್‌ ವಾಟ್ಸಾಪ್‌ ಸೇರಿವ ಕಾಲ ದೂರವಿಲ್ಲ!

|

ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್‌ ಇನ್‌ಸ್ಟಂಟ್‌ ಮೆಸೆಜ್‌ ಆಪ್‌ ಈಗಾಗಲೇ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಹಾಗೆಯೇ ಅಪ್‌ಡೇಟ್ ಆವೃತ್ತಿಯು ಮತ್ತಷ್ಟು ನೂತನ ಫೀಚರ್ಸ್‌ಗಳನ್ನು ಹೊತ್ತು ಬರಲಿದೆ ಎನ್ನುವ ಸೂಚನೆಯನ್ನು ಹೊರಹಾಕಿತ್ತು. ಆ ಪೈಕಿ ಬಳಕೆದಾರರ ಗಮನ ಸೆಳೆದಿದ್ದ ಮೆಸೆಜ್ ಡಿಸ್‌ಅಪಿಯರ್ ಫೀಚರ್ಸ್‌ ವಾಟ್ಸಾಪ್‌ನಲ್ಲಿ ಕಾಣಿಸಿಕೊಳ್ಳು ಕಾಲ ದೂರವಿಲ್ಲ.

ಮೆಸೆಜ್‌

ಹೌದು, ಜನಪ್ರಿಯ ವಾಟ್ಸಾಪ್‌ ಇದೀಗ ಮೆಸೆಜ್ ಡಿಸ್‌ಅಪಿಯರ್ ಆಯ್ಕೆಯನ್ನು ಸದ್ಯದಲ್ಲಿಯೇ ಅಳವಡಿಸಲಿದೆ ಎನ್ನುವ ಸಂಗತಿಯನ್ನು ಅಧಿಕೃತವಾಗಿ ತಿಳಿಸಿದೆ. ಈ ಫೀಚರ್ಸ್‌ನಲ್ಲಿ ವಾಟ್ಸಾಪ್‌ನಲ್ಲಿನ ನೂತನ ಮೆಸೆಜ್‌ಗಳು ಏಳು ದಿನಗಳ ನಂತರ ಕಣ್ಮರೆಯಾಗುತ್ತದೆ(disappear). ಇನ್ನು ಈ ಆಯ್ಕೆಯು ಗ್ರೂಪ್‌ ಮೆಸೆಜ್‌ ಹಾಗೂ ವೈಯಕ್ತಿಕ ಮೆಸೆಜ್‌ ಎರಡಕ್ಕೂ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಆನ್‌- ಆಫ್

ಬಳಕೆದಾರರು ವೈಯಕ್ತಿಕ ಮೆಸೆಜ್‌ನಲ್ಲಿ ಈ ಆಯ್ಕೆಯನ್ನು ಆನ್‌- ಆಫ್‌ ಮಾಡುವ ಅವಕಾಶವನ್ನು ಹೊಂದಿರುತ್ತಾರೆ. ಆನ್ ಮಾಡಿದ್ದರೇ ಏಳು ದಿನಗಳ ನಂತರ ಮೆಸೆಜ್‌ಗಳು ಕಣ್ಮರೆಯಾಗುತ್ತವೆ-disappear, ಆಫ್ ಮಾಡಿದರೇ ಮೆಸೆಜ್‌ಗಳು ಕಾಣಸಿಗುತ್ತವೆ. ಇನ್ನು ಗ್ರೂಪ್ ಮೆಸೆಜ್‌ಗಳಲ್ಲಿ ಗ್ರೂಪ್‌ ಅಡ್ಮಿನ್‌ಗೆ ಮಾತ್ರ ಆನ್ - ಆಫ್ ಮಾಡುವ ಆಯ್ಕೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ಅಪ್ಲಿಕೇಶನ್

ಏಳು ದಿನಗಳ ಅವಧಿಯಲ್ಲಿ ಬಳಕೆದಾರರು ವಾಟ್ಸಾಪ್ ಅನ್ನು ತೆರೆಯದಿದ್ದರೆ, ಸಂದೇಶವು ಕಣ್ಮರೆಯಾಗುತ್ತದೆ. ಆದರೆ ಅಪ್ಲಿಕೇಶನ್ ತೆರೆಯುವವರೆಗೆ ಅದರ ಪೂರ್ವವೀಕ್ಷಣೆಯನ್ನು ನೋಟಿಫೀಕೇಶನ್‌ನಲ್ಲಿ ಪ್ರದರ್ಶಿಸಬಹುದು. ಇನ್ನು ವಾಟ್ಸಾಪ್‌ನ ಫೋಟೊ, ವಿಡಿಯೊ ಮೆಸೆಜ್‌ಗಳನ್ನು ಮ್ಯಾನ್ಯುವಲ್ ಆಗಿ ಮೀಡಿಯಾ ಡೌನ್‌ಲೋಡ್‌ನ ಸೆಟ್ಟಿಂಗ್‌ಗಳ ಮೂಲಕ ಸೇವ ಮಾಡಿಕೊಳ್ಳಬಹುದಾಗಿದೆ. ಆದಾಗ್ಯೂ, ಮೆಸೆಜ್‌ ಅಳಿಸುವ ಸಮಯದ ಚೌಕಟ್ಟನ್ನು ಕಸ್ಟಮೈಸ್ ಮಾಡುವ ಯಾವುದೇ ಆಯ್ಕೆಯಿಲ್ಲ.

disappear

ಇನ್ನು ಕಣ್ಮರೆಯಾಗುತ್ತಿರುವ disappear ಮೆಸೆಜ್‌ ಫಾರ್ವರ್ಡ್ ಮಾಡಿದರೆ ಈ ಫೀಚರ್ ಕಾರ್ಯನಿರ್ವಹಿಸುವುದಿಲ್ಲ ಎನ್ನಲಾಗಿದೆ. ಆದರೆ ಕಣ್ಮರೆಯಾಗುತ್ತಿರುವ ಮೆಸೆಜ್‌ಗಳ ಸ್ಕ್ರೀನ್‌ಶಾಟ್ ಅನ್ನು ಫಾರ್ವರ್ಡ್ ಮಾಡಲು ಅಥವಾ ತೆಗೆದುಕೊಳ್ಳಲು ಬಳಕೆದಾರರಿಗೆ ವಾಟ್ಸಾಪ್ ಅನುಮತಿಸುತ್ತದೆ ಎನ್ನಲಾಗಿದೆ. ಕಣ್ಮರೆಯಾಗುತ್ತಿರುವ ಮೆಸೆಜ್‌ ಫೀಚರ್‌ ಐಒಎಸ್, ಆಂಡ್ರಾಯ್ಡ್, ಕೈಯೋಸ್ ಮತ್ತು ವೆಬ್ / ಡೆಸ್ಕ್ಟಾಪ್ ಬಳಕೆದಾರರಿಗೆ ಲಭ್ಯವಿರುತ್ತದೆ.

Best Mobiles in India

English summary
WhatsApp will soon add a "disappearing messages" feature to its app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X