Home
ಸುದ್ದಿಜಾಲ

WhatsApp ಬಳಕೆದಾರರಿಗೆ ಶೀಘ್ರದಲ್ಲೇ ಹೊಸ ಸೌಲಭ್ಯ: ಗೊತ್ತಾದ್ರೆ ವಾವ್‌ ಅಂತೀರಾ!

ವಾಟ್ಸಾಪ್‌ (WhatsApp) ಇಂದು ವ್ಯಾಪಕವಾಗಿ ಬಳಕೆ ಆಗುತ್ತಿರುವ ಪ್ರಮುಖ ಮೆಸೇಜಿಂಗ್‌ ಆಪ್‌ ಆಗಿದೆ. ಅದರಲ್ಲೂ ಮೆಸೇಜ್‌ ಹಾಗೂ ಕರೆ ಮಾಡಲು ಮಾತ್ರವಲ್ಲದೆ ಈ ಆಪ್‌ ಇತರೆ ಹಲವಾರು ರೀತಿಯ ಸೌಲಭ್ಯ ಕಲ್ಪಿಸಿಕೊಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಭಾರೀ ಜನಪ್ರಿಯತೆ ಗಳಿಸಿಕೊಂಡಿದೆ. ಈ ನಡುವೆ ನಂಬರ್‌ ಅಗತ್ಯ ಇಲ್ಲದೆ ಮೆಸೇಜ್‌ ಕಳುಹಿಸಲು ಅವಕಾಶ ನೀಡುತ್ತಿದೆ.

ಹೌದು, ವಾಟ್ಸಾಪ್‌ ಬಳಕೆದಾರರು ಶೀಘ್ರದಲ್ಲೇ ಫೋನ್ ಸಂಖ್ಯೆಗಳಿಲ್ಲದೆ ಬೇಕಾದವರಿಗೆ ಮೆಸೇಜ್‌ಗಳನ್ನು ಕಳುಹಿಸಲು ಅನುಕೂಲ ಮಾಡಿಕೊಡಲು ಮುಂದಾಗಿದೆ. ಈ ಫೀಚರ್ಸ್‌ನಲ್ಲಿ ಬಳಕೆದಾರರಿಗೆ ವಿಶಿಷ್ಟವಾದ ಬಳಕೆದಾರ ಹೆಸರನ್ನು ರಚಿಸಲು ಅನುಮತಿಸುತ್ತದೆ. ಹಾಗಿದ್ರೆ, ಫೋನ್‌ ನಂಬರ್‌ ಇಲ್ಲದೆ ಮೆಸೇಜ್‌ ಕಳಹಿಸಲು ಹೇಗೆ ಸಾಧ್ಯ?, ಇದರಿಂದ ಬಳಕೆದಾರರಿಗೆ ಆಗುವ ಅನುಕೂಲ ಏನು? ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳಿ.

WhatsApp ಬಳಕೆದಾರರಿಗೆ ಶೀಘ್ರದಲ್ಲೇ ಹೊಸ ಸೌಲಭ್ಯ: ಗೊತ್ತಾದ್ರೆ ವಾವ್‌ ಅಂತೀರಾ!

ವಾಟ್ಸಾಪ್‌ನಲ್ಲಿ ಹೊಸ ಸೌಲಭ್ಯ: ಬಳಕೆದಾರರ ಇಂಟರ್ಫೇಸ್ ಅನ್ನು ಸುಧಾರಿಸಲು ನಿರಂತರವಾಗಿ ಹೊಸ ಫೀಚರ್ಸ್‌ಗಳನ್ನು ಆಡ್‌ ಮಾಡಿಕೊಂಡು ಬರುತ್ತಿರುವ ಜನಪ್ರಿಯ ಇನ್‌ಸ್ಟಂಟ್‌ ಮೆಸೆಜಿಂಗ್‌ ಆಪ್‌ ಆಗಿರುವ ವಾಟ್ಸಾಪ್‌ ಇದೀಗ ಬಳಕೆದಾರರು ತಮ್ಮ ಖಾತೆಗಳಿಗೆ ಅನನ್ಯ ಬಳಕೆದಾರ ಹೆಸರುಗಳನ್ನು ಕ್ರಿಯೇಟ್‌ ಮಾಡಲು ಅನುಮತಿಸುವ ಹೊಸ ಕೆಲಸದಲ್ಲಿ ತಲ್ಲೀನವಾಗಿದೆ ಎಂದು ತಿಳಿದುಬಂದಿದೆ. ಈ ವಿಶೇಷ ಫೀಚರ್ಸ್‌ ಅಭಿವೃದ್ಧಿ ಹಂತದಲ್ಲಿದ್ದು, ಭವಿಷ್ಯದಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ.

