Home
ಸುದ್ದಿಜಾಲ

Whatsapp: ವಾಟ್ಸಾಪ್‌ ಮೂಲಕ ಹೆಚ್ಚಾಗುತ್ತಿವೆ ಹಗರಣ; ಈ ಮೆಸೆಜ್‌ ಸ್ವೀಕರಿಸಿದ್ರೆ ನಿಮ್ಮ ಅಕೌಂಟ್‌ನಲ್ಲಿನ ಹಣ ಖಾಲಿ?

ವಾಟ್ಸಾಪ್ (Whatsapp) ಬಳಕೆ ಮಾಡದ ಸ್ಮಾರ್ಟ್‌ಫೋನ್‌ ಬಳಕೆದಾರರು ಯಾರಿದ್ದಾರೆ ಹೇಳಿ. ದುರಂತ ಎಂದರೆ ಈ ಆಪ್ ಮೂಲಕವೇ ಸಾಕಷ್ಟು ಜನರು ಮೋಸ ಹೋಗುತ್ತಿದ್ದಾರೆ. ವಾಟ್ಸಾಪ್ ಈ ಸಂಬಂಧ ಅದೆಷ್ಟೊ ಭದ್ರತಾ ಫೀಚರ್ಸ್‌ ಅನ್ನು ನೀಡಿದರು ಸಹ ಬಳಕೆದಾರರ ಅಜಾಗರೂಕತೆ ಅವರ ಬ್ಯಾಂಕ್‌ ಖಾತೆಯನ್ನು ಖಾಲಿಮಾಡುತ್ತಿದೆ.

ಹೌದು, ವಿಶ್ವದಲ್ಲಿ ಅತಿ ಹೆಚ್ಚು ಬಳಕೆಯಾಗುವ ಮೆಸೇಜಿಂಗ್ ಆಪ್‌ಗಳಲ್ಲಿ ವಾಟ್ಸಾಪ್‌ ಪ್ರಮುಖವಾಗಿದೆ. ಅಂದರೆ ಇದೀಗ ವಾಟ್ಸಾಪ್‌ ಶತಕೋಟಿ ಬಳಕೆದಾರರನ್ನು ಪಡೆದುಕೊಂಡಿದೆ. ಅದರಂತೆ ಇದೀಗ ವಾಟ್ಸಾಪ್ ಮೂಲಕ ಹಲವು ವಂಚನೆ ಪ್ರಕರಣಗಳು ವರದಿಯಾಗುತ್ತಿವೆ. ಈ ವಂಚನೆಗಳನ್ನು ಹೆಚ್ಚಾಗಿ ಗ್ರೂಫ್‌ಗಳಲ್ಲಿ ಫಾರ್ವರ್ಡ್ ಮಾಡಿದ ಮೆಸೆಜ್‌ ಮೂಲಕ ಮಾಡಲಾಗುತ್ತದೆ. ಹಾಗಿದ್ರೆ, ಏನಿದು ಹೊಸ ವಂಚನೆ? ಈ ಮೋಸದಿಂದ ಪಾರಾಗುವುದು ಹೇಗೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಾಟ್ಸಾಪ್‌ ಮೂಲಕ ಹೆಚ್ಚಾಗುತ್ತಿವೆ ಹಗರಣ; ಈ ಮೆಸೆಜ್‌ ಸ್ವೀಕರಿಸಿದ್ರೆ ...

