Home
ಸುದ್ದಿಜಾಲ

ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ ಈ ಹೊಸ ಫೀಚರ್ಸ್; ಯಾರಿಗೆ ಪ್ರಯೋಜನ!?

ವಾಟ್ಸಾಪ್ ಇತ್ತೀಚೆಗೆ ಭದ್ರತಾ ವಿಚಾರದಲ್ಲಿ ಹಲವಾರು ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬರುತ್ತಿದ್ದು, ಬಳಕೆದಾರರಿಗೆ ಸಾಕಷ್ಟು ಅನುಕೂಲ ಆಗುತ್ತಿದೆ. ಇದರ ನಡುವೆ ದಿನಗಳ ಹಿಂದಷ್ಟೇ ಸ್ಟೇಟಸ್‌ನಲ್ಲಿ ವಾಯ್ಸ್‌ ನೋಟ್‌ ಫೀಚರ್ಸ್ ಹಾಗೂ ಐಓಎಸ್‌ ಬಳಕೆದಾರರಿಗೆ ಓಸಿಆರ್‌ ಫೀಚರ್ಸ್ ಪರಿಚಯಿಸಲಾಗಿದ್ದು, ಇದೀಗ ಮತ್ತೊಂದು ಆಕರ್ಷಕ ಫೀಚರ್ಸ್‌ ಪರಿಚಯಿಸುವ ಬಗ್ಗೆ ತಿಳಿದು ಬಂದಿದೆ.

ಹೌದು, ಪ್ರಮುಖ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ ಆಗಿರುವ ವಾಟ್ಸಾಪ್‌ನಲ್ಲಿ ಈಗಾಗಲೇ ಬಳಕೆದಾರರು ವೈಯುಕ್ತಿಕ ಚಾಟ್‌, ಗ್ರೂಪ್‌ ಚಾಟ್‌ ಮೂಲಕ ಹಾಗೂ ಕಮ್ಯೂನಿಟಿ ಸೌಲಭ್ಯದ ಮೂಲಕ ಹಲವಾರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಆಂಡ್ರಾಯ್ಡ್ ಬಳಕೆದಾರರಿಗಾಗಿ ಮರುವಿನ್ಯಾಸಗೊಳಿಸಲಾದ ಚಾಟ್ ಅಟ್ಯಾಚ್‌ಮೆಂಟ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದ್ದು, ಬನ್ನಿ ಅದರ ವಿವರ ತಿಳಿಯೋಣ.

ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ ಈ ಹೊಸ ಫೀಚರ್ಸ್; ಯಾರಿಗೆ ಪ್ರಯೋಜನ!?

ವಾಟ್ಸಾಪ್‌ನಲ್ಲಿ ಮಗದೊಂದು ಹೊಸ ಫೀಚರ್ಸ್: ವಾಟ್ಸಾಪ್‌ನ ಆಗು ಹೋಗುಗಳನ್ನು ಟ್ರ್ಯಾಕ್‌ ಮಾಡುವ WABetaInfo ಈ ಸಂಬಂಧ ವರದಿ ಮಾಡಿದ್ದು, ಅದರಂತೆ ಆಂಡ್ರಾಯ್ಡ್‌ ಬಳಕೆದಾರರು ಮರುವಿನ್ಯಾಸಗೊಳಿಸಲಾದ ಚಾಟ್ ಮೆನು ಸೌಲಭ್ಯ ಪಡೆದುಕೊಳ್ಳಬಹುದು ಎಂದು ತಿಳಿಸಿದೆ. ಸದ್ಯಕ್ಕೆ ಈ ಫೀಚರ್ಸ್‌ ಆಂಡ್ರಾಯ್ಡ್‌ ಬೀಟಾ ಪರೀಕ್ಷಕರಿಗೆ ಲಭ್ಯವಿದ್ದು, 2.23.6.17 ಆವೃತ್ತಿಯೊಂದಿಗೆ ಮುಂದಿನ ದಿನಗಳಲ್ಲಿ ಬಳಕೆದಾರರಿಗೆ ಲಭ್ಯವಿದೆ ಎಂದು ತಿಳಿಸಲಾಗಿದೆ.