ಈ ನಡುವೆ ವಾಟ್ಸಾಪ್‌ನ ಎಲ್ಲಾ ಮಾಹಿತಿಗಳನ್ನು ಟ್ರ್ಯಾಕ್‌ ಮಾಡುವ WaBetaInfo ವರದಿ ಮಾಡಿದ್ದು, ಆಂಡ್ರಾಯ್ಡ್ 2.23.11.15 ಅಪ್‌ಡೇಟ್‌ನ ಭಾಗವಾಗಿ ವಾಟ್ಸಾಪ್‌ ಹೊಸ ಫೀಚರ್ಸ್‌ ಅನ್ನು ಸೇರಿಸಲಾಗುತ್ತಿದೆ, ಇದು ಕೆಲವು ಬಳಕೆದಾರರಿಂದ ಗುರುತಿಸಲ್ಪಟ್ಟಿದೆ ಎಂದು ಉಲ್ಲೇಖಿಸಿದೆ. ಆ ವರದಿಯಲ್ಲಿ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಕಾಣಿಸುವಂತೆ ವಾಟ್ಸಾಪ್‌ನ ಸೆಟ್ಟಿಂಗ್‌ಗಳ ಮೆನುವಿನಲ್ಲಿ ಬಳಕೆದಾರ ಹೆಸರು ಫೀಚರ್ಸ್‌ ಅನ್ನು ಪರಿಚಯಿಸುತ್ತಿದೆ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ.

WhatsApp ಬಳಕೆದಾರರಿಗೆ ಶೀಘ್ರದಲ್ಲೇ ಹೊಸ ಸೌಲಭ್ಯ: ಗೊತ್ತಾದ್ರೆ ವಾವ್‌ ಅಂತೀರಾ!

ಇದರಿಂದ ಪ್ರಯೋಜನ ಏನು?: ಇದರೊಂದಿಗೆ ಗೂಗಲ್‌ ಪ್ಲೇ ಸ್ಟೋರ್‌ನಿಂದ ಆಂಡ್ರಾಯ್ಡ್‌ 2.23.11.15 ಅಪ್‌ಡೇಟ್‌ಗಾಗಿ ಇತ್ತೀಚಿನ ವಾಟ್ಸಾಪ್ ಬೀಟಾವನ್ನು ಇನ್‌ಸ್ಟಾಲ್‌ ಮಾಡಲಾಗಿದ್ದು, ನಿಯಮಿತ ಪರಿಶೋಧನೆಯ ಸಮಯದಲ್ಲಿ ನಾವು ಪ್ರಮುಖ ಫೀಚರ್ಸ್‌ ಅನ್ನು ಕಂಡುಹಿಡಿದಿದ್ದೇವೆ ಎಂದು WABetaInfo ತನ್ನ ಹೇಳಿದೆ. ಇನ್ನು ಬಳಕೆದಾರ ಹೆಸರನ್ನು ಆಯ್ಕೆ ಮಾಡುವ ಮೂಲಕ, ಬಳಕೆದಾರರು ಸಂಪರ್ಕ ಮಾಹಿತಿಗಾಗಿ ಫೋನ್ ಸಂಖ್ಯೆಗಳನ್ನು ಅವಲಂಬಿಸುವುದನ್ನು ಈ ಮೂಲಕ ಕಡಿಮೆ ಮಾಡಲಾಗುತ್ತದೆ.