ಮಾರಕವಾಯ್ತಾ ಸ್ಕ್ರೀನ್ ಶೇರ್ ?: ವಾಟ್ಸಾಪ್‌ನಲ್ಲಿ ಇದೀಗ ಸ್ಕ್ರೀನ್ ಶೇರ್ ಬಹಳ ಸದ್ದು ಮಾಡುತ್ತಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಸ್ಕ್ಯಾಮರ್‌ಗಳು ಸುಲಭವಾಗಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಹ್ಯಾಕರ್‌ಗಳು ಗ್ರೂಪ್‌ಗಳಲ್ಲಿ ಸೆಂಡ್‌ ಮಾಡಲಾದ ವಿವಿಧ ರೀತಿಯ ಅನಾಮಿಕ ಮೂಲದ ಲಿಂಕ್ ಕ್ಲಿಕ್‌ ಮಾಡಿದ್ರೆ ಅದು ನಿಮ್ಮನ್ನು ಮಾಲ್‌ವೇರ್‌ನಿಂದ ತುಂಬಿರುವ ವೆಬ್‌ಸೈಟ್‌ಗಳಿಗೆ ಕರೆದೊಯ್ಯುತ್ತವೆ. ಈ ಮೂಲಕ ಹ್ಯಾಕರ್‌ಗಳು (Hackers) ನಿಮ್ಮ ಫೋನ್ ಮೇಲೆ ಕಂಟ್ರೋಲ್‌ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಅದರಂತೆ ಹ್ಯಾಕರ್‌ಗಳು ನಿಮ್ಮ ಅನುಮತಿಯಿಲ್ಲದೆಯೇ ವಾಟ್ಸಾಪ್‌ ನಲ್ಲಿ ಸ್ಕ್ರೀನ್ ಶೇರಿಂಗ್ (Screen sharing) ಆಯ್ಕೆಯನ್ನು ನಿರ್ವಹಿಸಬಹುದು.

ಸ್ಕ್ರೀನ್ ಶೇರ್ ಆಯ್ಕೆಯ ಸಹಾಯದಿಂದ ಅವರು ನಿಮ್ಮ ಫೋನ್‌ಗೆ ಬಂದಿರುವ ರಹಸ್ಯ ಓಟಿಪಿ ಗಳನ್ನು ಸಹ ತೆಗೆದುಕೊಳ್ಳಬಹುದು. ಇದರಿಂದಾಗಿ ಅವರು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ಕದಿಯಬಹುದು. ವಾಟ್ಸಾಪ್‌ನ ಸ್ಕ್ರೀನ್ ರೆಕಾರ್ಡಿಂಗ್ ಹಗರಣದ (WhatsApp screen recording scam) ಮೂಲಕ ದೇಶಾದ್ಯಂತ ಅನೇಕ ಜನರು ಈಗಾಗಲೇ ಹಣವನ್ನು ಕಳೆದುಕೊಂಡಿದ್ದಾರೆ. ಜೊತೆಗೆ ಈ ಫೀಚರ್ಸ್‌ ಬಳಸಿಕೊಂಡು, ಸ್ಕ್ಯಾಮರ್‌ಗಳು ಪಾಸ್‌ವರ್ಡ್‌ಗಳನ್ನು ಸಹ ಬದಲಾಯಿಸಬಹುದು ಅಥವಾ ಬಳಕೆದಾರರಿಗೆ ತಿಳಿಯದೆ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಲಾಗ್ ಔಟ್ ಮಾಡಬಹುದು.

ವಾಟ್ಸಾಪ್‌ ಮೂಲಕ ಹೆಚ್ಚಾಗುತ್ತಿವೆ ಹಗರಣ; ಈ ಮೆಸೆಜ್‌ ಸ್ವೀಕರಿಸಿದ್ರೆ ...

ಸಾಮಾನ್ಯವಾಗಿ ಬಳಕೆದಾರರು ತಮ್ಮ ವಾಟ್ಸಾಪ್‌ ನ ಸ್ಕ್ರೀನ್ ಶೇರಿಂಗ್ ಆಯ್ಕೆಯನ್ನು ಆನ್ ಮಾಡಿದಾಗ, ಹ್ಯಾಕರ್‌ಗಳು ಅದರ ನೈಜ ಸಮಯದ ತುಣುಕನ್ನು ಪಡೆಯುತ್ತಾರೆ. ಈ ಮೂಲಕ ಅವರು ಫೋನ್‌ನಲ್ಲಿ ಎಲ್ಲಾ ಪ್ರಮುಖ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಸದ್ಯ ಸ್ಕ್ರೀನ್ ಶೇರಿಂಗ್ ಆಯ್ಕೆ ಬಂದ ನಂತರ ಈ ರೀತಿಯ ಕ್ರೈಂ ಹೆಚ್ಚಾಗಿದೆ ಎಂದು ವರದಿಗಳು ಉಲ್ಲೇಖ ಮಾಡಿದ್ದು, ಈ ರೀತಿಯ ವಂಚನೆಗಳಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದನ್ನು ಪರಿಶೀಲಿಸೋಣ ಬನ್ನಿ.