ವಾಟ್ಸಾಪ್ ಪ್ರಸ್ತುತ ಮರುವಿನ್ಯಾಸಗೊಳಿಸಲಾದ ಚಾಟ್ ಅಟ್ಯಾಚ್‌ಮೆಂಟ್ ಮೆನುವಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅರ್ಥ ಮಾಡಿಕೊಳ್ಳುವುದು ಸುಲಭ. ಇದು ಪ್ರಸ್ತುತ ಬಳಕೆ ಮಾಡುವ ಇಂಟರ್‌ಫೇಸ್‌ಗಿಂತ ಬಹಳ ಭಿನ್ನವಾಗಿದೆ. ನಮ್ಮ ಅಭಿಪ್ರಾಯದಲ್ಲಿ ಹೊಸ ಇಂಟರ್ಫೇಸ್ ಖಂಡಿತವಾಗಿಯೂ ಸ್ಪಷ್ಟವಾಗಿರಲಿದೆ. ಭವಿಷ್ಯದಲ್ಲಿ ಈ ವಿಭಾಗಕ್ಕೆ ಹೆಚ್ಚಿನ ಆಯ್ಕೆಗಳನ್ನು ಸೇರಿಸಿದರೆ ಚಾಟ್ ಅಟ್ಯಾಚ್‌ಮೆಂಟ್ ಮೆನು ಬಳಕೆದಾರರಿಗೆ ಖಂಡಿತವಾಗಿಯೂ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು WABetaInfo ತನ್ನ ವರದಿಯಲ್ಲಿ ಹೇಳಿದೆ.

ಜೊತೆಗೆ ಈ ಫೀಚರ್ಸ್‌ ಇದೀಗ ಅಭಿವೃದ್ಧಿ ಹಂತದಲ್ಲಿದ್ದು, ಭವಿಷ್ಯದ ಅಪ್‌ಡೇಟ್‌ನಲ್ಲಿ ಎಲ್ಲಾ ಬಳಕೆದಾರರಿಗಾಗಿ ಇದನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಹೀಗಾಗಿ ವಾಟ್ಸಾಪ್‌ ಬಳಕೆದಾರರು ನಿತ್ಯ ಬಳಕೆ ಮಾಡುವ ಈ ಚಾಟ್‌ ಅಟ್ಯಾಚ್‌ಮೆಂಟ್ ವಿಭಾಗದಲ್ಲಿ ಆಗುತ್ತಿರುವ ಬದಲಾವಣೆ ಮಾತ್ರ ಬಹಳಷ್ಟು ಮಂದಿಯಲ್ಲಿ ಕಾತುರತೆಯನ್ನು ಹೆಚ್ಚಿಗೆ ಮಾಡಲಿದೆ.

ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ ಈ ಹೊಸ ಫೀಚರ್ಸ್; ಯಾರಿಗೆ ಪ್ರಯೋಜನ!?

ಸದ್ಯದ ವಾಟ್ಸಾಪ್‌ನ ಈ ಚಾಟ್ ಅಟ್ಯಾಚ್‌ಮೆಂಟ್ ಮೆನು ಬಳಕೆದಾರರಿಗೆ ಡಾಕ್ಯುಮೆಂಟ್‌ಗಳನ್ನು ಕಳುಹಿಸುವುದರಿಂದ ಹಿಡಿದು ನಕ್ಷೆಯನ್ನು ಹಂಚಿಕೊಳ್ಳುವವರೆಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುತ್ತದೆ. ಅಂದರೆ ಈ ಮೆನುವನ್ನು ಯಾವುದೇ ಸಂಪರ್ಕದ ಚಾಟ್ ಪುಟದಲ್ಲಿ ತೆರೆಯಬಹುದಾಗಿದ್ದು, ಬಳಕೆದಾರರು ಡಾಕ್ಯುಮೆಂಟ್, ಕ್ಯಾಮೆರಾ, ಗ್ಯಾಲರಿ, ಆಡಿಯೋ, ನಕ್ಷೆ ಸೇರಿದಂತೆ ಇನ್ನಿತರೆ ಮಾಹಿತಿಯನ್ನು ಇತರರಿಗೆ ಕಳುಹಿಸಬಹುದಾಗಿದೆ.

