whatsapp ಗೆ ಸೇರಲಿದೆ ಆಕರ್ಷಕ ಫೀಚರ್ಸ್: ಇದರಿಂದ ಯಾರಿಗೆಲ್ಲಾ ಲಾಭ!?
ಪ್ರಮುಖ ಮೆಸೆಜಿಂಗ್ ಆಪ್ ಆಗಿರುವ ವಾಟ್ಸಾಪ್(WhatsApp) ಈಗಾಗಲೇ ಸಾಕು ಎನಿಸುವಷ್ಟು ಫೀಚರ್ಸ್ ಅನ್ನು ಜನರಿಗೆ ನೀಡುತ್ತಿದೆ. ಈ ಮೂಲಕ ಬಳಕೆದಾರರು ಈ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಅನುಭವ ಪಡೆದುಕೊಳ್ಳಲು ಅನುಕೂಲ ಮಾಡಿಕೊಡಲಾಗುತ್ತಿದೆ. ಈ ನಡುವೆ ಶೀಘ್ರದಲ್ಲೇ ಕರೆ ಮಾಡುವ ಬಟನ್ ಆಯ್ಕೆಯನ್ನು ನೀಡಲಾಗುತ್ತಿದೆ.
ಹೌದು, ವಾಟ್ಸಾಪ್‌ನಲ್ಲಿ ಮುಂಬರುವ ಈ ಫೀಚರ್ ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆ. ಅಂದರೆ ಗ್ರೂಪ್ ಚಾಟ್‌ಗಳಲ್ಲಿ ವಿಭಿನ್ನ ಕರೆ ಮಾಡುವ ಐಕಾನ್ ಅನ್ನು ನೋಡಬಹುದು.ಈ ಐಕಾನ್ ಗ್ರೂಪ್ ಸದಸ್ಯರಿಗೆ ಕರೆ ಮಾಡಲು ಸಹಾಯ ಮಾಡಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಏನಿದು ಹೊಸ ಫೀಚರ್ಸ್, ಯಾವೆಲ್ಲಾ ಬಳಕೆದಾರರಿಗೆ ಇದು ಲಭ್ಯ ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನ ಓದಿರಿ.

ವಾಟ್ಸಾಪ್ ಬಳಕೆದಾರರು ಶೀಘ್ರದಲ್ಲೇ ಹೊಸ ಕರೆ ಮಾಡುವ ಬಟನ್ ಅನ್ನು ಪಡೆದುಕೊಳ್ಳಲಿದ್ದು, ಇದರೊಂದಿಗೆ ಚಾಟ್ ಮಾಡುವ ಮೋಜು ಇನ್ನಷ್ಟು ಡಬಲ್ ಆಗುತ್ತದೆ. ಇನ್ನು ನವೀಕರಿಸಿದ ಬೀಟಾ ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಿದ ನಂತರ ಬಳಕೆದಾರರು ಗ್ರೂಪ್ ಚಾಟ್‌ಗಳಲ್ಲಿ ವಿಭಿನ್ನ ಕರೆ ಮಾಡುವ ಐಕಾನ್ ಅನ್ನು ಪಡೆದುಕೊಳ್ಳಬಹುದು. ಈ ಬಟನ್‌ನಲ್ಲಿ ಆಡಿಯೋ ಅಥವಾ ವಿಡಿಯೋ ಕರೆ ಮಾಡುವ ಆಯ್ಕೆ ಇರುತ್ತದೆ.
ಈ ಹಿಂದಿನ ಅಪ್‌ಡೇಟ್‌ನಲ್ಲಿ ವಾಟ್ಸಾಪ್‌ನ ಆಕ್ಷನ್ ಶೀಟ್ ಮೆನುವಿನಲ್ಲಿ ವಿಡಿಯೋ ಮತ್ತು ಆಡಿಯೊ ಕರೆಗಳಿಗಾಗಿ ಪ್ರತ್ಯೇಕ ಬಟನ್‌ಗಳನ್ನು ನೀಡಲಾಗಿತ್ತು. ಆದರೆ ವಾಟ್ಸಾಪ್ ನವೀಕರಣದ ನಂತರ ಸ್ಥಾಪಿಸಿದ ನಂತರ ಐಓಎಸ್ ಬಿಟಾದಲ್ಲಿ ಈ ಆಯ್ಕೆ ಬದಲಾಗಲಿದೆ. ಈ ಮೂಲಕ ಈ ಹೊಸ ಕರೆ ಮಾಡುವ ಬಟನ್ ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದ್ದು, ಇದು ಐಒಎಸ್‌ಗಾಗಿ ಇತ್ತೀಚಿನ ಆವೃತ್ತಿಯ ವಾಟ್ಸಾಪ್ ಬೀಟಾವನ್ನು ಟೆಸ್ಟ್‌ಫ್ಲೈಟ್ ಆಪ್‌ನಿಂದ ಇನ್‌ಸ್ಟಾಲ್ ಮಾಡಿಕೊಳ್ಳಬೇಕಿದೆ. ಮುಂಬರುವ ವಾರಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಹೊರತರುವ ನಿರೀಕ್ಷೆಯಿದೆ.