ನಿರ್ಲಕ್ಷಿಸಿ: ನಿಮ್ಮ ವಾಟ್ಸಾಪ್‌ ನಂಬರ್‌ಗೆ ಅಪರಿಚಿತ ವ್ಯಕ್ತಿಗಳ ಮೆಸೆಜ್‌ಗಳು, ವಿಡಿಯೋ ಕರೆಗಳು ಮತ್ತು ವಾಯ್ಸ್‌ ಕರೆಗಳನ್ನು ಬಂದರೆ ಸಾಧ್ಯವಾದಷ್ಟು ಅದನ್ನು ನಿರ್ಲಕ್ಷಿಸಿ ಅಥವಾ ಅದನ್ನು ನಿಶ್ಶಬ್ದಗೊಳಿಸಿವು ಕೆಲಸವನ್ನೂ ಸಹ ಮಾಡಬಹುದು. ಇದಕ್ಕಾಗಿ ವಾಟ್ಸಾಪ್‌ ನಿಮಗೆ ಕೆಲವು ಆಯ್ಕೆಯನ್ನೂ ನೀಡಿದೆ.

ಆಪ್‌ ಓಪನ್‌ ಮಾಡಬೇಡಿ: ಇನ್ನು ನೀವು ವಾಟ್ಸಾಪ್‌ನಲ್ಲಿ ಸ್ಕ್ರೀನ್ ಶೇರಿಂಗ್ ಆಯ್ಕೆಯನ್ನು ರನ್ ಮಾಡುತ್ತಿರುವಾಗ ಇತರ ಆಪ್‌ಗಳನ್ನು ಓಪನ್‌ ಮಾಡಬೇಡಿ. ಈ ಸಮಯದಲ್ಲಿ ವಾಟ್ಸಾಪ್‌ ಅನ್ನು ಮಾತ್ರ ಬಳಸಲು ಪ್ರಯತ್ನಿಸಿ. ನೀವು ಸ್ವೀಕರಿಸುವ ಓಟಿಪಿಯನ್ನು ಈ ವೇಳೆ ಯಾರೊಂದಿಗೂ ಶೇರ್‌ ಮಾಡಿಕೊಳ್ಳಬೇಡಿ. ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಸಂಖ್ಯೆಗಳನ್ನು ಸಹ ಈ ವೇಳೆ ಶೇರ್‌ ಮಾಡಬೇಡಿ.

ವಾಟ್ಸಾಪ್‌ ಮೂಲಕ ಹೆಚ್ಚಾಗುತ್ತಿವೆ ಹಗರಣ; ಈ ಮೆಸೆಜ್‌ ಸ್ವೀಕರಿಸಿದ್ರೆ ...

ಡೀಪ್‌ ಫೇಕ್‌ ಬಗ್ಗೆ ಇರಲಿ ಎಚ್ಚರ: ಈಗಂತೂ ಡೀಪ್‌ ಫೇಕ್‌ ವ್ಯಾಪಕವಾಗಿದ್ದು, ನಿಮ್ಮ ಮನೆಯವರೇ ಅಥವಾ ನಿಮಗೆ ತಿಳಿದವರೇ ಕರೆ ಮಾಡಿ ಹಣ ಕೇಳುವಂತೆ ಕೆಲವು ಕರೆ ಅಥವಾ ವಿಡಿಯೋಗಳು ನಿಮ್ಮ ವಾಟ್ಸಾಪ್‌ಗೆ ಬರುತ್ತವೆ. ಆದ ಕಾರಣ ಎಂತಹ ಆತ್ಮೀಯರಾದರೂ ಮೊದಲು ನೀವೇ ಕರೆ ಮಾಡಿ ಅವರು ಹಣ ಕೇಳಿದ್ದಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಾಗೆಯೇ ಈ ವೇಳೆ ಸ್ಕ್ರೀನ್‌ ಶೇರಿಂಗ್‌ ಫೀಚರ್ಸ್‌ ಬಳಕೆ ಮಾಡಬೇಡಿ.

Best Mobiles in India

English summary
WhatsApp Scams are increasing these days. Especially scammers are stealing money from user accounts by using screen share features in WhatsApp.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+