ವಾಟ್ಸಾಪ್ ಸ್ಟೇಟಸ್‌ನಲ್ಲಿ ವಾಯ್ಸ್‌ ನೋಟ್‌: ಇತ್ತೀಚೆಗೆ ಐಓಎಸ್ ಬಳಕೆದಾರರಿಗೆ ಸ್ಟೇಟಸ್ ಅಪ್‌ಡೇಟ್‌ಗಳಾಗಿ ವಾಯ್ಸ್‌ ನೋಟ್‌ ಪೋಸ್ಟ್ ಮಾಡುವ ಸೌಲಭ್ಯವನ್ನು ಕಲ್ಪಿಸಿದ್ದು, ಈ ಮೂಲಕ ಬಳಕೆದಾರರು ಮೂವತ್ತು ಸೆಕೆಂಡ್‌ಗಳ ವರೆಗೆ ರೆಕಾರ್ಡ್‌ ಮಾಡಿ ಅದನ್ನು ಶೇರ್ ಮಾಡಿಕೊಳ್ಳಬಹುದಾಗಿದೆ, ಈ ಫೀಚರ್ಸ್‌ ಅನ್ನು ಈ ಹಿಂದೆ ಆಂಡ್ರಾಯ್ಡ್‌ ಬಳಕೆದಾರರಿಗೆ ಲಭ್ಯವಾಗಿಸಿತ್ತು.

ಇನ್ನು ಈ ವಾಯ್ಸ್‌ ನೋಟ್‌ ಅನ್ನು ಬಳಕೆದಾರರ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ಕಾನ್ಫಿಗರ್ ಮಾಡಲಾದ ನಿರ್ದಿಷ್ಟ ವೀಕ್ಷಕರೊಂದಿಗೆ ಮಾತ್ರ ಹಂಚಿಕೊಳ್ಳಬಹುದಾಗಿದ್ದು, ಇದರಲ್ಲೂ ಸಹ ವಾಟ್ಸಾಪ್‌ ಬಳಕೆದಾರರಿಗೆ ಆಯ್ಕೆಯನ್ನು ನೀಡಿದೆ. ಹಾಗೆಯೇ ಎಂಟ್‌ ಟು ಎಂಡ್‌ ಎನ್‌ಕ್ರಿಪ್ಟ್ ಆಗಿರುತ್ತವೆ. ಚಿತ್ರಗಳು ಮತ್ತು ವಿಡಿಯೋಗಳಂತೆ ಹಂಚಿಕೊಳ್ಳಲಾದ ವಾಯ್ಸ್‌ ನೋಟ್‌ ಸಹ 24 ಗಂಟೆಗಳ ನಂತರ ಕಣ್ಮರೆಯಾಗುತ್ತದೆ.

ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ ಈ ಹೊಸ ಫೀಚರ್ಸ್; ಯಾರಿಗೆ ಪ್ರಯೋಜನ!?

ಹಾಗೆಯೇ ಐಓಎಸ್‌ ಬಳಕೆದಾರರಿಗೆ ವಿಶೇಷ ಅನುಭವ ನೀಡುವ ಉದ್ದೇಶದಿಂದ ವಾಟ್ಸಾಪ್‌ನಲ್ಲಿ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (OCR) ಎಂಬ ಹೊಸ ಫೀಚರ್ಸ್‌ ಅನ್ನು ಸಹ ಪರಿಚಯಿಸಿದೆ. ಈ ಮೂಲಕ ಐಫೋನ್‌ನಲ್ಲಿ ವಾಟ್ಸಾಪ್‌ ಬಳಕೆ ಮಾಡುವವರು ಚಿತ್ರಗಳಿಂದ ಪಠ್ಯವನ್ನು ನಕಲಿಸಲು ಸಾಧ್ಯವಾಗುತ್ತದೆ. ಅಂದರೆ, ಫೋಟೋದಲ್ಲಿ ಇರುವ ಯಾವುದೇ ಅಕ್ಷರಗಳನ್ನು ನಕಲು ಮಾಡಿಕೊಂಡು ಬೇರೆ ಕಡೆ ಪೇಸ್ಟ್‌ ಮಾಡಬಹುದಾಗಿದೆ.

Best Mobiles in India

English summary
WhatsApp is working on a redesigned chat attachment for Android users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+