ಇದರ ನಡುವೆ ವಾಟ್ಸಾಪ್ ಕಳೆದ ವಾರ ಐಫೋನ್ ಬಳಕೆದಾರರಿಗೆ ಕಂಪ್ಯಾನಿಯನ್ ಮೋಡ್ ಫೀಚರ್ಸ್ ಪರಿಚಯಿಸಲು ಮುಂದಾಗಿದೆ ಎಂದು ವರದಿಯಾಗಿತ್ತು. ಈ ಮೂಲಕ ಅಸ್ತಿತ್ವದಲ್ಲಿರುವ ಎರಡನೇ ಐಒಎಸ್ ಡಿವೈಸ್‌ಗೆ ಇದನ್ನು ಲಿಂಕ್ ಮಾಡಲು ಅನುಮತಿಸುತ್ತದೆ. ಇದರೊಂದಿಗೆ ಏಕಕಾಲದಲ್ಲಿ ನಾಲ್ಕು ಡಿವೈಸ್‌ಗಳನ್ನು ಲಿಂಕ್ ಮಾಡಬಹುದಾದ ಆಯ್ಕೆಯನ್ನೂ ನೀಡಲಾಗಿದೆ. ಅಂದರೆ ಬಳಕೆದಾರರು ತಮ್ಮ ವಾಟ್ಸಾಪ್ ಖಾತೆಗೆ ಎರಡಕ್ಕಿಂತ ಹೆಚ್ಚು ಮೊಬೈಲ್ ಫೋನ್‌ಗಳನ್ನು ಸಂಪರ್ಕಿಸಬಹುದು.
ಸೆಕ್ಯುರಿಟಿ ಸೆಂಟರ್ ಕಂಟ್ರೋಲ್: ಇನ್ನು ವಾಟ್ಸಾಪ್ ಸೆಕ್ಯುರಿಟಿ ಸೆಂಟರ್ ಪೇಜ್ ಅನ್ನು ಪ್ರಾರಂಭಿಸಿದೆ. ಇದು ಬಳಕೆದಾರರಿಗೆ ಸ್ಪ್ಯಾಮರ್‌ಗಳು ಮತ್ತು ಅನಗತ್ಯ ಸಂಪರ್ಕಗಳಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಸಹಾಯ ಮಾಡಲಿದೆ. ಈ ಸೆಕ್ಯುರಿಟಿ ಸೆಂಟರ್ ಇಂಗ್ಲಿಷ್ ಸೇರಿದಂತೆ ಭಾರತದ 10 ಭಾಷೆಗಳಲ್ಲಿ ಲಭ್ಯವಿರಲಿದೆ ಅವುಗಳೆಂದರೆ ಹಿಂದಿ, ಪಂಜಾಬಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಬೆಂಗಾಲಿ, ಮರಾಠಿ, ಉರ್ದು ಮತ್ತು ಗುಜರಾತಿ.

ಸ್ಟೇಟಸ್ ಆರ್ಕೈವ್: ವಾಟ್ಸಾಪ್‌ನ ಬ್ಯುಸಿನೆಸ್ ಖಾತೆ ಬಳಕೆ ಮಾಡುವವರು ಸ್ಟೇಟಸ್ ಆರ್ಕೈವ್ ಎಂಬ ಹೊಸ ಫೀಚರ್ಸ್ ಅನ್ನು ಪರೀಕ್ಷಿಸಬಹುದಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಈ ಫೀಚರ್ಸ್ ಅನ್ನು ಮುಂಬರುವ ವಾರಗಳಲ್ಲಿ ಹೆಚ್ಚಿನ ಬೀಟಾ ಬಳಕೆದಾರರಿಗೆ ಲಭ್ಯವಾಗಿಸುತ್ತದೆ ಎಂದು ತಿಳಿದುಬಂದಿದೆ. ಈ ಹೊಸ ಫೀಚರ್ಸ್ ಬಳಿಕ ಸ್ಟೇಟಸ್ ಟ್ಯಾಬ್‌ನಲ್ಲಿ ನೋಟಿಫಿಕೇಶನ್ ಬ್ಯಾನರ್‌ನೊಂದಿಗೆ ಡಿಸ್‌ಪ್ಲೇ ಮಾಡಲಾಗುತ್ತದೆ. ಅವರ ಸ್ಟೇಟಸ್ ಅಪ್‌ಡೇಟ್ ಪೋಸ್ಟ್ ಮಾಡಿದ ನಂತರ 24 ಗಂಟೆಗಳ ಕಾಲ ಅವರ ಡಿವೈಸ್‌ನಲ್ಲಿ ಆಟೋಮ್ಯಾಟಿಕ್ ಆಗಿ ಸ್ಟೋರೇಜ್ ಆಗುತ್ತವೆ.


Click it and Unblock the Notifications








