ವಾಟ್ಸಾಪ್‌ನಲ್ಲಿ ಹೊಸ ಫೀಚರ್; ವಿಡಿಯೊ ಕಳುಹಿಸುವ ಮುನ್ನ ಈ ಫೀಚರ್ ಉಪಯುಕ್ತ!

|

ಜಾಗತಿಕವಾಗಿ ಸ್ಮಾರ್ಟ್‌ಫೋನ್ ಬಳಕೆದಾರರ ಮನ ಗೆದ್ದಿರುವ ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್‌ ಆಪ್‌ ಉಪಯುಕ್ತ ಫೀಚರ್ಸ್ ಪರಿಚಯಿಸಿದೆ. ಹಾಗೆಯೇ ಬಳಕೆದಾರರ ಮಾಹಿತಿ ಸುರಕ್ಷತೆಗೂ ಹೆಚ್ಚಿನ ಮಹತ್ವ ನೀಡಿರುವ ಸಂಸ್ಥೆಯು ಇತ್ತೀಚಿಗಷ್ಟೆ ವಾಟ್ಸಾಪ್‌ ಪೇ, ಆಲ್‌ವೇಸ್‌ ಮ್ಯೂಟ್‌, ಸೇರಿದಂತೆ ಹಲವು ಅಚ್ಚರಿಯ ಪ್ರಯೋಜನಗಳನ್ನು ಅಳವಡಿಸಿದೆ. ಇದೀಗ ಮತ್ತೆ ನೂತನವಾದ ಫೀಚರೊಂದನ್ನು ಬಳಕೆದಾರರಿಗೆ ಪರಿಚಯಿಸಿದೆ.

ಅಪ್ಲಿಕೇಶನ್

ಹೌದು, ಜನಪ್ರಿಯ ವಾಟ್ಸಪ್‌ ಅಪ್ಲಿಕೇಶನ್ ಈಗ ನೂತನವಾಗಿ ಮ್ಯೂಟ್‌ ವಿಡಿಯೊ ಫೀಚರ್‌ ಅನ್ನು ಅಭಿವೃದ್ಧಿಪಡಿಸಿದೆ. ಬಳಕೆದಾರರು ವಿಡಿಯೊ ಕಳುಹಿಸುವಾಗ ಮ್ಯೂಟ್ ಮಾಡುವ ಆಯ್ಕೆ ಇದಾಗಿದೆ. ಈ ಅಪ್‌ಡೇಟ್ ವಾಟ್ಸಾಪ್ ಬೀಟಾ ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ. ಟ್ರಿಮ್ಮಿಂಗ್ ಆಯ್ಕೆಯೊಂದಿಗೆ ಈಗ ವೀಡಿಯೊವನ್ನು ಮ್ಯೂಟ್ ಮಾಡುವ ಆಯ್ಕೆಯನ್ನು ವಾಟ್ಸಾಪ್ ವೈಶಿಷ್ಟ್ಯಗಳ ಟ್ರ್ಯಾಕರ್ ಹಂಚಿಕೊಂಡ ಸ್ಕ್ರೀನ್‌ಶಾಟ್‌ನಲ್ಲಿ ಕಾಣಬಹುದಾಗಿದೆ.

