ವಾಟ್ಸಾಪ್‌ನ ಹೊಸ ರೂಲ್ಸ್‌ ಒಪ್ಪಿಕೊಳ್ಳದಿದ್ದರೇ, ನಿಮ್ಮ ವಾಟ್ಸಾಪ್ ಡಿಲೀಟ್!

|

ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್‌ ಮೆಸೆಜ್‌ ಅಪ್ಲಿಕೇಶನ್ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಆದ್ರೆ ಇದೀಗ ವಾಟ್ಸಾಪ್‌ ಸಂಸ್ಥೆಯು ನೂತನ ಪ್ರೈವಸಿ ನಿಯಮಗಳಲ್ಲಿ ಜಾರಿ ಮಾಡಲಿದೆ. ಬಳಕೆದಾರರು ಸಂಸ್ಥೆಯ ಹೊಸ ನಿಯಮಗಳನ್ನು ಒಪ್ಪಿಕೊಳ್ಳಬೇಕು, ಇಲ್ಲದಿದ್ದರೇ ಅವರ ವಾಟ್ಸಾಪ್‌ ಖಾತೆ ಡಿಲೀಟ್ ಎನ್ನಲಾಗಿದೆ.

ಹೆಚ್ಚಿನ

ಹೌದು, ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಸಂಸ್ಥೆಯು ಈಗ ಪ್ರೈವಸಿಗೆ ಸಂಬಂಧಿಸಿದಂತೆ ಹೊಸದಾಗಿ ನಿಯಮಗಳು ಜಾರಿ ಮಾಡಲಿದೆ. ಇನ್ನು ಈ ಹೊಸ ನಿಯಮಗಳು ಫೆಬ್ರವರಿ 8, 2021 ರಿಂದ ಅನ್ವಯವಾಗಲಿವೆ ಎಂದು ಹೇಳಲಾಗಿದೆ. ಈ ಕುರಿತಾಗಿ WABetaInfo ತಾಣವು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದೆ.

ಎರಡು

ವಾಟ್ಸಾಪ್‌ನಲ್ಲಿ ಹೊಸ ನಿಯಮಗಳಲ್ಲಿ ಎರಡು ಆಯ್ಕೆಗಳು ಕಾಣಿಸಿಕೊಳ್ಳಲಿವೆ. ಮೊದಲನೇಯದಾಗಿ Agree ಆಯ್ಕೆ ಇರಲಿದ್ದು, ಬಳಕೆದಾರರು ಈ ಆಯ್ಕೆಯನ್ನು ಟ್ಯಾಪ್‌ ಮಾಡಿದರೇ, ಸಂಸ್ಥೆಯ ಎಲ್ಲ ನೂತನ ನಿಯಮಗಳನ್ನು ಒಪ್ಪಿಕೊಂಡಂತೆ ಹಾಗೂ ವಾಟ್ಸಾಪ್‌ ಮುಂದುವರಿಯುವುದು. ಹಾಗೆಯೇ Don't Agree ಆಯ್ಕೆಯನ್ನು ಟ್ಯಾಪ್‌ ಮಾಡಿದರೇ ವಾಟ್ಸಾಪ್‌ ಖಾತೆಯನ್ನು ಡಿಲೀಟ್‌ ಮಾಡಬಹುದಾಗಿದೆ.

ವಾಟ್ಸಾಪ್

WABetaInfo ತಾಣವು ಸ್ಕ್ರೀನ್‌ಶಾಟ್‌ ಪ್ರಕಾರ ವಾಟ್ಸಾಪ್ ಹೊಸ ನಿಯಮಗಳು ಮತ್ತು ಪ್ರೈವಸಿ ನೀತಿಯು ವಾಟ್ಸಾಪ್ ಸೇವೆಯ ಬಗ್ಗೆ ಮತ್ತು ಬಳಕೆದಾರರ ಡೇಟಾವನ್ನು ಹೇಗೆ ಪ್ರಕ್ರಿಯೆಗೊಳಿಸಲಾಗುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಒಳಗೊಂಡಿರುತ್ತದೆ. ಚಾಟ್‌ಗಳು ಮತ್ತು ಇತರ ಮಾಹಿತಿಯನ್ನು ಸಂಗ್ರಹಿಸಲು ಮತ್ತು ನಿರ್ವಹಿಸಲು ವ್ಯವಹಾರಗಳು ಫೇಸ್‌ಬುಕ್‌ನ ಸೇವೆಗಳನ್ನು ಹೇಗೆ ಬಳಸಿಕೊಳ್ಳುತ್ತವೆ ಎಂಬುದನ್ನು ಸಹ ಸೇವಾ ನಿಯಮಗಳು ಉಲ್ಲೇಖಿಸುತ್ತವೆ.

ಫೆಬ್ರವರಿ

ಇನ್ನು ಬರುವ ಫೆಬ್ರವರಿ 8, 2021 ರಿಂದ ವಾಟ್ಸಾಪ್‌ ನೂತನ ನಿಯಮಗಳು ಜಾರಿ ಆಗುವ ಸಾಧ್ಯತೆಗಳು ಇವೆ ಎಂದು WABetaInfo ಹೇಳಿದೆ. ಇದಲ್ಲದೆ, ನವೀಕರಿಸಿದ ಸೇವಾ ನಿಯಮಗಳನ್ನು ಮುಂಬರುವ ವಾರಗಳಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.

Best Mobiles in India

English summary
WhatsApp users must accept new terms to continue using the platform.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X