Home
ಸುದ್ದಿಜಾಲ

ಈ ವಾರ ವಾಟ್ಸಾಪ್‌ ಸೇರಿರುವ ಅತೀ ಉಪಯುಕ್ತ ಫೀಚರ್‌ಗಳ ಮಾಹಿತಿ ಇಲ್ಲಿದೆ!

ವಿಶ್ವದಲ್ಲೇ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೆಜ್ ಆಪ್‌ ವಾಟ್ಸಾಪ್ ಈಗಾಗಲೇ ತನ್ನ ಬಳಕೆದಾರಿಗೆ ಹಲವು ಉಪಯುಕ್ತ ಸೇವೆಗಳನ್ನು ಪರಿಚಯಿಸಿದೆ. ಅದರೊಂದಿಗೆ ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುತ್ತಾ ಸಾಗಿದೆ. ಹಾಗೆಯೇ ಈ ವಾರವು ಮತ್ತಷ್ಟು ಅನುಕೂಲಕರ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿಕೊಂಡಿದೆ.

ಫೇಸ್‌ಬುಕ್

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ಸಂಸ್ಥೆಯು ಈಗ ವಾಟ್ಸಾಪ್ ಡಿಸ್‌ಅಪಿಯರಿಂಗ್ ಮೆಸೆಜ್, ರಿಪೋರ್ಟ್‌ ಕಂಟೆಂಟ್ ಮೆಸೆಜ್ ಹಾಗೂ ಬಹು ನಿರೀಕ್ಷಿತ ವಾಟ್ಸಾಪ್‌ ಪೇಮೆಂಟ್‌ ಫೀಚರ್ಸ್‌ಗಳನ್ನು ಹೊಸದಾಗಿ ಅಳವಡಿಸಿಕೊಂಡಿದೆ. ಈ ಮೂರು ಫೀಚರ್ಸ್‌ಗಳು ಬಳಕೆದಾರರಿಗೆ ಬಹು ಉಪಯುಕ್ತ ಅನಿಸುತ್ತವೆ. ಹಾಗಾದರೇ ಈ ವಾರ ವಾಟ್ಸಾಪ್ ಸೇರಿರುವ ನೂತನ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ವಾಟ್ಸಾಪ್ ಪೇಮೆಂಟ್- WhatsApp Payments

ವಾಟ್ಸಾಪ್ ಪೇಮೆಂಟ್- WhatsApp Payments

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಂತಿಮವಾಗಿ ವಾಟ್ಸಾಪ್ ಪೇಮೆಂಟ್‌ಗೆ ಹಸಿರು ನಿಶಾನೆ ನೀಡಿದೆ. ಬಹು ನಿರೀಕ್ಷಿತ ವಾಟ್ಸಾಪ್ ಪೇಮೆಂಟ್ ಸೇವೆಯನ್ನು ಶುರು ಮಾಡಿದೆ. ಬಳಕೆದಾರರು ಇನ್ಮುಂದೆ ಚಾಟ್‌ ಮಾಡುವ ಜೊತೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ ಹಾಗೂ ಹಣ ಸ್ವೀಕರಿಸಬಹುದಾಗಿದೆ. ಈ ಸೇವೆಯು ವಾಟ್ಸಾಪ್‌ ಅನ್ನು ಮತ್ತಷ್ಟು ಜನಪ್ರಿಯ ಮಾಡುವ ಸಾಧ್ಯತೆಗಳು ಹೆಚ್ಚು.

ವಾಟ್ಸಾಪ್‌ ಡಿಸ್‌ಅಪಿಯರ್‌

ವಾಟ್ಸಾಪ್‌ ಡಿಸ್‌ಅಪಿಯರ್‌

ವಾಟ್ಸಾಪ್‌ ಇದೀಗ ಮೆಸೆಜ್ ಡಿಸ್‌ಅಪಿಯರ್ ಆಯ್ಕೆಯನ್ನು ಅಳವಡಿಸಿದೆ. ಈ ಫೀಚರ್ಸ್‌ನಲ್ಲಿ ವಾಟ್ಸಾಪ್‌ನಲ್ಲಿನ ನೂತನ ಮೆಸೆಜ್‌ಗಳು ಏಳು ದಿನಗಳ ನಂತರ ಕಣ್ಮರೆಯಾಗುತ್ತದೆ(disappear). ಇನ್ನು ಈ ಆಯ್ಕೆಯು ಗ್ರೂಪ್‌ ಮೆಸೆಜ್‌ ಹಾಗೂ ವೈಯಕ್ತಿಕ ಮೆಸೆಜ್‌ ಎರಡಕ್ಕೂ ಲಭ್ಯ. ಹಾಗೆಯೇ ಆಂಡ್ರಾಯ್ಡ್‌, ಐಓಎಸ್‌, ಕೈಯೋಸ್‌ ಓಎಸ್‌ಗಳ ಆವೃತ್ತಿಯಲ್ಲಿಯೂ ಲಭ್ಯ.

ರಿಪೋರ್ಟ್‌ ಕಂಟೆಂಟ್ ಮೆಸೆಜ್

ರಿಪೋರ್ಟ್‌ ಕಂಟೆಂಟ್ ಮೆಸೆಜ್

ವಾಟ್ಸಾಪ್‌ನ ಈ ಹೊಸ ಫೀಚರ್‌ ಬಳಕೆದಾರರ ಹೆಚ್ಚು ಅನುಕೂಲವಾಗಲಿದ್ದು, ವಾಟ್ಸಾಪ್‌ನಲ್ಲಿ ಸ್ಪ್ಯಾಮ್‌ ಅಥವಾ ಕಿರುಕುಳುದಂತಹ ಸಮಸ್ಯೆಗಳು ಕಂಡು ಬಂದರೇ ರಿಪೋರ್ಟ್‌ ಮಾಡಬಹುದಾಗಿದೆ. ಎಲ್ಲ ವಾಟ್ಸಾಪ್‌ ಬಳಕೆದಾರರಿಗೆ ಈ ಆಯ್ಕೆ ಅಲಭ್ಯ. ಸದ್ಯ ಬೀಟಾ ಆವೃತ್ತಿಯಲ್ಲಿ ಈ ಸೇವೆಯು ಪರೀಕ್ಷಾರ್ಥವಾಗಿ ಇದೆ.

Best Mobiles in India

English summary
In case you missed all the latest WhatsApp features, you can have a look at them below.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+