ಹಾಗೆಯೇ ಬಳಕೆದಾರ ಹೆಸರುಗಳನ್ನು ಬಳಸಿಕೊಂಡು ಇತರ ಬಳಕೆದಾರರನ್ನು ಹುಡುಕಲು ಮತ್ತು ಅವರ ಫೋನ್ ಸಂಖ್ಯೆಗಳನ್ನು ತಿಳಿಯದೆ ಅವರೊಂದಿಗೆ ಸಂವಹನ ನಡೆಸಲು ಈ ಫೀಚರ್ಸ್‌ ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಈ ಫೀಚರ್ಸ್‌ನ ನಿಖರವಾದ ಕೆಲಸಗಳು ಏನೆಂದು ನಿರೀಕ್ಷೆ ಮಾಡಲಾಗಿದೆ. ಇದರೊಂದಿಗೆ ಗೌಪ್ಯತೆ ಮತ್ತು ರಕ್ಷಣೆ ಉದ್ದೇಶದಿಂದ ಅಂತ್ಯದಿಂದ ಕೊನೆಯವರೆಗೆ ಎಲ್ಲಾ ಪ್ರಕ್ರಿಯೆ ಎನ್‌ಕ್ರಿಪ್ಟ್ ಆಗಿರಲಿವೆ ಭಾವಿಸಲಾಗಿದೆ.

ಕಳುಹಿಸಿದ ಮೆಸೇಜ್‌ ಎಡಿಟ್‌ ಮಾಡಿ: ಈ ಮೊದಲು ಯಾವುದೇ ಮೆಸೇಜ್‌ ಅನ್ನು ಕಳುಹಿಸಿದ ನಂತರ ಅದನ್ನು ಎಡಿಟ್‌ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬದಲಾಗಿ ಅದನ್ನು ಡಿಲೀಟ್‌ ಮಾಡುವ ಆಯ್ಕೆ ಮಾತ್ರ ಇತ್ತು. ಆದರೆ, ಇನ್ಮುಂದೆ ನೀವು ವಾಟ್ಸಾಪ್‌ನಲ್ಲಿ ಕಳುಹಿಸಿದ ಸಂದೇಶವನ್ನು ಎಡಿಟ್ ಮಾಡಬಹುದು. ಇದಕ್ಕಾಗಿ ಎಡಿಟ್‌ ಬಟನ್‌ ಆಯ್ಕೆಯನ್ನು ನೀಡಲಾಗಿದೆ. ಆದರೆ ನೀವು ಎಡಿಟ್‌ಎಷ್ಟು ಬಾರಿ ಎಡಿಟ್‌ ಮಾಡಿದ್ದೀರಿ, ಏನನ್ನು ಎಡಿಟ್‌ ಮಾಡಿದ್ದೀರಿ ಎಂದು ಇದರಲ್ಲಿ ವಿವರ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ.

WhatsApp ಬಳಕೆದಾರರಿಗೆ ಶೀಘ್ರದಲ್ಲೇ ಹೊಸ ಸೌಲಭ್ಯ: ಗೊತ್ತಾದ್ರೆ ವಾವ್‌ ಅಂತೀರಾ!

ಈ ಫೀಚರ್ಸ್‌ ಅನ್ನು ಹೇಗೆ ಬಳಕೆ ಮಾಡಬೇಕು ಎಂಬ ಗೊಂದಲ ಇದ್ದರೆ ಈ ಸರಳ ಹಂತ ಅನುಸರಿಸಿ. ಮೊದಲು ನಿಮ್ಮ ವಾಟ್ಸಾಪ್‌ ಓಪನ್ ಮಾಡಿ. ನಂತರ ಚಾಟ್‌ ವಿಭಾಗ ಓಪನ್‌ ಮಾಡಿ. ಅಲ್ಲಿ ತಪ್ಪಾಗಿ ಕಳುಹಿಸಿದ ಮೆಸೇಜ್‌ಮೇಲೆ ದೀರ್ಘವಾಗಿ ಒತ್ತಿ ಹಿಡಿಯಿರಿ. ಈ ರೀತಿ ಮಾಡಿದ ನಂತರ ಮೇಲಿನ ಬಲ ಮೂಲೆಯಲ್ಲಿ ಮೂರು ಡಾಟ್‌ಗಳು ಕಾಣಿಸಿಕೊಳ್ಳುತ್ತವೆ. ಅದರ ಮೇಲೆ ಟ್ಯಾಪ್‌ ಮಾಡಿದ್ರೆ ಎಡಿಟ್‌ ಆಯ್ಕೆ ಕಾಣಿಸಿಕೊಳ್ಳುತ್ತದೆ. ಮೆಸೇಜ್‌ ಎಡಿಟ್ ಆದ ಬಳಿಕ ಸೆಂಟ್‌ ಮೇಲೆ ಟ್ಯಾಪ್‌ ಮಾಡಿ.

Best Mobiles in India

English summary
WhatsApp will introduce new features that enable users to send messages without phone numbers soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+