ಚಾಟ್

ಇದಲ್ಲದೆ, ವಾಟ್ಸಾಪ್ ರೀಡ್ ಲೇಟರ್ ಎಂಬ ಹೊಸ ವೈಶಿಷ್ಟ್ಯವನ್ನು ಸಹ ಕೆಲಸ ಮಾಡುತ್ತಿದೆ. ಈ ವೈಶಿಷ್ಟ್ಯವು ಆರ್ಕೈವ್ಸ್ ಚಾಟ್ಸ್ ವೈಶಿಷ್ಟ್ಯದ ಬದಲಿಯಾಗಿದೆ ಎಂದು ವಾಟ್ಸಾಪ್‌ Wabetainfo ಮಾಹಿತಿ ತಿಳಿಸಿದೆ. Read Later ಎನ್ನುವುದು Archived Chats ಸುಧಾರಿತ ಆವೃತ್ತಿಯಾಗಿದ್ದು, ಇದು ವೇಕೆಷನ್ ಮೋಡ್ ಅನ್ನು ಒಳಗೊಂಡಿರುತ್ತದೆ. ಹೊಸ ಸಂದೇಶಗಳು ಬಂದಾಗಲೂ ಸಹ ಎಲ್ಲಾ ಆರ್ಕೈವ್ ಮಾಡಿದ ಚಾಟ್‌ಗಳನ್ನು ನಿಮ್ಮ ಆರ್ಕೈವ್‌ನಲ್ಲಿ ಇರಿಸಿಕೊಳ್ಳಲು. ಆದರೆ ಇನ್ನೂ ಹೆಚ್ಚಿನವುಗಳಿವೆ: ನಿಮ್ಮ "ನಂತರ ಓದಿ" ನಲ್ಲಿ ಚಾಟ್ ಇದ್ದಾಗ, ಅದರಿಂದ ನೀವು ಅಧಿಸೂಚನೆಗಳನ್ನು ಸ್ವೀಕರಿಸುವುದಿಲ್ಲ "ಎಂದು Wabetainfo ತನ್ನ ಬ್ಲಾಗ್‌ನಲ್ಲಿ ತಿಳಿಸಿದ್ದಾರೆ.

ಸ್ಕ್ರೀನ್‌ಶಾಟ್‌ನಲ್ಲಿ

Wabetainfo ತಾಣವು ಹಂಚಿಕೊಂಡ ಸ್ಕ್ರೀನ್‌ಶಾಟ್‌ನಲ್ಲಿ, ವಾಟ್ಸಾಪ್ ಈ ಫೀಚರ್‌ ಅನ್ನು ದೊಡ್ಡ ಬ್ಯಾನರ್‌ನಲ್ಲಿ ವಿವರಿಸುತ್ತದೆ. Archive is now Read later, ವಾಟ್ಸಾಪ್ ಬ್ಯಾನರ್ ಓದುತ್ತದೆ. ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್‌ನ ಪ್ರಕಾರ, ಈ ಫೀಚರ್ ಅಡಚಣೆಗಳನ್ನು ಕಡಿಮೆ ಮಾಡಲು-reducing interruptions ಸಹಾಯ ಮಾಡುತ್ತದೆ. ಹೊಸ ಸಂದೇಶಗಳೊಂದಿಗಿನ ಚಾಟ್‌ಗಳು ಮಾತ್ರ ಅಲ್ಲಿಯೇ ಇರುತ್ತವೆ ಮತ್ತು ನಿಮಗೆ ಯಾವುದೇ ಅಧಿಸೂಚನೆಗಳು ಸಿಗುವುದಿಲ್ಲ.

ವಾಟ್ಸಾಪ್

ಈ ನೂತನ ಫೀಚರ್ಸ್‌ಗಳು ಪ್ರಸ್ತುತ ಅಭಿವೃದ್ಧಿಯಲ್ಲಿವೆ. ವಾಟ್ಸಾಪ್ ಅವುಗಳ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಇದು ಆಂಡ್ರಾಯ್ಡ್ ಬೀಟಾ ನವೀಕರಣಗಳಲ್ಲಿ ಕಾಣಿಸಿಕೊಂಡಿದೆ. ಕಂಪನಿಯು ಮುಂದಿನ ದಿನಗಳಲ್ಲಿ ಈ ಫೀಚರ್ಸ್‌ ಹೊರತರಲು ಯೋಜಿಸಿದರೆ ಬಳಕೆದಾರರಿಗೆ ಲಭ್ಯವಾಗಬಹುದು.

Best Mobiles in India

English summary
The messaging app rolled out disappearing messages, Always Mute, WhatsApp Pay, and other features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X